• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೇ ಕ್ಷಣದಲ್ಲಿ NDAಗೆ ಆಘಾತ ನೀಡಿದ ಉಪೇಂದ್ರ ಕುಶ್ವಾಹ ವ್ಯಕ್ತಿಚಿತ್ರ

|

ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡ ಉಪೇಂದ್ರ ಕುಶ್ವಾಹ ಬಿಹಾರದ ಪ್ರಮುಖ ರಾಜಕೀಯ ನಾಯಕರಲ್ಲೊಬ್ಬರು.

ಬಿಹಾರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಎನ್ ಡಿಎ ಯಿಂದ ಹೊರಬರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ಆಘಾತ ನೀಡಿದವರು ಉಪೇಂದ್ರ ಕುಶ್ವಾಹ.

ಪಿಲಿಭಿಟ್ ಕ್ಷೇತ್ರದ ಬಿಜೆಪಿ ಸಂಸದೆ ಮನೇಕಾ ಗಾಂಧಿ ವ್ಯಕ್ತಿಚಿತ್ರ

2014 ರ ಲೋಕಸಭಾ ಚುನಾವಣೆಯಲ್ಲಿ ಕುಶ್ವಾಹ ಅವರ ಆರ್ ಎಲ್ ಎಸ್ ಪಿಯಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದ ಕುಶ್ವಾಹ ಕಳೆದ ಡಿಸೆಂಬರ್ ನಲ್ಲಿ ಎನ್ ಡಿಎ ಜೊತೆ ಬಿಹಾರದಲ್ಲಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಮುನಿಸಿಕೊಂಡಿದ್ದರು.

* 1960 ಫೆಬ್ರವರಿ 6 ರಂದು ಬಿಹಾರದ ವೈಶಾಲಿ ಜಿಲ್ಲೆಯ ಜಾವಜ್ ಎಂಬಲ್ಲಿ ಜನಿಸಿದರು.

* ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕುಶ್ವಾಹ ಉತ್ತಮ ಕೃಷಿಕರಾಗಿಯೂ ಹೆಸರು ಮಾಡಿದವರು.

* ತಂದೆ ಮುನೇಶ್ವರ ಸಿಂಗ್, ತಾಯಿ ಮುನೇಶ್ವರಿ ದೇವಿ

ಸರಳ, ವಿರಳ ರಾಜಕಾರಣಿ ಮಮತಾ ಬ್ಯಾನರ್ಜಿ ವ್ಯಕ್ತಿಚಿತ್ರ

* ಪತ್ನಿಯ ಹೆಸರು ಸ್ನೇಹಲತಾ. ಕುಶ್ವಾಹ ಸ್ನೇಹಲತಾ ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ.

* 1985 ರಲ್ಲಿ ವೈಶಾಲಿ ಜಿಲ್ಲೆಯ ಜಂಧಾಹಾ ಎಂಬಲ್ಲಿ ಮುನೇಶ್ವರ ಸಿಂಗ್ ಮುನೇಶ್ವರಿ ಸಮತಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.

* 1985 ರಲ್ಲೇ ರಾಜಕೀಯಕ್ಕೆ ಧುಮುಕಿದ ಕುಶ್ವಾಹ, ಯುವ ಲೋಕದಳದ ರಾಜ್ಯ ಪ್ರಧಾನ ಕಾರ್ದರ್ಶಿಯಾಗಿ ಆಯ್ಕೆಯಾದರು.

* ನಂತರ ರಾಷ್ಟ್ರ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು.

* 1994-2002 ರ ಅವಧಿಯಪಲ್ಲಿ ಸಮತಾ ಕ್ಷದ ರಾಜ್ಯ ಪ್ರಧಾನ ಕಾರ್ದರ್ಶಿಯಾಗಿ ಆಯ್ಕೆಯಾದರು.

* 2000-2005 ರಲ್ಲಿ ಬಿಹಾರ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಕುಶ್ವಾಹ, ಬಿಹಾರ ವಿಧಾನಸಭೆಯಲ್ಲಿ ಸಮತಾ ಪಕ್ಷದ ಶಾಸಕಾಂಗ ಪಕ್ಷದ ಉಪಾಧ್ಯಕ್ಷರಾದರು.

* 2010 ರಿಂದ 2013 ರ ಅವಧಿಯಲ್ಲಿ ಕೃಷಿ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು.

ಅಭಿಮಾನಿಗಳ ಪಾಲಿಗೆ 'ಅಭಿನವ ಇಂದಿರಾ' ಪ್ರಿಯಾಂಕಾ ವಾದ್ರಾ ವ್ಯಕ್ತಿಚಿತ್ರ

* 2013 ರ ಮಾರ್ಚ್ 03 ರಂದು ರಾಷ್ಟ್ರೀಯ ಲೋಕ ಸಮತಾ ಪಕ್ಷವನ್ನು ಉಪೇಂದ್ರ ಕುಶ್ವಾಹ ಕಟ್ಟಿದರು.

