ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ 'ಪಿಂಕ್ ಮೂನ್' ಯಾವಾಗ ಕಾಣಲಿದೆ? ಇಲ್ಲಿದೆ ವಿವರ

|
Google Oneindia Kannada News

ಬಾಹ್ಯಾಕಾಶದಲ್ಲಿ ಪ್ರತಿದಿನ ಹೊಸ ಹೊಸ ವಿದ್ಯಮಾನಗಳು ನಡೆಯುತ್ತಿರುತ್ತದೆ. ಭೂಮಿಯ ಆಚೆಗೆ ಏನಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಈ ವಿದ್ಯಮಾನಗಳೇ ಕಾರಣವಾಗಿದೆ. ಇಂದು (ಏಪ್ರಿಲ್ 17) ಕೂಡಾ ಬಾಹ್ಯಾಕಾಶದಲ್ಲಿ ಒಂದು ಹೊಸ ವಿದ್ಯಮಾನ ನಡೆಯಲಿದೆ. ಇಂದು ಗುಲಾಬಿ ಚಂದ್ರ ಅಥವಾ ಪಿಂಕ್ ಮೂನ್ ವೀಕ್ಷಣೆಯಾಗಲಿದೆ. ಇದು ಕೆಲವು ಅಪರೂಪದ ವಿದ್ಯಮಾನಗಳಲ್ಲಿ ಒಂದಾಗಿದೆ.

ಪಿಂಕ್ ಮೂನ್ ಎಂಬ ಅಪರೂಪದ ಹುಣ್ಣಿಮೆಯು ಇಡೀ ವಾರಾಂತ್ಯದಲ್ಲಿ ರಾತ್ರಿಯ ಆಕಾಶವನ್ನು ಬೆಳಗಿಸುವುದನ್ನು ಕಾಣಬಹುದು. ಇದು ನಕ್ಷತ್ರ ವೀಕ್ಷಣೆಗೆ ಹೊಸ ಉತ್ಸಾಹವನ್ನು ತುಂಬಲಿದೆ. ಈ ಪಿಂಕ್ ಮೂನ್‌ಗೆ ಹಲವಾರು ಹೆಸರುಗಳಿದೆ. ಮೊಳಕೆಯೊಡೆಯುವ ಹುಲ್ಲಿನ ಚಂದ್ರ, ಮೊಟ್ಟೆಯ ಚಂದ್ರ, ಮೀನು ಚಂದ್ರ, ಪೆಸಾಕ್ ಮತ್ತು ಪಾಸೋವರ್ ಮೂನ್ ಎಂದೆಲ್ಲಾ ಕರೆಯಲಾಗುತ್ತದೆ.

 ಚಂದ್ರ ಅಪರೂಪಕ್ಕೆ ಈ ರೀತಿ ಕಾಣುತ್ತದೆ, ಇಲ್ಲಿದೆ ನೋಡಿ ವಿಧಗಳು.. ಚಂದ್ರ ಅಪರೂಪಕ್ಕೆ ಈ ರೀತಿ ಕಾಣುತ್ತದೆ, ಇಲ್ಲಿದೆ ನೋಡಿ ವಿಧಗಳು..

ಈ ಪಿಂಕ್ ಮೂನ್ ಪ್ರಪಂಚದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಏಪ್ರಿಲ್ 17 ರಂದು ಮಧ್ಯರಾತ್ರಿ 12:15 ರ ಸುಮಾರಿಗೆ ಈ ಪಿಂಕ್ ಮೂನ್ ಪೂರ್ಣ ಪ್ರಮಾಣದಲ್ಲಿ ಅರಳಲಿದೆ. ಇಂದು ರಾತ್ರಿ ಅಂದರೆ ಏಪ್ರಿಲ್ 17 ರಂದು ಪಿಂಕ್ ಮೂನ್ ಕಾಣಲಿದೆ ಹಾಗೂ ಈ ಚಂದ್ರನು ಏಪ್ರಿಲ್ 18 ರ ಬೆಳಿಗ್ಗೆಯವರೆಗೆ ಕಾಣಲಿದೆ ಎಂದು ವರದಿ ಉಲ್ಲೇಖ ಮಾಡಿದೆ.

ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣಲಿದೆಯೇ?

ಅತ್ಯಂತ ಅಪರೂಪದ ವಿದ್ಯಮಾನವಾಗಿರುವ ಪಿಂಕ್ ಮೂನ್ ಅನ್ನು ಅದರ ಬಣ್ಣ ಹಾಗೂ ನೋಟದ ಹಿನ್ನೆಲೆಯಿಂದಾಗಿ ಪಿಂಕ್ ಮೂನ್ ಎಂದು ಕರೆಯಲಾಗುವುದಿಲ್ಲ. ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣಲಿದೆ ಎಂಬ ಕಲ್ಪನೆಯನ್ನು ನೀವು ಹೊಂದಬೇಡಿ. "ಪಿಂಕ್‌ ಮೂನ್‌" (ಗುಲಾಬಿ ಚಂದ್ರ) ಎಂಬುವುದು ಏಪ್ರಿಲ್‌ನಲ್ಲಿ ಸಂಭವಿಸುವುದು ಹುಣ್ಣಿಮೆಯಾಗಿದೆ. ಈ ವಸಂತಕಾಲದ ಆರಂಭದಲ್ಲಿ ಅರಳುವ ಹಾಗೂ ಯುನೈಟೆಡ್‌ ಸ್ಟೇಟ್ಸ್‌ ಮತ್ತು ಕೆನಡಾದಾದ್ಯಂತ ಕಾಣಿಸಿಕೊಳ್ಳುವ ವೈಲ್ಡ್ ಗ್ರೌಂಡ್ ಫ್ಲೋಕ್ಸ್ ಎಂದು ಕರೆಯಲ್ಪಡುವ ಹೂವುಗಳ ಹೆಸರನ್ನು ಇಡಲಾಗಿದೆ. ನಾವು ನಿಜವಾಗಿ ಹೇಳಬೇಕಾದರೆ ಈ ಚಂದ್ರನು ಗುಲಾಬಿ ಬಣ್ಣದಲ್ಲಿ ಕಾಣುವುದಿಲ್ಲ.

Rare ‘Pink Moon’ to Be Visible on April 17th Night: Check Out Date, Time Here in Kannada

ಇಂದು ರಾತ್ರಿ ಆಕಾಶದಲ್ಲಿ ಗುಲಾಬಿ ಚಂದ್ರ ಸ್ಪಷ್ಟವಾಗಿ ಗೋಚರಿಸಲಿದೆ. ಆದರೆ ಪ್ರಪಂಚದ ಕೆಲವೆಡೆ ಈಗಾಗಲೇ ಪಿಂಕ್ ಮೂನ್ ಕಾಣಿಸಿಕೊಂಡಿದೆ. ಈ ಚಿತ್ರಗಳನ್ನು ಹಲಾವರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಚಿತ್ರಗಳಲ್ಲಿ ಚಂದ್ರನು ಗುಲಾಬಿ ಬಣ್ಣದಲ್ಲಿ ಹೊಳೆಯುತ್ತಿರುವುದು ಕಂಡು ಬಂದಿದೆ. ಆದರ ಕೆಲವೆಡೆ ಇದು ಕಿತ್ತಳೆ ಬಣ್ಣದಲ್ಲಿ ಕಂಡು ಬಂದಿದೆ.

Rare ‘Pink Moon’ to Be Visible on April 17th Night: Check Out Date, Time Here in Kannada

ಪಿಂಕ್ ಮೂನ್ ನೋಡುವುದು ಹೇಗೆ?

