ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ದೇವೇಗೌಡರು ಸ್ವಂತ ಮನೆಯೇ ಹೊಂದಿಲ್ಲ!

|
Google Oneindia Kannada News

ಬೆಂಗಳೂರು, ಜೂನ್ 10: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ರಾಜಕೀಯ ಅದೃಷ್ಟ ಒಲಿದು ಬಂದಿದ್ದು, ಸಂಸತ್ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ. ಸ್ವಂತ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದ ದೇವೇಗೌಡರು, ತುಮಕೂರಿನಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ, ಈಗ ಕರ್ನಾಟಕದಿಂದ ರಾಜ್ಯಸಭೆಗೆ 4ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

Recommended Video

ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

ರಾಜ್ಯಸಭಾ ಚುನಾವಣಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಚುನಾವಣಾಧಿಕಾರಿ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದ್ದಾರೆ.

ರಾಜ್ಯಸಭಾ ಚುನಾವಣೆ: ದೇವೇಗೌಡರ ಹಾದಿ ಸುಗಮವಾಗಿದ್ದು ಹೀಗೆ!ರಾಜ್ಯಸಭಾ ಚುನಾವಣೆ: ದೇವೇಗೌಡರ ಹಾದಿ ಸುಗಮವಾಗಿದ್ದು ಹೀಗೆ!

ರಾಜ್ಯಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲು ಕನಿಷ್ಠ 45 ಮತಗಳ ಅಗತ್ಯವಿದೆ. ಕಾಂಗ್ರೆಸ್ಸಿನಿಂದ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ದೇವೇಗೌಡರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆಯಿಲ್ಲ, ತಮ್ಮ ಹೆಸರಿನಲ್ಲಿ 3 ಅಂಬಾಸಡರ್ ಕಾರು ಹೊಂದಿದ್ದಾರೆ. ದೇವೇಗೌಡರಿಗಿಂತ ಅವರ ಪತ್ನಿ ಚೆನ್ನಮ್ಮ ಅವರ ಹೆಸರಿನಲ್ಲಿ ಸ್ಥಿರಾಸ್ತಿ ಅಧಿಕವಾಗಿದೆ.

ಅಭ್ಯರ್ಥಿ ವಿವರ

ಅಭ್ಯರ್ಥಿ ವಿವರ

ಪಕ್ಷ: ಜೆಡಿಎಸ್
ತಂದೆ: ದೊಡ್ಡೇಗೌಡ
ವಿಳಾಸ: 43, ಪಡುವಳಹಿಪ್ಪೆ ಗ್ರಾಮ, ಕಸಬಾ ಹೋಬಳಿ, ಹೊಳೆನರಸೀಪುರ ತಾಲೂಕು, ಹಾಸನ.
ವೃತ್ತಿ: ಕೃಷಿಕ, ರಾಜಕಾರಣಿ
ಪತ್ನಿ: ಚೆನ್ನಮ್ಮ
ವಿದ್ಯಾರ್ಹತೆ: ಹಾಸನದ ಎಲ್ ವಿ ಪಾಲಿಟೆಕ್ನಿಕ್ ನಿಂದ ಸಿವಿಎಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ.
2017-18ರಲ್ಲಿ ಸಲ್ಲಿಸಿದ ಐಟಿ ರಿಟರ್ನ್ 6.38 ಲಕ್ಷ ರು.
ಸ್ಥಿರಾಸ್ತಿ: ದೇವೇಗೌಡರ ಬಳಿ 41.28 ಲಕ್ಷ ರು, ಚೆನ್ನಮ್ಮ ಅವರ ಬಳಿ 5.38 ಕೋಟಿ ರು,
ಚರಾಸ್ತಿ: ಚೆನ್ನಮ್ಮ ಅವರ ಬಳಿ 2.14 ಕೋಟಿ ರು, ದೇವೇಗೌಡರ ಬಳಿ 72.50 ಲಕ್ಷ ರು

ದೇವೇಗೌಡರು ಕೋಟ್ಯಧಿಪತಿಯಾದ್ರು

ದೇವೇಗೌಡರು ಕೋಟ್ಯಧಿಪತಿಯಾದ್ರು

2019ರಲ್ಲಿ ದೇವೇಗೌಡ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 95.31 ಲಕ್ಷ ರೂಪಾಯಿಗಳಾಗಿತ್ತು ಈಗ 2020ರ ಜೂನ್ 10ರಂತೆ 1.13 ಕೋಟಿ ರು ಆಗಿದೆ.