* ಬಿಹಾರದ ರೊಹ್ಟಸ್ ಜಿಲ್ಲೆಯ ಕರಕಟ್ ಲೋಕಸಭಾ ಕ್ಷೇತ್ರದಲ್ಲಿ ಕುಶ್ವಾಹ ಸಮುದಾಯದ ಜನಸಂಖ್ಯೆಯೇ ಹೆಚ್ಚಿರುವುದರಿಂದ ಈ ಕ್ಷೇತ್ರದಿಂದ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.

* 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎನ್ ಡಿಎ ಜೊತೆ ಗುರುತಿಸಿಕೊಂಡಿದ್ದ ಅವರಿಗೆ, ಮೋದಿ ನೇತೃತ್ವದ ಸರಕಾರ ಮಂತ್ರಿಸ್ಥಾನವನ್ನೂ ನೀಡಿತ್ತು.

* ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವರಾಗಿದ್ದರು.

* 2014 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವರಾದರು.

* 2018 ಡಿಸೆಮಬರ್ 10 ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

* "ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಉಳಿದೆಲ್ಲ ಮೈತ್ರಿ ಪಕ್ಷಗಳನ್ನೂ ಕಡೆಗಣಿಸುತ್ತಿದೆ. ತಮ್ಮನ್ನು ಮೂಲೆಗುಂಪು ಮಾಡಲಾಗಿದೆ. ನಾವು ಎನ್ ಡಿಎ ಜೊತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದು ಅನುಮಾನ" ಎಂದು ತಮ್ಮ ರಾಜೀನಾಮೆಗೆ ಅವರು ಕಾರಣ ನೀಡಿದ್ದರು.

* 2018 ರಲ್ಲಿ ಬಿಹಾರ ರಾಜ್ಯದಲ್ಲಿ ಆರ್ ಎಲ್ ಎಸ್ ಪಿ ಬೇಡಿಕೆ ಇಟ್ಟಷ್ಟು ಸೀಟನ್ನು ಎನ್ ಡಿಎ ನೀಡಿಲ್ಲ ಎಂಬ ಕಾರಣಕ್ಕೆ ಕುಶ್ವಾಹ ಎನ್ ಡಿಎ ಮೇಲೆ ಮುನಿಸಿಕೊಂಡು ಮೈತ್ರಿಕೂಟದಿಂದ ಹೊರಬಂದರು.

* ಉಪೇಂದ್ರ ಕುಶ್ವಾಹ ಅವರು ಪ್ರತಿನಿಧಿಸುವ ಕರಕಟ ಲೋಕಸಭಾ ಕ್ಷೇತ್ರ ಆರು ವಿಧಾನಸಭಾ ಕ್ಷೇತರಗಳನ್ನು ಒಳಗೊಂಡಿದೆ. ಬಿಕ್ರಂಗಂಜ್, ದೆಹ್ರಿ, ಕರಕಟ, ಗೋಹ್, ಒಬ್ರಾ ಮತ್ತು ನಾಬಿನಗರ.

* 2014 ರ ಲೋಕಸಭಾ ಕ್ಷೇತ್ರದಲ್ಲಿ ಕರಕಟ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್ ಎಲ್ ಎಸ್ ಪಿ ಮುಖಂಡ ಉಪೇಂದ್ರ ಕುಶ್ವಾಹ 338892 ಮತಗಳನ್ನು ಪಡೆದಿದ್ದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಆರ್ ಜೆಡಿ ಅಭ್ಯರ್ಥಿ ಕಾಂತಿ ಸಿಂಗ್ 233651 ಮತಗಳನ್ನಷ್ಟೇ ಪಡೆದಿದ್ದರು. ಈ ಕ್ಷೇತ್ರದಲ್ಲಿ 2014 ಲೋಕಸಭಾ ಚುನಾವಣೆಯಲ್ಲಿ 10185 ರಷ್ಟು ನೋಟಾ ಮತಗಳ ಚಾಲನೆಯಾಗಿತ್ತು.

* ಇದೀಗ ಎನ್ ಡಿ ಎ ಯಿಂದ ಹೊರಬಂದಿರುವ ಉಪೇಂದ್ರ ಕುಶ್ವಾಹ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಾಯ್ತುಂಬ ಹೊಗಳುತ್ತ, ಗಾಂಧಿ ಕುಟುಂಬದ ಅಂಗಳದಲ್ಲಿ ತಮ್ಮದೂ ಒಂದು ಟವಲ್ ಹಾಕಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿಯೂ ಕುಶ್ವಾಹ ಗೆಲ್ಲುತ್ತಾರಾ? ಎಂಬುದು ಚುನಾವಣೆಯೆ ನಂತರ ತಿಳಿಯಲಿದೆ.

* ಕುಶ್ವಾಹ ಸಮುದಾಯದ ಮತದಾರರೇ ಕರಕಟ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿರುವುದು ಉಪೇಂದ್ರ ಕುಶ್ವಾಹ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

English summary
RLSP leader Upendra Kushwaha is an Indian politician and Former Minister of State for HRD in Government of India. He is a Member of Parliament From Karakat loksabha in rohtas district, a kushwaha Kshatriya caste dominated consitiuency in Bihar. Here is his Profile
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more