ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲಿ ಕೇವಲ 43 ಜನರಲ್ಲಷ್ಟೇ ಇರುವ ಈ ರಕ್ತದ ಮಾದರಿ ಬಗ್ಗೆ ಕೇಳಿದ್ದೀರಾ?

|
Google Oneindia Kannada News

ಮನುಷ್ಯನ ದೇಹ ಅಂದ್ರೆ ಸೋಜಿಗದ ಸಂತೆ. ನಮ್ಮದೇ ದೇಹದ ಪ್ರತಿಯೊಂದು ಅಂಗಾಂಗವೂ ಕಾರ್ಯ ನಿರ್ವಹಿಸುವ ಪರಿಯ ಬಗ್ಗೆ ಆಲೋಚಿಸುತ್ತಾ ಹೋದರೆ ವಿಸ್ಮಯವೆನ್ನಿಸುತ್ತದೆ. ಮನುಷ್ಯನ ದೇಹದಲ್ಲಿ ಜೀವಜಲವಾಗಿ ಹರಿಯುತ್ತಿರುವ ರಕ್ತ ನೋಡುವುದಕ್ಕೆ ಒಂದೇ ಬಣ್ಣವಾದರೂ ಅದರಲ್ಲೇ ಹಲವು ವಿಧಗಳಿವೆ.

ಕೆಲವು ಸಾಮಾನ್ಯವಾಗಿ ಬಹುಪಾಲು ಜನರಲ್ಲಿ ಕಂಡುಬರುವ ರಕ್ತದ ಗುಂಪುಗಳಾದರೆ, ಮತ್ತೆ ಕೆಲವು ಅಪರೂಪದವು, ಕೆಲವು ಹೆಚ್ಚು ಅಪರೂಪದವು. ಆದರೆ ಈ ಎಲ್ಲವುಗಳ ನಡುವೆ ವಿರಳಾತಿ ವಿರಳ ಎನ್ನಿಸಿರುವ, ಜಗತ್ತಿನಲ್ಲಿ ಕೇವಲ 43 ಜನರಷ್ಟೇ ಹೊಂದಿರುವ ರಕ್ತದ ಗುಂಪೊಂದಿದೆ. ಅದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ.

'Rh-Null' ಎಂದು ಕರೆಯಲ್ಪಡುವ ಈ ರಕ್ತದ ಮಾದರಿ ಜಗತ್ತಿನ ಕೇವಲ 43 ಜನರಲ್ಲಿ ಮಾತ್ರ ಕಂಡುಬರುತ್ತದೆ. ಅದೇ ಕಾರಣಕ್ಕೆ ಈ ರಕ್ತದ ಮಾದರಿಗೆ 'ಗೋಲ್ಡನ್ ಬ್ಲಡ್' ಎಂದು ಕರೆಯಲಾಗುತ್ತದೆ.

ನನ್ನ ಮಗುವಿನ ವಯಸ್ಸು ಕೂಡ ಅದೇ ಎಂದ 'ಮಹಾ ದಾನಿ' ಮಾತು ಕೇಳಿನನ್ನ ಮಗುವಿನ ವಯಸ್ಸು ಕೂಡ ಅದೇ ಎಂದ 'ಮಹಾ ದಾನಿ' ಮಾತು ಕೇಳಿ

1961 ರಲ್ಲಿ ಈ ರಕ್ತದ ಗುಂಪನ್ನು ಪತ್ತೆಹಚ್ಚಲಾಯಿತಾದರೂ ಇದುವರೆಗೂ ಈ ರಕ್ತದ ದಾನಿಗಳು ಸಿಗುವುದು ಕೇವಲ 8 ಜನ ಮಾತ್ರ!

ಅಪರೂಪದ ರಚನೆಗೆ ಕಾರಣವೇನು?

ಅಪರೂಪದ ರಚನೆಗೆ ಕಾರಣವೇನು?

ನರಗಳ ಮೂಲಕ ಮನುಷ್ಯನ ದೇಹದುದ್ದಕ್ಕೂ ರಕ್ತ ಸಂಚರಿಸುತ್ತದೆ. ಈ ರಕ್ತ ಕೆಂಪು ರಕ್ತಕಣ, ಪ್ಲಾಸ್ಮಾ ಮತ್ತು antigens (ಪ್ರತಿಜನಕ) ಸೇರಿ ಒಟ್ಟು 342 ಪ್ರತಿಕಾಯಗಳಿಂದ(antibodies) ಉತ್ಪಾದನೆಯಾಗಿದ್ದು. ಈ antigens ಗಳೇ ದೇಹದಲ್ಲಿರುವ ರಕ್ತದ ಮಾದರಿಯನ್ನು ನಿರ್ಧರಿಸುತ್ತವೆ. 342 ರಲ್ಲಿ 160 antigens ಸಾಮಾನ್ಯವಾಗಿ ಮನುಷ್ಯನ ರಕ್ತದಲ್ಲಿ ಕಂಡುಬರುತ್ತದೆ. ಇದಕ್ಕಿಂತ ಕಡಿಮೆ antigensಗಳು ಪತ್ತೆಯಾದರೆ ಅದು ಅಪರೂಪದ ರಕ್ತದ ಮಾದರಿ ಎಂದರ್ಥ. ದೇಹದಲ್ಲಿ 61 ರಷ್ಟು antigens ಗಳ ಕೊರತೆಯಾದರೆ ಅಂಥವರ ರಕ್ತದ ಮಾದರಿಯನ್ನು Rh-Null ಎಂದು ಗುರುತಿಸಿ, ಅತ್ಯಪರೂಪದ ರಕ್ತದ ಮಾದರಿ ಎನ್ನಲಾಗುತ್ತದೆ.

