ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ: ಮಣಿಪುರದಲ್ಲಿ ಬಿಜೆಪಿಗೆ ಭರ್ಜರಿ ಜಯ

|
Google Oneindia Kannada News

ಕೊರೊನಾ ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಐದು ರಾಜ್ಯಗಳ ಪೈಕಿ ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧವಾಗುತ್ತಿದೆ.

60 ಕ್ಷೇತ್ರಗಳ ಚುನಾವಣೆಗಾಗಿ ಈಗಾಗಲೇ ದಿನಾಂಕ ಪ್ರಕಟಿಸಿದ್ದು, ಫೆಬ್ರವರಿ 27 ಮತ್ತು ಮಾರ್ಚ್ 3ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ನಡುವೆ ವಿವಿಧ ಮಾಧ್ಯಮಗಳು, ಖಾಸಗಿ ಸಂಸ್ಥೆಗಳು ಜನಾಭಿಪ್ರಾಯ ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳನ್ನು ಪ್ರಕಟಿಸುತ್ತಿವೆ. ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಹೊರ ಬಂದಿದ್ದು, ಮಣಿಪುರದಲ್ಲಿ ಬಿಜೆಪಿಗೆ ಭರ್ಜರಿ ಜಯ ಲಭಿಸಲಿದೆ ಎಂದು ಹೇಳಿದೆ.

ABP ನ್ಯೂಸ್-CVoter ಸಮೀಕ್ಷೆ: ಮಣಿಪುರ ಚುನಾವಣೆಯಲ್ಲಿ ಅತಂತ್ರ ಫಲಿತಾಂಶABP ನ್ಯೂಸ್-CVoter ಸಮೀಕ್ಷೆ: ಮಣಿಪುರ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ

ರಿಪಬ್ಲಿಕ್-ಪಿ ಮಾರ್ಕ್ 2022 ರ ಅಸೆಂಬ್ಲಿ ಚುನಾವಣೆಯ ಕುರಿತು ಆನ್-ಪಾಯಿಂಟ್ ಅಭಿಪ್ರಾಯ ಸಂಗ್ರಹವನ್ನು ತರಲು ಸಮಗ್ರ ಸಮೀಕ್ಷೆಯನ್ನು ನಡೆಸಿದೆ. ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆಯನ್ನು ರಾಜ್ಯದಲ್ಲಿ ಜನವರಿ 5 ರಿಂದ ಜನವರಿ 16 ರವರೆಗೆ 4,250 ವ್ಯಕ್ತಿಗಳ ಅಭಿಪ್ರಾಯ ಮಾದರಿ, ಸಿಎಟಿಐ ಮುಂತಾದ ಮಾದರಿ ಬಳಸಿ ಸಮೀಕ್ಷೆ ನಡೆಸಲಾಗಿದ್ದು, ಒಟ್ಟಾರೆ ರಾಜ್ಯವಾರು ಭವಿಷ್ಯ, ಸ್ಥಾನ ಮತ್ತು ಮತ ಹಂಚಿಕೆಯನ್ನು ತೋರಿಸುತ್ತದೆ.

ಬಿಜೆಪಿಗೆ ಭಜರಿ ಜಯ

ಬಿಜೆಪಿಗೆ ಭಜರಿ ಜಯ

ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ 31 ರಿಂದ 37 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡದ ಕಾಂಗ್ರೆಸ್ 13-19 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್‌ಪಿಪಿ ಪಕ್ಷವು 3 ರಿಂದ 9 ಸ್ಥಾನ, ಎನ್‌ಪಿಎಫ್ ಪಕ್ಷವು 1 ರಿಂದ 5 ಸ್ಥಾನ, ಇತರರು 0 ರಿಂದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಮಣಿಪುರದಲ್ಲಿ ಶೇಕಡಾವಾರು ಮತ ಪ್ರಮಾಣ

