ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಟೆಕ್ ನಕಲು ಪತ್ತೆ; 6 ಲಕ್ಷದ 'ಬ್ಲೂಟೂತ್‌ ಚಪ್ಪಲಿ' ಧರಿಸಿದ್ದ REET ಅಭ್ಯರ್ಥಿಗಳು!

|
Google Oneindia Kannada News

ಜೈಪುರ, ಸೆಪ್ಟೆಂಬರ್‌, 27: ಪರೀಕ್ಷೆಯಲ್ಲಿ ನಕಲು ಮಾಡುವ ವಿಚಾರ ಬಂದಾಗ ಭಾರತದ ವಿಧ್ಯಾರ್ಥಿಗಳಲ್ಲಿ ಅದೆಷ್ಟೋ ಐಡಿಯಾಗಳು ಸಿದ್ದವಾಗಿರುತ್ತದೆ. ಇನ್ನು ಈ ನಡುವೆ ತಂತ್ರಜ್ಞಾನವು ಈ ವಿದ್ಯಾರ್ಥಿಗಳ ನಕಲು ಮಾಡಲು ಹೂಡುವ ತಂತ್ರಗಳಿಗೆ ಇನ್ನಷ್ಟು ಬಲವನ್ನು ತುಂಬಿದೆ. ತಂತ್ರಜ್ಞಾನವು ವಿದ್ಯಾರ್ಥಿಗಳಿಗೆ ಎಲ್ಲಾ ಕಾರ್ಯವನ್ನು ಸುಲಭವನ್ನಾಗಿಸಿದೆ. ಈ ನಡುವೆ ಶಿಕ್ಷಕರ ರಾಜಸ್ಥಾನ ಅರ್ಹತಾ ಪರೀಕ್ಷೆಯಲ್ಲಿ (REET) ಬಿಗಿ ಭದ್ರತೆಯ ಮಧ್ಯೆಯೂ ಈ ತಂತ್ರಜ್ಞಾನವನ್ನು ಬಳಸಿಕೊಂಡು ಹೈಟಕ್‌ ನಕಲು ಮಾಡುವ ಯತ್ನ ನಡೆಸಿದ ಅಭ್ಯರ್ಥಿಗಳು ಸಿಕ್ಕಿ ಬಿದ್ದಿದ್ದಾರೆ.

ರಾಜಸ್ತಾನದ ಬಿಕನೇರ್‌ ಎಂಬ ಪ್ರದೇಶದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಶಿಕ್ಷಕರ ರಾಜಸ್ಥಾನ ಅರ್ಹತಾ ಪರೀಕ್ಷೆ (REET) ನಡೆದಿದೆ. ಈ ಪರೀಕ್ಷೆಯನ್ನು ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ರಾಜಸ್ಥಾನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಲಿದ್ದಾರೆ. 33 ಜಿಲ್ಲೆಗಳಲ್ಲಿ ಒಟ್ಟು 3,993 ಪರೀಕ್ಷಾ ಕೇಂದ್ರಗಳಲ್ಲಿ ಎರಡು ಪಾಳಿಗಳಲ್ಲಿ ಪರೀಕ್ಷೆಯು ನಡೆದಿದೆ. ಪರೀಕ್ಷೆಗೆ 16.51 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ನೀಟ್ ಮುಂದುವರಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ 'ಬರ'!ನೀಟ್ ಮುಂದುವರಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ 'ಬರ'!

ಈ ನಡುವೆ ಭಾರೀ ಭದ್ರತೆ ಇದ್ದರೂ ಬಿಕಾನೆರ್‌ನ ಪರೀಕ್ಷಾ ಕೇಂದ್ರದಲ್ಲಿ ಹೈಟೆಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಅಭ್ಯರ್ಥಿಗಳು ನಕಲು ಮಾಡುವ ಯತ್ನವನ್ನು ಮಾಡಿದ್ದಾರೆ. ಆದರೆ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದಾರೆ. ಬಿಕಾನೆರ್‌ನಲ್ಲಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವ ನಿಟ್ಟಿನಲ್ಲಿ "ಬ್ಲೂಟೂತ್‌ ಚಪ್ಪಲಿ" ಯನ್ನು ಧರಿಸಿದ್ದಾರೆ.

