ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಮತ ಪಂಥ ಮೀರಿದ ಮಹಾನ್ ಸಂತ ರಾಮಾನುಜಾಚಾರ್ಯ

By ವೇಣು ಅನಂತ ಪದ್ಮನಾಭನ್
|
Google Oneindia Kannada News

ಯೋ ನಿತ್ಯಮಚ್ಯುತ ಪದಾಂಬುಜ ಯುಗ್ಮರುಗ್ಮ

ವ್ಯಾಮೋಹಿತಸ್ಥತಿತರಾಣಿ ತೃಣಾಯಮೇನೆ
ಅಸ್ಮದ್ಗೂರೋರ್ ಭಗವತೋಸ್ಯ ಧಯೈಕಸಿಂಧೋಃ

ರಾಮಾನುಜಸ್ಯ ಚರಣೌ ಶರಣಂ ಪ್ರಪಧ್ಯೇ.

ಶ್ರೀ ಮತೇ ರಾಮಾನುಜಾಯ ನಮಃ

ರಾಮಾನುಜ ಅಥವಾ ರಾಮಾನುಜಾಚಾರ್ಯ (ಜೀವಾವಧಿ : 1017 - 1137 ಮಧ್ಯೆ) ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು 1017ರಲ್ಲಿ ಹುಟ್ಟಿದರು. ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ, ಬಹು ದೊಡ್ಡ ವಿದ್ವಾಂಸರು. ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು. ಶ್ರೀ ವೈಷ್ಣವ ಸಂಪ್ರದಾಯದ ಪ್ರಕಾರ ರಾಮಾನುಜನು ತನ್ನ ಗುರುಗಳ ವಿರುದ್ದ ನಿಂತು ಅವನು ಪರಿಪೂರ್ಣ ಅದ್ವೈತ ವೇದಾಂತವನ್ನು ಪಾಲಿಸಿದ ಎಂದು ಹೇಳಲಾಗಿದೆ.

Remembering Ramanuja - an Indian theologian, philosopher

ರಾಮಾನುಜರವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು. ತಾಯಿಯ ಹೆಸರು ಕಾಂತಿಮತಿ.

ಸಕಲ ಸದ್ಗುಣಗಳ ಮೂರ್ತರೂಪ ಶ್ರೀ ಶಂಕರರನ್ನು ಸ್ಮರಿಸೋಣ ಸಕಲ ಸದ್ಗುಣಗಳ ಮೂರ್ತರೂಪ ಶ್ರೀ ಶಂಕರರನ್ನು ಸ್ಮರಿಸೋಣ

ರಾಮಾನುಜಚಾರ್ಯರು ಆಚಾರ್ಯತ್ರಯರಲ್ಲಿ ಒಬ್ಬರಾದರೂ ಅವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ ಅವರ ಹೆಸರನ್ನು ಕೇಳಿದ್ದಾರೆಂಬುದು ಸಮಾಧಾನದ ವಿಷಯ.
ಜನನ ಮತ್ತು ಮರಣ ಎರಡೂ ಸಹ ತಮಿಳುನಾಡಿನಲ್ಲಾಗಿದ್ದರೂ ಕರ್ನಾಟಕ ಅವರ ಕರ್ಮಭೂಮಿ.

ಇಂದು ಕೇವಲ ಶ್ರೀವೈಷ್ಣವ ಸಂಪ್ರದಾಯಸ್ಥರಿಗೆ ಮಾತ್ರ ಗುರುಗಳು ಎಂದು ಗುರುತಾಗಿರುವ ಆಚಾರ್ಯರು ಸಮಾನತೆಯ ಹರಿಕಾರರು ಆಗಿದ್ದರು. ಬಸವಣ್ಣ ಮತ್ತು ಅಂಬೇಡ್ಕರ್ ಅವರಿಗಿಂತಲೂ ಹೆಚ್ಚಾಗಿಯೇ ಸಮಾನತೆಯನ್ನು ಪಸರಿಸಿದವರು ರಾಮಾನುಜರು.

ಓಂ ನಮೋ ನಾರಾಯಣಾಯ ನಮಃ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಜಾತಿ ಮತ ಪಂಥವನ್ನು ಮೀರಿ ಎಲ್ಲರಿಗೂ ಉಪದೇಶಿಸಿದ ಮಹಾನ್ ಸಂತ.

ಚಾಂಡಾಲನಲ್ಲೂ ಈಶ್ವರನನ್ನು ಕಂಡಿದ್ದರು ಆದಿ ಶಂಕರಾಚಾರ್ಯರು! ಚಾಂಡಾಲನಲ್ಲೂ ಈಶ್ವರನನ್ನು ಕಂಡಿದ್ದರು ಆದಿ ಶಂಕರಾಚಾರ್ಯರು!

