ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಬೇಗ ಕೊರೊನಾ ಸೋಂಕು ತಗುಲುವುದಿಲ್ಲ, ಏಕೆ?

|
Google Oneindia Kannada News

ಕೊರೊನಾ ಸೋಂಕು ಯಾವ ವಯಸ್ಸಿನವರನ್ನೂ ಬಿಟ್ಟಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು ವಯಸ್ಸಾದವರ ದೇಹವನ್ನೂ ನಲುಗಿಸಿರುವ ಈ ಸೋಂಕಿಗೆ ಮಕ್ಕಳು, ಪುರುಷರು, ಮಹಿಳೆಯರು ಯಾವ ಭೇದವೂ ಇಲ್ಲ. ಜೊತೆಗೆ ಸೋಂಕಿನ ಗಂಭೀರತೆ ಏನಿದ್ದರೂ ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೇಲೆ ಅವಲಂಬಿತ ಎನ್ನಲಾಗಿದೆ.

ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕೊರೊನಾ ಸೋಂಕು ಬೇಗ ತಗುಲುವುದಿಲ್ಲ ಎಂದು ಅಧ್ಯಯನವೊಂದು ಹೇಳುತ್ತಿದೆ. ಕೆಲವು ತಿಂಗಳಿನಿಂದೀಚೆಗೆ ನಡೆದಿರುವ ಹಲವು ಅಧ್ಯಯನಗಳನ್ನು ಗಮನಿಸುವುದಾದರೆ, ಮಹಿಳೆಯರು ಕೊರೊನಾ ಸೋಂಕಿಗೆ ಒಳಗಾಗುವ ಪ್ರಮಾಣ ಕಡಿಮೆ ಇದೆ. ಕೊರೊನಾದಿಂದಾದ ಮಹಿಳೆಯರ ಮರಣ ಸಂಖ್ಯೆಯೂ ಕಡಿಮೆಯೇ ಇದೆ ಎನ್ನುತ್ತದೆ ಅಧ್ಯಯನ. ಏಕೆ ಮಹಿಳೆಯರಿಗೆ ಕೊರೊನಾ ಸೋಂಕು ಬೇಗ ತಗುಲುವುದಿಲ್ಲ? ಇಲ್ಲಿದೆ ನೋಡಿ ಅದರ ಕಾರಣ...

 ಮಹಿಳೆಯರಲ್ಲಿ ವಿಶೇಷ ಪ್ರೊಟೀನ್

ಮಹಿಳೆಯರಲ್ಲಿ ವಿಶೇಷ ಪ್ರೊಟೀನ್

ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಹಿಳೆಯರಲ್ಲಿ ವಿಶೇಷ ಪ್ರೊಟೀನ್ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಇದು ಕೊರೊನಾ ಸೋಂಕಿನಿಂದ ಮಹಿಳೆಯರನ್ನು ರಕ್ಷಿಸಲು ಸಹಕಾರಿ ಎಂದು ಅವರು ತಿಳಿಸಿದ್ದಾರೆ. ACE2 ಎಂಬ ಪ್ರೋಟೀನ್ ಜೀವಕೋಶ ಕೊರೊನಾ ವೈರಸ್ ಗೆ ಕಾರಣವಾಗಬಲ್ಲ SARS-COV-2 ಅನ್ನು ಹಿಡಿದಿಟ್ಟುಕೊಳ್ಳುವ ಕಾರಣ ಮಹಿಳೆಯರು ಬೇಗ ಸೋಂಕಿಗೆ ಒಳಗಾಗುವುದಿಲ್ಲ ಎನ್ನಲಾಗಿದೆ. ಇದರೊಂದಿಗೆ ಮಹಿಳೆಯರ ಆನುವಂಶಿಕ ರಚನೆಯೂ ಕಾರಣ ಎನ್ನಲಾಗಿದೆ.

ಕೇರಳದಲ್ಲಿ ಆತಂಕ ಮೂಡಿಸಿದ ಶಿಗೆಲ್ಲಾ: ಏನಿದು ಸೋಂಕು?ಕೇರಳದಲ್ಲಿ ಆತಂಕ ಮೂಡಿಸಿದ ಶಿಗೆಲ್ಲಾ: ಏನಿದು ಸೋಂಕು?

