ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವದ ತೀರ್ಪುಗಳ ನೀಡಿದ ಸುಪ್ರೀಂ ಜಡ್ಜ್‌ ನಾರಿಮನ್ ನಿವೃತ್ತಿ: ಇಲ್ಲಿದೆ ರೋಹಿಂಟನ್ ಜೀವನದ ಹಾದಿ

|
Google Oneindia Kannada News

ನವದೆಹಲಿ, ಆ.12: ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಬಾರ್‌ ಕೌನ್ಸಿಲ್‌ನಿಂದ ನ್ಯಾಯಪೀಠಕ್ಕೆ ಏರಿದ ನಾಲ್ಕನೇ ಹಿರಿಯ ವಕೀಲರು ಆಗಿದ್ದಾರೆ. 2014 ರ ಜುಲೈ 7 ರಂದು ರೋಹಿಂಟನ್ ಫಾಲಿ ನಾರಿಮನ್‌ರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ನ್ಯಾಯಮೂರ್ತಿ ನಾರಿಮನ್‌ ಏಳು ವರ್ಷದ ಅಧಿಕಾರಾವಧಿ ಇಂದಿಗೆ (ಆಗಸ್ಟ್ 12) ಕೊನೆಗೊಳ್ಳುತ್ತದೆ.

ಇತಿಹಾಸ, ತತ್ತ್ವಶಾಸ್ತ್ರ, ಸಾಹಿತ್ಯ ಮತ್ತು ವಿಜ್ಞಾನದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿರುವ ನ್ಯಾಯಮೂರ್ತಿ ನಾರಿಮನ್ ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಹಲವಾರು ಗಮನಾರ್ಹ ತೀರ್ಪುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ನಾರಿಮನ್‌ ಕಿರಿಯ ನ್ಯಾಯಾಧೀಶರಾಗಿದ್ದಾಗ ನೀಡಿದ ತೀರ್ಪುಗಳಾಗಿದೆ. ಅನೇಕ ಸಂವಿಧಾನ ಪೀಠಗಳ ಸದಸ್ಯರಾಗಿ, ಕೆಲವು ಮಹತ್ವದ ತೀರ್ಪುಗಳಿಗೆ ನಾರಿಮನ್‌ ಕೊಡುಗೆ ದೇಶದ ವಿಕಸಿಸುತ್ತಿರುವ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಉಳಿಯಳಿದೆ.

ಭಿಕ್ಷುಕರಿಗೆ ಲಸಿಕೆ, ಪುನರ್ವಸತಿ ಒದಗಿಸುವಂತೆ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್ಭಿಕ್ಷುಕರಿಗೆ ಲಸಿಕೆ, ಪುನರ್ವಸತಿ ಒದಗಿಸುವಂತೆ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಆದರೆ ವಯಸ್ಸಿನ ಹೊರತಾಗಿಯೂ ಬಾರ್ ಮತ್ತು ಬೆಂಚ್‌ನಲ್ಲಿ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್‌ ಸಹೋದ್ಯೋಗಿಗಳ ನೆಚ್ಚಿನವರಾಗಲು ನಾರಿಮನ್‌ ಕಾನೂನು ಚಾಣಾಕ್ಷತೆ ಒಂದೇ ಕಾರಣವಲ್ಲ. ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸರಳವಾಗಿ ಮಾತನಾಡುವ ಮೂಲಕ ಹೆಸರುವಾಸಿಯಾಗಿರುವ ನ್ಯಾಯಮೂರ್ತಿ ನಾರಿಮನ್ ಪಾರ್ಸಿ ಪಾದ್ರಿಯಾಗಿದ್ದಾರೆ ಮತ್ತು ಉಳಿದ ನ್ಯಾಯಾಧೀಶರಿಗಿಂತ ವಿಭಿನ್ನವಾಗಿದ್ದಾರೆ. ಜೋರಾಸ್ಟ್ರಿಯನ್ ಕುಟುಂಬಕ್ಕೆ ಸೇರಿದ ಮಗುವಿನ ಮದುವೆಗಳು ಮತ್ತು ನವಜೋತೆ ಸಮಾರಂಭದಲ್ಲಿ ನಿಪುಣರಾಗಿರುವ ನ್ಯಾಯಮೂರ್ತಿ ನಾರಿಮನ್ ಕೂಡಾ ತಮ್ಮ ಸಮುದಾಯದ ಯಾವುದೇ ಪಾದ್ರಿಯಂತೆ ಗರ್ಭಗುಡಿ (ಒಳಗಿನ ಭಾಗ) ಪ್ರವೇಶಿಸಲು ಅವಕಾಶವನ್ನು ಹೊಂದಿದ್ದಾರೆ.