ಮಣಿಪುರದಲ್ಲಿ ಶೇಕಡಾವಾರು ಮತ ಪ್ರಮಾಣ

ಮಣಿಪುರದಲ್ಲಿ ಶೇಕಡಾವಾರು ಮತ ಪ್ರಮಾಣವನ್ನು ಲೆಕ್ಕ ಹಾಕಿದಾಗ ಬಿಜೆಪಿಗೆ ಶೇ. 39.2ರಷ್ಟು ಮತಗಳು ಬೀಳಲಿದ್ದು, ಅದೇ ರೀತಿ ಕಾಂಗ್ರೆಸ್ ಶೇ 28.7ರಷ್ಟು ಗಳಿಸಲಿದ್ದು, 2017ಕ್ಕೆ ಹೋಲಿಸಿದರೆ ಶೇಕಡಾವಾರು ಮತಪ್ರಮಾಣದಲ್ಲೂ ಇಳಿಕೆಯಾಗಿದೆ. 2017ರಲ್ಲಿ ಶೇ.35.10ರಷ್ಟು ಮತಗಳನ್ನು ಗಳಿಸಿತ್ತು. ಮಿಕ್ಕಂತೆ ಎನ್‌ಪಿಪಿ ಪಕ್ಷವು ಶೇ 14.2, ಎನ್‌ಪಿಎಫ್ ಪಕ್ಷವು ಶೇ 6.4, ಇತರರು ಶೇ 11.5ರಷ್ಟು ಗಳಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಸಿಎಂ ಬಿರೇನ್ ಸಿಂಗ್ ಅವರೇ ಸೂಕ್ತ ಎಂದು ಜನಾಭಿಪ್ರಾಯ ಬಂದಿದೆ. ಯಾರಿಗೆ ಎಷ್ಟು ಮತ ಬಂದಿದೆ ಇಲ್ಲಿದೆ ಅಂಕಿ ಅಂಶ;
ಬಿರೇನ್ ಸಿಂಗ್: ಶೇ 36
ಓಕ್ರಾಮ್ ಐಬೋಬಿ: ಶೇ 17
ಯುಮ್ನಮ್ ಜೋಯ್ಕುಮಾರ್ ಸಿಂಗ್: ಶೇ 11
ಗಾಯ್ ಖೆಂಗಮ್: ಶೇ 10
ಟಿ ಬಿಸ್ವಜೀತ್: ಶೇ 05
ಇತರೆ: ಶೇ 21
***

ಬಿಜೆಪಿ ಆಡಳಿತಕ್ಕೆ ಎಷ್ಟು ಮಾರ್ಕ್ಸ್?
ಅತ್ಯುತ್ತಮ: ಶೇ 22
ಉತ್ತಮ: ಶೇ 37
ಸಾಧಾರಾಣ: ಶೇ 29
ಕಳಪೆ: ಶೇ 12

ಮತದಾನಕ್ಕೂ ಮುನ್ನ ಪರಿಗಣಿಸುವ ಅಂಶಗಳು

ಮತದಾನಕ್ಕೂ ಮುನ್ನ ಪರಿಗಣಿಸುವ ಅಂಶಗಳು

ಮಣಿಪುರದಲ್ಲಿ ಸಮಸ್ಯೆ
ನಿರುದ್ಯೋಗ: ಶೇ 29
ಕುಡಿಯುವ ನೀರು: ಶೇ 24
ಕಳಪೆ ರಸ್ತೆ: ಶೇ 17
ಭ್ರಷ್ಟಾಚಾರ; ಶೇ 5
ಇತರೆ: ಶೇ 25

ಮತದಾನಕ್ಕೂ ಮುನ್ನ ಪರಿಗಣಿಸುವ ಅಂಶಗಳು
ಕಾನೂನು ಸುವ್ಯವಸ್ಥೆ ಸುಧಾರಣೆ: ಶೇ 28
ಆಡಳಿತ ವಿರೋಧಿ ಅಲೆ: ಶೇ 24
ರಾಜ್ಯದ ಸರ್ವಾಂಗೀಣ ಅಭಿವೃದ್ಧಿ: ಶೇ 17
ಸಿಎಂಎಚ್ ಟಿ, ಸಿಎಂ ದಾ ಹೈಸಿ ಸರ್ಕಾರಿ ಯೋಜನೆ: ಶೇ 11
ಇತರೆ: ಶೇ 20

Recommended Video

Usman Khawajaರನ್ನು stage ಮೇಲೆ ಕರೆಯಲು Pat Cummins ಮಾಡಿದ್ದೇನು | Oneindia Kannada

English summary
Republic P-MARQ Punjab Opinion Poll 2022 for Manipur: Clean Sweep for BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X