ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋದಲ್ಲಿ ಕೂಸು ಹೊತ್ತ ಮಹಿಳೆಗೆ ಸೀಟು ಕೊಡದ ಪ್ರಯಾಣಿಕರು, ನೆಟ್ಟಿಗರ ಆಕ್ರೋಶ

|
Google Oneindia Kannada News

ಬೆಂಗಳೂರು, ಜೂನ್ 22: ನಾವು ರೈಲಿನಲ್ಲಾಗಲೀ, ಬಸ್ಸಿನಲ್ಲಾಗಲೀ ಪ್ರಯಾಣಿಸುವಾಗ ಇಂಥ ಘಟನೆಗಳನ್ನು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ವಯಸ್ಸಾದವರು, ಗರ್ಭಿಣಿಯರು, ಅಂಗವೈಕಲ್ಯರಾದವರು ಸೀಟು ಸಿಗದೇ ನಿಂತುಕೊಂಡೇ ಪ್ರಯಾಣಿಸುತ್ತಿದ್ದರೆ, ಚಿಕ್ಕ ವಯಸ್ಸಿನ ಗಟ್ಟಿಮುಟ್ಟಾಗಿರುವ ಜನರು ಆರಾಮವಾಗಿ ನಿಶ್ಚಿಂತೆಯಿಂದ ಸೀಟು ಆಕ್ರಮಿಸಿಕೊಂಡು ಪ್ರಯಾಣಿಸುತ್ತಾರೆ. ಇಂಥದ್ದೇ ಒಂದು ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿರುವ ದೃಶ್ಯದಲ್ಲಿ ಮೆಟ್ರೋವೊಂದರಲ್ಲಿ ಎಳೆಯ ಮಗು ಹೊತ್ತು ಮಹಿಳೆಯೊಬ್ಬಳು ಕೆಳಗೆ ಕೂತುಕೊಂಡಿರುವುದು ಕಾಣುತ್ತದೆ. ಯಾವ ಪ್ರಯಾಣಿಕರೂ ಈಕೆಗೆ ಸೀಟು ಬಿಟ್ಟುಕೊಡುವ ಅಂತಃಕರಣ ತೋರುವುದಿಲ್ಲ. ಈ ಮಹಿಳೆ ಬಳಿಯಲ್ಲೇ ಸಿಟು ಹಿಡಿದು ಕೂತಿದ್ದರೆ ಇತರೆ ಮಹಿಳೆಯರಿಗೆ ಈಕೆಗೆ ಸೀಟು ಕೊಡುವ ಹೃದಯ ಬರಲಿಲ್ಲ. ಈ ಘಟನೆಯ ಯಾವ ನಗರದ ಮೆಟ್ರೋದಲ್ಲಿ ನಡೆದಿದೆ ಎಂಬುದು ಗೊತ್ತಾಗಿಲ್ಲ.

 Viral video; ಎಲ್ಲರನ್ನು ತನ್ನತ್ತ ಸೆಳೆದ ಮಂಗಳೂರಿನ 'ಚಾರ್ಲಿ' Viral video; ಎಲ್ಲರನ್ನು ತನ್ನತ್ತ ಸೆಳೆದ ಮಂಗಳೂರಿನ 'ಚಾರ್ಲಿ'

ಅವನೀಶ್ ಶರಣ್ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ಧಾರೆ. "ನೀವು ಓದಿದ ಪದವಿ ಕೇವಲ ಕಾಗದದ ತುಂಡು ಮಾತ್ರ. ನೀವು ಏನು ಓದಿದಿರಿ ಎಂಬುದು ನಿಮ್ಮ ವರ್ತನೆಯಲ್ಲೇ ಗೊತ್ತಾಗುತ್ತದೆ" ಎಂದು ಅವರು ಬರೆದಿದ್ದಾರೆ.

Reaction to Video Of Woman With Baby Sitting On Floor While Others Occupy Seats

ಜೂನ್ 18ರಂದು ಪೋಸ್ಟ್ ಆದ ಈ ವಿಡಿಯೋವನ್ನು ಎಂಟು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ವಿಡಿಯೋಗೆ ಆಕ್ರೋಶಭರಿತ ಪ್ರತಿಕ್ರಿಯೆಗಳು ಬಂದಿವೆ.

