• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ಯಪರೂಪದ ರಾಜಕಾರಣಿ ಅಟಲ್ ಜೀ ಅವರ ಅಪರೂಪದ ಚಿತ್ರಗಳು

|

ಮೂರು ಬಾರಿ ಭಾರತದ ಪ್ರಧಾನಿಯಾಗಿದ್ದರೂ, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಪಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಜಾತ ಶತ್ರು ಎಂದೇ ಹೆಸರಾದವರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಮ್ಮನ್ನಗಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ಅವರ ಆರೋಗ್ಯ ಸುಧಾರಿಸಲಿ ಎಂದು ಇಡೀ ದೇಶವೂ ಕಂಬನಿ ಮಿಡಿಯುತ್ತ ಮಾಡಿದ ಪ್ರಾರ್ಥನೆ ಕೈಗೂಡಲಿಲ್ಲ. ಭೌತಿಕವಾಗಿ ದೂರವಾದರೂ ಅವರ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಅವರು ಭದ್ರ.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

ದೇಶಕಂಡ ಅಪರೂಪದ ರಾಜಕಾರಣಿ, ಸಹೃದಯ ಸಾಹಿತಿ, ಹಾಸ್ಯಪ್ರಜ್ಞೆಯ ಖನಿ, ಪ್ರಖರ ವಾಗ್ಮಿ, ಅಪ್ರತಿಮ ದೇಶಭಕ್ತ ವಾಜಪೇಯಿ ಅವರ ಅಗಲಿಕೆ ಭಾರತಕ್ಕೆ ತುಂಬಲಾರದ ನಷ್ಟ. ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ವಾಜಪೇಯಿ ಅವರ ಅಪರೂಪದ ಚಿತ್ರಗಳಲ್ಲಿ ಕೆಲವು ನಿಮಗಾಗಿ ಇಲ್ಲಿವೆ.(ಪಿಟಿಐ ಸಂಗ್ರಹ)

ನೆಲ್ಸನ್ ಮಂಡೇಲಾ ಅವರೊಂದಿಗೆ

ನೆಲ್ಸನ್ ಮಂಡೇಲಾ ಅವರೊಂದಿಗೆ

1998 ರ ಸೆಪ್ಟೆಂಬರ್ ನಲ್ಲಿ ಡರ್ಬನ್ ನಲ್ಲಿ ನಡೆದ ಸಭೆಯೊಂದರಲ್ಲಿ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಆವರು ಭೇಟಿಯಾದ ಕ್ಷಣ.

ಅಬ್ದುಲ್ ಕಲಾಂ ಜೊತೆ

ಅಬ್ದುಲ್ ಕಲಾಂ ಜೊತೆ

2003 ರಲ್ಲಿ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಅವರೊಂದಿಗೆ ಅಜಾತಶತ್ರು ವಾಜಪೇಯಿ.

ಇಂದಲ್ಲಾ ನಾಳೆ ನಾವು ದಿಗ್ವಿಜಯ ಸಾಧಿಸುತ್ತೇವೆ: ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದ ಅಟಲ್

ಸಿತಾರ್ ಮಾಂತ್ರಿಕ ರವಿಶಂಕರ್ ಅವರೊಂದಿಗೆ

ಸಿತಾರ್ ಮಾಂತ್ರಿಕ ರವಿಶಂಕರ್ ಅವರೊಂದಿಗೆ

2002 ರಲ್ಲಿ ನವದೆಹಲಿಯಲ್ಲಿ ವಾಜಪೇಯಿ ಅವರ 'ಸಂವೇದನ' ಎಂಬ ಮ್ಯೂಸಿಕ್ ಆಲ್ಬಂ ಬಿಡುಗಡೆ ಸಮಾರಂಭದಲ್ಲಿ ಸಿತಾರ್ ಮಾಂತ್ರಿಕ ರವಿಶಂಕರ್ ಅವರೊಂದಿಗೆ.

