ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಸುತ್ತು ಗೆದ್ದರೂ ರಿಷಿ ಸುನಕ್‌ಗೆ ಒಲಿಯಲ್ಲವಾ ಪ್ರಧಾನಿ ಪಟ್ಟ? ಏನು ಕಾರಣ?

|
Google Oneindia Kannada News

ಲಂಡನ್, ಜುಲೈ 21: ಭಾರತ ಮೂಲದ ರಿಷಿ ಸುನಕ್ ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಅವರು ಒಂದು ಹೆಜ್ಜೆ ಮಾತ್ರ ಹಿಂದಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಅಂತಿಮ ಸುತ್ತಿನಲ್ಲಿ ಗೆದ್ದರೆ ಋಷಿ ಸುನಕ್ ಬ್ರಿಟನ್ ಪ್ರಧಾನಿಯಾಗಲಿದ್ದಾರೆ.

ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಹೊಸ ಪ್ರಧಾನಿ ಆಯ್ಕೆಗೆ ಈ ಚುನಾವಣೆ ನಡೆಯುತ್ತಿದೆ. ಒಟ್ಟು ಐದು ಸುತ್ತುಗಳು ಚುನಾವಣೆ ಆಗಿದೆ. 13 ಅಭ್ಯರ್ಥಿಗಳ ಪೈಕಿ ಈಗ ಇಬ್ಬರು ಮಾತ್ರ ಕಣದಲ್ಲಿದ್ದಾರೆ. ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮತ್ತು ವಿದೇಶಾಂಗ ಸಚಿವೆ ಲಿಜ್ ಟ್ರುಸ್ ಮಾತ್ರ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ.

ಬ್ರಿಟನ್ ಪ್ರಧಾನಿ ಚುನಾವಣೆ: 5ನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್‌ ಟಾಪ್‌ಬ್ರಿಟನ್ ಪ್ರಧಾನಿ ಚುನಾವಣೆ: 5ನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್‌ ಟಾಪ್‌

ಎಲ್ಲಾ ಐದು ಸುತ್ತುಗಳಲ್ಲೂ ರಿಷಿ ಸುನಕ್ ಮೊದಲ ಸ್ಥಾನ ಪಡೆದುಕೊಂಡೇ ಬಂದಿದ್ದಾರೆ. ಹೀಗಾಗಿ, ಕೊನೆಯ ಸುತ್ತಿನಲ್ಲೂ ಅವರೇ ಗೆಲ್ಲಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಹುಟ್ಟಿದೆ.

ಐದನೇ ಸುತ್ತಿನಲ್ಲಿ ರಿಷಿ ಸುನಕ್ 137 ಮತಗಳನ್ನು ಪಡೆದರು. ಈ ಮುಂಚಿನ ಸುತ್ತುಗಳಲ್ಲಿ ಟಾಪ್-2ನಲ್ಲಿ ಇಲ್ಲದ ಲಿಜ್ ಟ್ರುಸ್ ಐದನೇ ಸುತ್ತಿನಲ್ಲಿ ಅಚ್ಚರಿ ಎಂಬಂತೆ 113 ಮತಗಳನ್ನು ಪಡೆದರು. ಪೆನ್ನಿ ಮಾರ್ಡಾಂಟ್ 105 ಮತಗಳನ್ನು ಪಡೆದು ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ.

ಬ್ರಿಟನ್‌ನ ಸಿರಿವಂತರ ಪಟ್ಟಿಯಲ್ಲಿ ಋಷಿ ಸುನಕ್; ಇಷ್ಟು ಆಸ್ತಿ ಸಂಪಾದಿಸಿದ್ದು ಹೇಗೆ? ಬ್ರಿಟನ್‌ನ ಸಿರಿವಂತರ ಪಟ್ಟಿಯಲ್ಲಿ ಋಷಿ ಸುನಕ್; ಇಷ್ಟು ಆಸ್ತಿ ಸಂಪಾದಿಸಿದ್ದು ಹೇಗೆ?

ಈಗ ಕಣದಲ್ಲಿ ಉಳಿದಿರುವ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಮಧ್ಯೆ ಪೈಪೋಟಿ ಇದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲಿ ಇವರಿಬ್ಬರ ಮಧ್ಯೆ ಚರ್ಚೆಗಳು ನಡೆಯುತ್ತವೆ. ಟಿವಿಯಲ್ಲಿ ಇದರ ಲೈವ್ ಪ್ರಸಾರ ಇರುತ್ತದೆ. ಬಳಿಕ ಕನ್ಸರ್ವೇಟಿವ್ ಪಕ್ಷದ ಸದಸ್ಯರು ತಮ್ಮ ನಾಯಕನ ಆಯ್ಕೆಗೆ ಮತ ಚಲಾಯಿಸಲಿದ್ದಾರೆ.