ನಾರಿಮನ್ ತಂದೆ ಹಾಗೂ ಪ್ರಖ್ಯಾತ ನ್ಯಾಯಶಾಸ್ತ್ರಜ್ಞ ಫಾಲಿ ಎಸ್ ನಾರಿಮನ್ ಕುಟುಂಬವು "ಪುರೋಹಿತಶಾಹಿ" ಆಗಿರುವುದರಿಂದ, ತನ್ನ ಪುತ್ರನೂ 12 ನೇ ವಯಸ್ಸಿನಲ್ಲಿಯೇ ಪುರೋಹಿತನಾಗುವುದನ್ನು ಖಾತ್ರಿಪಡಿಸಿಕೊಂಡರು. ಮುಂದೆ ಬರೆಯುತ್ತಾ, ಹಿರಿಯ ವಕೀಲರು ನ್ಯಾಯಮೂರ್ತಿ ನಾರಿಮನ್ ಮುಂಬೈನಲ್ಲಿ ತಮ್ಮ ಸಹೋದರಿ ಅನಹೀತಾರ ನವಜೋತೆ ಸಮಾರಂಭವನ್ನು ನಡೆಸಿದ್ದಾರೆ ಎಂದು ಹೇಳಿದರು.

BREAKING: ಹೈಕೋರ್ಟ್ ಅನುಮತಿ ಇಲ್ಲದೆ ಸಂಸದರು, ಶಾಸಕರ ವಿರುದ್ಧದ ಕೇಸ್‌ ಹಿಂಪಡೆಯುವುದಕ್ಕೆ ಸುಪ್ರೀಂ ಬ್ರೇಕ್‌BREAKING: ಹೈಕೋರ್ಟ್ ಅನುಮತಿ ಇಲ್ಲದೆ ಸಂಸದರು, ಶಾಸಕರ ವಿರುದ್ಧದ ಕೇಸ್‌ ಹಿಂಪಡೆಯುವುದಕ್ಕೆ ಸುಪ್ರೀಂ ಬ್ರೇಕ್‌

 'ತುಲನಾತ್ಮಕ ಸಾಂವಿಧಾನಿಕ ಮತ್ತು ನಾಗರಿಕ ಕಾನೂನಿನಲ್ಲಿ ಪರಿಣಿತರು'

'ತುಲನಾತ್ಮಕ ಸಾಂವಿಧಾನಿಕ ಮತ್ತು ನಾಗರಿಕ ಕಾನೂನಿನಲ್ಲಿ ಪರಿಣಿತರು'

2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ನಂತರ ನ್ಯಾಯಮೂರ್ತಿ ನಾರಿಮನ್‌ರನ್ನು ಉನ್ನತೀಕರಿಸಲಾಯಿತು. ಹೆಸರನ್ನು ಮುಖ್ಯ ನ್ಯಾಯಮೂರ್ತಿ ಆರ್‌ಎಂ ಲೋಧಾ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿತು. ಒಂಬತ್ತು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಬಾರ್‌ನಿಂದ ಹಿರಿಯ ವಕೀಲರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದರು. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನಾಲ್ಕನೇ ವ್ಯಕ್ತಿ ನಾರಿಮನ್‌ ಆಗಿದ್ದಾರೆ. ನಾರಿಮನ್‌ಗೂ ಮುನ್ನಾ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ (ಜನವರಿ 1999-ಜೂನ್ 2005), ಕುಲದೀಪ್ ಸಿಂಗ್ (1988-1996) ಮತ್ತು ಎಸ್. ಸಿಕ್ರಿ (1963-1973) ನ್ಯಾಯಾಧೀಶರಾಗಿದ್ದರು.

ನ್ಯಾಯಮೂರ್ತಿ ನಾರಿಮನ್ 1979 ರಲ್ಲಿ ವಕೀಲರಾಗಿ ಸೇರಿಕೊಂಡರು. ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್ (ಎಸ್‌ಆರ್‌ಸಿಸಿ) ನಿಂದ ವಾಣಿಜ್ಯ ಪದವೀಧರರಾಗಿರುವ ನ್ಯಾಯಾಧೀಶರು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಕಾನೂನು ಅಧ್ಯಯನ ಮಾಡಿದರು. ನಂತರ ಹಾರ್ವರ್ಡ್ ಕಾನೂನು ಶಾಲೆಯಿಂದ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ದೃಢವಾದ ಕ್ರಮದ ಕುರಿತು ತಮ್ಮ ಪ್ರಬಂಧವನ್ನು ಬರೆದರು. ಭಾರತೀಯ ಮತ್ತು ಯುಎಸ್ ಸಾಂವಿಧಾನಿಕ ಕಾನೂನಿನ ನಡುವಿನ ಹೋಲಿಕೆ (a comparison between the Indian and US constitutional law) ನಾರಿಮನ್‌ರ ಪ್ರಬಂಧವಾಗಿದೆ.

ನ್ಯೂಯಾರ್ಕ್‌ನಲ್ಲಿ ಹೈಟ್ ಗಾರ್ಡನರ್, ಪೂವರ್‌ ಆಂಡ್‌ ಹ್ಯಾವನ್ಸ್‌ನಲ್ಲಿ ಒಂದು ವರ್ಷ ಕಾಲ ಕಡಲ ಕಾನೂನನ್ನು ಅಭ್ಯಾಸ ಮಾಡಿದರು. ಸುಪ್ರೀಂ ಕೋರ್ಟ್ ನಾರಿಮನ್‌ರನ್ನು ಹಿರಿಯ ವಕೀಲರನ್ನಾಗಿ ನೇಮಿಸಿದಾಗ ನಾರಿಮನ್‌ರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಆಗಿನ ಮುಖ್ಯ ನ್ಯಾಯಾಧೀಶ ವೆಂಕಟಾಚಲಯ್ಯ ಕಡ್ಡಾಯ 45 ರ ವಿರುದ್ಧ ಆ ಚಿಕ್ಕ ವಯಸ್ಸಿನಲ್ಲಿ ನಾರಿಮನ್‌ರನ್ನು ಹಿರಿಯ ವಕೀಲರನ್ನಾಗಿ ಮಾಡುವ ಸಲುವಾಗಿ ನಿಯಮಗಳನ್ನು ತಿದ್ದುಪಡಿ ಮಾಡಿದರು. ವಕೀಲರಾಗಿ, ನ್ಯಾಯಮೂರ್ತಿ ನಾರಿಮನ್ 2011 ರಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು, ಆದರೆ ಆಗಿನ ಕಾನೂನು ಸಚಿವ ಅಶ್ವನಿ ಕುಮಾರ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ರಾಜೀನಾಮೆ ನೀಡಿದರು.

ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣ 2 ವರ್ಷದಲ್ಲಿ ಶೇ.17 ಹೆಚ್ಚಳಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣ 2 ವರ್ಷದಲ್ಲಿ ಶೇ.17 ಹೆಚ್ಚಳ

 500 ಕ್ಕಿಂತಲೂ ಹೆಚ್ಚು ತೀರ್ಪುಗಳಿಗೆ ನಾರಿಮನ್‌ ಸಾಕ್ಷಿ

500 ಕ್ಕಿಂತಲೂ ಹೆಚ್ಚು ತೀರ್ಪುಗಳಿಗೆ ನಾರಿಮನ್‌ ಸಾಕ್ಷಿ

ನಾರಿಮನ್‌ ಬಾರ್‌ನೊಂದಿಗೆ 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಈ ಸಮಯದಲ್ಲಿ ನ್ಯಾಯಮೂರ್ತಿ ನಾರಿಮನ್ ಸಂವಿಧಾನ ಪೀಠದ ಮುಂದೆ ಸೇರಿದಂತೆ ಹಲವಾರು ಪ್ರಕರಣಗಳನ್ನು ವಾದಿಸಿದರು. ಮತ್ತು 500 ಕ್ಕಿಂತಲೂ ಹೆಚ್ಚು ವರದಿಯಾದ ಸುಪ್ರೀಂ ಕೋರ್ಟ್ ತೀರ್ಪುಗಳು ನಾರಿಮನ್‌ಗೆ ಸಲ್ಲುತ್ತದೆ. ನಾರಿಮನ್‌ ಉನ್ನತಿಯು ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಯುವಕರಿಗೆ "ಹೆಮ್ಮೆಯ ವಿಷಯ" ವಾಗಿದೆ. ''ನ್ಯಾಯಮೂರ್ತಿ ನಾರಿಮನ್ ಒಬ್ಬ ಅದ್ಭುತ, ಕಲಿತ ಮತ್ತು ಚಿಂತನಶೀಲ ನ್ಯಾಯಾಧೀಶರು. ಪ್ರಕರಣಗಳನ್ನು ವಾದಿಸಿದ ಕಿರಿಯ ವಕೀಲರಿಗೆ ವಿಶೇಷವಾಗಿ ಬೆಂಬಲ ನೀಡುತ್ತಿದ್ದರು," ಎಂದು ಹಿರಿಯ ವಕೀಲ ಮೇನಕಾ ಗುರುಸ್ವಾಮಿ ಹೇಳಿದರು.

"ಅವರ ಪರಂಪರೆಯು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯವನ್ನು ವಿಸ್ತರಿಸಿದ ಪ್ರಕರಣಗಳನ್ನು ಒಳಗೊಂಡಿದೆ. ಕೆ. ಪುಟ್ಟುಸ್ವಾಮಿಯ ಅರ್ಜಿಯಂತೆ ಖಾಸಗಿತನದ ಹಕ್ಕನ್ನು ಒದಗಿಸಿದರು ಮತ್ತು ನವತೇಜ್ ಸಿಂಗ್ ಜೋಹರ್‌ ಅರ್ಜಿಯ ವಿಚಾರಣೆಯಲ್ಲಿ ಎಲ್‌ಜಿಬಿಟಿ ಭಾರತೀಯರ ಸಮಾನತೆ ಮತ್ತು ತಾರತಮ್ಯವನ್ನು ಖಾತ್ರಿಪಡಿಸಿದರು. ನಾರಿಮನ್‌ರನ್ನು ಕಾನೂನಿನಲ್ಲಿ ಅನೇಕ ಬೂದು ಪ್ರದೇಶಗಳನ್ನು ಸ್ಪಷ್ಟಪಡಿಸಿರುವ ದಿವಾಳಿತನದ ಬಗ್ಗೆ ಸೇರಿದಂತೆ ವಾಣಿಜ್ಯ ಕಾನೂನಿನಲ್ಲಿ ನಿರ್ಣಾಯಕ ತೀರ್ಪುಗಳಿಗಾಗಿ ನೆನಪಿಸಿಕೊಳ್ಳುತ್ತಾರೆ."