Viral Video: ಶಾಲೆಯಲ್ಲಿ ನಿದ್ದೆಗೆ ಜಾರಿದ ಶಿಕ್ಷಕಿ: ಗಾಳಿ ಬೀಸಿದ ವಿದ್ಯಾರ್ಥಿನಿViral Video: ಶಾಲೆಯಲ್ಲಿ ನಿದ್ದೆಗೆ ಜಾರಿದ ಶಿಕ್ಷಕಿ: ಗಾಳಿ ಬೀಸಿದ ವಿದ್ಯಾರ್ಥಿನಿ

ಒಬ್ಬ ಮಹಿಳೆಯೂ ಸೀಟು ಕೊಡಲಿಲ್ಲವಲ್ಲ ಎಂದು ಒಬ್ಬರು ಅಚ್ಚರಿ ಪಟ್ಟರೆ, ಮಾನವೀಯತೆಯೇ ಕೊಚ್ಚಿಕೊಂಡು ಹೋಗಿದೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಎಲ್ಲಿ ಹೋಗಿ ತಲುಪುತ್ತಿದ್ದೇವೋ ಗೊತ್ತಿಲ್ಲ, ನಮ್ಮ ಸೋ ಕಾಲ್ಡ್ ಸುಶಿಕ್ಷಿತ ಜನರಿಗೆ ನಾಚಿಕೆಯಾಗಬೇಕು ಎಂದು ಇನ್ನೊಬ್ಬರು ಸಿಡಿಗುಟ್ಟಿದ್ದಾರೆ.

ನಾನು ಮನುಷ್ಯರನ್ನು ನೋಡುತ್ತಿದ್ದೇನೆಯೇ ವಿನಃ ಮಾನವೀಯತೆಯೇ ಕಾಣುತ್ತಿಲ್ಲ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಮೆಟ್ರೋದಲ್ಲಿ ಹಿಂದಿನ ಒಂದು ಘಟನೆ:
ಬೆಂಗಳೂರಿನ ಬಿಎಂಟಿಸಿ ಬಸ್ಸು ಮತ್ತು ಮೆಟ್ರೋದಲ್ಲೂ ಇಂಥ ಹಲವು ದೃಶ್ಯಗಳನ್ನು ಕಾಣಬಹುದು. ಡೆಲ್ಲಿ ಮೆಟ್ರೋದಲ್ಲಿ 2017ರಲ್ಲಿ ನಡೆದ ಒಂದು ಘಟನೆ ಇದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಡೆಲ್ಲಿ ಮೆಟ್ರೋದಲ್ಲಿ ವಯಸ್ಸಾದ ಒಬ್ಬ ಮುಸ್ಲಿಮ್ ವ್ಯಕ್ತಿ ತನಗೆ ಕೂರಲು ಸೀಟು ಕೊಡಿ ಎಂದು ಯುವಕರಿಗೆ ಮನವಿ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಆ ಯುವಕರು ಆ ಮುಸ್ಲಿಮ್ ವ್ಯಕ್ತಿಯನ್ನು ನಿಂದಿಸುತ್ತಾರೆ. ಆತ ಮುಸ್ಲಿಂ ಎಂದು ಗೊತ್ತಾಗಿ, ಸೀಟು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ತುಚ್ಛವಾಗು ಮಾತನಾಡಿ ಅವಮಾನಿಸುತ್ತಾರೆ.

ಆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಟ್ರೇಡ್ ಯೂನಿಯನ್‌ವೊಂದರ ಅಧಿಕಾರಿ ಕಾಮ್ರೇಡ್ ಸಂತೋಷ್ ರಾಯ್ ಎಂಬುವರು ಆ ವೃದ್ಧನ ನೆರವಿಗೆ ಧಾವಿಸುತ್ತಾರೆ. ಪಂಡರ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಕೆಲ ದಿನಗಳ ಬಳಿಕ ರಾಯ್ ಅವರು ಮತ್ತೆ ಆ ಪೊಲೀಸ್ ಠಾಣೆಗೆ ಬಂದು ಪ್ರಕರಣದ ಬಗ್ಗೆ ವಿಚಾರಿಸಿದಾಗ, ಆ ವೃದ್ಧರು ತಮ್ಮ ದೂರನ್ನು ಹಿಂಪಡೆಯಲು ನಿರ್ಧರಿಸಿದ್ದು ತಿಳಿದುಬಂದಿತು.

ಆ ಘಟನೆಯನ್ನು ಪ್ರಗತಿಪರ ಮಹಿಳಾ ಸಂಘಟನೆಯೊಂದರ ಕಾರ್ಯದರ್ಶಿ ಕವಿತಾ ಕೃಷ್ಣನ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದೂ ಕೂಡ ವೈರಲ್ ಆಗಿತ್ತು.

(ಒನ್ಇಂಡಿಯಾ ಸುದ್ದಿ)

English summary
A woman with baby was seen sitting on the floor of Metro, while other passengers were occupying seats. This video has become viral in social media as many were disgusted over inhumanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X