ಭಾರತ ರತ್ನ ಸ್ವೀಕರಿಸಿದ ಕ್ಷಣ

ಭಾರತ ರತ್ನ ಸ್ವೀಕರಿಸಿದ ಕ್ಷಣ

2015 ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ'ವನ್ನು ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರದಾನ ಮಾಡಿದರು. ವಾಜಪೇಯಿ ಅವರು ಅನಾರೋಗ್ಯದ ಕಾರಣ ಅಜ್ಞಾತರಾಗಿ ಉಳಿದ ಮೇಲೆ ಸಿಕ್ಕಿದ ಅವರ ಏಕೈಕ ಚಿತ್ರ ಇದಾಗಿತ್ತು. ಆ ನಂತರವಾಗಲೀ, ಅನಾರೋಗ್ಯದ ನಂತರವಾಗಲೀ ಅವರ ಒಂದೂ ಚಿತ್ರವೂ ಸಾರ್ವಜನಿಕರಿಗೆ ಲಭ್ಯವಾಗಿರಲಿಲ್ಲ.

ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು

ಶಿವಸೇನಾ ಮುಖಂಡ ಬಾಳ್ ಠಾಕ್ರೆ ಅವರೊಂದಿಗೆ

ಶಿವಸೇನಾ ಮುಖಂಡ ಬಾಳ್ ಠಾಕ್ರೆ ಅವರೊಂದಿಗೆ

ಶಿವಸೇನಾ ಮುಖಂಡ ಬಾಳ್ ಠಾಕ್ರೆ ಅವರೊಂದಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಕ್ಷಣ.

ಮಾಜಿ ಪ್ರಧಾನಿಗಳ ಸಮಾಗಮ

ಮಾಜಿ ಪ್ರಧಾನಿಗಳ ಸಮಾಗಮ

ಮಾಜಿ ಪ್ರಧಾನಿ ಐಕೆ ಗುಜರಾಲ್ ಅವರೊಂದಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ.

ವಿ ಸಿ ಶುಕ್ಲಾ ಅವರೊಂದಿಗೆ

ವಿ ಸಿ ಶುಕ್ಲಾ ಅವರೊಂದಿಗೆ

ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ವಿ ಸಿ ಶುಕ್ಲಾ ಅವರೊಂದಿಗೆ 2004 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ.

ಮೋದಿ, ಅಡ್ವಾಣಿ ಜೊತೆ

ಮೋದಿ, ಅಡ್ವಾಣಿ ಜೊತೆ

ಗುಜರಾತಿನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರೊಂದಿಗೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಚಿತ್ರವನ್ನು ಕ್ಲಿಕ್ಕಿಸಿದ್ದು ಬಿಜೆಪಿ ಮುಖಂಡ ತರುಣ್ ವಿಜಯ್. ಈ ಚಿತ್ರ ಕ್ಲಿಕ್ಕಿಸಿದ್ದು 2001 ರಲ್ಲಿ.

ವಾಜಪೇಯಿ ಮತ್ತು ಮೋದಿ

ವಾಜಪೇಯಿ ಮತ್ತು ಮೋದಿ

ನವದೆಹಲಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನರೇಂದ್ರ ಮೊದಿಯವರ ಹಳೆಯ ಚಿತ್ರವಿದು.

ಮೂರು ದಿಗ್ಗಜರು ಒಂದು ವೇದಿಕೆಯಲ್ಲಿ

ಮೂರು ದಿಗ್ಗಜರು ಒಂದು ವೇದಿಕೆಯಲ್ಲಿ

2004 ರಲ್ಲಿ ಅಹ್ಮದಾಬಾದಿನಲ್ಲಿ ವೇದಿಕೆಯೊಂದರಲ್ಲಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಮೂವರೂ ಕಂಡುಬಂಡಿದ್ದು ಹೀಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former prime minister Atal Bihari Vajpayee passed away. He was admitted to AIIMs hospital, Delhi due to ill health. Here are rare pictures of Atal bihari Vajpayee.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more