 ಋಷಿ ಸುನಕ್ ಪ್ರಧಾನಿಯಾಗಬಲ್ಲರಾ?

ಋಷಿ ಸುನಕ್ ಪ್ರಧಾನಿಯಾಗಬಲ್ಲರಾ?

ವಾಸ್ತವವಾಗಿ ಋಷಿ ಸುನಕ್ ನಿಜಕ್ಕೂ ಈ ಸ್ಪರ್ಧೆ ಗೆಲ್ಲಬಲ್ಲರಾ? ಎಂಬುದು ಪ್ರಶ್ನೆ. ಐದು ಸುತ್ತು ಗೆದ್ದರೂ ಋಷಿ ಅಂತಿಮ ಹಂತದ ಚುನಾವಣೆಯನ್ನು ಗೆಲ್ಲುತ್ತಾರೆಂದು ಹೇಳುವುದು ಕಷ್ಟ. ಕೆಲ ವಿಶ್ಲೇಷಣೆಗಳ ಪ್ರಕಾರ ಸುನಕ್ ಸೋಲುವ ಸಾಧ್ಯತೆ ದಟ್ಟವಾಗಿದೆಯಂತೆ. ಇದಕ್ಕೆ ಕಾರಣ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರೊಂದಿಗೆ ಋಷಿ ಸುನಕ್ ಹೆಚ್ಚು ಒಡನಾಟ ಹೊಂದಿಲ್ಲ ಎಂಬುದು. ಹಾಗೆಯೇ, ಋಷಿ ಸುನಕ್ ಜನಪ್ರಿಯತೆ ಕೂಡ ಸೀಮಿತ ಮಟ್ಟದ್ದು.

 ಕೊನೆಯ ಹಂತದ ಚುನಾವಣೆಯ ಮಹತ್ವವೇನು?

ಕೊನೆಯ ಹಂತದ ಚುನಾವಣೆಯ ಮಹತ್ವವೇನು?

ಈಗ ಕನ್ಸರ್ವೇಟಿವ್ ಪಕ್ಷದ ನಾಯಕನ ಆಯ್ಕೆಗೆ ನಡೆಯುತ್ತಿರುವ ಚುನಾವಣೆ ಎರಡು ಹಂತದ್ದು. ಮೊದಲ ಹಂತದಲ್ಲಿ ಐದು ಸುತ್ತುಗಳು ಇದ್ದು ಎಲ್ಲವೂ ಮುಗಿದಿವೆ. ಈ ಐದು ಸುತ್ತುಗಳಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರು ಮತ ಚಲಾಯಿಸಿದ್ದಾರೆ. ಪ್ರತೀ ಸುತ್ತಿನಲ್ಲೂ ಕಡಿಮೆ ಮತದಾನ ಪಡೆದ ಸ್ಪರ್ಧಿಗಳು ನಿರ್ಗಮಿಸುತ್ತಾ ಹೋಗಿದ್ದಾರೆ. ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಉಳಿಯುವವರೆಗೂ ಇಲ್ಲಿ ಮತದಾನ ನಡೆಯುತ್ತಾ ಹೋಗುತ್ತದೆ.

ಇದು ಮೊದಲ ಹಂತ. ಎರಡನೇ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಸಾಮಾನ್ಯ ಸದಸ್ಯರು ಮತದಾನ ಮಾಡುತ್ತಾರೆ. ಭಾರತದಲ್ಲಿರುವಂತೆ ಯಾರು ಬೇಕಾದರೂ ಒಂದು ರಾಜಕೀಯ ಪಕ್ಷದ ಸದಸ್ಯರಾಗಬಹುದು. ಹೀಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಸುಮಾರು 2 ಲಕ್ಷ ಸದಸ್ಯರಿದ್ದಾರೆ. ಇವರೆಲ್ಲರಿಗೂ ಸದಸ್ಯತ್ವದ ಕಾರ್ಡ್ ಇರುತ್ತದೆ. ಇವರು ಅಂತಿಮ ಹಂತದ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ.

ಈ ಪ್ರಕ್ರಿಯೆ ತುಸು ದೀರ್ಘಕಾಲದ್ದಾಗಿರುತ್ತದೆ. ಸೆಪ್ಟೆಂಬರ್ 5ರಂದು ಹೊಸ ನಾಯಕನ ಘೋಷಣೆ ಆಗುವ ನಿರೀಕಷೆ ಇದೆ.

