ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾತ್ವಿಕ್ ಜನಪ್ರಿಯತೆಗೆ ಕಾರಣವಾಗಿದ್ದು ಸೆಲ್ಫಿಯೋ, ಸಮಯ ಪ್ರಜ್ಞೆಯೋ?

By ಸುರಾ, ಕಮಲಶಿಲೆ
|
Google Oneindia Kannada News

Recommended Video

ಮೋದಿ-ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ಕನ್ನಡಿಗ | Oneindia Kannada

ರಾತ್ರೋ ರಾತ್ರಿ ಒಬ್ಬ ಹುಡುಗನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿಬಿಡುತ್ತದೆ. ಇಡೀ ಕರ್ನಾಟಕ ಈತನ ಬಗ್ಗೆ ಹೆಮ್ಮೆಯಿಂದ ಮಾತನಾಡಲು ಶುರುಮಾಡುತ್ತದೆ. ನಮ್ಮೂರಿನ ಹುಡುಗ ಅಂತ ಶಿರಸಿಯ ಜನ ಮಾತನಾಡಿಕೊಳ್ಳಲು ಪ್ರಾರಂಭಿಸಿ ಬಿಡುತ್ತಾರೆ. ಬಹುಶಃ ಆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಾಗ ಆತನೂ ನಾನಿಷ್ಟು ಫೇಮಸ್ ಆಗಿ ಬಿಡ್ತೀನಿ, ನನ್ನ ಒಂದು ಫೋಟೋ ನನಗೆ ಇಷ್ಟೊಂದು ಜನಪ್ರಿಯತೆ ತಂದು ಕೊಟ್ಟು ಬಿಡುತ್ತದೆ ಅಂತ ಅಂದುಕೊಂಡಿರಲಿಕ್ಕಿಲ್ಲ. ಉತ್ತರ ಕನ್ನಡ ಮೂಲದ 13 ವರ್ಷದ ಸಾತ್ವಿಕ್ ಗೆ ಟ್ರಂಪ್ ಮತ್ತು ಮೋದಿ ಜೊತೆಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವ ಸುವರ್ಣಾವಕಾಶ ಮೊನ್ನೆ ಅಮೆರಿಕಾದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಲಭಿಸಿ ಬಿಟ್ಟಿತು.

ಮೋದಿ-ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ಸಾತ್ವಿಕ್ ಹೆಗಡೆ!ಮೋದಿ-ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಈ ಹುಡುಗ ಸಾತ್ವಿಕ್ ಹೆಗಡೆ!

ಸಾತ್ವಿಕ್ ಹಾಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಬೇಕು ಎಂದು ಪ್ರೀಪ್ಲಾನ್ ಮಾಡಿರಲಿಲ್ಲ. ಅಚಾನಕ್ ಆಗಿ ಆತನಿಗೆ ಸೆಲ್ಫೀ ತೆಗೆದುಕೊಳ್ಳುವಂತಾಯಿತು. ಫೋಟೋ ಲೀಕ್ ಆದ ನಂತರ ಆತ ಆ ಫೋಟೋ ಕ್ಲಿಕ್ಕಿಸಿಕೊಂಡ ಕ್ಷಣದ ವೀಡಿಯೋ ಕೂಡ ಬಿಡುಗಡೆಗೊಂಡಿದೆ. ಟ್ರಂಪ್ ಮತ್ತು ಮೋದಿ ನಡೆದುಕೊಂಡು ಹೋಗುತ್ತಿರುವಾಗ ಸಾತ್ವಿಕ್, ಸರ್ ಒಂದು ಸೆಲ್ಫೀ ಎಂದು ಟ್ರಂಪ್ ಅವರ ಬಳಿ ಕೇಳಿಕೊಳ್ಳುತ್ತಾನೆ. ತತ್ ಕ್ಷಣವೇ ಟ್ರಂಪ್ ಪ್ರತಿಕ್ರಿಯಿಸುತ್ತಾರೆ.

