ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನ ಸಿರಿವಂತರ ಪಟ್ಟಿಯಲ್ಲಿ ಋಷಿ ಸುನಕ್; ಇಷ್ಟು ಆಸ್ತಿ ಸಂಪಾದಿಸಿದ್ದು ಹೇಗೆ?

|
Google Oneindia Kannada News

ನವದೆಹಲಿ, ಜುಲೈ 20: ಭಾರತ ಮೂಲದ ಋಷಿ ಸುನಕ್ ಬ್ರಿಟನ್‌ನ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಇನ್ನೆರಡು ಸುತ್ತು ಮಾತ್ರವೇ ಬಾಕಿ ಉಳಿದಿದೆ. ಸ್ಪರ್ಧಾ ಕಣದಲ್ಲಿ ಋಷಿ ಸುನಕ್ ಜೊತೆ ಇನ್ನಿಬ್ಬರು ಮಾತ್ರ ಇದ್ದಾರೆ.

ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯನೂ ಆಗಿರುವ ಮಾಜಿ ಹಣಕಾಸು ಸಚಿವ ಋಷಿ ಸುನಕ್ ಇದೇ ವೇಳೆ ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಬ್ರಿಟನ್ ಸಂಸದರ ಪೈಕಿ ಇವರೇ ಅತ್ಯಂತ ಶ್ರೀಮಂತ ಎನಿಸಿದ್ದಾರೆ. ಈ ಪಟ್ಟಿಯ

ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಹೆಸರು ಬಂದ ಹಿನ್ನೆಲೆಯಲ್ಲಿ ಅವರ ಬಗ್ಗೆ ಆಂಗ್ಲ ಜನರ ಕುತೂಹಲ ಹೆಚ್ಚಾಗಿದೆ. ಸಂಡೇ ಟೈಮ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾ ಮೂರ್ತಿ ಅವರು 222ನೇ ಸ್ಥಾನ ಪಡೆದಿದ್ದಾರೆ.

ಋಷಿ ಸುನಕ್ ದಂಪತಿ ಒಟ್ಟು 730 ಮಿಲಿಯನ್ ಪೌಂಡ್ (ಸುಮಾರು 7 ಸಾವಿರ ಕೋಟಿ ರೂಪಾಯಿ) ಮೌಲ್ಯದ ಆಸ್ತಿ ಹೊಂದಿದ್ದಾರೆನ್ನಲಾಗಿದೆ. ಋಷಿ ಸುನಕ್ ಇಷ್ಟೊಂದು ಆಸ್ತಿ ಸಂಪಾದನೆ ಹೇಗೆ ಎಂಬ ಕುತೂಹಲ ಬಹಳ ಮಂದಿಗೆ ಹುಟ್ಟಿದೆ.

ಋಷಿ ಸುನಕ್ ಯಾರು?

ಋಷಿ ಸುನಕ್ ಯಾರು?

ಋಷಿ ಸುನಕ್ ಭಾರತ ಮೂಲದವರಾದರೂ ಹುಟ್ಟಿದ್ದು ಇವರು ಬ್ರಿಟನ್ ದೇಶದಲ್ಲೇ. ಋಷಿ ಸುನಕ್ ತಾತ ಪಂಜಾಬ್ ಪ್ರಾಂತ್ಯದವರು. ಬ್ರಿಟಿಷರ ಕಾಲದಲ್ಲೇ ಅವರು ಕೀನ್ಯಾಗೆ ವಲಸೆ ಹೋಗಿದ್ದರು. ಋಷಿ ಸುನಕ್ ತಂದೆ ಮತ್ತು ತಾಯಿ ಇಬ್ಬರೂ ಕೀನ್ಯಾದಲ್ಲೇ ಹುಟ್ಟಿದವರು. ಇವರ ತಂದೆ ವೈದ್ಯರು. ಅರವತ್ತರ ದಶಕದಲ್ಲಿ ಇವರ ಕುಟುಂಬ ಬ್ರಿಟನ್ ದೇಶಕ್ಕೆ ವಲಸೆ ಬಂದಿತು.

ಸ್ಟಾನ್‌ಫೋರ್ಡ್ ವಿವಿಯಲ್ಲಿ ಎಂಬಿಎ ಮಾಡಿರುವ ಗೋಲ್ಡ್‌ಮ್ಯಾನ್ ಸ್ಯಾಕ್ಸ್ ಎಂಬ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಕಂಪನಿಯಲ್ಲಿ 2001ರಿಂದ 2004ರವರೆಗೆ ಅನಾಲಿಸ್ಟ್ ಆಗಿ ಕೆಲಸ ಮಾಡಿದ್ಧಾರೆ. ದಿ ಚಿಲ್ಡ್ರನ್ಸ್ ಇನ್ವೆಸ್ಟ್‌ಮೆಂಟ್ ಫಂಡ್ ಮ್ಯಾನೇಜ್ಮೆಂಟ್‌ನಲ್ಲಿಕೆಲಸ ಮಾಡಿದ್ಧಾರೆ. ತೆಲೆಮೆ ಪಾರ್ಟ್ನರ್ಸ್ ಎಂಬ ಇನ್ನೊಂದು ಹೆಡ್ಜ್ ಫಂಡ್ ಕಂಪನಿಯ ಪಾಲುದಾರರಾಗಿದ್ದರು. ನಾರಾಯಣಮೂರ್ತಿ ಅವರ ಕೆಟರಮನ್ ವೆಂಚರ್ಸ್ ಕಂಪನಿಯ ನಿರ್ದೇಶಕರೂ ಆಗಿದ್ದರು.

