ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಮುಂಗಾರು ಅಧಿವೇಶನ: 1952ರಿಂದ ಮೂರನೇ ಬಾರಿ ಅತಿ ಕಡಿಮೆ ಅವಧಿ ಕಲಾಪ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಕೊರೊನಾ ವೈರಸ್ ಕಾರಣದಿಂದ ಪ್ರಸಕ್ತ ಸಾಲಿನ ಮುಂಗಾರು ಅಧಿವೇಶನ ಸುಮಾರು ಒಂದು ತಿಂಗಳ ತಡವಾಗಿ ಆರಂಭವಾಗಿದೆ. ಮುಂಜಾಗ್ರತೆ ಕ್ರಮವಾಗಿ ಅಧಿವೇಶನದ ಅವಧಿಯನ್ನು ಸೀಮಿತಗೊಳಿಸಲಾಗಿತ್ತು. ಜತೆಗೆ ಕೋವಿಡ್ ಭಯದಿಂದ ಸಂಸದರ ಹಾಜರಾತಿ ಕೂಡ ಕಡಿಮೆ ಇತ್ತು. ಈಗ ರಾಜ್ಯಸಭೆ ಅಧಿವೇಶನದ ಅವಧಿಯನ್ನು ಮೊಟಕುಗೊಳಿಸಲಾಗಿದೆ. 1952ರಲ್ಲಿ ಮೇಲ್ಮನೆ ಅಸ್ತಿತ್ವಕ್ಕೆ ಬಂದ ಬಳಿಕ ಇಷ್ಟು ಕಡಿಮೆ ದಿನ ಕಲಾಪ ನಡೆಯುತ್ತಿರುವುದು ಇದು ಮೂರನೇ ಬಾರಿ.

ಈ ದಿನದವರೆಗೂ ರಾಜ್ಯಸಭೆ 252 ಅಧಿವೇಶನಗಳನ್ನು ಕಂಡಿದೆ. ಅದರಲ್ಲಿ 69 ಬಾರಿ ಮುಂಗಾರು ಅಧಿವೇಶನ ನಡೆದಿದೆ. 1979ರ ಜುಲೈನಲ್ಲಿ ನಡೆದ 110ನೇ ಅಧಿವೇಶನ, 1999ರ 187ನೇ ಅಧಿವೇಶನಗಳಲ್ಲಿ ಕೇವಲ ಆರು ದಿನ ಕಲಾಪ ನಡೆದಿತ್ತು. ಅವುಗಳಿಗೆ ಹೋಲಿಸಿದರೆ ಪ್ರಸ್ತುತ ಅವಧಿಯಲ್ಲಿ ನಡೆದ ರಾಜ್ಯಸಭೆ ಕಲಾಪ ಹತ್ತು ದಿನಗಳವರೆಗೆ ನಡೆದಿದೆ.

ಪ್ರತಿಪಕ್ಷಗಳ ಬಹಿಷ್ಕಾರವೇ ಬಂಡವಾಳ: ಒಂದೇ ದಿನ 7 ಮಸೂದೆ ಪಾಸ್ ಪ್ರತಿಪಕ್ಷಗಳ ಬಹಿಷ್ಕಾರವೇ ಬಂಡವಾಳ: ಒಂದೇ ದಿನ 7 ಮಸೂದೆ ಪಾಸ್

ರಾಜ್ಯಸಭೆಯ ಕಾರ್ಯಾಲಯದ ಪತ್ರಿಕೆ 'ರಾಜ್ಯಸಭಾ ಸ್ಟ್ಯಾಟಿಸ್ಟಿಕಲ್ ಇನ್‌ಫಾರ್ಮೇಶನ್ 1952-2018' ಮತ್ತು ಅದಕ್ಕೆ ಪೂರಕವಾದ ಅಧಿಕೃತ ದಾಖಲೆಗಳ ಪ್ರಕಾರ, ಮೇಲ್ಮನೆಯಲ್ಲಿ ಇದುವರೆಗೂ 252 ಅಧಿವೇಶನಗಳು ನಡೆದಿವೆ. ಇದರಲ್ಲಿ 111ನೇ ಅಧಿವೇಶನ ಅತ್ಯಂತ ಕಿರು ಅವಧಿಯ ಕಲಾಪ ಎಂದೆನಿಸಿದೆ. 1979ರ ಆಗಸ್ಟ್ 20ರಂದು ಒಂದೇ ಒಂದು ದಿನ ರಾಜ್ಯಸಭೆ ಕಲಾಪ ನಡೆದಿತ್ತು. ಮುಂದೆ ಓದಿ.

ಒಂದು ದಿನದ ಕಲಾಪ

ಒಂದು ದಿನದ ಕಲಾಪ

1979ರಲ್ಲಿ ತುರ್ತುಪರಿಸ್ಥಿತಿ ಬಳಿಕ ಜನತಾ ಪಕ್ಷದ ನೇತೃತ್ವದಲ್ಲಿ ರಚನೆಯಾದ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲದಿಂದಾಗಿ ಪ್ರಧಾನಿ ಚರಣ್ ಸಿಂಗ್ ರಾಜೀನಾಮೆ ನೀಡಿದ್ದರಿಂದ ಕಲಾಪದ ಅವಧಿಯನ್ನು ಕೇವಲ ಒಂದೇ ದಿನಕ್ಕೆ ಮೊಟಕುಗೊಳಿಸಲಾಗಿತ್ತು.