ರಾಜ್ಯಸಭೆ ಅಭ್ಯರ್ಥಿ ಖರ್ಗೆಗಿಂತ ಅವರ ಪತ್ನಿಯೇ ಸಿರಿವಂತೆರಾಜ್ಯಸಭೆ ಅಭ್ಯರ್ಥಿ ಖರ್ಗೆಗಿಂತ ಅವರ ಪತ್ನಿಯೇ ಸಿರಿವಂತೆ

2019ರಲ್ಲಿ ಚೆನ್ನಮ್ಮ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 4.91 ಕೋಟಿ ರು ನಷ್ಟಿತ್ತು. ಈಗ 7.52 ಕೋಟಿ ರು ಗೇರಿದೆ. ಅವರ ಮೇಲೆ ಇರುವ ಸಾಲದ ಹೊರೆ 97.98 ಲಕ್ಷ ರು. ದೇವೇಗೌಡ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಂತೆ ದೇವೇಗೌಡ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರು.

ಸಾಲದ ಮೊತ್ತ ಎಷ್ಟಿದೆ?

ಸಾಲದ ಮೊತ್ತ ಎಷ್ಟಿದೆ?

ದೇವೇಗೌಡ ಅವರು ಪತ್ನಿ ಚೆನ್ನಮ್ಮ ಅವರಿಗೆ 6.27 ಲಕ್ಷ ಸಾಲ ನೀಡಿದ್ದಾರೆ. ಜೊತೆಗೆ ಜೆಡಿಎಸ್‌ ಪಕ್ಷಕ್ಕೆ 9.45 ಲಕ್ಷ ನೀಡಿದ್ದಾರೆ. ಚೆನ್ನಮ್ಮ ಅವರು ಆರ್.ಸೂರಜ್ ಎಂಬುವರಿಗೆ 20 ಲಕ್ಷ, ಕಾಳೇಗೌಡ ಎಂಬುವರಿಗೆ 5.15 ಲಕ್ಷ ಸಾಲ ನೀಡಿದ್ದರೆ, ಅವರಿಗೆ ಪ್ರತಿ ತಿಂಗಳು 75 ಸಾವಿರ ಬಾಡಿಗೆ ಸಹ ಬರುತ್ತದೆ.

ದೇವೇಗೌಡ ಅವರಿಗೆ ಯಾವುದೇ ಸಾಲಗಳಿಲ್ಲ, ಆದರೆ ಚೆನ್ನಮ್ಮ ಅವರು ತಮ್ಮ ಬಹುತೇಕ ಎಲ್ಲ ಮಕ್ಕಳಿಂದಲೂ, ಪತಿ ದೇವೇಗೌಡ ಅವರಿಂದ ಸಾಲ ಪಡೆದಿದ್ದಾರೆ. ಮೊಮ್ಮಗ ರೇವಣ್ಣ ಅವರಿಂದಲೂ 20 ಲಕ್ಷ ಸಾಲ ಪಡೆದಿದ್ದಾರೆ. ಚೆನ್ನಮ್ಮ ಅವರಿಗಿರುವ ಒಟ್ಟು ಸಾಲದ ಮೊತ್ತ 97.98 ಲಕ್ಷ ರೂಪಾಯಿ.