ರಿಷಿ ಸುನಕ್ ಆಸ್ತಿ ವಿವರ

ರಿಷಿ ಸುನಕ್ ಆಸ್ತಿ ವಿವರ

ಋಷಿ ಸುನಕ್ ಅವರಲ್ಲಿ 730 ಪೌಂಡ್ ಮೌಲ್ಯದ ಅಸ್ತಿ ಇದೆ. 1989ರಿಂದಲೂ ಸಂಡೇ ಟೈಮ್ಸ್ ಪತ್ರಿಕೆ ಬ್ರಿಟನ್‌ನ ಶ್ರೀಮಂತರ ಪಟ್ಟಿ ಪ್ರಕಟಿಸುತ್ತಲೇ ಬಂದಿದೆ. ಇದೇ ಮೊದಲ ಬಾರಿಗೆ ಬ್ರಿಟನ್‌ನ ರಾಜಕಾರಣಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು.

143 ಕೋಟಿ ರೂ ಮೌಲ್ಯದ ನಾಲ್ಕು ಭವ್ಯ ಬಂಗಲೆಗಳು ಋಷಿ ಸುನಕ್ ಬಳಿ ಇವೆ. ಲಂಡನ್‌ನಲ್ಲಿ ಎರಡು ಮನೆ, ಯಾರ್ಕ್‌ಶೈರ್‌ನಲ್ಲಿ ಒಂದು ಮತ್ತು ಲಾಸ್ ಏಂಜಲಿಸ್‌ನಲ್ಲಿ ಮತ್ತೊಂದು ಮನೆ ಹೊಂದಿದ್ದಾರೆ.

ರಿಷಿ ಸುನಕ್ ಇಷ್ಟು ಆಸ್ತಿ ಗಳಿಸಿದ್ದು ಹೇಗೆ?

ರಿಷಿ ಸುನಕ್ ಇಷ್ಟು ಆಸ್ತಿ ಗಳಿಸಿದ್ದು ಹೇಗೆ?

ಋಷಿ ಸುನಕ್ ಅವರಿಗೆ ಇಷ್ಟೊಂದು ಆಸ್ತಿ ಸಂಪಾದನೆ ಸಾಧ್ಯವಾಗಿದ್ದು ಅವರು ಮದುವೆ ಆದ ಮೇಲೆ. ಋಷಿ ಸುನಕ್ ಅವರ ಹೆಚ್ಚಿನ ಆಸ್ತಿ ದಕ್ಕಿದ್ದು ಹೆಂಡತಿ ಮೂಲಕ. ಋಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು. ಮದುವೆಗೆ ಮುಂಚೆಯೇ ಅವರು ಕೋಟ್ಯಧಿಪತಿಯಾಗಿದ್ದರೂ ಮದುವೆ ಬಳಿಕ ಇನ್ನೂ ಹೆಚ್ಚು ಶ್ರೀಮಂತರಾಗಿದ್ದಾರೆ.

ಇನ್ಫೋಸಿಸ್‌ನಲ್ಲಿ ಅಕ್ಷತಾ ಮೂರ್ತಿ ಪಾಲುದಾರಿಕೆ ಹೊಂದಿದ್ಧಾರೆ. ಅಕ್ಷತಾ ಡಿಸೈನ್ಸ್ ಎಂಬ ಕಂಪನಿಯ ಒಡತಿಯೂ ಹೌದು. ಹೀಗಾಗಿ, ಋಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪನಿ ಬ್ರಿಟನ್‌ನ ಅತ್ಯಂತ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ವಿವಾದಗಳು ಮತ್ತು ಟೀಕೆ

ವಿವಾದಗಳು ಮತ್ತು ಟೀಕೆ

ಬ್ರಿಟನ್ ದೇಶದಲ್ಲಿ ಜೀವನ ವೆಚ್ಚ ಏರುತ್ತಿದೆ. ಆಹಾರ ಮತ್ತು ಇಂಧನ ದುಬಾರಿಯಾಗುತ್ತಿದೆ ಎಂದು ಇತ್ತೀಚೆಗೆ ಹಣಕಾಸು ಸಚಿವರು ಜನರನ್ನು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಋಷಿ ಸುನಕ್ ಅವರ ಹೆಸರು ಶ್ರೀಮಂತರ ಪಟ್ಟಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಬಹಳಷ್ಟು ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದುಂಟು.

