ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಿನೈದು ವರ್ಷದಿಂದ ಭಾರತದ ಕಣ್ಣು ಬಾಲಾಕೋಟ್ ಮೇಲಿತ್ತು!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 1: ಬಾಲಾಕೋಟ್ ನಲ್ಲಿನ ಜೈಶ್-ಇ-ಮೊಹ್ಮದ್ ನ ನೆಲೆಯ ಮೇಲೆ ರೀಸರ್ಚ್ ಅಂಡ ಅನಾಲಿಸಿಸ್ ವಿಂಗ್ (ರಾ) ಕಳೆದ ಹದಿನೈದು ವರ್ಷಗಳಿಂದ ಕಣ್ಣಿರಿಸಿತ್ತು. ಬಾಲಾಕೋಟ್ ಎಂಬುದು ಗೊತ್ತಿದ್ದ ಉಗ್ರ ನೆಲೆ. ಅದು ಈಗ ಅಂತಲ್ಲ, ಹದಿನೈದು ವರ್ಷಗಳ ಹಿಂದೆಯೇ ಗುರುತಿಸಲಾಗಿತ್ತು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ಇಂಡಿಯಾಗೆ ಹೇಳಿದ್ದಾರೆ.

ಅಷ್ಟೇ ಅಲ್ಲ, ಬಹಳ ಹಿಂದೆಯೇ ಇದು ಭಾರತದ ಗುರಿಯಾಗಿತ್ತು ಎಂದು ಕೂಡ ಸೇರಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಯೋಜನೆ ಮಾಡುವ ಮುನ್ನವೇ ಬಾಲಾಕೋಟ್ ಬಗ್ಗೆ ಚರ್ಚೆ ನಡೆದಿದೆ. ಆದರೆ ಬಾಲಾಕೋಟ್ ಮೇಲೆ ಆತುರದ ಕಾರ್ಯಾಚರಣೆ ಬೇಡ ಎಂದು ನಿರ್ಧರಿಸಲಾಯಿತು. ಮೊದಲಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಪರೀಕ್ಷೆ ಮಾಡಿ ನೋಡೋಣ ಎಂದು ನಿರ್ಧರಿಸಲಾಯಿತು. ಆ ನಂತರ ಪಾಕಿಸ್ತಾನದೊಳಗೇ ನುಗ್ಗಿ ಗುರಿಯನ್ನು ಹೊಡೆದುಹಾಕುವ ತೀರ್ಮಾನಕ್ಕೆ ಬರಲಾಯಿತು.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು? ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಅಷ್ಟಾದರೂ ಬಾಲಾಕೋಟ್ ನಲ್ಲಿ ಭಯೋತ್ಪಾದಕರು ದೊಡ್ಡ ಸಂಖ್ಯೆಯಲ್ಲಿ ಜಮೆಯಾಗುತ್ತಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಗೊತ್ತಿತ್ತು. ಆದರೆ ಸರಕಾರದಿಂದ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಹದಿನೈದು ವರ್ಷದ ಹಿಂದೆಯೇ ಈ ನೆಲೆಯನ್ನು ಗುರುತಿಸಿದ್ದೆವು ಎಂದು 'ರಾ'ದ ಮಾಜಿ ಅಧಿಕಾರಿ ಅಮರ್ ಭೂಷಣ್ ಖಾತ್ರಿ ಪಡಿಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ವೇಳೆಯೇ ಈ ಬಗ್ಗೆ ಚರ್ಚೆ ಆಗಿತ್ತು

ಸರ್ಜಿಕಲ್ ಸ್ಟ್ರೈಕ್ ವೇಳೆಯೇ ಈ ಬಗ್ಗೆ ಚರ್ಚೆ ಆಗಿತ್ತು

ಆದರೆ, ಈ ಗುರಿಯ ಮೇಲೆ ದಾಳಿ ನಡೆಸಲು ಸರಕಾರ ಒಪ್ಪಿರಲಿಲ್ಲ. ಜೈಶ್ ಇ ಮೊಹ್ಮದ್ ನ ಅತಿದೊಡ್ಡ ಹಾಗೂ ಅಪಾಯಕಾರಿ ನೆಲೆ ಅದಾಗಿತ್ತು. ಇದರ ಮೇಲೆ ಬಹಳ ಹಿಂದೆಯೇ ದಾಳಿ ಆಗಬೇಕಿತ್ತು ಎಂದು ಭೂಷಣ್ ವಿವರಿಸಿದ್ದಾರೆ. ಆಗಿನಿಂದ ಈ ನೆಲೆಯ ಮೇಲೆ ದಾಳಿ ನಡೆಸಲು ಹಲವು ಬಾರಿ ಆಲೋಚಿಸಲಾಗಿದೆ. ಎರಡೂವರೆ ವರ್ಷದ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮುಂಚೆ ಈ ಆಯ್ಕೆ ಬಗ್ಗೆ ಖಂಡಿತಾ ಮಾತುಕತೆ ಆಗಿರುತ್ತದೆ ಎನ್ನುತ್ತಾರೆ.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಮೃತರ ಸಂಖ್ಯೆಗಿಂತ ಪ್ರಬಲ ಸಂದೇಶ ರವಾನೆ