ಚರಾಸ್ತಿ, ವಾಹನ, ಚಿನ್ನಾಭರಣ ಮೌಲ್ಯ

ಚರಾಸ್ತಿ, ವಾಹನ, ಚಿನ್ನಾಭರಣ ಮೌಲ್ಯ

ದೇವೇಗೌಡ ಅವರ ಬಳಿ ಮೂರು ಅಂಬಾಸಿಡರ್ ಕಾರುಗಳಿವೆ. ಅದರಲ್ಲಿ ಒಂದು 1974ರ ಮಾಡೆಲ್‌ನದ್ದು, ಅವುಗಳ ಒಟ್ಟು ಮೌಲ್ಯ 11.22 ಲಕ್ಷ. ಚೆನ್ನಮ್ಮ ಅವರ ಹೆಸರಿನಲ್ಲಿ ಎರಡು ಟ್ರಾಕ್ಟರ್‌ಗಳಿವೆ ಅವುಗಳ ಮೌಲ್ಯ 5.05 ಲಕ್ಷ ರೂಪಾಯಿ. ದೇವೇಗೌಡ ಅವರ ಬಳಿ 48,500 ಮೌಲ್ಯದ ಚಿನ್ನವಿದೆ. ಚೆನ್ನಮ್ಮ ಅವರ ಬಳಿ 4.50 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಪೀಠೋಪಕರಣ, ಫ್ರಿಡ್ಜ್ ಇಂತಹುಗಳ ಒಟ್ಟು ಮೌಲ್ಯ 39,395 ಇದು ದೇವೇಗೌಡ ಅವರ ಹೆಸರಿನಲ್ಲಿದೆ.

ದಂಪತಿ ಹೆಸರಿನಲ್ಲಿರುವ ಕೃಷಿ ಭೂಮಿ

ದಂಪತಿ ಹೆಸರಿನಲ್ಲಿರುವ ಕೃಷಿ ಭೂಮಿ

ದೇವೇಗೌಡ ಅವರ ಹೆಸರಿನಲ್ಲಿ 23 ಎಕರೆ 5 ಗುಂಟೆ ಕೃಷಿ ಭೂಮಿ ಇದೆ ಅದರ ಈಗಿನ ಮಾರುಕಟ್ಟೆ ಮೌಲ್ಯ 27.05 ಲಕ್ಷ. ಚೆನ್ನಮ್ಮ ಅವರ ಹೆಸರಿನಲ್ಲಿ 3 ಎಕರೆ 28 ಗುಂಟೆ ಕೃಷಿ ಭೂಮಿ ಇದೆ, ಇದರ ಈಗಿನ ಮಾರುಕಟ್ಟೆ ಮೌಲ್ಯ 5.55 ಲಕ್ಷ ರೂಪಾಯಿಗಳು. ದೇವೇಗೌಡ ಅವರ ಹೆಸರಲ್ಲಿ ಕೃಷಿಯೇತರ ಭೂಮಿ ಇಲ್ಲ, ಆದರೆ ಚೆನ್ನಮ್ಮ ಅವರ ಹೆಸರಿನಲ್ಲಿ 3.67 ಕೋಟಿ ಮೌಲ್ಯದ ಕೃಷಿಯೇತರ ಆಸ್ತಿ ಇದೆ.

ಆದಾಯ ಮೂಲ ಕೃಷಿ, ಬ್ಯಾಂಕ್ ಹೂಡಿಕೆ

ಆದಾಯ ಮೂಲ ಕೃಷಿ, ಬ್ಯಾಂಕ್ ಹೂಡಿಕೆ

ಪತ್ನಿ ಚೆನ್ನಮ್ಮ ಅವರಿಗೆ ಕೃಷಿ ಮೂಲದಿಂದ ಬಂದಿರುವ ವಾರ್ಷಿಕ ಆದಾಯ 15.03 ಲಕ್ಷ. ಅವರ ವಾರ್ಷಿಕ ಆದಾಯ 2.12 ಲಕ್ಷ ಒಟ್ಟು 17.15 ಲಕ್ಷ ಆದಾಯ 2019 ವರ್ಷದಲ್ಲಿ ಚೆನ್ನಮ್ಮ ಅವರಿಗೆ ಬಂದಿದೆ.

ಚೆನ್ನಮ್ಮ ದೇವೇಗೌಡ ಅವರ ಬ್ಯಾಂಕ್ ಖಾತೆಗಳಲ್ಲಿ ಇರುವ ಒಟ್ಟು ಮೊತ್ತ 63.27 ಲಕ್ಷ ರೂಪಾಯಿಗಳು. ದೇವೇಗೌಡ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಒಟ್ಟು ಮೊತ್ತ 28.04 ಲಕ್ಷ ರೂಪಾಯಿ, ಚೆನ್ನಮ್ಮ ಅವರು ಚೆನ್ನಾಂಬಿಕ ಎಂಟರ್‌ಪ್ರೈಸಸ್ ನಲ್ಲಿ 25.16 ಲಕ್ಷ ಹೂಡಿಕೆ ಮಾಡಿದ್ದಾರೆ.

English summary
Karnataka Rajya Sabha Election 2020: Here is JDS candidate HD Deve Gowda declared assets and liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X