ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ರವಿ ಬೆಳಗೆರೆ ಅಷ್ಟು ದೊಡ್ಡ ಯಶಸ್ಸು ಕಾಣಲು ಸಾಧ್ಯವಾಗಿದ್ದು ಹೇಗೆ? ಅಷ್ಟು ದುಡ್ಡು ಮಾಡಿದ್ದು ಹೇಗೆ? ಬರೀ ಪುಸ್ತಕದಿಂದಲೇ ಇಷ್ಟು ದುಡ್ಡು ಮಾಡಬಹುದಾ? ಈ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಸಪ್ನಾ ಬುಕ್ ಸ್ಟಾಲ್ ಹಾಗೂ ನವಕರ್ನಾಟಕ ಪ್ರಕಾಶನ ಅವರನ್ನು ಮುಖ್ಯವಾಗಿ ಮಾತನಾಡಿಸಬೇಕು.

ರವಿ ಬೆಳಗೆರೆ ಅದೆಷ್ಟು ಲೆಕ್ಕಾಚಾರದ ಮನುಷ್ಯ ಆಗಿದ್ದರು ಅಂದರೆ, ತಮ್ಮ ಪುಸ್ತಕಗಳನ್ನು ತಿಂಗಳ ಮೊದಲ ವಾರದ - ಭಾನುವಾರಗಳಲ್ಲೇ ಬಿಡುಗಡೆ ಮಾಡಿರುತ್ತಿದ್ದರು. ಅದು ಕೂಡ ಬಿಡುಗಡೆ ಕಾರ್ಯಕ್ರಮ ಮಾಡುವ ಸ್ಥಳಕ್ಕೆ ಬಸ್ ವ್ಯವಸ್ಥೆ ಇದೆಯಾ, ಅಲ್ಲಿಗೆ ತಲುಪಿಕೊಳ್ಳಲು ಕಷ್ಟವಾಗುವುದಿಲ್ಲವಾ, ಮಳೆಗಾಲ ಇಲ್ಲವಾ, ಕ್ರಿಕೆಟ್ ಮ್ಯಾಚ್ ಯಾವುದೂ ಇರಲ್ಲವಾ ಎಲ್ಲವನ್ನೂ ಗಮನಿಸಿಯೇ ಇರುತ್ತಿದ್ದರು.

ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

"ದೀಪಾವಳಿಯಲ್ಲಿ ಗಣೇಶನ ಮೂರ್ತಿ ಮಾರಾಟ ಮಾಡಬಾರದು" ಎಂಬುದು ಅವರ ನಂಬಿಕೆ. ಟ್ರೆಂಡ್ ನಲ್ಲಿರುವ ವಿಷಯವನ್ನು ಕೈಗೆತ್ತಿಕೊಳ್ಳುತ್ತಿದ್ದರು. ಇಲ್ಲದಿದ್ದಲ್ಲಿ ಒಂದು ವಿಷಯದ ಬಗ್ಗೆ ಇಷ್ಟಿಷ್ಟೇ ರುಚಿ ಹತ್ತಿಸಿ, ಆ ನಂತರ ಕುತೂಹಲದ ಉತ್ತುಂಗದಲ್ಲಿ ಪುಸ್ತಕದ ಬಿಡುಗಡೆ ಮಾಡುತ್ತಿದ್ದರು.

Ravi Belagere Success Story? How he become so Popular and Rich

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪುಟಗಳ ಸಂಖ್ಯೆ ಇರುವ ಪುಸ್ತಕಗಳನ್ನು ಬರೆಯುವುದನ್ನೇ ಬಿಟ್ಟಿದ್ದರು ಆರ್ ಬಿ. ನೂರು- ನೂರೈವತ್ತು ಪುಟ. ಬೆಲೆಯೂ ನೂರರಿಂದ ನೂರೈವತ್ತು ರುಪಾಯಿಯೊಳಗೆ ಇರಬೇಕು. ಓದುಗರ ಜೇಬಿಗೂ ಭಾರ ಆಗಬಾರದು ಹಾಗೂ ಓದು ಸಹ ಭಾರೀ ಆಗಿರಬಾರದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದರು.

ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ

ರವಿ ಬೆಳಗೆರೆ ಅವರ ಸಕ್ಸಸ್ ನಲ್ಲಿ 'ಹೆಡ್ಡಿಂಗ್'ಗಳ ಪಾತ್ರ ದೊಡ್ಡದಿತ್ತು. ಅದರಲ್ಲೂ ಹಾಯ್ ಬೆಂಗಳೂರ್ ಕವರ್ ಪೇಜ್ ಗೆ ನೀಡುತ್ತಿದ್ದ ಹೆಡ್ಡಿಂಗ್ ಭಯಂಕರ ಸೇಲ್ ಆಗುತ್ತಿದ್ದವು. ಅದಕ್ಕೆ ಕಾರಣ ಆಗಿದ್ದು ಏನೆಂದರೆ, ಕರ್ನಾಟಕದಾದ್ಯಂತದ ಅವರ ಸುತ್ತಾಟ, ವ್ಯಾಪಕ ಓದು ಹಾಗೂ ಜನರ ಜತೆಗಿನ ಒಡನಾಟ.