ಸುಪ್ರೀಂ ಕೋರ್ಟ್‌ನ ಹರಿಯಾಣದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ರುಚಿ ಕೊಹ್ಲಿ ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಂಡಿದ್ದಾರೆ. "ನಾರಿಮನ್‌ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ, ನಾರಿಮನ್‌ರ ಬುದ್ಧಿವಂತಿಕೆಯ ಮಟ್ಟವನ್ನು ಸಾಧಿಸಲು, ವಕೀಲರು ಮತ್ತು ನ್ಯಾಯಾಧೀಶರಾಗಿ ಕಾನೂನಿನ ತಿಳುವಳಿಕೆ ನಮಗೆ ಸ್ಪೂರ್ತಿ," ಎಂದು ಕೊಹ್ಲಿ ಹೇಳಿದರು. "ಸ್ವಾತಂತ್ರ್ಯಾನಂತರ ಉನ್ನತ ನ್ಯಾಯಾಲಯದ ಟಾಪ್ 10 ನ್ಯಾಯಾಧೀಶರು ಮತ್ತು ಟಾಪ್ 10 ವಕೀಲರ ಪಟ್ಟಿಯಿದ್ದರೆ, ನ್ಯಾಯಮೂರ್ತಿ ನಾರಿಮನ್ ಎರಡೂ ಪಟ್ಟಿಗಳಲ್ಲಿ ಪ್ರಖ್ಯಾತವಾಗಿರುವ ಏಕೈಕ ವ್ಯಕ್ತಿ," ಎಂದು ವಕೀಲ ಸುನಿಲ್ ಫೆರ್ನಾಂಡಿಸ್ ಹೇಳಿದರು. "ನಾರಿಮನ್‌ ಉತ್ತಮ ಸಲಹೆಗಾರರಾಗಿದ್ದಾರೆಯೇ ಅಥವಾ ಉತ್ತಮ ನ್ಯಾಯಾಧೀಶರಾಗಿದ್ದಾರೆಯೇ ಎಂದು ನಿರ್ಧರಿಸುವುದು ಕಷ್ಟ," ಎಂದು ಕೂಡಾ ಇದೇ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದಾರೆ.

 ಕಠಿಣವಾದರೂ ನೇರವಾಗಿ ಮಾತನಾಡುವ ನ್ಯಾಯಾಧೀಶ

ಕಠಿಣವಾದರೂ ನೇರವಾಗಿ ಮಾತನಾಡುವ ನ್ಯಾಯಾಧೀಶ

ನ್ಯಾಯಮೂರ್ತಿ ನಾರಿಮನ್ ತೀರ್ಪು ಇತಿಹಾಸ ಮತ್ತು ಸಾಹಿತ್ಯದಲ್ಲಿ ಆಳವಾದ ಆಸಕ್ತಿಯನ್ನು ತೋರಿಸುತ್ತದೆ. ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ನಾರಿಮನ್‌ರ ಪ್ರತ್ಯೇಕ ಮತ್ತು ಏಕಕಾಲಿಕ ತೀರ್ಪಿನಲ್ಲಿ, ಒಂದೇ ಲಿಂಗದ ಇಬ್ಬರು ವಯಸ್ಕರ ನಡುವಿನ ಒಮ್ಮತದ ಲೈಂಗಿಕತೆಯನ್ನು ಅಪರಾಧವವೆನ್ನಲಾಗುವುದರ ವಿಚಾರದಲ್ಲಿ ನೀಡಿದ ತೀರ್ಪಿನ ವೇಳೆ ನ್ಯಾಯಮೂರ್ತಿ ನಾರಿಮನ್ ಆಸ್ಕರ್ ವೈಲ್ಡ್ ಜೀವನ ಮತ್ತು ಲೈಂಗಿಕತೆಯಿಂದಾಗಿ ಆಗಿನ ಬ್ರಿಟಿಷ್ ರಾಜ್ಯವು ಆಸ್ಕರ್‌ ವಿರುದ್ಧ ಕಾನೂನು ಕ್ರಮ ಜರುಗಿಸಿತು ಎಂದು ಉಲ್ಲೇಖ ಮಾಡಿದ್ದಾರೆ.