 ಹಾರ್ಮೋನು, ಕ್ರೋಮೋಸೋಮ್ ಗಳು ಕಾರಣ

ಹಾರ್ಮೋನು, ಕ್ರೋಮೋಸೋಮ್ ಗಳು ಕಾರಣ

ACE2 ಎಂಜೈಮ್, SARS-COV-2 ಅನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದರಿಂದ ಕೊರೊನಾ ಸೋಂಕು ಹರಡಲು ಸಾಧ್ಯವಾಗುವುದಿಲ್ಲ. ಇದು ಹೃದಯ ಸಂಬಂಧಿ ಹಾಗೂ ಶ್ವಾಸಕೋಶದ ಸಮಸ್ಯೆಯನ್ನೂ ತಡೆಯುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಹಿಳೆಯರ ದೇಹದಲ್ಲಿರುವ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳು ಕೂಡ ಸೋಂಕು ತಡೆಗೆ ಸಹಕಾರಿ ಎಂದು ಅಧ್ಯಯನ ತಿಳಿಸಿದೆ. ACE2 ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೊರೊನಾಗೆ ತುತ್ತಾಗುವ ಪ್ರಮೇಯವೂ ಕಡಿಮೆಯಿದೆ ಎನ್ನಲಾಗಿದೆ. ಆಲ್ಬರ್ಟ್ ವಿಶ್ವವಿದ್ಯಾಲಯದಿಂದ ನಡೆಸಿದ ಈ ಸಂಶೋಧನೆಯು, ACE2 ವೈರಸ್ ಫಿಲ್ಟರ್ ಮಾಡಿ ದೇಹವನ್ನು ರಕ್ಷಿಸುತ್ತದೆ ಎಂದು ತಿಳಿಸಿದೆ.

"x" ಕ್ರೋಮೋಸೋಮ್ ಹೇಗೆ ಮಹಿಳೆಯರನ್ನು ರಕ್ಷಿಸುತ್ತದೆ?

ಅಮೆರಿಕದಲ್ಲಿ ನಡೆಸಿದ ಸ್ವತಂತ್ರ್ಯ ಅಧ್ಯಯನಗಳ ಪ್ರಕಾರ, x ಕ್ರೋಮೋಸೋಮ್ ಗಳು ಕೊರೊನಾ ವೈರಸ್ ನಿಂದ ಪಾರಾಗುವಂತೆ ಮಾಡುತ್ತದೆ ಎನ್ನಲಾಗಿದೆ. ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ ಸಂಶೋಧಕರು ಈಸ್ಟ್ರೋಜೆನ್ ಅನ್ನು ಪುರುಷರಿಗೆ ನೀಡಿ ಪರೀಕ್ಷಿಸಿದ್ದು, ಅದರ ಪ್ರಕಾರ ಹೆಚ್ಚಿನ ಪ್ರಮಾಣದ ಈಸ್ಟ್ರೋಜೆನ್ ಕೂಡ ಕೊರೊನಾ ತಡೆಗೆ ಸಹಕಾರಿ ಎನ್ನಲಾಗಿದೆ.

'ಕೊರೊನಾ' ಕೊಂದ ಮಹಿಳಾಮಣಿಗಳು, ಇದು ಸಾಧಕಿಯರ ವರ್ಷ..!'ಕೊರೊನಾ' ಕೊಂದ ಮಹಿಳಾಮಣಿಗಳು, ಇದು ಸಾಧಕಿಯರ ವರ್ಷ..!

 ಮಹಿಳೆಯರ ಮಾನಸಿಕ ಸ್ಥಿತಿಗತಿಯೂ ಭಿನ್ನ

ಮಹಿಳೆಯರ ಮಾನಸಿಕ ಸ್ಥಿತಿಗತಿಯೂ ಭಿನ್ನ

ದೇಹವು ಅಸ್ವಸ್ಥಗೊಳ್ಳಲು ಕೆಲವು ಅಭ್ಯಾಸಗಳೂ ಕಾರಣವಾಗುತ್ತವೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೊರಗಿನ ವಾತಾವರಣಗಳಲ್ಲಿ ಕೆಲಸ ಮಾಡುವುದು ಹೆಚ್ಚು. ಹೀಗಾಗಿ ಮಾಲಿನ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಪುರುಷರಲ್ಲಿ ಬೇಗ ಕಾಣಿಸಿಕೊಳ್ಳುತ್ತವೆ. ಜೊತೆಗೆ ಸಾಮಾಜಿಕ ಕೂಟಗಳಲ್ಲಿ ಪುರುಷರು ಹೆಚ್ಚು ತೊಡಗಿಕೊಳ್ಳುವುದು ಅವರನ್ನು ಸೋಂಕಿಗೆ ದೂಡುವ ಕಾರಣವಾಗಬಹುದು ಎನ್ನಲಾಗಿದೆ.

 ಪುರುಷರಲ್ಲಿ ಪ್ರಕರಣ ಹೆಚ್ಚಲು ಇದೂ ಕಾರಣ...

ಪುರುಷರಲ್ಲಿ ಪ್ರಕರಣ ಹೆಚ್ಚಲು ಇದೂ ಕಾರಣ...

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲೇ ಪತ್ತೆ ಮಾಡಿದರೆ ಸೋಂಕು ತಡೆಗೆ ಸಹಾಯಕ. ಆದರೆ ಅಧ್ಯಯನದ ಪ್ರಕಾರ, ಪುರುಷರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಇದು ಅವರಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ. ಜೊತೆಗೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಕೊರೊನಾ ಸೋಂಕು ಇನ್ನಷ್ಟು ಬೇಗ ಆವರಿಸಲು ಕಾರಣವಾಗಿದ್ದು, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡುವ ಪುರುಷರಲ್ಲೇ ಈ ಪ್ರಕರಣವೂ ಹೆಚ್ಚಾಗಲು ಕಾರಣ ಎನ್ನಲಾಗಿದೆ.

English summary
Study found that, comparatively men prone to coronavirus more than women. Why Don't Women easily Get Coronavirus Soon? Here is detail...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X