ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ram Navami Health Tips: ಬೇಲದ ಹಣ್ಣಿನ ಪಾನಕ ಮಾಡುವುದು ಹೇಗೆ?

By ಮನಸ್ವಿನಿ, ನಾರಾವಿ
|
Google Oneindia Kannada News

ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು, ರಾಮ ನವಮಿಯನ್ನು ಆಚರಿಸಲಾಗುತ್ತದೆ. ಬೇಸಿಗೆಯಲ್ಲಿ ಬರುವ ಪ್ರಮುಖ ಹಬ್ಬವಾಗಿರುವ ರಾಮನವಮಿಯಂದು ಪ್ರಮುಖವಾಗಿ ಹಂಚುವ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಎಲ್ಲರಿಗೂ ಅಚ್ಚು ಮೆಚ್ಚು. ಬಿಸಿಲಿನ ತಾಪಕ್ಕೆ ಬೆಂದ ಭಕ್ತರ ಜಠರಾಗ್ನಿ ತಣಿಸಲು ಪಾನಕ ಸಹಕಾರಿ. ಮುಖ್ಯವಾಗಿ ನಿಂಬೆ, ಕಲ್ಲಂಗಡಿ, ಕರಬೂಜ ಬಳಸಿ ಪಾನಕ ತಯಾರಿಸಲಾಗುತ್ತದೆ. ಈ ಪೈಕಿ ಬೇಲದ ಹಣ್ಣಿಗೆ ಮಹತ್ವ ಹೆಚ್ಚಾಗಿದೆ.

ಭಕ್ತರು ಇಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಸಲ್ಲಿಸಿ, ಪ್ರಾರ್ಥಿಸುತ್ತಾರೆ. ಆದರೆ, ಎಷ್ಟೇ ಉಪವಾಸವಿದ್ದರೂ ಪಾನಕ, ಕೋಸಂಬರಿ ಸೇವನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಆಬಾಲವೃದ್ಧರಾದಿಯಾಗಿ ಎಲ್ಲರೂ ಸೇವಿಸಬಹುದು. ಸರ್ವಧರ್ಮದ ಸಾಮರಸ್ಯವಾಗಿ ಹಲವು ವರ್ಷಗಳಿಂದ ಪಾನಕ ಕೋಸಂಬರಿ ಹಂಚುವ ಕಾರ್ಯ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ನಡೆದುಕೊಂಡು ಬಂದಿದೆ.

ಸಲಹೆ: ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ನೀಡುವ ಶುಂಠಿ ಕಷಾಯ ಸಲಹೆ: ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ನೀಡುವ ಶುಂಠಿ ಕಷಾಯ

ಬೇಲದ ಹಣ್ಣು ಬಗ್ಗೆ ಸಂಕ್ಷಿಪ್ತ ಮಾಹಿತಿ :
* ಸಂಸ್ಕೃತದಲ್ಲಿ ಕಪಿತ್ಥ, ಇಂಗ್ಲೀಷಲ್ಲಿ ವುಡ್ ಆಪಲ್ ಎಂದು ಕರೆಯಲ್ಪಡುವ ಬೇಲದ ಹಣ್ಣು ಲೀಮೊನಿಯಾ ಆಸಿಡಿಸೀಮಾ ಎಂಬ ಪ್ರಬೇಧಕ್ಕೆ ಸೇರಿದ ಹಣ್ಣು.
* ಈ ಹಣ್ಣಿಗೆ ಇರುವ ಇನ್ನಿತರ ಹೆಸರುಗಳು: ಬ್ಯಾಲ, ಮಳೂರ, ಮನ್ಮಥ-ಪುಷ್ಪಫಲ, ದಾದಿಫಲ, ದಂತಫಲ, ಗಂಧಫಲ, ಗೋಪಕರ್ಣ, ಗ್ರಾಹಿ, ಗ್ರಂಥಿಫಲ, ಕಪಿಪ್ರಿಯ, ಕರಂಜ ಫಲಕ
* ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಮಲೇಷಿಯಾ ಮತ್ತು ಇಂಡೋಚೈನಾ ಪ್ರದೇಶಗಳಲ್ಲಿ ಕಂಡು ಬರುತ್ತದೆ.
* ಒರಟು, ಮುಳ್ಳಿರುವ ತೊಗಟೆ ಹೊಂದಿದ್ದು 9 ಮೀ. ಎತ್ತರಕ್ಕೆ ಬೆಳೆಯುವ ನಿಂಬೆ ಹಣ್ಣಿನ ಜಾತಿಗೆ ಸೇರಿದ ಒಂದು ದೊಡ್ಡ ಮರ.

