ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಮೈ ವಾಸನೆ ಇರುವವರ ಮಧ್ಯೆ ಒಡನಾಟ ಹೆಚ್ಚು: ಅಧ್ಯಯನ ವರದಿ

|
Google Oneindia Kannada News

ವಾಷಿಂಗ್ಟನ್, ಜೂನ್ 28: ನಮ್ಮ ಸಾಮಾಜಿಕ ಜೀವನದಲ್ಲಿ ಬಹಳಷ್ಟು ಸಂಬಂಧಗಳ ವೈರುದ್ಧ್ಯತೆಗಳನ್ನು ಗಮನಿಸಿರುತ್ತೇವೆ. ಒಬ್ಬರಿಗೊಬ್ಬರು ಯಾವುದರಲ್ಲೂ ಸಾಮ್ಯತೆ ಇಲ್ಲದವರು ಒಳ್ಳೆಯ ಸ್ನೇಹಿತರಾಗಿರುತ್ತಾರೆ ಅಥವಾ ದಂಪತಿಯಾಗಿರುತ್ತಾರೆ. ಅನೇಕ ವಿಚಾರಗಳಲ್ಲಿ ಸಾಕಷ್ಟು ಸಮಾನ ಅಭಿಪ್ರಾಯಗಳಿದ್ದರೂ ಸಂಬಂಧ ಗಟ್ಟಿ ಇರುವುದಿಲ್ಲ.

ಇಂಥ ವಿಚಿತ್ರ ಪರಿಸ್ಥಿತಿಗೆ ಇಲ್ಲೊಂದು ಸಂಶೋಧನೆ ಸಮಾಧಾನ ನೀಡಬಹುದೇನೋ. ಮೈ ವಾಸನೆಯಲ್ಲಿ ಸಾಮ್ಯತೆ ಇದ್ದವರ ಮಧ್ಯೆ ಒಡನಾಟ ಹೆಚ್ಚು ಇರುತ್ತದಂತೆ. ಇದನ್ನು ಇಸ್ರೇಲ್‌ನ ವೇಜ್‌ಮಾನ್ಸ್ ಬ್ರೈನ್ ಸೈನ್ಸಸ್ ಇಲಾಖೆಯ ಸಂಶೋಧಕರು ಬೆಳಕಿಗೆ ತಂದಿದ್ದಾರೆ.

ಎಚ್ಚರಿಕೆ ಇರಲಿ: ವಾಯು ಮಾಲಿನ್ಯಕ್ಕೂ ಉಂಟು ಉಸಿರು ಕಿತ್ತುಕೊಳ್ಳುವ ತಾಕತ್ತು!ಎಚ್ಚರಿಕೆ ಇರಲಿ: ವಾಯು ಮಾಲಿನ್ಯಕ್ಕೂ ಉಂಟು ಉಸಿರು ಕಿತ್ತುಕೊಳ್ಳುವ ತಾಕತ್ತು!

ಇಲಾಖೆಗೆ ಸೇರಿದ ಪ್ರೊ. ನೋವಮ್ ಸೋಬೆಲ್ಸ್ ಲ್ಯಾಬೊರೇಟರಿಯ ಸಂಶೋಧನಾ ವಿದ್ಯಾರ್ಥಿನಿ ಇನಬಲ್ ರಾವ್ರೆಬೈ, ಡಾ. ಕೋಬಿ ಸ್ನಿಟ್ಜ್ ಮೊದಲಾದವರು ನಡೆಸಿದ ಅಧ್ಯಯನದಲ್ಲಿ ಮನುಷ್ಯರು ಮೈವಾಸನೆಗಳಿಂದ ಆಕರ್ಷಿತರಾಗುವುದನ್ನು ಪತ್ತೆ ಹೆಚ್ಚಿದ್ದಾರೆ. ಈ ಸಂಶೋಧನೆಗೆ ವಿವಿಧ ರೀತಿಯ ಸ್ವಭಾವದ ಜನರನ್ನು ಆಯ್ದುಕೊಳ್ಳಲಾಗಿತ್ತು.