ಋಷಿ ಸುನಕ್ ಶ್ರೀಮಂತರಾಗಿದ್ದ ಮಾತ್ರಕ್ಕೆ ಅವರು ಜನಸಾಮಾನ್ಯರಿಂದ ಅಂತರ ಕಾಯ್ದುಕೊಳ್ಳುತ್ತಾರೆಂದು ಅರ್ಥವಲ್ಲ. ವ್ಯವಹಾರದಲ್ಲಿ ಯಶಸ್ಸು ಕಂಡಿರುವ ವ್ಯಕ್ತಿ ಅವರು. ಹಾಗೆಯೇ ಸಾರ್ವಜನಿಕ ಸೇವೆಯಲ್ಲಿ ಮಹತ್ತರ ಸಾಧನೆ ಮಾಡಲು ಬಂದವರು ಎಂದು ಸಚಿವ ಡಾಮಿನಿಕ್ ರಾಬ್ ಹೇಳಿದ್ದಾರೆ.

ಇನ್ನು, ಋಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಇನ್ಫೋಸಿಸ್‌ನ ಸಾಕಷ್ಟು ಷೇರುಗಳಿವೆ. ಅದರ ಮೌಲ್ಯ 690 ಮಿಲಿಯನ್ ಪೌಂಡ್ (ಸುಮಾರು 6,600 ಕೋಟಿ ರೂಪಾಯಿ) ಇದೆ. ವಾರ್ಷಿಕವಾಗಿ ಸಾಕಷ್ಟು ಲಾಭಾಂಶ ಬರುತ್ತದೆ. ಋಷಿ ಸುನಕ್ ಅವರನ್ನು ಮದುವೆಯಾಗಿ ಬ್ರಿಟನ್‌ಗೆ ಹೋದ ಬಳಿಕ ಅಕ್ಷತಾ ಮೂರ್ತಿ ಈ ಲಾಭಾಂಶಕ್ಕೆ ಬ್ರಿಟನ್‌ನಲ್ಲಿ ತೆರಿಗೆ ಕಟ್ಟಬೇಕು. ಆದರೆ, ಈ ತೆರಿಗೆ ಕಟ್ಟದೇ ಇರುವ ರೀತಿ ಬ್ರಿಟನ್ ಅನಿವಾಸಿ ಸ್ಥಾನ ಪಡೆದುಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಚಕಾರ ಬಂದ ಬಳಿಕ ಅವರು ಇನ್ಫೋಸಿಸ್‌ನ ಷೇರುಗಳಿಂದ ಸಿಗುತ್ತಿದ್ದ ಡಿವಿಡೆಂಡ್‌ಗೆ ತೆರಿಗೆ ಕಟ್ಟಲು ಆರಂಭಿಸಿದರೆನ್ನಲಾಗಿದೆ.

ಪ್ರಧಾನಿ ರೇಸ್‌ನಲ್ಲಿ ರಿಷಿ ಸುನಕ್

ಪ್ರಧಾನಿ ರೇಸ್‌ನಲ್ಲಿ ರಿಷಿ ಸುನಕ್

ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬಳಿಕ ತೆರವಾಗಿರುವ ಪ್ರಧಾನಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಾಲ್ಕೈದು ಸುತ್ತು ಮತದಾನವಾಗಿದೆ. ಈಗ ಕಣದಲ್ಲಿ ಋಷಿ ಸುನಕ್, ಪೆನಿ ಮಾರ್ಡಾಂಟ್ ಮತ್ತು ಲಿಜ್ ಟ್ರುಸ್ ಅವರು ಉಳಿದಿದ್ದಾರೆ.

ಇಷ್ಟೂ ಸುತ್ತುಗಳಲ್ಲೂ ಋಷಿ ಸುನಕ್ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ, ಅವರ ಮುನ್ನಡೆ ಅಂತರ ಕಡಿಮೆ ಆಗುತ್ತಾ ಬಂದಿದೆ. ಹಿಂದಿನ ಸುತ್ತಿನಲ್ಲಿ ಅವರು ಕೇವಲ 3 ಮತಗಳನ್ನು ಮಾತ್ರ ಹೆಚ್ಚಿಗೆ ಪಡೆದಿದದಾರೆ. ಪೆನಿ ಮಾರ್ಡಾಂಟ್ ಮತ್ತು ಲಿಜ್ ಟ್ರಸ್ ಇಬ್ಬರೂ ಕೂಡ ತಮ್ಮ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿರುವುದು ಕುತೂಹಲ. ಈಗ ಋಷಿ ಸುನಕ್ ವಿರೋಧಿ ಮತಗಳು ಒಗ್ಗೂಡಿದರೆ ಅವರ ಗೆಲುವು ಕಷ್ಟಕರವಾಗಲಿದೆ.

(ಒನ್ಇಂಡಿಯಾ ಸುದ್ದಿ)

English summary
Rishi Sunak and his wife Akshatha Murthy are in Britain's super rich list. Rishi has become first Britain politician to get place in this list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X