ನಾರಿಮನ್‌ ತೀರ್ಪುಗಳು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ದೃಢ ನಂಬಿಕೆಯನ್ನು ಬಲಪಡಿಸುತ್ತವೆ. 2014 ರಲ್ಲಿ, ಐದು ನ್ಯಾಯಾಧೀಶರ ನ್ಯಾಯಪೀಠ, ನ್ಯಾಯಮೂರ್ತಿ ನಾರಿಮನ್‌ರನ್ನು ಒಳಗೊಂಡಂತೆ, ಬಹುಮತದ ತೀರ್ಪನ್ನು ಬರೆದರು. ಈ ತೀರ್ಪು ಮರಣದಂಡನೆ ಪ್ರಕರಣಗಳ ಮರುಪರಿಶೀಲನಾ ಅರ್ಜಿಗಳನ್ನು ತೆರೆದ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎನ್ನುತ್ತದೆ ಹಾಗೂ ಇತ್ಯರ್ಥಗೊಂಡ ಸರ್ವೋಚ್ಚ ನ್ಯಾಯಾಲಯದ ನಿಯಮಗಳಿಂದ ನಿರ್ಗಮಿಸಿ ಎಲ್ಲಾ ಮರುಪರಿಶೀಲನಾ ಅರ್ಜಿಗಳ ಚೇಂಬರ್ ವಿಚಾರಣೆಗೆ ಅವಕಾಶ ನೀಡುತ್ತದೆ. ಕಾನೂನು ಬಾಹಿರ ಹತ್ಯೆಗಳ ಕುರಿತು, ಅಂದಿನ ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧಾ ಮತ್ತು ನ್ಯಾಯಮೂರ್ತಿ ನಾರಿಮನ್‌ರನ್ನು ಒಳಗೊಂಡ ಪೀಠ ಪೋಲಿಸ್ ಎನ್‌ಕೌಂಟರ್‌ಗಳನ್ನು ತನಿಖೆ ಮಾಡುವಾಗ ಅನುಸರಿಸಬೇಕಾದ 16 ಮಾರ್ಗಸೂಚಿಗಳನ್ನು ಗೊತ್ತು ಮಾಡಿದ್ದಾರೆ. ಈ ತೀರ್ಪು ಮಣಿಪುರದಲ್ಲಿ ಕಾನೂನು ಬಾಹಿರ ಹತ್ಯೆಗಳ ಕುರಿತು 2017 ರ ತೀರ್ಪಿಗೆ ಆಧಾರವಾಯಿತು. ಅಸ್ಸಾಂನಲ್ಲಿ ಎನ್‌ಆರ್‌ಸಿ ಅಪ್ಡೇಟ್ ಡಿಸೆಂಬರ್ 2014 ರಲ್ಲಿ ಗಮನಾರ್ಹವಾದ ವೇಗವನ್ನು ಪಡೆದುಕೊಂಡಿತು, ನ್ಯಾಯಮೂರ್ತಿ ನಾರಿಮನ್ ಅವರನ್ನೊಳಗೊಂಡ ಪೀಠವು ನಿರ್ದಿಷ್ಟ ಸಮಯದೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯಕ್ಕೆ ವಿವರವಾದ ನಿರ್ದೇಶನಗಳನ್ನು ನೀಡಿತು.

ಸಂವಿಧಾನ ಪೀಠದ ಸದಸ್ಯರಾಗಿ, ನ್ಯಾಯಮೂರ್ತಿ ನಾರಿಮನ್ ತ್ರಿವಳಿ ತಲಾಕ್ ಪದ್ಧತಿಯನ್ನು ಅಸಂವಿಧಾನಿಕ ಎಂದು ಘೋಷಿಸಲು ಬಹುಮತದ ತೀರ್ಪನ್ನು ಬೆಂಬಲಿಸಿದರು. ತನ್ನ ಮತ್ತು ನ್ಯಾಯಮೂರ್ತಿ ಯು.ಯು. ಲಲಿತ್‌ ಪರವಾಗಿ ತೀರ್ಪು ಬರೆಯುವಾಗ ನ್ಯಾಯಾಧೀಶರು ''ಲಿಂಗ ಸಮಾನತೆಯು ಧಾರ್ಮಿಕ ಸ್ವಾತಂತ್ರ್ಯವನ್ನು ಮೀರಿಸಬೇಕು'' ಎಂದು ಹೇಳಿದ್ದರು. ಕೆಎಸ್‌ನಲ್ಲಿ ನ್ಯಾಯಮೂರ್ತಿ ನಾರಿಮನ್ ಅಭಿಪ್ರಾಯಗಳು ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಘೋಷಿಸಿದ ಪುಟ್ಟಸ್ವಾಮಿ ಪ್ರಕರಣ, ಜೋಸೆಫ್ ಶೈನ್ ಪ್ರಕರಣವು ಐಪಿಸಿಯ ಸೆಕ್ಷನ್ 497 ಅನ್ನು ಹೊಡೆದುರುಳಿಸಿದ ಇದು ವ್ಯಭಿಚಾರಕ್ಕೆ ಸಂಬಂಧಿಸಿದ್ದು ಮತ್ತು ಶಬರಿಮಲೆ ತೀರ್ಪು ಅವರ ವಿವಿಧ ಧರ್ಮಗಳ ಆಳವಾದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ.

ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶಬರಿಮಲೆ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದರು. ಒಂದು ಪ್ರಕರಣದಲ್ಲಿ ತಮ್ಮ ಮುಂದೆ ಪಕ್ಷಗಳಲ್ಲದಿದ್ದರೂ, ಸುಪ್ರೀಂ ಕೋರ್ಟ್ ಆದೇಶಗಳನ್ನು ಜಾರಿಗೊಳಿಸಲು ಸರ್ಕಾರದ ಮೇಲೆ ಸಾಂವಿಧಾನಿಕ ಬಾಧ್ಯತೆ ಇದೆ ಎಂದು ನಾರಿಮನ್‌ ಗಮನಿಸಿದರು. ಸಾಂವಿಧಾನಿಕ ಹಕ್ಕುಗಳ ಆದ್ಯತೆಯ ಬಗ್ಗೆ ತಮ್ಮ ಅಭಿಪ್ರಾಯದಲ್ಲಿ ನಿಸ್ಸಂದಿಗ್ಧರಾಗಿದ್ದಾರೆ. ಇದು ನಾರಿಮನ್‌ರ ಹಲವಾರು ತೀರ್ಪುಗಳಲ್ಲಿ ಸ್ಪಷ್ಟವಾಗಿ ಭಾಸವಾಗುತ್ತದೆ. ಶ್ರೇಯಾ ಸಿಂಘಾಲ್ ಪ್ರಕರಣವು ಸೆಕ್ಷನ್ 66 ಎ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿತು. ನಾರಿಮನ್‌ ನೇತೃತ್ವದ ನ್ಯಾಯಪೀಠವು ಇತ್ತೀಚೆಗೆ ಮೂರನೇ ಕೋವಿಡ್ ಅಲೆಯ ಭೀತಿಯ ನಡುವೆ ಯುಪಿ ಕನ್ವರ್ ಯಾತ್ರೆಗೆ ಅನುಮತಿ ನೀಡುವ ಬಗ್ಗೆ ಮಾಧ್ಯಮ ವರದಿಗಳ ಹಿನ್ನೆಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. "ಭಾರತದ ನಾಗರಿಕರಿಗೆ ಆರೋಗ್ಯ ಮತ್ತು ಬದುಕುವ ಹಕ್ಕಿದೆ, ಧಾರ್ಮಿಕವಾಗಿರಲಿ ಇತರ ಎಲ್ಲಾ ಭಾವನೆಗಳು ಈ ಮೂಲಭೂತ ಮೂಲಭೂತ ಹಕ್ಕಿಗೆ ಅಧೀನವಾಗಿವೆ," ಎಂದು ಹೇಳಿದ್ದರು, ರಾಜ್ಯವನ್ನು ವ್ಯವಸ್ಥೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ನ್ಯಾಯಾಧೀಶರಾಗಿ, ನ್ಯಾಯಮೂರ್ತಿ ನಾರಿಮನ್ ಎಂದಿಗೂ ಇನ್ನೊಬ್ಬರಿಗೆ ನೋವಾಗಬಾರದು ಎಂಬ ಕಾರಣದಿಂದ ನಯವಾದ ಮಾತುಗಳನ್ನು ಆಡಲಿಲ್ಲ. ಅಯೋಧ್ಯೆ ಧ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆಯನ್ನು ತ್ವರಿತಗೊಳಿಸುವಲ್ಲಿ ನಾರಿಮನ್‌ ಪೀಠ ಪ್ರಮುಖ ಪಾತ್ರ ವಹಿಸಿತ್ತು.

 ಪಶ್ಚಿಮ ಬಂಗಾಳ, ಪಂಜಾಬ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ, ಪಂಜಾಬ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

 'ವೈವಿಧ್ಯಮಯ ಆಸಕ್ತಿ ಹೊಂದಿರುವ ನ್ಯಾಯಾಧೀಶರು'

'ವೈವಿಧ್ಯಮಯ ಆಸಕ್ತಿ ಹೊಂದಿರುವ ನ್ಯಾಯಾಧೀಶರು'

ನಾರಿಮನ್ ತಂದೆ ತಮ್ಮ ಪುಸ್ತಕದಲ್ಲಿ ನ್ಯಾಯಾಧೀಶರನ್ನು "ಅತ್ಯುತ್ತಮ ವಕೀಲ" ಎಂದು ವಿವರಿಸಿದ್ದಾರೆ. ನಾರಿಮನ್‌ ಸ್ಮರಣೆ, ​​ಜನರು, ಘಟನೆಗಳು ಮತ್ತು ಅವರ ಅಪಾರ ಸಾಮಾನ್ಯ ಜ್ಞಾನ "ಅದ್ಭುತ"ವಾಗಿದೆ ಎಂದು ಹೇಳಿದ್ದರು. "ಅದಲ್ಲದೆ, ಆತ ನಮ್ಮ ಭಕ್ತ ಮತ್ತು ದೇವಭಯದ ಅರ್ಚಕ; ನಾರಿಮನ್ ಕುಟುಂಬದಲ್ಲಿ ಒಬ್ಬರೇ ಇದ್ದಾರೆ," ಎಂದು ಹಿರಿಯ ನಾರಿಮನ್ ಹೇಳಿದ್ದಾರೆ. ಹಿರಿಯ ವಕೀಲ, ಎ.ಎಂ. ಸಿಂಘ್ವಿ ನ್ಯಾಯಾಧೀಶರನ್ನು ಉಪನ್ಯಾಸದಲ್ಲಿ "ದಿಗ್ಭ್ರಮೆಗೊಳಿಸುವ ವೈವಿಧ್ಯಮಯ ಆಸಕ್ತಿಗಳನ್ನು" ಹೊಂದಿರುವ ವ್ಯಕ್ತಿ ಎಂದು ಪರಿಚಯಿಸಿದರು. ಮತ್ತು ಇದು ಅವರ ಮೊದಲ ಪುಸ್ತಕ, ದ ಇನ್ನರ್ ಫೈರ್: ಫೇಯ್ತ್, ಚಾಯ್ಸ್, ಮತ್ತು ಆಧುನಿಕ-ದಿನದ ಲಿವಿಂಗ್ ಇನ್ ಜೊರಾಸ್ಟ್ರಿಯನಿಸಂನಲ್ಲಿ ಸ್ಪಷ್ಟವಾಗಿದೆ. ಈ ಪುಸ್ತಕವು ಗಥಾಸ್‌ನ 238 ಪದ್ಯಗಳ ವಿಶ್ಲೇಷಣೆಯಾಗಿದೆ. ಜೊರಾಸ್ಟ್ರಿಯನ್ ನಂಬಿಕೆಯ ಪವಿತ್ರ ಪಠ್ಯ ಇದಾಗಿದೆ.

