ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ramadan 2022: ಪವಿತ್ರ ತಿಂಗಳು ಯಾವಾಗ ಆರಂಭ, ಮಹತ್ವವೇನು?, ಇಲ್ಲಿದೆ ಇಫ್ತಾರ್‌ ಸಮಯದ ಮಾಹಿತಿ

|
Google Oneindia Kannada News

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಅತ್ಯಂತ ಪವಿತ್ರವಾದ ತಿಂಗಳೆಂದರೆ ರಂಜಾನ್ ತಿಂಗಳು. ಪ್ರತಿ ವರ್ಷ, ಈ ಪವಿತ್ರ ಮಾಸದಲ್ಲಿ ಉಪವಾಸ ಆಚರಣೆ ಮಾಡಲಾಗುತ್ತದೆ. ಈ ತಿಂಗಳಲ್ಲಿ ಮುಸ್ಲಿಮರು ಹಗಲಲ್ಲಿ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ಪವಿತ್ರ ಉಪವಾಸವನ್ನು ಆಚರಣೆ ಮಾಡುತ್ತಾರೆ.

ಈ ಪವಿತ್ರ ತಿಂಗಳಿನಲ್ಲಿ ಮುಸ್ಲಿಮರು ಪಾಲಿಸಬೇಕಾದ ಕೆಲವು ಮಾರ್ಗಸೂಚಿಗಳು ಇದೆ. ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಬೋಧನೆಗಳನ್ನು ಅನುಸರಿಸಬೇಕೆಂದು ಈ ತಿಂಗಳಲ್ಲಿ ಸಾರಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ಒಂದು ತಿಂಗಳು ಇರುತ್ತದೆ. ಒಂದು ತಿಂಗಳ ನಂತರ ಮರುದಿನ ಈದ್ ಆಚರಣೆಯನ್ನು ಮಾಡಲಾಗುತ್ತದೆ.

ರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಿ: ಹೈಕೋರ್ಟ್‌ಗೆ ಹೊಸ ಅರ್ಜಿರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಿ: ಹೈಕೋರ್ಟ್‌ಗೆ ಹೊಸ ಅರ್ಜಿ

ರಂಜಾನ್ ಅನ್ನು ರಮದಾನ್ ಎಂದು ಕೂಡಾ ಕರೆಯಲಾಗುತ್ತದೆ. ಇದು ಮುಸ್ಲಿಂ ಚಾಂದ್ರಮಾನ ಕ್ಯಾಲೆಂಡರ್‌ನಲ್ಲಿ ಒಂಬತ್ತನೇ ತಿಂಗಳು ಮತ್ತು ಇಸ್ಲಾಮಿಕ್ ಸಂಸ್ಕೃತಿಯ ಪ್ರಕಾರ ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಉಪವಾಸದ ಕೊನೆಯಲ್ಲಿ ಆಚರಣೆ ಮಾಡಲಾಗುವ ಹಬ್ಬವನ್ನು ಈದ್-ಉಲ್-ಫಿತರ್ ಎಂದು ಕರೆಯಲಾಗುತ್ತದೆ.

ಇದು ಮುಸಲ್ಮಾನರ ದಾನದ ಹಬ್ಬವೂ ಹೌದು. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದನ್ನು ಅರಿತ ಮುಸ್ಲಿಮನಿಗೆ ಬಡವನಿಗೆ -ಹಸಿದವನಿಗೆ ದಾನದ (ಝಕಾತ್‌) ಮೂಲಕ ಸಹಾಯ ಮಾಡುವುದು ಕರ್ತವ್ಯ ಎಂದು ನಂಬಲಾಗಿದೆ. ದಾನವನ್ನು ಇಸ್ಲಾಮಿನ ಐದು ಕರ್ಮಗಳಲ್ಲಿ ಒಂದಾಗಿ ನಂಬಲಾಗಿದೆ.

 ಭಾರತದಲ್ಲಿ ಪವಿತ್ರ ತಿಂಗಳು ಆರಂಭ ಯಾವಾಗ?

ಭಾರತದಲ್ಲಿ ಪವಿತ್ರ ತಿಂಗಳು ಆರಂಭ ಯಾವಾಗ?