ಭಗವಂತನನ್ನು ಒಲಿಸಲೂ ಭಕ್ತಿ ಎಂಬ ಅಸ್ತ್ರವೊಂದೆ ಸಾಕು ಎಂದು ಸಾರಿ ಹೇಳಿ ಗೋವಿಂದ ನಾಮ ಸ್ಮರಣೆ, ಗೋವಿಂದ ಎನ್ನುವ ಉದ್ಘೋಷ ಪ್ರತಿ ಮನೆಯಲ್ಲು ಪ್ರತಿಧ್ವನಿಸಲೆಂಬ ಸಂಕಲ್ಪದಿಂದ ದಾಸ ಪದ್ದತಿಯನ್ನು ಸೃಷ್ಟಿಸಿದ ಯೋಗಿ. ಅಸ್ಪೃಶ್ಯರು ಎಂದು ದೂರವಿಟ್ಟವರಿಗೆ ಹರಿಯ ಪ್ರೀತಿ ಪುತ್ರರು ನೀವು ಹರಿಜನರು ನಿಮ್ಮ ವಿಶೇಷ ಸೇವೆ ಚೆಲುವನಾರಾಯಣನಿಗಿರಲಿ ಎಂದು ಪ್ರೀತಿಯ ಚಿಲುಮೆಯನ್ನರಿಸಿದ ಚಿನ್ಮಯರು.

Remembering Ramanuja - an Indian theologian, philosopher

ಪ್ರೀತಿಯೆ ಭಕ್ತಿಯಾಗಿ ಮುಸಲ್ಮಾನ ಬೀಬಿ ನಾಚಿಯಾರ್ ನಾರಾಯಣನನ್ನು ಬಿಡಲೊಪ್ಪದಾಗ ಅವಳಿಗೂ ನಾರಾಯಣನ ಎದುರಿನ ದೇವಿ ಪಟ್ಟ ಕೊಟ್ಟು ಮುಸಲ್ಮಾನರು ಸಹ ಚೆಲುವ ನಮ್ಮ ಅಳಿಯನೆಂಬ ಭಾವನೆಯನ್ನು ಬಿತ್ತಿ ಕೋಮು ಸೌಹಾರ್ದತೆಯನ್ನು ಸ್ಥಾಪಿಸಿದ ಸವ್ಯಸಾಚಿ.
ಕನ್ನಡ ರಾಜ ಸಂಸ್ಥಾನದ ಪ್ರಮುಖ ರಾಜ ಭಟ್ಟನಾಥನನ್ನು ವಿಷ್ಣುವರ್ಧನನಾಗಿ ಮಾಡಿ ಮೈಸೂರು ರಾಜ್ಯದಾದ್ಯಂತ ಸುಂದರವಾದ ದೇವಾಲಯಗಳನ್ನು ನಿರ್ಮಿಸಲು ನಿರ್ದೇಶಿಸಿ, ಕರ್ನಾಟಕವನ್ನು ಶಿಲ್ಪ ಕಲೆಗಳನಾಡನ್ನಾಗಿಸಿದ ಶಿಲ್ಪಿ ಶ್ರೀ ರಾಮಾನುಜರು, ಸಾರ್ವಜನಿಕವಾಗಿ ಶೂದ್ರನೊಬ್ಬನನ್ನು ಆಲಂಗಿಸಿ ಮೈಲಿಗೆ ಹರಡುತ್ತದೆಂದರೆ ಮಡಿ ಹರಡುವುದಿಲ್ಲವೇ ಎಂದು ಸರ್ವ ಸಮಾನತೆಯನ್ನು ಸಾರಿದ ಸರ್ವಜ್ಞ ಶ್ರೀ ರಾಮಾನುಜರು.

ರಾಮಾನುಜಚಾರ್ಯರ ಕಾರ್ಯ ಸಾಧನೆ ಇನ್ನೂ ಹಲವಾರಿವೆ. ಆದರೆ ಅದು ಯಾವುದೂ ಸಹ ಜನ ಸಾಮಾನ್ಯರಿಗೆ ತಿಳಿದಿಲ್ಲ. ಬಸವಣ್ಣನವರು ಅಂಬೇಡ್ಕರರೂ ಸಹ ಸಮಾನತೆಗಾಗಿ ಹೋರಾಡಿದ್ದರೂ ಆದರೆ ಧರ್ಮವನ್ನು ಧಿಕ್ಕರಿಸಿ ಬಸವಣ್ಣನವರು ಶರಣ ಪಂಥವನ್ನು ಸ್ಥಾಪಿಸಿದರು, ಅಂಬೇಡ್ಕರ್ರರು ಹಿಂದೂತ್ವವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಆದರೆ ರಾಮಾನುಜರು ಧರ್ಮವನ್ನು ಬಿಡದೆ ಎಲ್ಲರೂ ಶ್ರೀಹರಿಯ ದಾಸರು ಎಂದು ನುಡಿದರು.
ಇಂತಹ ಮಹಾನ್ ಚೇತನರ ಆದರ್ಶಗಳು ಬಹುಪಾಲೂ ಶ್ರೀವೈಷ್ಣವರಿಗೆ ತಿಳಿದೇ ಇಲ್ಲ ಎಂಬುದು ದುರಾದೃಷ್ಟಕರ.