 ಋಷಿ ಸುನಕ್ ಗೆಲ್ಲಲು ಯಾಕೆ ಸಾಧ್ಯವಿಲ್ಲ?

ಋಷಿ ಸುನಕ್ ಗೆಲ್ಲಲು ಯಾಕೆ ಸಾಧ್ಯವಿಲ್ಲ?

ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ಋಷಿ ಸುನಕ್ ಕನ್ಸರ್ವೇಟಿವ್ ಪಕ್ಷದಲ್ಲಿ ಹೆಚ್ಚು ಸಂಸದರ ಬೆಂಬಲ ಹೊಂದಿರುವುದು ಹೌದು. ಆದರೆ, ಪಕ್ಷದ ಸಾಮಾನ್ಯ ಸದಸ್ಯರ ವಿಚಾರಕ್ಕೆ ಬಂದರೆ ಸುನಕ್‌ಗೆ ಹೆಚ್ಚಿನ ಜನಪ್ರಿಯತೆ ಇಲ್ಲ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ನಡೆದಿರುವ ಕೆಲ ಸಮೀಕ್ಷೆಗಳೂ ಇದನ್ನೇ ಸೂಚಿಸುತ್ತಿವೆ.

YouGov ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಲಿಜ್ ಟ್ರುಸ್ ಶೇ. 54ರಷ್ಟು ಮತ ಪಡೆಯುವ ನಿರೀಕ್ಷೆ ಇದೆ. ಋಷಿ ಸುನಕ್ ಕೇವಲ 35 ಪ್ರತಿಶತದಷ್ಟು ಬೆಂಬಲ ಪಡೆಯಬಹುದು. ಒಂದು ವೇಳೆ ಲಿಜ್ ಟ್ರುಸ್ ಬದಲು ಪೆನ್ನಿ ಮಾರ್ಡಾಂಟ್ ಇದ್ದರೂ ಕೂಡ ಋಷಿ ಸುನಕ್‌ರನ್ನು ಸೋಲಿಸಿಬಿಡುತ್ತಿದ್ದರು ಎಂದು ಸಮೀಕ್ಷೆ ಅಂದಾಜು ಮಾಡಿದೆ.

ಅಂದಹಾಗೆ, 2 ಲಕ್ಷ ಕನ್ಸರ್ವೇಟಿವ್ ಪಕ್ಷದ ಸದಸ್ಯರ ಪೈಕಿ ಸಮೀಕ್ಷೆ ಮಾಡಲಾಗಿರುವುದು 725 ಮಾತ್ರ. ಹೀಗಾಗಿ ಫಲಿತಾಂಶವನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಎಂಬ ಅಭಿಪ್ರಾಯಗಳೂ ಇವೆ.

 ರಿಷಿ ಸುನಕ್ ಬಗ್ಗೆ ಟೀಕೆ

ರಿಷಿ ಸುನಕ್ ಬಗ್ಗೆ ಟೀಕೆ

ಭಾರತ ಮೂಲದ ಋಷಿ ಸುನಕ್ ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿದ ಮೊದಲ ಬ್ರಿಟನ್ ಸಂಸದ ಅವರು. ಇದು ಋಷಿ ಇಮೇಜ್ ಅನ್ನು ಋಣಾತ್ಮಕವಾಗಿ ಬಿಂಬಿತವಾಗಲು ಕಾರಣವಾಗಿದೆ.

ಇದಕ್ಕಿಂತ ಹೆಚ್ಚಾಗಿ, ಋಷಿ ಸುನಕ್ ಕೆಲ ತಿಂಗಳ ಹಿಂದಷ್ಟೇ ಹಣಕಾಸು ಸಚಿವರಾಗಿದ್ದವರು. ಆ ಸ್ಥಾನದಲ್ಲಿ ಅವರು ತೆಗೆದುಕೊಂಡ ಕೆಲ ಕ್ರಮಗಳು ಬಹಳಷ್ಟು ಟೀಕೆಗೆ ಕಾರಣವಾಗಿದೆ. ಕೋವಿಡ್‌ನಿಂದ ಜರ್ಝರಿತವಾಗಿದ್ದ ಬ್ರಿಟನ್ ಆರ್ಥಿಕತೆಗೆ ಜೀವ ತುಂಬಿದ ಶ್ರೇಯಸ್ಸು ಅವರದ್ದೇ ಆದರೂ ಭಾರೀ ಮೊತ್ತದ ತೆರಿಗೆಗಳನ್ನು ಜನಸಾಮಾನ್ಯರಿಗೆ ಹೇರುತ್ತಾ ಹೋಗಿದ್ದರು.

