ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಗಳ ಪೊಲೀಸ್ ಪದಕ ವಿಜೇತೆ ಸೋನಿಯಾ ನಾರಂಗ್

|
Google Oneindia Kannada News

ಕರ್ನಾಟಕದ ಕೆಡರ್‌ನ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಅವರು ಸದ್ಯ ಕೇಂದ್ರ ಸೇವೆಯಲ್ಲಿದ್ದಾರೆ. 72ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡಲಾಗುವ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಸೋನಿಯಾ ನಾರಂಗ್ ಅವರಿಗೆ ನೀಡಿ ಗೌರವಿಸಲಾಗಿದೆ.

ಸೋನಿಯಾ ನಾರಂಗ್ ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ 6 ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಲಭಿಸಿದೆ. ಸೋನಿಯಾ ನಾರಂಗ್ ಅವರು ಸದ್ಯ ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕಿಯಾಗಿದ್ದಾರೆ. ಇದಕ್ಕೂ ಮುನ್ನ ಎನ್ಐಎ ಡಿಐಜಿಯಾಗಿದ್ದರು.

ಸೋನಿಯಾ ನಾರಂಗ್ ಸೇರಿದಂತೆ 6 NIA ಅಧಿಕಾರಿಗಳಿಗೆ ಗೌರವಸೋನಿಯಾ ನಾರಂಗ್ ಸೇರಿದಂತೆ 6 NIA ಅಧಿಕಾರಿಗಳಿಗೆ ಗೌರವ

ಸೋನಿಯಾ ನಾರಂಗ್ ಸಂಕ್ಷಿಪ್ತ ಪರಿಚಯ:
ಸೋನಿಯಾ ನಾರಂಗ್ ಅವರು ಮೂಲತಃ ಚಂಡೀಗಢದವರು. ಬಿಎ ಪದವಿ ಪಡೆದ ಬಳಿಕ ಅವರು ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2002ರಲ್ಲಿ ಕರ್ನಾಟಕ ಕೆಡರ್‌ನ ಅಧಿಕಾರಿಯಾಗಿ ನೇಮಕವಾದರು. ರಾಜ್ಯದಲ್ಲಿ ಸೋನಿಯಾ ನಾರಂಗ್ ಅವರು ಕಲಬುರಗಿಯಲ್ಲಿ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಆರಂಭಿಸಿದರು.

Republic Day 2021: Police Medal awardee Sonia Narang profile

ನಂತರ ಅವರು ಬೈಲಹೊಂಗಲದಲ್ಲಿ ಎಎಸ್‌ಪಿಯಾಗಿ ಕೆಲಸ ಮಾಡಿದರು. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುವಾಗ ಸೋನಿಯಾ ನಾರಂಗ್ ಅವರ ಹೆಸರು ರಾಜ್ಯಕ್ಕೆ ಪರಿಚಯವಾಯಿತು. ನಂತರ ಬೆಳಗಾವಿಗೆ ವರ್ಗಾವಣೆಯಾದ ಅವರು ಅನಂತರ ಬೆಂಗಳೂರಿಗೆ ಬಂದರು.

ಕೆಎಸ್ಆರ್‌ಪಿಯಲ್ಲಿಯೂ ಕೆಲಸ ನಿರ್ವಹಿಸಿದ ನಾರಂಗ್ ಅವರು, ನಂತರ ಲೋಕಾಯುಕ್ತಕ್ಕೆ ವರ್ಗಾವಣೆಯಾದರು. 2015ರಿಂದ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ನಾರಂಗ್ ಅವರಿಗೆ ನಂತರ ಡಿಐಜಿಯಾಗಿ ಬಡ್ತಿ ಸಿಕ್ಕಿತ್ತು. ನಂತರ ಸಿಐಡಿಯ ಡಿಐಜಿಯಾಗಿ ನೇಮಕವಾದರು. ಅವರ ನೇತೃತ್ವದಲ್ಲಿಯೇ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸಲಾಯಿತು.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಲೋಕಾಯುಕ್ತ ಹಗರಣ ಬೆಳಕಿಗೆ ತಂದರು : ಕರ್ನಾಟಕ ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ನಡೆದಿದೆ ಎಂದು ಲೋಕಾಯುಕ್ತ ಎಸ್‌ಪಿಯಾಗಿದ್ದ ಸೋನಿಯಾ ನಾರಂಗ್‌ ಅವರು 2015ರ ಮೇ 11ರಂದು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು. ಆನಂತರ ನಡೆದ ಹಲವು ಬೆಳವಣಿಗೆಗಳ ಬಳಿಕ ಲೋಕಾಯುಕ್ತ ವೈ. ಭಾಸ್ಕರ ರಾವ್ ಅವರು ಡಿಸೆಂಬರ್ 7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸೋನಿಯಾ ನಾರಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನವದೆಹಲಿ ವಿಭಾಗದ ಎಸ್‌ಪಿಯಾಗಿ ನೇಮಕ ಮಾಡಲಾಯಿತು. ನಂತರ ಎನ್ಐಎ ಡಿಐಜಿಯಾಗಿ ಅಧಿಕಾರ ಅವಧಿ ಪೂರೈಸಿದ ಬಳಿಕ ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡರು.

English summary
Republic Day 2021: Sonia Narang, a Karnataka cadre Indian Police Service officer of the 2002 batch awarded with President's Police Medal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X