 ತಲಾ ಆರು ಲಕ್ಷ ರೂಪಾಯಿ ವ್ಯಯಿಸಿ ಈ ಹೈಟೆಕ್‌ ನಕಲು ಕಾರ್ಯ

ತಲಾ ಆರು ಲಕ್ಷ ರೂಪಾಯಿ ವ್ಯಯಿಸಿ ಈ ಹೈಟೆಕ್‌ ನಕಲು ಕಾರ್ಯ

ಚಪ್ಪಲಿಗೆ ಬ್ಲೂಟೂತ್‌ ಸಾಧನವನ್ನು ಹಾಕಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಈ ಚಪ್ಪಲಿಗೆ ಅಭ್ಯರ್ಥಿಗಳು ಆರು ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಹೈಟೆಕ್‌ ನಕಲು ಮಾಡಲು ಯತ್ನ ಮಾಡಿದ ಐವರು ಅಭ್ಯರ್ಥಿಗಳನ್ನು ಬಂಧನ ಮಾಡಲಾಗಿದೆ. ಇನ್ನು ಈ ಪೈಕಿ ಇಬ್ಬರು ಈ ತಂಡದ ಸದಸ್ಯರು ಆಗಿದ್ದು ಅಭ್ಯರ್ಥಿಗಳಿಗೆ ಸುಮಾರು ಆರು ಲಕ್ಷ ರೂಪಾಯಿಗೆ ಈ ಬ್ಲೂಟೂತ್‌ ಚಪ್ಪಲಿಯನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

 ಗಮನಕ್ಕೆ ಬಾರದಷ್ಟು ಸಣ್ಣ ಬ್ಲೂಟೂತ್‌ ಕಿವಿಯಲ್ಲಿ

ಗಮನಕ್ಕೆ ಬಾರದಷ್ಟು ಸಣ್ಣ ಬ್ಲೂಟೂತ್‌ ಕಿವಿಯಲ್ಲಿ

ಇನ್ನು ರಾಜಸ್ಥಾನ ಪೊಲೀಸರು ಈ ಬ್ಲೂಟೂತ್‌ ಚಪ್ಪಲಿಯನ್ನು ಶಿಕ್ಷಕರ ರಾಜಸ್ಥಾನ ಅರ್ಹತಾ ಪರೀಕ್ಷಾ ಅಭ್ಯರ್ಥಿಗಳಿಂದ ವಶಕ್ಕೆ ಪಡೆದಿದ್ದಾರೆ. ಈ ಚಪ್ಪಲಿಗೆ ಸಣ್ಣ ಡಿವೈಸ್‌ ಅನ್ನು ಹಾಕಲಾಗಿದ್ದು, ಸಿಮ್‌ ಅನ್ನು ಕೂಡಾ ಅಳವಡಿಸಲಾಗಿದೆ. ಹಾಗೆಯೇ ಹಿಯರ್‌ ಫೋನ್‌ ಕೂಡಾ ಇದೆ. ಅಭ್ಯರ್ಥಿಗಳು ತಮ್ಮ ಕಿವಿಗೆ ಸಣ್ಣದಾದ ಹಿಯರ್‌ ಫೋನ್‌ ಅನ್ನು ಹಾಕಿದ್ದು, ಇದು ಗಮನಕ್ಕೆ ಬಾರದಷ್ಟು ಸಣ್ಣದಾಗಿದೆ ಎಂದು ವರದಿ ಹೇಳುತ್ತದೆ. "ಈ ಹಿಯರ್‌ ಫೋನ್‌ ನಮ್ಮ ಮೈ ಬಣ್ಣದಲ್ಲೇ ಇದ್ದು ಅತೀ ಸಣ್ಣದಾಗಿದೆ. ನಾವು ಸೂಕ್ಷ್ಮವಾಗಿ ಗಮನಿಸಿದರೂ ನಮ್ಮ ಗಮನಕ್ಕೆ ಬಾರದಂತೆ ವಿನ್ಯಾಸಗೊಂಡಿದೆ," ಎಂದು ಪೊಲೀಸರು ಹೇಳಿದ್ದಾರೆ.

ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!