ಗೋಲ್ಡನ್ ಬ್ಲಡ್

ಗೋಲ್ಡನ್ ಬ್ಲಡ್

ಈ ಮಾದರಿ 6 ದಶಲಕ್ಷ ಜನರಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ! ಮೊದಲೆಲ್ಲ ಈ ರಕ್ತದ ಮಾದರಿಯನ್ನು ಹೊಂದಿರುವವರು ಅದೃಷ್ಟವಂತರು ಎನ್ನಲಾಗುತ್ತಿತ್ತು. ಇದನ್ನು ಗೋಲ್ಡನ್ ಬ್ಲಡ್ ಎಂದು ಕರೆಯಲಾಗುತ್ತಿತ್ತು. ಆದರೆ ಈ ರಕ್ತದ ಮಾದರಿ ಹೊಂದಿದ ವ್ಯಕ್ತಿಗೆ ರಕ್ತದ ಕೊರತೆಯೇನಾದರೂ ಉಂಟಾದರೆ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ಅರಿವಿಗೆ ಬಂದ ನಂತರ ಈ ರಕ್ತದ ಮಾದರಿ ಹೊಂದುವುದೇ ಸಂಕಟ ಎಂಬಂತಾಗಿದೆ.

ಇವರ ಆರೋಗ್ಯ ಹೇಗಿರುತ್ತದೆ?

ಇವರ ಆರೋಗ್ಯ ಹೇಗಿರುತ್ತದೆ?

ಈ ರಕ್ತದ ಮಾದರಿ ಹೊಂದಿರುವ ವ್ಯಕ್ತಿಗಳೂ ಆರೋಗ್ಯವಂತರಾಗಿಯೇ ಇರುತ್ತಾರೆ. ಆದರೆ ಆರೋಗ್ಯ ಕೈಕೊಡದಂತೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅವರಿಗೆ ಅನಿವಾರ್ಯ. ಈ ಮಾದರಿ ಹೊಂದಿರುವವರು ಯಾರಿಗೆ ಬೇಕಾದರೂ ತಮ್ಮ ರಕ್ತದಾನ ಮಾಡಬಹುದು. ಆದರೆ ಅವರು ಸ್ವೀಕರಿಸಬೇಕೆಂದರೆ ಅದು Rh-Null ಮಾತ್ರ. ಅವರ ರಕ್ತದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತ ಬಂದರೆ, ಕೂಡಲೇ ರಕ್ತಹೀನತೆಯಿಂದ ಬಳಲುವ ಸಾಧ್ಯತೆ ಹೆಚ್ಚು.

ವರ್ಗಾವಣೆಯ ಸಂಕಟ

ವರ್ಗಾವಣೆಯ ಸಂಕಟ

ವಿಶ್ವದಲ್ಲಿ ಕೇವಲ 43 ಜನರಲ್ಲಿ ಮಾತ್ರವೇ ಈ ರಕ್ತದ ಮಾದರಿ ಕಂಡುಬರುವುದರಿಂದ ವರ್ಗಾವಣೆಯೂ ಕಷ್ಟ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ರಕ್ತವನ್ನು ವರ್ಗಾವಣೆ ಮಾಡಬೇಕೆಂದರೆ ಅದಕ್ಕೆ ನೂರಾರು ನಿಯಮಗಳು! ಈ ಮಾದರಿಯ ರಕ್ತ ಹೊಂದಿರುವವರಿಗೆ ರಕ್ತಕ್ಕೆ ವಿಮೆ ಮಾಡಲು ಅಥವಾ ಬ್ಲಡ್ ಬ್ಯಾಂಕ್ ಗೆ ದಾನ ಮಾಡಲು ಮನವಿ ಮಾಡಲಾಗುತ್ತದೆ! ಅಷ್ಟರ ಮಟ್ಟಿಗೆ ಈ ರಕ್ತ 'ಗೋಲ್ಡನ್ ಬ್ಲಡ್' ಎಂಬ ಉಪಮೇಯಕ್ಕೆ ಅನ್ವರ್ಥವಾಗಿದೆ.

English summary
Rarest 'Rh-Null' blood type: Only 43 people have this in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X