ತೆರಿಗೆ ಏರಿಸಬಾರದೆಂದು ಪ್ರಧಾನಿ ಬೋರಿಸ್ ಜಾನ್ಸನ್ ನೀಡಿದ ಸೂಚನೆಗೂ ಕಿವಿಗೊಡದೆ ಅವರು ಬಾರಿ ಬಾರಿ ತೆರಿಗೆ ಏರಿಕೆ ಮಾಡಿದ್ದರು. ಬ್ರಿಟನ್ ಆರ್ಥಿಕವಾಗಿ ಚೇತರಿಸಿಕೊಳ್ಳಲು ಹಣದ ಹರಿವು ಬೇಕಿದ್ದರಿಂದ ಈ ಕ್ರಮ ಕೈಗೊಂಡಿದ್ದರು. ಜೊತೆಗೆ ಹೊರಗಿನಿಂದ ಸಾಕಷ್ಟು ಸಾಲಗಳನ್ನು ತಂದು ಆರ್ಥಿಕತೆಗೆ ಸುರಿದರು. ಪರಿಣಾಮವಾಗಿ ಆರ್ಥಿಕತೆ ಚೇತರಿಕೆ ಕಂಡಿತಾದರೂ ಬ್ರಿಟನ್ ದೇಶದ ಸಾಲದ ಕೂಪಕ್ಕೆ ಸಿಲುಕಿತು ಎಂದೆನ್ನಲಾಗುತ್ತಿದೆ. ಈಗ ಆ ದೇಶಕ್ಕೆ ಹಣದುಬ್ಬರದ ಹೊಡೆತವೂ ಬಿದ್ದಿದೆ.

ಅಲ್ಲದೇ, ಋಷಿ ಸುನಕ್ ಮೇ ತಿಂಗಳಲ್ಲಿ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಇದು ಬೇರೆ ಸಚಿವರಿಂದಲೂ ಸಾಲು ಸಾಲಾಗಿ ರಾಜೀನಾಮೆ ಕೊಡುವ ಟ್ರೆಂಡ್ ಸಾಗಿತು. ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮಟ್ಟಕ್ಕೆ ಒತ್ತಡ ಹೆಚ್ಚಾಯಿತು. ಬೋರಿಸ್ ರಾಜೀನಾಮೆಗೆ ಒತ್ತಾಯಿಸಿದ ಮೊದಲಿಗರಲ್ಲಿ ಋಷಿ ಕೂಡ ಒಬ್ಬರು. ಇದು ಸುನಕ್‌ಗೆ ಹಿನ್ನಡೆಯಾಗಬಹುದು.

ಈಗ ಋಷಿ ಸುನಕ್ ಎದುರಾಳಿಯಾಗಿರುವ ಲಿಜ್ ಟ್ರುಸ್ ಅವರು ಕಡಿಮೆ ತೆರಿಗೆ ಮೂಲಕ ಆರ್ಥಿಕತೆಯನ್ನು ಸುಧಾರಿಸುವುದಾಗಿ ವಾಗ್ದಾನ ನೀಡಿದ್ದಾರೆ. ಲಿಜ್ ಟ್ರುಸ್ ಸಿದ್ಧಾಂತ ಮತ್ತು ಕಲ್ಪನೆ ಕನ್ಸರ್ವೇಟಿವ್ ಪಕ್ಷದ ಸಾಮಾನ್ಯ ಸದಸ್ಯರಿಗೆ ಹಿಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಅಂತಿಮ ಹಂತದ ಚುನಾವಣೆಯಲ್ಲಿ ಋಷಿ ಸುನಕ್‌ರನ್ನು ಲಿಜ್ ಟ್ರುಸ್ ಸೋಲಿಸಿ ಬ್ರಿಟನ್‌ನ ನೂತನ ಪ್ರಧಾನಿಯಾಗುವ ಸಾಧ್ಯತೆ ಇದೆ.

(ಒನ್ಇಂಡಿಯಾ ಸುದ್ದಿ)

Recommended Video

ಡಾನ್ಸ್ ಮಾಡಿ ನಾಚಿಕೊಂಡ ಟೀಮ್ ಇಂಡಿಯಾ ಕೋಚ್ Rahul dravid | *Cricket | OneIndia Kannada

English summary
Rishi Sunak has consistently won the race in first phase of tories elections. But he may not be able to win the final phase, where common party members will vote, says some surveys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X