 ರಾಜ್ಯದಲ್ಲಿ ವಂಚನೆಯ ರಾಕೆಟ್‌ ಭೇದಿಸಿದ ರಾಜಸ್ತಾನ ಪೊಲೀಸರು

ರಾಜ್ಯದಲ್ಲಿ ವಂಚನೆಯ ರಾಕೆಟ್‌ ಭೇದಿಸಿದ ರಾಜಸ್ತಾನ ಪೊಲೀಸರು

ಮೊದಲು ಅಜ್ಮೇರ್‌ನಲ್ಲಿ ವ್ಯಕ್ತಿಯೋರ್ವನ ಮೇಲೆ ಅನುಮಾನ ಉಂಟಾಗಿದ್ದು ಆ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಈತ ಅಭ್ಯರ್ಥಿಗಳಿಗೆ ಬ್ಲೂಟೂತ್‌ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆ ಬಳಿಕ ಪೊಲೀಸರು ರಾಜ್ಯದಾದ್ಯಂತ ನಡೆಯುತ್ತಿದ್ದ ಈ ಪರೀಕ್ಷಾ ವಂಚನೆಯನ್ನು ಭೇದಿಸಿದ್ದಾರೆ. "ಈ ಆರೋಪಿಯು ಬ್ಲೂಟೂತ್‌ ಮೂಲಕ ಅಭ್ಯರ್ಥಿಗಳಿಗೆ ಪ್ರಶ್ನೆಗೆ ಉತ್ತರವನ್ನು ಹೇಳಿಕೊಡುತ್ತಿದ್ದ, ಈ ಬ್ಲೂಟೂತ್‌ ಅನ್ನು ಚಪ್ಪಲಿಯಲ್ಲಿ ಹಾಕಲಾಗಿತ್ತು. ಇದನ್ನು ಆರು ಲಕ್ಷ ರೂಪಾಯಿಗೆ ಅಭ್ಯರ್ಥಿಗಳಿಗೆ ಮಾರಾಟ ಮಾಡಲಾಗಿದೆ. ಸಣ್ಣ ಹಿಯರ್‌ ಫೋನ್‌ ಅಭ್ಯರ್ಥಿಗಳ ಕಿವಿಯಲ್ಲಿ ಇಡಲಾಗಿದ್ದು, ಇದು ಗಮನಕ್ಕೆ ಬಾರದಷ್ಟು ಸಣ್ಣದಾಗಿದೆ. ಈ ಹಿಯರ್‌ ಫೋನ್‌ ಮೂಲಕ ಆ ಆರೋಪಿ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿದ್ದ," ಎಂದು ಪೊಲೀಸರು ತಿಳಿಸಿದ್ದಾರೆ.

 ಕೋಚಿಂಗ್ ಸೆಂಟರ್‌ ಮಾಸ್ಟರ್‌ ಮೈಂಡ್‌ ಅನ್ನು ಪತ್ತೆ ಹಚ್ಚಿದ ಪೊಲೀಸರು

ಕೋಚಿಂಗ್ ಸೆಂಟರ್‌ ಮಾಸ್ಟರ್‌ ಮೈಂಡ್‌ ಅನ್ನು ಪತ್ತೆ ಹಚ್ಚಿದ ಪೊಲೀಸರು

ಈ ಎಲ್ಲಾ ಘಟನೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ 'ಬ್ಲೂಟೂತ್‌ ಚಪ್ಪಲಿ' ಫೋಟೋ ವೈರಲ್ ಆಗುತ್ತಿದೆ. ಇನ್ನು ಟೈಮ್ಸ್‌ ಆಫ್‌ ಇಂಡಿಯಾ ಪ್ರಕಾರ, "ಪೊಲೀಸರು ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಬಿಕಾನೆರ್‌ನಲ್ಲಿ ಕೋಚೀಂಗ್‌ ಸೆಂಟರ್‌ ನಡೆಸು‌ತ್ತಿರುವ ತುಳಸಿ ರಾಮ ಕಲೇರ್‌ ಎಂದು ಪತ್ತೆ ಹಚ್ಚಿದ್ದಾರೆ ಎಂದು ಹೇಳಾಗಿದೆ. ಇನ್ನು ಇಬ್ಬರು ಆರೋಪಿಗಳನ್ನು ಮದನ್‌ ಲಾಲ್‌ ಹಾಗೂ ತ್ರಿಲೋಕಚಂದ್‌ ಎಂದು ಗುರುತಿಸಲಾಗಿದೆ. ಇಬ್ಬರು ಈ ಗ್ಯಾಂಗ್‌ನ ಸದಸ್ಯರು ಎನ್ನಲಾಗಿದೆ. ಇಬ್ಬರು ಅಭ್ಯರ್ಥಿಗಳಿಗೆ ಈ ಚಪ್ಪಲಿಯನ್ನು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. "ಮೊದಲು ಈ ಆರೋಪಿಗಳನ್ನು ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ತಪಾಸಣೆ ಮಾಡುವಾಗ ಚಪ್ಪಲಿ ಹಾಗೂ ಇತರೆ ಸಾಮಾಗ್ರಿಗಳು ಗಮನಕ್ಕೆ ಬಂದಿದೆ. ಪ್ರಮುಖ ಆರೋಪಿಯನ್ನು ತುಳಸಿರಾಮ್‌ ಎಂದು ಗುರುತಿಸಲಾಗಿದೆ," ಎಂದು ಬಿಕಾನೆರ್‌ನ ಪೊಲೀಸ್‌ ವರಿಷ್ಠಾಧಿಕಾರಿ ಪ್ರೀತಿ ಚಂದ್ರ ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
REET Aspirants Buy Rs 6 Lakh ‘Bluetooth Chappals’ to Cheat in Exam, Arrested in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X