ಕೂಡಲೇ ಮುಂದೆ ಹೋಗಿದ್ದ ಮೋದಿ ಕೂಡ ವಾಪಾಸ್ ಬಂದು ಫೋಟೋಗೆ ಪೋಸ್ ಕೊಡುತ್ತಾರೆ. ಜಸ್ಟ್ ಎ ಮಿನಿಟ್ ನಲ್ಲಿ ಮೋದಿ ಸಾತ್ವಿಕ್ ಗೆ ಬೆನ್ನು ತಟ್ಟಿ ನಗಿಸಿ ಮುನ್ನಡೆಯುತ್ತಾರೆ. ಕೆಲವೇ ಕ್ಷಣಗಳಲ್ಲಿ ಒಂದು ಫೋಟೋ ಕ್ಲಿಕ್ ಆಗಿರುತ್ತೆ. ಅದು ಅಮೇರಿಕಾ ಮತ್ತು ಭಾರತ ಎರಡೂ ದೇಶಗಳಲ್ಲಿ ದೊಡ್ಡ ಸುದ್ದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸೆಲ್ಫೀ ಲಿಸ್ಟ್ ನಲ್ಲಿ ಟಾಪ್ ನಲ್ಲಿದೆ.

 ಈ ಧೈರ್ಯ ಎಲ್ಲಾ ಮಕ್ಕಳಿಗೂ ಬರಲು ಸಾಧ್ಯವೇ?

ಈ ಧೈರ್ಯ ಎಲ್ಲಾ ಮಕ್ಕಳಿಗೂ ಬರಲು ಸಾಧ್ಯವೇ?

ಎಲ್ಲಾ ಸುದ್ದಿ ಸಂಸ್ಥೆಗಳು ಈ ಹುಡುಗ ಯಾರು ಎಂದು ಜಾಲಾಡಿವೆ. ಶಿರಸಿಯವ್ನು, ಅಪ್ಪ-ಅಮ್ಮ, ಅವನ ಕುಲ ಗೋತ್ರ ಎಲ್ಲವನ್ನು ಬಿತ್ತರಿಸಿವೆ. 9ನೇ ತರಗತಿಯಲ್ಲಿ ಓದುತ್ತಿರುವ ಸಾತ್ವಿಕ್ ಈಗ ಸ್ಟಾರ್. ಆದರೆ ಹೀಗೆ ಕ್ಷಣಮಾತ್ರದಲ್ಲಿ ಸ್ಟಾರ್ ಆಗುವ ಅದೃಷ್ಟ ಎಲ್ಲರಿಗೂ ಲಭಿಸುವುದಿಲ್ಲ. ಅದು ಸಾತ್ವಿಕ್ ಗೆ ದಕ್ಕಿದೆ ಅಂದ್ರೆ ಅದಕ್ಕೆ ಕಾರಣವಾಗಿರೋದು ಆತನ ಸಮಯಪ್ರಜ್ಞೆ ಮತ್ತು ಧೈರ್ಯವಲ್ಲವೇ? ಈ ಧೈರ್ಯ ಎಲ್ಲಾ ಮಕ್ಕಳಿಗೆ ಬರಲು ಸಾಧ್ಯವೇ? ಇಂತಹ ಧೈರ್ಯವನ್ನು ಭಾರತದ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆಯೇ?

ಅಚಾನಕ್ ಆಗಿ ಇಬ್ಬರು ದೇಶ ನಡೆಸುವ ಮಹಾನ್ ನಾಯಕರ ಬಳಿ ಒಂದು ಸೆಲ್ಫೀ ಸರ್ ಎಂದು ಕೇಳಬೇಕೆಂದರೆ ಅದೆಷ್ಟು ಧೈರ್ಯವಿರಬೇಕು ನೀವೇ ಹೇಳಿ. ಸಾತ್ವಿಕ್ ನಿಂತಿದ್ದ ಸಾಲಿನಲ್ಲಿ ಇನ್ನೂ ಅನೇಕರಿದ್ದರು. ಯಾರಿಗೂ ಅನ್ನಿಸದ್ದು ಈತನಿಗೆ ಅನ್ನಿಸಿತ್ತು. ಅನ್ನಿಸಿದ್ದು ಕೇವಲ ಮನಸ್ಸಿನಲ್ಲೇ ಉಳಿದಿದ್ದರೆ ಇಂದು ಸಾತ್ವಿಕ್ ಯಾರಿಗೂ ಪರಿಚಿತನಾಗುತ್ತಿರಲಿಲ್ಲ. ಅನ್ನಿಸಿದ್ದನ್ನು ತತ್ ಕ್ಷಣವೇ ಬಾಯಿಬಿಟ್ಟು ಕೇಳಿದನಲ್ಲ. ಅದು ಆತನ ಗ್ರೇಟ್ ನೆಸ್. ಅಂತಹ ಧೈರ್ಯ ಶಿಕ್ಷಣದಿಂದ ಮಾತ್ರ ಬರಲು ಸಾಧ್ಯ. ಎಲ್ಲೋ ಸ್ವಲ್ಪ ಅದೃಷ್ಟವೂ ಕೆಲಸ ಮಾಡಿರಬಹುದು ಎಂದಿಟ್ಟುಕೊಳ್ಳೋಣ. ಯಾಕೆಂದರೆ ಒಂದು ಕ್ಷಣ ಮಹಾನ್ ನಾಯಕರಿಬ್ಬರೂ ಒಟ್ಟಿಗೆ ಪೋಸ್ ಕೊಟ್ಟು ಹೋದರಲ್ಲ!