ಹಾಯ್ ಬೆಂಗಳೂರ್ ಪತ್ರಿಕೆ ರವಿ ಬೆಳಗೆರೆ ಪಾಲಿಗೆ ವಿಸಿಟಿಂಗ್ ಕಾರ್ಡ್ ನಂತಾದರೆ, ಈ ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಡೈರಿ ಶಾಶ್ವತವಾದ ಅನ್ನದ ಪಾತ್ರೆ ಒದಗಿಸಿತ್ತು. ಒಂದು ಎಪಿಸೋಡ್ ಗೆ ಇಷ್ಟು ಎಂದು ನಿರಂತರವಾಗಿ ಕೆಲ ವರ್ಷಗಳ ಕಾಲ ಆ ಕಾರ್ಯಕ್ರಮ ಪ್ರಸಾರವಾಗಿತ್ತು.

Ravi Belagere Success Story? How he become so Popular and Rich

ಆ ಸಮಯದಲ್ಲಿ ಹಾಯ್ ಬೆಂಗಳೂರ್ ವಾರಪತ್ರಿಕೆ, ಓ ಮನಸೇ ಪಾಕ್ಷಿಕ, ಪ್ರತಿ ದಿನ ಕ್ರೈಂ ಡೈರಿಗೆ ವಾಯ್ಸ್ ಓವರ್, ಪ್ರಾರ್ಥನಾ ಶಾಲೆ ಕೆಲಸ ಹೀಗೆ ಬಿಡುವಿಲ್ಲದೆ ದುಡಿದಿದ್ದಾರೆ ಬೆಳಗೆರೆ. ಆ ಕೆಲಸದ ಒತ್ತಡದ ಸಮಯದಲ್ಲೇ ತಮ್ಮ ಜೀವಕ್ಕೇ ತೊಂದರೆ ತಂದುಕೊಂಡಿದ್ದರು. ಅದರಿಂದ ಹೇಗೋ ಹೊರಬಂದರು.

ರವಿ ಬೆಳಗೆರೆ ಬರಹ ಎಷ್ಟು ಪವರ್ಫುಲ್ ಎಂದರೆ ಪಾಖಂಡಿಗಳನ್ನೂ ಹೀರೋ ಆಗಿಸುವಷ್ಟು ರವಿ ಬೆಳಗೆರೆ ಬರಹ ಎಷ್ಟು ಪವರ್ಫುಲ್ ಎಂದರೆ ಪಾಖಂಡಿಗಳನ್ನೂ ಹೀರೋ ಆಗಿಸುವಷ್ಟು

"ಒಬ್ಬ ಬ್ರಾಹ್ಮಣನಾಗಿದ್ದರೆ ಇಷ್ಟೆಲ್ಲ ಮಾಡೋದಿಕ್ಕೆ ಸಾಧ್ಯವಿಲ್ಲ. ಅದರಲ್ಲೂ ಪುಳಚಾರು ತಿಂದುಕೊಂಡು ಏನು ಮಾಡೋಕೆ ಸಾಧ್ಯ? ನನ್ನ ಥರ ಮಾಂಸ, ಅದರಲ್ಲೂ ಯಾವುದನ್ನೂ ಬಿಡದೆ ತಿಂದರೆ ಏನಾದರೂ ಸಾಧನೆ ಮಾಡಬಹುದು ನೋಡು. ಹಾಗಿದ್ದರೆ ನಾರಾಯಣ ಮೂರ್ತಿ ನಾನ್ ವೆಜ್ ತಿಂತಾರಾ ಅನ್ಬೇಡ. ಯಾಕಂದರೆ ಅವರು ಸಾಫ್ಟ್ ವೇರ್ ಕಣಯ್ಯಾ. ಅಲ್ಲಿ ದುಡ್ಡಿಗಾಗಿ ನಮ್ಮಷ್ಟು ಶ್ರಮ ಪಡಬೇಕಿಲ್ಲ, ಬಡಿದಾಡಬೇಕಿಲ್ಲ," ಎಂದು ಈ ಲೇಖಕನ ಬಳಿಯೇ ಹೇಳಿದ್ದರು.

English summary
Here is the success story of senior journalist Ravi Belegere. Read on to know how he become so popular and rich.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X