Ram Navami: How to prepare Belada hannu Panaka - Wood Apple Juice

* ಬೂದಿ ಬಣ್ಣದ ಗಟ್ಟಿ ತೊಗಟೆ ಹೊಂದಿರುವ ಹಣ್ಣು ಒಡೆದಾಗ ಅಂಟಂಟಾಗಿರುವ ಕಂದು ತಿರುಳು ಮತ್ತು ಸಣ್ಣ ಬಿಳಿ ಬೀಜವುಳ್ಳ ಹಣ್ಣು ಸಿಗುತ್ತದೆ.
* ಬಹುತೇಕ ಬಿಲ್ವದ ಹಣ್ಣಿನ ಮಾದರಿಯಲ್ಲಿರುತ್ತದೆ. ತಿರುಳು ಹುಳಿಮಿಶ್ರಿತ ಸಿಹಿಯ ರುಚಿ ಹೊಂದಿದೆ.
* 100 ಗ್ರಾಂನಷ್ಟು ಹಣ್ಣಿನಲ್ಲಿ 18 ಗ್ರಾಂ ಶರ್ಕರಪಿಷ್ಟ, 3.7 ಗ್ರಾಂ ಕೊಬ್ಬು, 7.1 ಗ್ರಾಂ ಪ್ರೋಟಿನ್, 28 ಗ್ರಾಂವಿಟಮಿನ್ ಸಿ, ವಿಟಮಿನ್ ಬಿ ಹಾಗೂ 130 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ, ಫಾಸ್ಪೊರಸ್ ಮುಂತಾದ ಖನಿಜಗಳಿರುತ್ತದೆ.

 ರೋಗನಿರೋಧಕ ಶಕ್ತಿ ಕೊರತೆಯಿದ್ದವರಿಗೆ ಹೆಚ್ಚುವರಿ ಲಸಿಕೆ ನೀಡಲು WHO ಶಿಫಾರಸು ರೋಗನಿರೋಧಕ ಶಕ್ತಿ ಕೊರತೆಯಿದ್ದವರಿಗೆ ಹೆಚ್ಚುವರಿ ಲಸಿಕೆ ನೀಡಲು WHO ಶಿಫಾರಸು

ಉಪಯೋಗ:
* ಜೀರ್ಣಕ್ರಿಯೆ ಹೆಚ್ಚಳ, ಮಲಬದ್ಧತೆ ನಿವಾರಣೆ, ರೋಗ ನಿರೋಧಕ ಶಕ್ತಿವರ್ಧನೆ, ಹುಣ್ಣು, ಕರಳು ಬೇನೆ ನಿವಾರಕೆ,ನೆನಪಿನ ಶಕ್ತಿ ಹೆಚ್ಚಿಸಲು, ತ್ವಚೆ ಸಂರಕ್ಷಣೆ, ಗಂಟಲು, ಕಿವಿ, ಕಣ್ಣು ನೋವು, ಕೆಮ್ಮು, ಪಿತ್ತಶಮನ, ಮಧುಮೇಹ ನಿಯಂತ್ರಣ, ಅಧಿಕ ರಕ್ತದೊತ್ತಡ ತಗ್ಗಿಸಲು ಹೀಗೆ ನಾನಾ ಬಗೆ ಉಪಯೋಗಕ್ಕೆ ಬೇಲದ ಹಣ್ಣು ಬಳಸಬಹುದು.

Health Tips: ದೈನಂದಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನ ಬಳಕೆHealth Tips: ದೈನಂದಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನ ಬಳಕೆ

ಬಳಸುವ ವಿಧಾನ:
* ಅಪಕ್ವವಾದ ಹಣ್ಣಿನ ತಿರುಳನ್ನು ಒಣಗಿಸಿಕೊಳ್ಳಿ ಅಥವಾ ಹಸಿಯಾಗಿ ಬಳಸಬಹುದು. ಅರ್ಧಚಮಚದಷ್ಟು ಪುಡಿಯನ್ನು ಒಂದು ಲೋಟದ ಮಜ್ಜಿಗೆಗೆ ಹಾಕಿ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಅತೀಸಾರ, ಆಮಶಂಕೆ ನಿಯಂತ್ರಣಕ್ಕೆ ಬರುತ್ತದೆ.
* ಬೇಲದ ಮರದ ಬೇರು, ತೊಗಟೆ, ಎಲೆ, ಹೂವು ಹಾಗೂ ಹಣ್ಣು ಬಳಸಿ ತಯಾರಿಸಿದ ಎಣ್ಣೆಯನ್ನು ಚರ್ಮಕ್ಕೆ ಲೇಪಿಸುತ್ತಾ ಬಂದರೆ, ಚರ್ಮದ ಸುಂದರ ವೃದ್ಧಿಸಿ, ಆರೋಗ್ಯಕರವಾಗಿರುತ್ತದೆ.
* ಬೇಲದ ಪಕ್ವವಾದ(ಅರ್ಧ ಕಳೆತ ಹಣ್ಣು ಬೇಡ) ಹಣ್ಣು ಪಾನಕ/ ಶರಬತ್ ಮಾಡಲು ಸೂಕ್ತವಾಗಿದ್ದು, ಬೇಸಿಗೆಯಲ್ಲಿ ಯಥೇಚ್ಛವಾಗಿ ಬಳಸಿ.
* ಮರದ ತೊಗಟೆಯ ಗೋಂದನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ, ಸಣ್ಣ ಚಮಚ ಜೇನುತುಪ್ಪ ಅಥವಾ ಎಳೆನೀರು ಬೆರೆಸಿ ಸೇವಿಸಿದರೆ ಹೊಟ್ಟೆ ನೋವು, ಭೇದಿ ಸಮಸ್ಯೆ ನಿವಾರಣೆಯಾಗುತ್ತದೆ.