 ಭಾಷೆಯೇ ಇಲ್ಲಿ ಚರ್ಚಾಸ್ಪದ ವಿಷಯ

ಭಾಷೆಯೇ ಇಲ್ಲಿ ಚರ್ಚಾಸ್ಪದ ವಿಷಯ

ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೇ ಇಂತಹ ವೇದಿಕೆಗಳಿಗೆ ತೆರೆದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಾಗ ಸಾತ್ವಿಕ್ ನಂತಹ ಅದೆಷ್ಟೋ ಸಮಯ ಪ್ರಜ್ಞೆ ಇರುವ ಮಕ್ಕಳು ಹೊರಹೊಮ್ಮುತ್ತಾರೆ. ನಮ್ಮ ಶಿಕ್ಷಣ ಸಂಸ್ಥೆಗಳು ಮಕ್ಕಳ ಅಭಿವೃದ್ಧಿಯಲ್ಲಿ ಪುಸ್ತಕದ ಬದನೆಕಾಯಿಯ ಪಾತ್ರವೆಷ್ಟಿದೆಯೋ ಅದಕ್ಕಿಂತ ಹೆಚ್ಚಾಗಿ ಚಟುವಟಿಕೆಯ ಪಾತ್ರ ಎಷ್ಟಿದೆ ಎಂಬುದನ್ನು ಕಲಿಸಬೇಕು.

ದುರಂತವೆಂದರೆ ನಮ್ಮಲ್ಲಿ ಮಕ್ಕಳ ಚಟುವಟಿಕೆಗಳು ಹೇಗಿರಬೇಕು, ಪುಸ್ತಕದಲ್ಲಿ ಏನಿರಬೇಕು, ಏನಿರಬಾರದು?,ಯಾವ ವಯಸ್ಸಿನ ಮಕ್ಕಳಿಗೆ ಯಾವ ಚಟುವಟಿಕೆಯಿಂದ ಹೆಚ್ಚು ಲಾಭ? ಯಾವ ವಯಸ್ಸಿಗೆ ಯಾವುದರಲ್ಲಿ ಮಕ್ಕಳಿಗೆ ಆಸಕ್ತಿ ಹೆಚ್ಚಿರುತ್ತದೆ ಮತ್ತು ಅವುಗಳನ್ನು ಕಲಿಸುವುದಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ದೊರಕಬೇಕಾದ ಮೂಲಸೌಲಭ್ಯಗಳ್ಯಾವುದು? ಇಂತಹ ಯಾವ ವಿಚಾರವೂ ಚರ್ಚೆಯಾಗದೆ ಯಾವ ಭಾಷೆಲಿ ಕಲಿಸಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿ ಚರ್ಚಾಸ್ಪದ ವಿಚಾರವಾಗಿ ಪ್ರತಿಭಟನೆ, ಹೋರಾಟವೂ ನಡೆಯುತ್ತದೆ.

ಭಾಷೆಗಿಂತ ವಿಚಾರ ಮುಖ್ಯ. ವಿಚಾರ ಅರ್ಥೈಸಿಕೊಳ್ಳಬೇಕು ಎಂದರೆ ಭಾಷೆ ಮುಖ್ಯ. ಒಂದಕ್ಕೊಂದು ಕೊಂಡಿ ಎಂಬುದು ಒಪ್ಪಿಕೊಳ್ಳೋಣ. ಆದರೆ ಅರ್ಥೈಸಬೇಕಾಗಿರುವ ವಿಚಾರ ಯಾವುದು ಎಂಬುದೇ ಸ್ಪಷ್ಟವಿಲ್ಲದಿದ್ದರೆ ಮಕ್ಕಳು ಅರ್ಥೈಸಿಕೊಳ್ಳಲು ಹೇಗೆ ಸಾಧ್ಯವಲ್ಲವೇ? ನಮ್ಮ ಶಿಕ್ಷಣದ ಪರಿಸ್ಥಿತಿ ಇಂತಹದ್ದೇ ತೂಗುಯ್ಯಾಲೆಯಲ್ಲಿದೆ. ಅದೇ ಕಾರಣಕ್ಕೆ ಧೈರ್ಯ, ಸಮಯಪ್ರಜ್ಞೆ, ಕಲೆ, ಸಂಸ್ಕೃತಿ, ಚಟುವಟಿಕೆ ಇತ್ಯಾದಿ ಪ್ರಮುಖ ವಿಚಾರಗಳು ಶಿಕ್ಷಣದ ಭಾಗವಾಗದೇ ಉಳಿದುಬಿಡುತ್ತಿವೆ.

ವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿ

ಗೆದ್ದಿದ್ದು ಸಾತ್ವಿಕ್ ನ ಸಮಯ ಪ್ರಜ್ಞೆ

ಸಾತ್ವಿಕ್ ನ ಸೆಲ್ಫೀ ನೋಡಿ ಕೆಲವರಿಗೆ ಅನ್ನಿಸಿರಬಹುದು. ಈ ಹುಡುಗನ ಅದೃಷ್ಟ ಚೆನ್ನಾಗಿದೆ. ಒಂದು ಸೆಲ್ಫೀ ತಗೊಂಡು ಸಿಕ್ಕಾಪಟ್ಟೆ ಪಾಪುಲರ್ ಆಗ್ಬಿಟ್ಟ ಅಂತ. ಆದರೆ ಇಲ್ಲಿ ಗೆದ್ದಿದ್ದು ಸಾತ್ವಿಕ್ ನ ಸೆಲ್ಫೀ ಅಲ್ಲ ಬದಲಾಗಿ ಆತನ ಸಮಯಪ್ರಜ್ಞೆ ಮತ್ತು ದೇಶದ ನಾಯಕರ ಬಳಿ ಸೆಲ್ಫೀ ಸರ್ ಎಂದು ಕೇಳಿಕೊಳ್ಳುವಾಗಿನ ಧೈರ್ಯ ಮತ್ತು ವಿನಮ್ರತೆ. ಅದು ನಮ್ಮ ಮಕ್ಕಳಲ್ಲೂ ಬೆಳೆಯಬೇಕಿದೆ ಮತ್ತು ಆ ರೀತಿ ಬೆಳೆಸುವ ಕೆಲಸ ಪೋಷಕರಿಂದ ಆಗಬೇಕಾಗಿದೆ. ನೀವೇ ಯೋಚಿಸಿ ನಮ್ಮಲ್ಲಿ ಶಾಲಾ ಪಠ್ಯಪುಸ್ತಕದ ಹೊರತಾಗಿ ಮಕ್ಕಳಲ್ಲಿ ಇತರ ಚಟುವಟಿಕೆಯ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವ ಪೋಷಕರು ಎಷ್ಟಿದ್ದಾರೆ? ಹುಡುಕಿ ತೆಗೆದರೆ ಬೆರಳೆಣಿಕೆಯಷ್ಟು ಮಂದಿ ಸಿಕ್ಕಿಯಾರು ಅಷ್ಟೇ. ಪುಸ್ತಕ, ಎಕ್ಸಾಂ, ಇಂಟರ್ನಲ್ಸ್ ಇವುಗಳ ಮಧ್ಯೆಯೇ ಮಕ್ಕಳನ್ನು ಹೈರಾಣು ಮಾಡಿಬಿಡ್ತಾರೆ. ಇತರ ಆಕ್ಟಿವಿಟಿ ಅಂದರೆ ಅಯ್ಯೋ ಅದಕ್ಕೆಲ್ಲಾ ಸೇರಿಸಿದ್ರೆ ಒತ್ತಡ ಆಗುತ್ತೆ, ಮಕ್ಕಳ ಸಿಲೆಬಸ್ ನೋಡಿದ್ರೇನೆ ತಲೆಕೆಡುತ್ತೆ. ಈ ಸಲದ ಎಕ್ಸಾಂನಲ್ಲಿ ನನ್ ಮಗುವಿಗೆ ಕಡಿಮೆ ಅಂಕ ಬಂದು ಬಿಡ್ತು ಎಂದು ತಲೆಕೆಡಿಸಿಕೊಳ್ಳುವ ಪೋಷಕರಿದ್ದಾರೆಯೇ ಹೊರತು ನನ್ನ ಮಗು ಆಕ್ಟೀವ್ ಆಗಿಲ್ಲ, ಭಾಷಣ, ಸ್ಪರ್ಧೆಗಳು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ ಎಂದು ಯೋಚಿಸುವ ಪೋಷಕರು ತೀರಾ ವಿರಳ. ಎಕ್ಸಾಂ ಬಗ್ಗೆ ಟೆನ್ಶನ್ ಆಗುವಷ್ಟು ಸ್ಪರ್ಧೆ, ಮಕ್ಕಳ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಚಿಂತೆಯೇ ಆಗುವುದಿಲ್ಲ.