2016 ರಲ್ಲಿ ತನ್ನ ಪುಸ್ತಕವನ್ನು ಬಿಡುಗಡೆ ಮಾಡಿದಾಗ, ನ್ಯಾಯಾಧೀಶರು ಭಾರತದಲ್ಲಿ ಆಚರಣೆಯಲ್ಲಿರುವ ಧಾರ್ಮಿಕ ನಂಬಿಕೆಯಿಂದ "ರತ್ನಗಳು" ಕುರಿತು ಮಕ್ಕಳ ಪುಸ್ತಕವನ್ನು ಬರೆಯಲು ಬಯಸುವುದಾಗಿ ಹೇಳಿದರು. ನಾರಿಮನ್‌ ಅದನ್ನು ಎನ್‌ಸಿಇಆರ್‌ಟಿಗೆ ತಲುಪಿಸಿದ್ದರು ಆದರೆ ಅವರು ಉತ್ಸುಕರಾಗಿರಲಿಲ್ಲ ಎಂದು ನಾರಿಮನ್‌ ಬಿಡುಗಡೆ ವೇಳೆ ಬಹಿರಂಗಪಡಿಸಿದರು. ಎರಡನೇ ಪುಸ್ತಕ ನ್ಯಾಯಮೂರ್ತಿ ನಾರಿಮನ್ ಭಾರತದ ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ಎಲ್ಲ ಭಿನ್ನ ತೀರ್ಪುಗಳನ್ನು ಬರೆಯುತ್ತಾರೆ, ಅನ್ವೇಷಿಸುತ್ತಾರೆ ಮತ್ತು ವಿಶ್ಲೇಷಿಸುತ್ತಾರೆ. ಪುಸ್ತಕವನ್ನು ಪೆಂಗ್ವಿನ್ ಎರಡು ಸಂಪುಟಗಳಲ್ಲಿ ಪ್ರಕಟಿಸಲಿದ್ದಾರೆ. ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಬಗ್ಗೆ ಆಳವಾದ ಜ್ಞಾನಕ್ಕೆ ಹೆಸರುವಾಸಿಯಾದ್ದಾರೆ.

 ನಾರಿಮನ್‌ ಜೀವನದ ಕೆಲವು ಮಹತ್ವದ ತೀರ್ಪುಗಳು

ನಾರಿಮನ್‌ ಜೀವನದ ಕೆಲವು ಮಹತ್ವದ ತೀರ್ಪುಗಳು

ನಾರಿಮನ್‌ ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಅವುಗಳಲ್ಲಿ ತ್ರಿವಳಿ ತಲಾಖ್‌, ಶಬರಿಮಲೆ, ಅನೈತಿಕ ಸಂಬಂಧ ಪ್ರಕರಣ, ಸಲಿಂಗ ಕಾಮದ ಪ್ರಕರಣ ಸೇರಿದೆ. ಈ ಎಲ್ಲಾ ತೀರ್ಪುಗಳು ದೇಶದಲ್ಲಿ ಭಾರೀ ಸಂಚಲನವನ್ನೂ ಮೂಡಿಸಿದ್ದರೂ ಕೂಡಾ ನಾರಿಮನ್‌ ಮಾತ್ರ ತನ್ನ ತೀರ್ಪಿನಲ್ಲಿ ಪ್ರಬುದ್ಧವಾಗಿ ಸಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆ ಹಾಗೂ ಮಾನವ ಹಕ್ಕುಗಳನ್ನು ಉಲ್ಲೇಖ ಮಾಡಿದ್ದಾರೆ.