ರಾಜ್ಯಸಭೆ ಗದ್ದಲ: ಉಪವಾಸ ಪ್ರತಿಭಟನೆಗೆ ಮುಂದಾದ ಉಪಾಧ್ಯಕ್ಷ ಹರಿವಂಶ್ ಸಿಂಗ್ರಾಜ್ಯಸಭೆ ಗದ್ದಲ: ಉಪವಾಸ ಪ್ರತಿಭಟನೆಗೆ ಮುಂದಾದ ಉಪಾಧ್ಯಕ್ಷ ಹರಿವಂಶ್ ಸಿಂಗ್

40 ದಿನಗಳ ಕಲಾಪ

40 ದಿನಗಳ ಕಲಾಪ

ಒಟ್ಟು 69 ಮಳೆಗಾಲದ ರಾಜ್ಯಸಭೆ ಅಧಿವೇಶನಗಳಲ್ಲಿ ಈ ಬಾರಿಯ ಕಲಾಪ ಸೇರಿದಂತೆ ಮೂರು ಅವಧಿಗಳಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ದಿನಗಳ ಕಲಾಪ ನಡೆದಿದೆ. ರಾಜ್ಯಸಭೆಯ ಅತ್ಯಂತ ಸುದೀರ್ಘಾವಧಿ ಕಲಾಪ ನಡೆದಿದ್ದು 1974ರಲ್ಲಿ. ರಾಜ್ಯಸಭೆಯ 89ನೇ ಅಧಿವೇಶನವು ಒಟ್ಟು 40 ದಿನಗಳ ಕಲಾಪವನ್ನು ಕಂಡಿತ್ತು.

ಮುಂಗಾರು ಅಧಿವೇಶನಗಳ ಪಟ್ಟಿ

ಮುಂಗಾರು ಅಧಿವೇಶನಗಳ ಪಟ್ಟಿ

11-20 ದಿನಗಳ ಕಲಾಪವು 16 ಬಾರಿ ನಡೆದಿದೆ. 21-30 ದಿನಗಳ ಕಲಾಪವು ರಾಜ್ಯಸಭೆಯಲ್ಲಿ 40 ಬಾರಿ ನಡೆದಿದೆ. 1976ರ ಆಗಸ್ಟ್ - ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯಸಭೆಯ 76ನೇ ಅಧಿವೇಶನವು 18 ದಿನಗಳ ಕಲಾಪ ಕಂಡಿತ್ತು. ಇನ್ನು ಆರು ಮುಂಗಾರು ಅಧಿವೇಶನಗಳು 16-17 ಕಲಾಪಗಳನ್ನು ನಡೆಸಿದ್ದವು.

ಎಲ್ಲ 69 ಮುಂಗಾರು ಅಧಿವೇಶನಗಳಲ್ಲಿ 34 ಅಧಿವೇಶನಗಳು ಜುಲೈ-ಆಗಸ್ಟ್ ಅವಧಿಯಲ್ಲಿ ನಡೆದಿವೆ. 16 ಅಧಿವೇಶನಗಳು ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ನಡೆದಿವೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಆರು, ಆಗಸ್ಟ್-ಅಕ್ಟೋಬರ್ ಅವಧಿಯಲ್ಲಿ ಐದು ಅಧಿವೇಶನಗಳು ನಡೆದಿವೆ.

ಸಂಸತ್ ಸದಸ್ಯರಿಗೆ ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತುಸಂಸತ್ ಸದಸ್ಯರಿಗೆ ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತು

ಅಕ್ಟೋಬರ್ ಅಧಿವೇಶನ

ಅಕ್ಟೋಬರ್ ಅಧಿವೇಶನ

ಅಕ್ಟೋಬರ್ ತಿಂಗಳಲ್ಲಿ ಆರು ದಿನಗಳವರೆಗೆ ನಡೆದ 187ನೇ ಅಧಿವೇಶನವನ್ನು ಮಾತ್ರವೇ ಮಳೆಗಾಲದ ಅಧಿವೇಶನ ಎಂದು ಸಂಸತ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಈ ಅಧಿವೇಶನ ನಡೆದಿತ್ತು.

ಎರಡು ಅವಧಿಯ ಹಂಚಿಕೆ

ಎರಡು ಅವಧಿಯ ಹಂಚಿಕೆ

ಪ್ರಸಕ್ತ ಮುಂಗಾರು ಅಧಿವೇಶನವನ್ನು ಸೆ. 14 ರಿಂದ ಅಕ್ಟೋಬರ್ 1ರವರೆಗೆ 18 ದಿನಗಳ ಯಾವುದೇ ವಿರಾಮ ಇಲ್ಲದೆ ಕಲಾಪ ನಡೆಸುವಂತೆ ಆಯೋಜಿಸಲಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಸದನಗಳ ಕಲಾಪಗಳನ್ನು ವಿಂಗಡಿಸಲಾಗಿದೆ. ರಾಜ್ಯಸಭೆ ಬೆಳಗಿನ ನಾಲ್ಕು ಗಂಟೆ ಕಲಾಪ ನಡೆಸಿದರೆ ಎರಡು ಗಂಟೆ ವಿರಾಮದ ಬಳಿಕ ಲೋಕಸಭೆ ಕಲಾಪ ನಡೆಸಲಾಗುತ್ತಿದೆ.

English summary
Rajya Sabha Monsoon Session 2020: 252nd session of Rajya Sabha has become the 3rd shortest sittings since 1952.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X