ಮೃತರ ಸಂಖ್ಯೆಗಿಂತ ಪ್ರಬಲ ಸಂದೇಶ ರವಾನೆ

ಇನ್ನು ಈ ಕಾರ್ಯಾಚರಣೆಯಲ್ಲಿ ಮೃತಪಟ್ಟ ಭಯೋತ್ಪಾದಕರ ಸಂಖ್ಯೆಯ ಬಗ್ಗೆ ಪ್ರಶ್ನೆ ಮಾಡಿದರೆ, ಸಂಖ್ಯೆ ಎಂಬುದು ಇಲ್ಲಿ ಮುಖ್ಯ ಅಲ್ಲವೇ ಅಲ್ಲ. ಗುರುತಿಸಲಾದ ಜೈಶ್-ಇ-ಮೊಹ್ಮದ್ ನೆಲೆಯ ಮೇಲೆ ದಾಳಿ ನಡೆಸಲಾಗಿದೆ. ಅದು ಎಲ್ಲ ಉಗ್ರ ನೆಲೆಯ ರೀತಿಯಲ್ಲೇ ಇತ್ತು. ಅಲ್ಲಿ ಉಗ್ರಗಾಮಿಗಳಿಗೆ ತರಬೇತಿ ನೀಡಲಾಗುತ್ತಿತ್ತು. ನೆಲೆ ಮೇಲೆ ದಾಳಿ ನಡೆಸುವ ಮೂಲಕ ಭಾರತವು ಪ್ರಬಲ ಸಂದೇಶ ರವಾನಿಸಿದೆ ಎಂದು ಭೂಷಣ್ ಹೇಳುತ್ತಾರೆ.

ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ

ಸತ್ತವರ ಸಂಖ್ಯೆ ಖಂಡಿತಾ ಹೆಚ್ಚಿರುತ್ತದೆ

ಸತ್ತವರ ಸಂಖ್ಯೆ ಖಂಡಿತಾ ಹೆಚ್ಚಿರುತ್ತದೆ

ಇನ್ನೊಂದು ಸಂದೇಶ ಏನು ಕಳಿಸಿದ್ದೇವೆ ಅಂದರೆ, ಭಯೋತ್ಪಾದಕರು ಎಲ್ಲಿದ್ದಾರೆ, ಯಾವ ಬೆಂಬಲ ಪಡೆಯುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂಬ ಸಂಗತಿ ತಿಳಿಸಿದಂತಾಗಿದೆ. ಖಂಡಿತವಾಗಿಯೂ ಆ ನೆಲೆಯಲ್ಲಿ ಸತ್ತವರ ಸಂಖ್ಯೆ ಹೆಚ್ಚಿರುತ್ತದೆ. ಇಲ್ಲ, ಆ ನೆಲೆಯಲ್ಲಿ ಯಾರೂ ಇರಲಿಲ್ಲ ಅಂತ ಯಾರಾದರೂ ಹೇಳಿದರೆ, ನನಗೆ ಅದನ್ನು ನಂಬಲು ಸಾಧ್ಯವಿಲ್ಲ.

ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು

ತೀರಿಕೊಂಡ ಉಗ್ರರ ಹೆಸರು ಸದ್ಯದಲ್ಲೇ ಬಹಿರಂಗ

ತೀರಿಕೊಂಡ ಉಗ್ರರ ಹೆಸರು ಸದ್ಯದಲ್ಲೇ ಬಹಿರಂಗ

ಈ ಹಿಂದೆ ಪಾಕಿಸ್ತಾನ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿತ್ತು ಮತ್ತು ಅಲ್ಲಿ ಹೆಸರುಗಳನ್ನು ಹೇಳಲಾಗುತ್ತಿತ್ತು. ಆದರೆ ಈಚೆಗೆ ಹೆಸರು ಪ್ರಸಾರ ಮಾಡುವುದನ್ನು ಪೂರ್ತಿಯಾಗಿ ನಿಲ್ಲಿಸಿಬಿಟ್ಟಿದ್ದಾರೆ. ಈ ಹಿಂದೆ ನಾವು ಕೂಡ ಕಾಶ್ಮೀರ ಬಿಕ್ಕಟ್ಟಿನಲ್ಲಿ ಸತ್ತವರ ಹೆಸರನ್ನು ತಿಳಿದುಕೊಂಡು, ನೀಡುತ್ತಿದ್ದೇವೆ. ಆಗ ಅವರು ನಮ್ಮನ್ನು ನಂಬಲು ಆರಂಭಿಸಿದರು. ಸದ್ಯಕ್ಕೆ ಸತ್ತವರ ಸಂಖ್ಯೆ ಬಗ್ಗೆ ಯೋಚನೆ ಮಾಡಬೇಡಿ. ತೀರಿಕೊಂಡವರ ಹೆಸರು ಹಾಗೂ ಸಂಖ್ಯೆಯನ್ನು ಸದ್ಯದಲ್ಲೇ ತಿಳಿಸಲಾಗುವುದು ಎನ್ನುತ್ತಾರೆ ಅಮರ್ ಭೂಷಣ್.

ಬಾಲಕೋಟ್ ಉಗ್ರ ನೆಲೆಯಲ್ಲಿದ್ದ 42 ಆತ್ಮಾಹುತಿ ಬಾಂಬರ್ ಗಳ ಪಟ್ಟಿಬಾಲಕೋಟ್ ಉಗ್ರ ನೆಲೆಯಲ್ಲಿದ್ದ 42 ಆತ್ಮಾಹುತಿ ಬಾಂಬರ್ ಗಳ ಪಟ್ಟಿ

English summary
The Balakot terror facility of the Jaish-e-Mohammad had been on the radar of the Research and Analysis Wing for over 15 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X