2022 ರ ರಂಜಾನ್‌ನ ಮೊದಲ ದಿನವು ಏಪ್ರಿಲ್ 2, 2022ರಂದು ಆರಂಭ ಆಗುವ ಸಾಧ್ಯತೆ ಇದೆ. ಈ ವರ್ಷ, ಭಾರತದಲ್ಲಿ ರಂಜಾನ್ ಏಪ್ರಿಲ್ 2 ಅಥವಾ ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ 1-Ramadan-1443 ಸಂಜೆಯಿಂದ ಪ್ರಾರಂಭವಾಗಬಹುದು. ಮೊದಲ ಉಪವಾಸವನ್ನು ಏಪ್ರಿಲ್ 3, 2022 ರಂದು ಆಚರಿಸಲಾಗುತ್ತದೆ. ಅರ್ಧಚಂದ್ರನನ್ನು ನೋಡಿದ ಬಳಿಕ ರಂಜಾನ್‌ ತಿಂಗಳ ಉಪವಾಸ ಆರಂಭವಾಗುತ್ತದೆ. ಸಾಮಾನ್ಯವಾಗಿ, ರಂಜಾನ್‌ನ ಅರ್ಧಚಂದ್ರಾಕಾರವು ಸೌದಿ ಅರೇಬಿಯಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳೊಂದಿಗೆ ಭಾರತದ ಕೆಲವು ಭಾಗಗಳಲ್ಲಿ ಮೊದಲು ಕಂಡುಬರುತ್ತದೆ. ನಂತರ ಸಾಮಾನ್ಯವಾಗಿ ಒಂದು ದಿನದ ನಂತರ ಭಾರತದ ಉಳಿದ ಭಾಗಗಳಲ್ಲಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಕಂಡುಬರುತ್ತದೆ.

ರಂಜಾನ್‌: ಕೋವಿಡ್ ತೊಲಗಿಸುವಂತೆ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆರಂಜಾನ್‌: ಕೋವಿಡ್ ತೊಲಗಿಸುವಂತೆ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

 ಉಪವಾಸದ ರೀತಿ ರಿವಾಜುಗಳು ಏನು?

ಉಪವಾಸದ ರೀತಿ ರಿವಾಜುಗಳು ಏನು?

ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಮರು ಉಪವಾಸ ಇರುತ್ತಾರೆ. ಇಡೀ ದಿನ ಉಪವಾಸ ಮಾಡಲಾಗುತ್ತದೆ. ಸೂರ್ಯಾಸ್ತದ ತನಕ ಏನನ್ನು ತಿನ್ನದೆ ಅಥವಾ ಕುಡಿಯದೆ ಉಪವಾಸ ಮಾಡಲಾಗುತ್ತದೆ. ಮುಂಜಾನೆ, ಸೂರ್ಯ ಉದಯಿಸುವ ಮೊದಲು, ಸೆಹ್ರಿ ಸೇವಿಸಲಾಗುತ್ತದೆ. ಅದರ ಬಳಿಕ ಫಜ್ರ್ ಅಥವಾ ಬೆಳಗಿನ ಪ್ರಾರ್ಥನೆಗೆ ಹಾಜರಾಗುತ್ತಾರೆ.

ಇಫ್ತಾರ್‌‌ನ ನಂತರ, ಜನರು ಮಗ್ರಿಬ್ ಅಥವಾ ಸಂಜೆ ಪ್ರಾರ್ಥನೆಗಾಗಿ ಮುಸ್ಸಂಜೆಯಲ್ಲಿ ಸೇರುತ್ತಾರೆ. ರಂಜಾನ್‌ನಲ್ಲಿ ಉಪವಾಸ ಮಾಡುವುದು ಎಲ್ಲಾ ವಯಸ್ಕ ಮುಸ್ಲಿಮರಿಗೆ ಕಡ್ಡಾಯವಾಗಿದೆ. ಅನಾರೋಗ್ಯವಿದ್ದರೆ, ಪ್ರಯಾಣ ಮಾಡುವುದಾದರೆ, ಮಹಿಳೆಯರು ತಿಂಗಳ ಮುಟ್ಟನ್ನು ಹೊಂದಿದ್ದರೆ, ಗರ್ಭಿಣಿ, ಮಧುಮೇಹ ಅಥವಾ ವಯಸ್ಸಾದವರಾಗಿದ್ದರೆ ಉಪವಾಸವನ್ನು ಮಾಡುವುದರಿಂದ ವಿನಾಯಿತಿಯನ್ನು ಪಡೆಯಬಹುದು. ಉಪವಾಸವನ್ನು ಪ್ರಾರಂಭಿಸುವ ಮೊದಲು ಸೇವಿಸುವ ಭೋಜನವನ್ನು ಸೆಹ್ರಿ ಅಥವಾ ಸುಹೂರ್ ಎಂದು ಕರೆಯಲಾಗುತ್ತದೆ. ಮಗ್ರಿಬ್‌ನಸಂಜೆಯ ಪ್ರಾರ್ಥನೆಯ ಬಳಿಕ ಉಪವಾಸವನ್ನು ಕೊನೆ ಮಾಡುವ ಭೋಜನವನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ರಂಜಾನ್‌ ತಿಂಗಳಿನಲ್ಲಿ ಜನರು ತೀರ್ಥಯಾತ್ರೆಯನ್ನು ಮಾಡಲು ನಿರ್ಧಾರ ಮಾಡುತ್ತಾರೆ.

 ಸೆಹ್ರಿ ಹಾಗೂ ಇಫ್ತಾರ್‌‌ ಸಮಯ ಯಾವಾಗ?