ಗುರು ರಾಘವೇಂದ್ರ ಸಾರ್ವಭೌಮರು, ಜಗದ್ಗುರು ಆದಿ ಶಂಕರರು, ಸ್ವಾಮಿ ವಿವೇಕಾನಂದರೂ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಆದರೆ ರಾಘವೇಂದ್ರ ಸ್ವಾಮಿಗಳ ದೈವಿಕಶಕ್ತಿ, ಆದಿಶಂಕರರ ತತ್ವಸಿದ್ಧಾಂತಗಳು, ವಿವೇಕಾನಂದರ ಚಿಂತನೆಗಳು, ಬಸವಣ್ಣನವರ ಸಾಮಾಜಿಕ ಕಳಕಳಿ, ಎಲ್ಲದರ ಸಂಗಮ ರಾಮಾನುಜಾಚಾರ್ಯರು. 120 ವರ್ಷಗಳ ಸಾಧನೆಯ ದೀರ್ಘಾಯುಷ್ಯವನ್ನು ಪೂರೈಸಿ ವೈಕುಂಠವನ್ನು ತಲುಪಿ ಶ್ರೀನಾರಾಯಣನನ್ನು ಸೇರಿದ ಮೇಲೂ ಅವರ ಭೌತಿಕ ದೇಹ 800 ವರ್ಷವಾದರು ರಾಸಾಯನಿಕ ಕ್ರಿಯೆಯೇ ನಡೆಯದೆ ಇನ್ನೂ ದರ್ಶನ ಯೋಗ್ಯವಾಗಿದೆ. ಅಂತಹ ಮಹಾನ್ ತಪಸ್ವಿ ರಾಮಾನುಜರು.

Remembering Ramanuja - an Indian theologian, philosopher

ಇಂದು 09/05/2019ಕ್ಕೆ ರಾಮಾನುಜರ ಜನ್ಮಾವತಾರವಾಗಿ 1002 ವರ್ಷಗಳಾಗಿದೆ. ಇನ್ನಾದರೂ ರಾಮಾನುಜರ ಬಗ್ಗೆ ಜನ ಸಾಮಾನ್ಯರಿಗೆ ತಿಳಿಯುವಂತಾಗಲಿ ಪ್ರತಿ ಗುರುವಾರದಂದು ರಾಯರಿಗಷ್ಟೆ ಅಲ್ಲದೆ ರಾಮಾನುಜರಿಗೂ ಎಲ್ಲರೂ ನಮಿಸುವಂತಾಗಲಿ.

ಇಂದು 9ನೇ ಮೇ ತಿಂಗಳ ಪಂಚಮಿಯಂದು 1002ನೇ ವರ್ಷದ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಅವರೇ ಸ್ಥಾಪಿಸಿರುವ ಮೇಲುಕೊಟೆ ಯದುಗಿರಿ ಯತಿರಾಜಮಠದ ಈಗಿನ‌ ಸ್ವಾಮಿಗಳಾದ ಶ್ರೀಯತಿರಾಜ ನಾರಾಯಣರಾಮಾನುಜ ಜೀಯರ್ ರವರ ನೇತೃತ್ವದಲ್ಲಿ ಶ್ರೀಮಾದ್ ರಾಮಾನುಜ ಚಾರ್ಯರ ಜಯಂತಿಯನ್ನು ಅಚರಿಸಿದರು. ಸಹಸ್ರ ಶಿಷ್ಯಂದಿರು ಹಾಗೂ ಕ್ತಾದಿಗಳು ಪಾಲ್ಗೊಂಡಿದ್ದರು. ವಿಶ್ವೇಶ್ವರಭಟ್ -ವಿಶ್ವವಾಣಿ ಸಂಪಾದಕರು ಹಾಗೂ ಮಾಜಿ ಪೋಲಿಸ್ ಅಧಿಕಾರಿ ಶಂಕರ ಬಿದರಿ -ಪಾಲ್ಗೊಂಡು ಅಚಾರ್ಯರ ಕೃಪೆಗೆ ಪಾತ್ರರಾದರು.

English summary
Ramanuja (1017–1137) was an Indian theologian, philosopher, and one of the most important exponents of the Sri Vaishnavism tradition within Hinduism. His philosophical foundations for devotionalism were influential to the Bhakti movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X