ಬೇಲದ ಹಣ್ಣಿನ ಪಾನಕ:

ಬಹುತೇಕ ಬಿಲ್ವಪತ್ರೆಯ ಕಾಯಿಯಂತೆಯೇ ಕಾಣುವ ಬೇಲದ ಹಣ್ಣಿನ ಗಾತ್ರ ತುಸು ದೊಡ್ಡದು. ಸಿಹಿ, ಹುಳಿ, ಒಗರು ಮಿಶ್ರಿತ ವಿಶಿಷ್ಠ ರುಚಿ ಕೊಡುವ ಹಣ್ಣು. ನೀರಿನ ಪ್ರಮಾಣಕ್ಕೆ ತಕ್ಕಂತೆ ಬೆಲ್ಲದ ಪುಡಿ ಬಳಸಿ.
* ಶುದ್ಧ ಕುಡಿಯುವ ನೀರು- ಅಗತ್ಯಕ್ಕೆ ತಕ್ಕಷ್ಟು- 4 ಲೋಟ
* ಬೆಲ್ಲ ಅಥವಾ ಬೆಲ್ಲದ ಪುಡಿ -1/2 ಕಪ್
* 1 ದೊಡ್ಡ ಬೇಲದ ಹಣ್ಣಿನ ತಿರುಳು
* ಕಾಳು ಮೆಣಸಿನ ಪುಡಿ (ಅಗತ್ಯವಿದ್ದರೆ ಬಳಸಿ)

ವಿಧಾನ:
ಬೇಲದ ಹಣ್ಣಿನ ಮೇಲಿನ ತೊಗಟೆ ಒಡೆದು, ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ, ಸಣ್ಣ ಪಾತ್ರೆಯೊಂದರಲ್ಲಿ ನೀರು ಹಾಕಿ, ಸ್ವಲ್ಪ ಹೊತ್ತು ಹಣ್ಣನ್ನು ನೆನಸಿಡಿ. ನಂತರ ಹುಣಸೆ ಹಣ್ಣು ಕಿವುಚುವಂತೆ ಕಿವುಚಿ ರಸವನ್ನು ತೆಗೆಯಿರಿ, ಚೆನ್ನಾಗಿ ಸೋಸಿಕೊಂಡು ನೀರಿನ ಪಾತ್ರೆಗೆ ಸೇರಿಸಿ, ಹಣ್ಣಿನ ತಿರುಳನ್ನು ಎರಡು ಮೂರು ಸಲ ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಿ.

ಅಗತ್ಯಕ್ಕೆ ತಕ್ಕ ನೀರು ಸೇರಿಸಿ ನಂತರ ಅಗತ್ಯಕ್ಕೆ ತಕ್ಕಷ್ಟು ಬೆಲ್ಲದ ಮಿಶ್ರಣ ಹಾಗೂ ಕಾಳು ಮೆಣಸಿನ ಪುಡಿ ಸೇರಿಸಿ. ಇನ್ನು ಪಾನಕ ಎಂದ ಮೇಲೆ ಪರಿಮಳ ಬರಲಿ ಎಂದು ಏಲಕ್ಕಿ ಬೆರೆಸಲು ಹೋಗಬೇಡಿ, ಬೇಲದ ಪರಿಮಳವೇ ಸಾಕು. ಇನ್ಯಾಕೆ ತಡ, ಬೇಸಿಗೆಯಲ್ಲಿ ಈ ಪಾನಕ ಮಾಡಿ, ಎಲ್ಲರಿಗೂ ಹಂಚಿ.

Recommended Video

KL Rahulಗೆ ಪಾಪ ಹೀಗಾಗಬಾರದಿತ್ತು | Rahul golden duck| Oneindia Kannada

English summary
Ram Navami: How to prepare Belada hannu Panaka - Wood Apple Juice in simple method. What are the health benefits of this fruit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X