ಸೆಹ್ರಿ ಹಾಗೂ ಇಫ್ತಾರ್‌‌ ಸಮಯ ಯಾವಾಗ?

ಹೈದರಾಬಾದ್ ಬೆಳಗ್ಗೆ 05:01ರಿಂದ ಸಂಜೆ 06:30
ದೆಹಲಿ ಬೆಳಗ್ಗೆ 04:56ರಿಂದ ಸಂಜೆ 06:38
ಅಹಮದಾಬಾದ್ ಬೆಳಗ್ಗೆ 05:20ರಿಂದ ಸಂಜೆ 06:55
ಸೂರತ್ ಬೆಳಗ್ಗೆ 05:21ರಿಂದ ಸಂಜೆ 06:53
ಮುಂಬೈ ಬೆಳಗ್ಗೆ 05:22ರಿಂದ ಸಂಜೆ 06:52
ಪುಣೆ ಬೆಳಗ್ಗೆ 05:19ರಿಂದ ಸಂಜೆ 06:48
ಬೆಂಗಳೂರು ಬೆಳಗ್ಗೆ 05:07ರಿಂದ ಸಂಜೆ 06:32
ಚೆನ್ನೈ ಬೆಳಗ್ಗೆ 04:56ರಿಂದ ಸಂಜೆ 06:21
ಕಲ್ಕತ್ತಾ ಬೆಳಗ್ಗೆ 04:17ರಿಂದ ಸಂಜೆ 05:51
ಕಾನ್ಪುರ ಬೆಳಗ್ಗೆ 04:46ರಿಂದ ಸಂಜೆ 06:25.

ಆದರೆ ಸೂರ್ಯನ ಸ್ಥಾನದಿಂದಾಗಿ ಸೆಹ್ರಿ ಮತ್ತು ಇಫ್ತಾರ್ ವೇಳಾಪಟ್ಟಿ ಬದಲಾವಣೆ ಮಾಡಲಾಗುತ್ತದೆ.

ಭಾರತದಲ್ಲಿ ರಂಜಾನ್‌ ಆಚರಣೆ ಹೇಗಿರಲಿದೆ?

ಭಾರತದಲ್ಲಿ ರಂಜಾನ್‌ ಆಚರಣೆ ಹೇಗಿರಲಿದೆ?

ಈ ಸಂದರ್ಭದಲ್ಲಿ ಪ್ರವಾದಿಯ ನಾಮವನ್ನು ಪಠಿಸುತ್ತಾ ಮುಸ್ಲಿಮರ ಮನೆಗಳಿಗೆ ತೆರಳುವ ಮೊಘಲ್‌ ಸಂಸ್ಕೃತಿಯು ದೆಹಲಿ ಸೇರಿ ಹಲವಾರು ಕಡೆಗಳಲ್ಲಿ ಜೀವಂತವಾಗಿದೆ. ಹಳೆಯ ಆಚರಣೆಯನ್ನು ಹಳೆಯ ದೆಹಲಿಯ ಭಾಗಗಳಲ್ಲಿ, ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿ ಇನ್ನೂ ಆಚರಿಸಲಾಗುತ್ತದೆ.

ಭಾರತದಲ್ಲಿ ಈ ಹಬ್ಬದ ಸಂದರ್ಭದಲ್ಲಿ ದಾನಕ್ಕೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ. ಹಾಗೆಯೇ ಅನ್ಯ ಧರ್ಮೀಯರು ಮುಸ್ಲಿಮರಿಗೆ ಇಫ್ತಾರ್‌ ಕೂಟ ಸಮಾರಂಭಗಳನ್ನು ಕೂಡಾ ಆಚರಣೆ ಮಾಡುತ್ತಾರೆ. ಪ್ರತಿ ಮುಸ್ಲಿಮರಿಗೆ ಫಿತ್ರ್‌ ಝಕಾತ್‌ (ದಾನ) ಕಡ್ಡಾಯವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದೇ ಈ ದಾನದ ಉದ್ದೇಶ. ಒಬ್ಬ ಮುಸ್ಲಿಮ್ ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯವಾಗಿ ದಾನ ನೀಡಬೇಕು. ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನ ಪಡೆಯಲು ಅರ್ಹರು. ಬಡವರು, ಸಾಲದಿಂದ ಕಂಗಾಲಾದವರು, ಯೋಧರು, ಪ್ರಯಾಣಿಕರು ಎಲ್ಲರೂ ಝಕಾತ್ ಅಥವಾ ದಾನ ಪಡೆಯಲು ಅರ್ಹರಾಗಿರುತ್ತಾರೆ.

English summary
Ramadan 2022: The holy month of Ramzaan starts from 2nd april and ends on 2nd may. Check dates, Time, moon sighting, History, Fasting Rituals, Sehri and iftar timetable in India and why we celebrate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X