ಹೆಚ್ಚುತ್ತಿರುವ ರಸ್ತೆ ಅಪಘಾತ: ಕಾನೂನು ಉಲ್ಲಂಘನೆ, ದುಬಾರಿ ಜೀವನಹೆಚ್ಚುತ್ತಿರುವ ರಸ್ತೆ ಅಪಘಾತ: ಕಾನೂನು ಉಲ್ಲಂಘನೆ, ದುಬಾರಿ ಜೀವನ

ಮೈ ವಾಸನೆಯಿಂದ ಆಕರ್ಷಿತರಾಗಿ ಅವರೊಂದಿಗೆ ಆತ್ಮೀಯವಾಗಿ ಮತ್ತು ಸುಲಭವಾಗಿ ಒಡನಾಡುವುದನ್ನೇ ನಾವು ಇಬ್ಬರ ನಡುವೆ ಕೆಮಿಸ್ಟ್ರಿ ಸಖತ್ತಾಗಿದೆ ಎಂದು ಹೇಳುತ್ತೇನೇನೋ. ಮೈ ವಾಸನೆಯೂ ಕೆಮಿಸ್ಟ್ರಿಗೇ ಸೇರಿದ್ದರಿಂದ ಹಾಗನ್ನಲು ಅಡ್ಡಿ ಇಲ್ಲ.

 ನಾಯಿಗಳ ವರ್ತನೆ

ನಾಯಿಗಳ ವರ್ತನೆ

ನಾಯಿಗಳನ್ನು ಹತ್ತಿರದಿಂದ ಬಲ್ಲವರಿಗೆ ಈ ವಾಸನೆಯ ವಿಚಾರ ಗೊತ್ತಿರಬಹುದು. ಅಪರಿಚಿತ ನಾಯಿಗಳು ಮುಖಾಮುಖಿಯಾದಾಗ ಮೊದಲು ಮೂಸಿ ನೋಡುತ್ತವೆ. ಆ ಬಳಿಕ ತುಂಟಾಟ ನಡೆಸುವುದೋ ಅಥವಾ ಕಚ್ಚಾಟ ಮಾಡುವುದೋ ಎಂಬುದನ್ನು ನಿರ್ಧರಿಸುತ್ತವೆ.

ಇದು ನಾಯಿಯಷ್ಟೇ ಅಲ್ಲ ನೆಲದ ಮೇಲಿರುವ ಎಲ್ಲಾ ಪ್ರಾಣಿಗಳಲ್ಲೂ ಇರುವ ಗುಣ ಅಥವಾ ಸ್ವಭಾವ. ಇದು ವಿವಿಧ ಅಧ್ಯಯನಗಳಲ್ಲಿ ದಾಖಲಾಗಿದೆ. ಆದರೆ, ಮೈ ಮೂಸುವ ಸ್ವಭಾವ ಇಲ್ಲದ ಮನುಷ್ಯರ ಮೇಲೆ ಪ್ರಯೋಗ ಮಾಡಿದ್ದು ಇದೇ ಮೊದಲು.

 ಮನುಷ್ಯರೂ ಮೂಸುತ್ತಾರಂತೆ

ಮನುಷ್ಯರೂ ಮೂಸುತ್ತಾರಂತೆ

ಇಸ್ರೇಲ್‌ನ ಈ ಸಂಶೋಧಕರು ಕಂಡುಹಿಡಿದ ಪ್ರಮುಖ ಸಂಗತಿಯಲ್ಲಿ ಮನುಷ್ಯರೂ ಕೂಡ ಮೈವಾಸನೆಯ ಆಘ್ರಾಣಿಸುತ್ತಾರಂತೆ. ಲೈಂಗಿಕ ಸಂಭೋಗ ಅಥವಾ ರೋಮ್ಯಾನ್ಸ್ ಮಾಡುವಾಗ ಮನುಷ್ಯರು ಈ ರೀತಿಯ ಮೂಸುವುದುಂಟು. ಆದರೆ, ಅಪರಿಚಿತರಲ್ಲೂ ನಾವು ಹೀಗೆ ಮಾಡುತ್ತೇವಾ ಎಂದು ಅಚ್ಚರಿ ಅನಿಸಬಹುದು. ನಮಗೆ ಅರಿವಿಲ್ಲದೆಯೇ ನಾವು ನಮ್ಮ ಮೈವಾಸನೆಯನ್ನು ಮತ್ತು ನಮ್ಮ ಜೊತೆಗಿರುವವರ ಮೈ ವಾಸನೆಯನ್ನೂ ಮೂಸಲು ಯತ್ನಿಸುತ್ತೇವಂತೆ. ವಾಸನೆಯಲ್ಲಿ ಸಾಮ್ಯತೆ ಇರುವ ವ್ಯಕ್ತಿಗಳು ಬೇಗ ಒಡನಾಟಕ್ಕೆ ತೆರೆದುಕೊಳ್ಳುತ್ತಾರೆ ಎಂಬುದು ಈ ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.

 ಪರೀಕ್ಷೆ ಹೇಗೆ?

ಪರೀಕ್ಷೆ ಹೇಗೆ?