ಶಬರಿಮಲೆ ತೀರ್ಪಿನಲ್ಲಿ ''ಅಯ್ಯಪ್ಪನ ಆರಾಧಕರು ಪ್ರತ್ಯೇಕ ಧಾರ್ಮಿಕ ಪಂಗಡವನ್ನು ಹೊಂದಿಲ್ಲ'' ಎಂದು ಹೇಳಿದ ನ್ಯಾಯಮೂರ್ತಿ, ಅಯ್ಯಪ್ಪ ಮೂರ್ತಿಯನ್ನು ಪೂಜಿಸುವ ಹಿಂದೂಗಳೆಂದು ಕರೆದರು. ಹೀಗಾಗಿ ಕಲಂ 26 ರ ಅಡಿಯಲ್ಲಿ ಶಬರಿಮಲೆ ದೇವಾಲಯದ ಪಂಗಡದ ಸ್ವಾತಂತ್ರ್ಯವು ಆರ್ಟಿಕಲ್ 25 (2) (ಬಿ) ಅಡಿಯಲ್ಲಿ ರಾಜ್ಯದ ಸಾಮಾಜಿಕ ಸುಧಾರಣೆಯ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಿದರು. ದೇವಸ್ಥಾನದಿಂದ ಮಹಿಳೆಯರನ್ನು ಹೊರಗಿಡುವುದು ಪರಿಣಾಮಕಾರಿಯಾಗಿ ಆರ್ಟಿಕಲ್ 25 ರ ಅಡಿಯಲ್ಲಿ ಮಹಿಳೆಯರ ಹಕ್ಕನ್ನು ಅರ್ಥಹೀನಗೊಳಿಸಿದೆ ಎಂದು ಘೋಷಿಸಿದರು. ಕಲಂ 25 (1) ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಮತ್ತು ಪೂಜಾ ಸ್ವಾತಂತ್ರ್ಯವನ್ನು ಚಲಾಯಿಸಲು 10-50 ವರ್ಷದೊಳಗಿನ ಮಹಿಳೆಯರ ಮೂಲಭೂತ ಹಕ್ಕನ್ನು ರಕ್ಷಿಸುತ್ತದೆ ಎಂದು ಒತ್ತಿ ಹೇಳಿದರು. ಶಬರಿಮಲೆಯಿಂದ ಮಹಿಳೆಯರನ್ನು ಹೊರಗಿಡುವುದು ಕಲಂ 25 (1) ಅನ್ನು ಉಲ್ಲಂಘಿಸಿದೆ ಎಂದು ತೀರ್ಮಾನಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದರು. ಶಬರಿಮಲೆ ದೇವಸ್ಥಾನದಿಂದ 10-50 ವರ್ಷದೊಳಗಿನ ಮಹಿಳೆಯರನ್ನು ಹೊರಗಿಡುವ ಅಯ್ಯಪ್ಪನ ಸಂಪ್ರದಾಯವು ಅಸಂವಿಧಾನಿಕ ಎಂದು ತೀರ್ಮಾನಿಸಿದರು. 1965 ರ ಕೇರಳ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳಗಳ (ಪ್ರವೇಶದ ದೃಢೀಕರಣ) ನಿಯಮಗಳ ನಿಯಮ 3 (ಬಿ) ಯನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದರು.

ಇನ್ನು ಮುಸ್ಲಿಂ ಧರ್ಮದಲ್ಲಿ ಪಾಲಿಸಲಾಗುತ್ತಿದ್ದ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ತೀರ್ಪು ನೀಡಿದ ನಾರಿಮನ್‌ ಹಾಗೂ ಲಲಿತ್‌ರನ್ನು ಒಳಗೊಂಡ ಪೀಠ, ಈ ತ್ರಿವಳಿ ತಲಾಖ್‌ ಅಸಂವಿಧಾನಿಕ ಎಂದು ತಿಳಿಸಿದರು. ಸುಮಾರು 400 ಪುಟಗಳ ತೀರ್ಪನ್ನು ಬರೆದಿದ್ದಾರೆ. ಹಾಗೆಯೇ ತ್ರಿವಳಿ ತಲಾಖ್‌ ನೀಡಿದರೆ ಮೂರು ವರ್ಷಕ್ಕೂ ಅಧಿಕ ಕಾಲ ಜೈಲು ಹಾಗೂ ದಂಡ ವಿಧಿಸಬಹುದಾಗಿದೆ. ಮುಸ್ಲಿಂ ಹಾಗೂ ಹಿಂದೂ ಧಾರ್ಮಿಕ ಮಹಿಳೆಯರ ವಿಚಾರದಲ್ಲಿ ತ್ರಿವಳಿ ತಲಾಖ್‌ ಹಾಗೂ ಶಬರಿಮಲೆ ತೀರ್ಪುಗಳು ದೇಶದಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿದೆ.

ಇದನ್ನು ಹೊರತುಪಡಿಸಿ ರದ್ದು ಮಾಡಿದ ಕಾನೂನಿನಡಿಯಲ್ಲಿ ಪ್ರಕರಣ ದಾಖಲಾಗುತ್ತಿರುವ ಹಿನ್ನೆಲೆ ಇತ್ತೀಚೆಗೆ ನಾರಿಮನ್‌ ಕೇಂದ್ರ ಸರ್ಕಾರ ಹಾಗೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಕಳವಳ ಹುಟ್ಟಿಸುವ ವಿಚಾರ ಎಂದು ಹೇಳಿದ್ದರು. ಹಾಗೆಯೇ ತನ್ನ ನಿವೃತ್ತಿಗೂ ಮುನ್ನ ನೀಡಿದ ಮತ್ತೊಂದು ಮಹತ್ವದ ತೀರ್ಪಿನಲ್ಲಿ ಹೈಕೋರ್ಟ್ ಅನುಮತಿ ಇಲ್ಲದೆ ಸಂಸದರು, ಶಾಸಕರ ವಿರುದ್ಧದ ಕೇಸ್‌ ಹಿಂಪಡೆಯುವುದನ್ನು ತಡೆದಿದ್ದಾರೆ. ಇನ್ನು ಮುಂದೆ ಹಾಲಿ, ಮಾಜಿ ಸಂಸದರು ಹಾಗೂ ಶಾಸಕರ ವಿರುದ್ದದ ಯಾವುದೇ ಕ್ರಿಮಿನಲ್‌ ಪ್ರಕರಣಗಳನ್ನು ರದ್ದು ಮಾಡಲು ಹೈಕೋರ್ಟ್‌ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Rohinton Nariman, Parsi priest and only 4th lawyer to become Supreme court judge, retires on August 12, Here his great Judgements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X