 ಸೆಲ್ಫೀ ಒಂದು ನೆಪವಷ್ಟೆ

ಸೆಲ್ಫೀ ಒಂದು ನೆಪವಷ್ಟೆ

ಮೋದಿ, ಟ್ರಂಪ್ ನಂತಹ ನಾಯಕರು ಅದೆಷ್ಟು ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಹೇಳಿ. ಯಾವ ಮಕ್ಕಳಿಗೂ ಹೊಳೆಯದ, ಎರಡು ಪದದಲ್ಲಿ ಎರಡು ದೇಶದ ನಾಯಕರನ್ನು ಸಾತ್ವಿಕ್ ಸೆಳೆದು ಬಿಟ್ಟನಲ್ಲ! ಸೆಲ್ಫೀಯೊಂದರ ಮೂಲಕ ಸಾತ್ವಿಕ್ ಇಂದು ಪರಿಚಿತನಾಗಿದ್ದಾನೆ. "ಸರ್ ಒನ್ ಸೆಲ್ಫೀ" ಇದೇ ಮೂರು ಪದವಲ್ಲವೇ ಅವನನ್ನು ಗೆಲ್ಲಿಸಿದ್ದು? ನಮ್ಮಲ್ಲಿನ ಪೋಷಕರನ್ನೇ ಒಮ್ಮೆ ಯೋಚಿಸಿ. ಹೋಗ್ತಿರೋದು ವ್ಯಾಯಾಮ ಪ್ರದರ್ಶನಕ್ಕೆ ನಿಂಗ್ಯಾಕೋ ಫೋನ್? ನಡೀ ಕಾರ್ಯಕ್ರಮ ಮುಗಿಸ್ಕೊಂಡು ಸೀದಾ ಮನೆಗೆ ಬೇಗ ಬಾ ಅಂತ ಮಗನಿಗೆ ಖಡಕ್ ವಾರ್ನಿಂಗ್ ಮಾಡಿ ಪೋಷಕರು ಕಳುಹಿಸಿ ಕೊಡ್ತಿದ್ದರು. ಒಂದು ವೇಳೆ ಮೊಬೈಲ್ ತಗೊಂಡು ಹೋಗಿದ್ರೂ ಕೂಡ ಶಿಕ್ಷಕರು ಕೀಪ್ ಯುವರ್ ಮೊಬೈಲ್ ಇನ್ ಸೈಡ್ ಅಂತ ಸ್ಟ್ರಿಕ್ಟ್ ವಾರ್ನಿಂಗ್ ಮಾಡುತ್ತಿದ್ದರಲ್ಲವೇ?

ಈಗ ಹೇಳಿ ಸಾತ್ವಿಕ್ ಪ್ರಸಿದ್ಧಿಯಾಗಿದ್ದು ಯಾವುದರಿಂದ, ಸೆಲ್ಫೀಯಿಂದಲೋ, ಸಮಯಪ್ರಜ್ಞೆಯಿಂದಲೋ, ಶಿಕ್ಷಣ ವ್ಯವಸ್ಥೆಯಿಂದಲೋ? ಸೆಲ್ಫೀ ಕೇವಲ ಒಂದು ನೆಪವಷ್ಟೇ ಎಂದು ಅನ್ನಿಸುತ್ತಿಲ್ಲವೇ?

ನಾನು ರಾಷ್ಟ್ರಪತಿ ಆಗ್ಬೇಕು ಎಂದ ವಿದ್ಯಾರ್ಥಿಗೆ ಮೋದಿ ಕೊಟ್ಟ ಸಲಹೆ ಏನು?ನಾನು ರಾಷ್ಟ್ರಪತಿ ಆಗ್ಬೇಕು ಎಂದ ವಿದ್ಯಾರ್ಥಿಗೆ ಮೋದಿ ಕೊಟ್ಟ ಸಲಹೆ ಏನು?

English summary
The 13 year old Satvik of Uttara Kannada took a selfie with Trump and Modi at the Howdy Modi event in the US. What made him so famous? selfie or time consciousness?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X