ಪಿಂಕ್ ಮೂನ್ 2022 ಅನ್ನು ಹಲವಾರು ಆನ್‌ಲೈನ್ ಪೋರ್ಟಲ್‌ಗಳು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ವೀಕ್ಷಿಸಬಹುದು. ಇದಲ್ಲದೆ, ಅನೇಕ ಯೂಟ್ಯೂಬ್ ಚಾನೆಲ್‌ಗಳು ಈ ಬಾಹ್ಯಾಕಾಶ ಘಟನೆಯ ವಿಡಿಯೋ ಹಂಚಿದೆ. ಇಂದು ರಾತ್ರಿ ಗುಲಾಬಿ ಚಂದ್ರನು ಪ್ರಪಂಚದ ಕೆಲವು ಭಾಗಗಳಲ್ಲಿ ಗೋಚರಿಸುವ ನಿರೀಕ್ಷೆಯಿದೆ. ಇಂದು ರಾತ್ರಿ ಚಂದ್ರೋದಯ ಸಂಭವಿಸಿದಾಗ ನೀವು ಆಕಾಶದಲ್ಲಿ ಈ ಅಪರೂಪದ ವಿದ್ಯಮಾನ ಕಾಣಲು ಸಾಧ್ಯವಾಗಲಿದೆ. ಗುಲಾಬಿ ಚಂದ್ರನು ಏಪ್ರಿಲ್ 18 ರ ಬೆಳಿಗ್ಗೆಯವರೆಗೆ ಗೋಚರಿಸುವ ನಿರೀಕ್ಷೆಯಿದೆ.

 ವಿಧಾನಸಭೆ ಚುನಾವಣೆ 2022: ಫಲಿತಾಂಶವನ್ನು ವೀಕ್ಷಿಸುವುದು ಹೇಗೆ? ವಿಧಾನಸಭೆ ಚುನಾವಣೆ 2022: ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ಹೇಗಿದೆ ಪ್ರತಿಕ್ರಿಯೆ?

ಸೂರ್ಯಾಸ್ತವಾಗುತ್ತಿದ್ದಂತೆ ಕಂಡ ಚಂದ್ರ ಹೀಗಿದ್ದಾನೆ. ಇದನ್ನು ನೋಡಿದ ನಾವು ಧನ್ಯರು ಎಂದು ಛಾಯಾಚಿತ್ರಗ್ರಾಹಕರೊಬ್ಬರು ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. "ಚಂದ್ರನು ಪೊದೆಗಳ ಹಿಂದೆ ಗುಲಾಬಿ ಬಣ್ಣದಲ್ಲಿ ಕಂಡಿತು. ನಾನು ಆಶ್ಚರ್ಯಕ್ಕೆ ಒಳಗಾದೆ. ಆಕಾಶವು ಕಿತ್ತಳೆ ಬಣ್ಣದಿಂದ ಕಂಗೊಳಿಸಿದೆ," ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಈಸ್ಟರ್ ಶನಿವಾರದಂದು ನಮಗೆ ಪಿಂಕ್ ಮೂನ್ ಕಾಣಿಸಿಕೊಂಡಿದೆ ಎಂದು ಇನ್ನೋರ್ವ ನೆಟ್ಟಿಗರು ಹೇಳಿದ್ದಾರೆ.
"ಇಂದು ಮುಂಜಾನೆ ನಾನು ಪಿಂಕ್ ಮೂನ್ ಅನ್ನು ನೋಡಿದೆ. ನೀವು ನೋಡಿದ್ದೀರಾ. ಇಂದು ರಾತ್ರಿಯೂ ಕೂಡಾ ಪಿಂಕ್ ಮೂನ್ ಕಾಣಲಿದೆ. ತಪ್ಪದೇ ನೋಡಿ," ಎಂದು ಟಿಫನಿ ಸಾವೋನಾ ಎಂಬ ನೆಟ್ಟಿಗರು ತಿಳಿಸಿದ್ದಾರೆ.

English summary
Rare ‘pink moon’ to be visible on April 17th night: Check out date, time Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X