ಈಗಾಗಲೇ ಗಾಢ ಸ್ನೇಹಿತರಾದ ಜೋಡಿಗಳು ಹಾಗು ಒಬ್ಬರಿಗೊಬ್ಬರು ಪರಿಚಯ ಇಲ್ಲದ ಜೋಡಿಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿತ್ತು. ಈಗಾಗಲೇ ಸ್ನೇಹಿತರಾಗಿದ್ದ ಇಬ್ಬರು ವ್ಯಕ್ತಿಗಳ ಮೈವಾಸನೆಯ ಸ್ಯಾಂಪಲ್ ಅನ್ನು ಪಡೆಯಲಾಯತು. ಹಾಗೆಯೇ, ಬೇರೆ ಜೋಡಿಗಳ ವಾಸನೆಯ ಸ್ಯಾಂಪಲ್‌ಗಳನ್ನು ಪಡೆಯಲಾಯಿತು. ಅದನ್ನು ಇಟ್ಟುಕೊಂಡು ಎರಡು ಪ್ರಯೋಗಗಳನ್ನು ಸಂಶೋಧಕರು ಮಾಡಿದ್ದಾರೆ.

ಮೊದಲ ಪ್ರಯೋಗದಲ್ಲಿ ಇನೋಸ್ ಬಳಸಿ ವಾಸನೆಗಳ ರಾಸಾಯನಿಕ ಗುಣವನ್ನು ಅವಲೋಕಿಸಲಾಯಿತು. ಮತ್ತೊಂದು ಪ್ರಯೋಗದಲ್ಲಿ ವಾಲಂಟಿಯರ್‌ಗಳ ಸಹಾಯ ಪಡೆಯಲಾಯಿತು. ಅದರಲ್ಲಿ ಎರಡೂ ಗುಂಪಿನವರ ಮೈ ವಾಸನೆಯ ಸ್ಯಾಂಪಲ್‌ಗಳನ್ನು ಮೂಸಿ ನೋಡುವಂತೆ ವಾಲಂಟಿಯರ್‌ಗಳಿಗೆ ತಿಳಿಸಲಾಯಿತು. ಸ್ನೇಹಿತರಿಬ್ಬರ ಮೈ ವಾಸನೆ ಒಂದೇ ರೀತಿಯಲ್ಲಿದ್ದುದು ದೃಢಪಟ್ಟಿತ್ತು.

 ಏಕರೀತಿಯ ಜೀವನಶೈಲಿಯಿಂದ ಮೈ ವಾಸನೆಯಲ್ಲಿ ಸಾಮ್ಯತೆ?

ಏಕರೀತಿಯ ಜೀವನಶೈಲಿಯಿಂದ ಮೈ ವಾಸನೆಯಲ್ಲಿ ಸಾಮ್ಯತೆ?

ಈಗಾಗಲೇ ಸ್ನೇಹಿತರಾದವರ ಮಧ್ಯೆ ಒಂದೇ ರೀತಿಯ ಮೈವಾಸನೆಗೆ ಬೇರೆ ಕಾರಣವೂ ಇರುವ ಸಾಧ್ಯತೆ ಇರುತ್ತದೆ. ಅಂದರೆ ಇಬ್ಬರು ಒಂದೇ ರೀತಿಯ ಆಹಾರ ಸೇವಿಸುವುದು ಇತ್ಯಾದಿ ಎಲ್ಲವೂ ಅವರ ಮೈ ವಾಸನೆಯ ಸಾಮ್ಯತೆಗೆ ಕಾರಣವಾಗಿರಬಹುದು ಎಂಬ ಸಂಶಯ ಬರುತ್ತದೆ. ಈ ನಿಟ್ಟಿನಲ್ಲಿ ಸಂಶೋಧಕರು ಮತ್ತೊಂದು ಪ್ರಯೋಗ ಮಾಡಿದರು.

ಅದರಲ್ಲಿ ಪರಸ್ಪರ ಪರಿಚಯ ಇಲ್ಲದ ವ್ಯಕ್ತಿಗಳನ್ನು ಪ್ರಯೋಗಕ್ಕೆ ಆರಿಸಲಾಯಿತು. ಅವರ ಮೈ ವಾಸನೆಯ ಸ್ಯಾಂಪಲ್ ಸಂಗ್ರಹಿಸಿ, ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡಲಾಯಿತು. ಅದರಲ್ಲಿ ಒಂದೇ ರೀತಿಯ ಮೈವಾಸನೆ ಇದ್ದವರು ಬೇಗನೇ ಆಪ್ತರಾಗಿದ್ದು ಕಂಡುಬಂದಿತಂತೆ.

(ಒನ್ಇಂಡಿಯಾ ಸುದ್ದಿ)

English summary
People with similar body odour may sociall bond better, says a research team from an Israeli institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X