ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನ, ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪಣ

|
Google Oneindia Kannada News

ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಸೆಪ್ಟೆಂಬರ್ 14ರಿಂದ ಆರಂಭವಾಗಲಿದೆ. ಈ ಬಾರಿ ಅಧಿವೇಶನದಲ್ಲಿ ಮೇಲ್ಮನೆಯ ಉಪಾಧ್ಯಕ್ಷರ ಆಯ್ಕೆ ಕಸರತ್ತು ಪ್ರಮುಖ ವಿಷಯವಾಗಲಿದೆ. ಏಪ್ರಿಲ್ ತಿಂಗಳಿನಲ್ಲಿ ಜೆಡಿಯು -ಎನ್ಡಿಎ ಅಭ್ಯರ್ಥಿ ಹರಿವಂಶ್ ಅವರ ಅವಧಿ ಮುಕ್ತಾಯವಾಗಿದ್ದು, ಹೊಸ ಉಪಸಭಾಪತಿಗಳ ಆಯ್ಕೆಗೆ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆ ದಿನವಾಗಿದೆ.

1977ರಿಂದ ಇಲ್ಲಿ ತನಕ 20 ತಿಂಗಳು( ಅಗಸ್ಟ್ 2018 ಹಾಗೂ ಏಪ್ರಿಲ್ 2020) ಮಾತ್ರ ಕಾಂಗ್ರೆಸ್ ಉಪ ಸಭಾಪತಿ ಸ್ಥಾನವನ್ನು ಹೊಂದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ರನ್ನು ಸೋಲಿಸಿ ಹರಿವಂಶ್ ಅವರು ಹೊಸ ಇತಿಹಾಸ ಬರೆದಿದ್ದರು. ಸರಿ ಸುಮಾರು 41 ರಿಂದ 43ವರ್ಷಗಳ ಕಾಲ ಉಪಸಭಾಪತಿ ಸ್ಥಾನವನ್ನು ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ ಆಘಾತಕ್ಕೊಳಗಾಗಿತ್ತು. ಈಗ ಈ ಪ್ರತಿಷ್ಠಿತ ಸ್ಥಾನವನ್ನು ಮತ್ತೆ ಗಳಿಸಿ, ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಪರಮ ಗುರಿಯಾಗಿದೆ.

ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?

ಕಾಂಗ್ರೆಸ್ ಉನ್ನತ ಮಟ್ಟದ ಸಭೆ
ಈ ವಾರದ ಆರಂಭದಲ್ಲಿ ಹಿರಿಯ ಮುಖಂಡರೆಲ್ಲ ಒಗ್ಗೂಡಿ ಲೋಕಸಭೆ ಉಪಸಭಾಪತಿ ಸ್ಥಾನದ ಬಗ್ಗೆ ಚರ್ಚೆ ನಡೆಸಿದರು. ಗುಲಾಂ ನಬಿ ಅಜಾದ್, ಆನಂದ್ ಶರ್ಮ, ಮನೀಶ್ ತಿವಾರಿ ಸೇರಿದಂತೆ ಇತ್ತೀಚೆಗೆ ಬಂಡಾಯ ಬಾವುಟ ಹಾರಿಸಿದ್ದವರೆಲ್ಲರೂ ಒಂದುಗೂಡಿದ್ದು ನೋಡಿದರೆ, ಉಪಸಭಾಪತಿ ಸ್ಥಾನವನ್ನು ಗಳಿಸಲು ಕಾಂಗ್ರೆಸ್ ಭಾರಿ ರಣತಂತ್ರ ಹೂಡುತ್ತಿದೆ ಎನಿಸುತ್ತದೆ.

ವಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್

ವಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್

ಕಾಂಗ್ರೆಸ್ ಉನ್ನತ ಮಟ್ಟದ ಸಭೆ ಈ ವಾರದ ಆರಂಭದಲ್ಲಿ ಹಿರಿಯ ಮುಖಂಡರೆಲ್ಲ ಒಗ್ಗೂಡಿ ಲೋಕಸಭೆ ಉಪಸಭಾಪತಿ ಸ್ಥಾನದ ಬಗ್ಗೆ ಚರ್ಚೆ ನಡೆಸಿದರು. ಗುಲಾಂ ನಬಿ ಅಜಾದ್, ಆನಂದ್ ಶರ್ಮ, ಮನೀಶ್ ತಿವಾರಿ ಸೇರಿದಂತೆ ಇತ್ತೀಚೆಗೆ ಬಂಡಾಯ ಬಾವುಟ ಹಾರಿಸಿದ್ದವರೆಲ್ಲರೂ ಒಂದುಗೂಡಿದ್ದು ನೋಡಿದರೆ, ಉಪಸಭಾಪತಿ ಸ್ಥಾನವನ್ನು ಗಳಿಸಲು ಕಾಂಗ್ರೆಸ್ ಭಾರಿ ರಣತಂತ್ರ ಹೂಡುತ್ತಿದೆ ಎನಿಸುತ್ತದೆ.

ವಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್ ಹರಿವಂಶ್ ವಿರುದ್ಧ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ವಿಪಕ್ಷಗಳನ್ನು ಒಗ್ಗೂಡಿಸುತ್ತಿದೆ. ಮೇಲ್ಮನೆಯಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಬಿಜೆಪಿಯೇತರ ಪಕ್ಷಗಳನ್ನು ಸೆಳೆಯತೊಡಗಿದೆ.

ಹರಿವಂಶ್ ಮತ್ತೆ ಕಣಕ್ಕೆ

ಹರಿವಂಶ್ ಮತ್ತೆ ಕಣಕ್ಕೆ

ಬುಧವಾರದಂದು ನಾಮಪತ್ರ ಸಲ್ಲಿಸಿರುವ ಹರಿವಂಶ್ ಅವರು ಪುನಾರಾಯ್ಕೆಯಾಗುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎನ್ಡಿಎಗೆ ರಾಜ್ಯಸಭೆಯಲ್ಲಿ ಇನ್ನೂ ಪೂರ್ಣ ಬಹುಮತವಿರದಿದ್ದರೂ ಬಿಜೆಪಿ ನೇತೃತ್ವದ ಎನ್ಡಿಎ ಈ ಬಾರಿಯೂ ಹರಿವಂಶ್ ಉಪಸಭಾಪತಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದೆ.

ಇನ್ನೊಂದೆಡೆ, ಬಿಜೆಪಿ ವಿರೋಧಿ ಮನೋಭವವುಳ್ಳ ಎಲ್ಲಾ ರಾಜ್ಯಸಭಾ ಸದಸ್ಯರನ್ನು ಒಗ್ಗೂಡಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ್ದ 23 ಭಿನ್ನಮತೀಯರು ಕೂಡಾ ಕಾಂಗ್ರೆಸ್ ಆಂತರಿಕ ತಿಕ್ಕಾಟ ಮರೆತು ಮೋದಿ ಸರ್ಕಾರದ ವಿರುದ್ಧ ಈ ಚುನಾವಣೆಯಲ್ಲಿ ಗೆಲುವು ದಾಖಲಿಸುವತ್ತ ಕಾರ್ಯತಂತ್ರ ರೂಪಿಸಲು ನೆರವಾಗಲು ಸಜ್ಜಾಗಿದ್ದಾರೆ.

ರಾಜ್ಯಸಭೆ ನೂತನ ಉಪಸಭಾಪತಿಯಾಗಿ ಹರಿವಂಶ ಸಿಂಗ್ ಆಯ್ಕೆರಾಜ್ಯಸಭೆ ನೂತನ ಉಪಸಭಾಪತಿಯಾಗಿ ಹರಿವಂಶ ಸಿಂಗ್ ಆಯ್ಕೆ

ಪೂರ್ಣ ಬಹುಮತ ಯಾವ ಪಕ್ಷಕ್ಕೂ ಇಲ್ಲ

ಪೂರ್ಣ ಬಹುಮತ ಯಾವ ಪಕ್ಷಕ್ಕೂ ಇಲ್ಲ

ರಾಜ್ಯಸಭೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತವಿಲ್ಲದ ಕಾರಣ, ಎನ್ಡಿಎ ಹಾಗೂ ಯುಪಿಎ ಎರಡಕ್ಕೂ ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಅಗತ್ಯ. 245 ಸದಸ್ಯಬಲದ ರಾಜ್ಯಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರೆ 244 ಸ್ಥಾನದ ಲೆಕ್ಕಾಚಾರದಂತೆ ಗೆಲುವು ಸಾಧಿಸಲು ಅಭ್ಯರ್ಥಿಗೆ 123 ಮತಗಳು ಅಗತ್ಯ.

ಕಾಂಗ್ರೆಸ್ 40 ಸ್ಥಾನ ಹೊಂದಿದೆ. ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್(ಯುಪಿಎ) ಬಲ 63. ಯುಪಿಎಸ್ ಬೆಂಬಲಿತ ಡಿಎಂಕೆ 7, ಆರ್ ಜೆ ಡಿ 5, ಎನ್ ಸಿಪಿ 4, ಶಿವಸೇನಾ 3 ಹಾಗೂ ಇತರೆ 4. ಮೈತ್ರಿಕೂಟದಿಂದ ಹೊರಗಿರುವ 16 ಪಕ್ಷಗಳ ಸದಸ್ಯರ ಸಂಖ್ಯೆ 64. ಈ ಪೈಕಿ ತೃಣಮೂಲ ಕಾಂಗ್ರೆಸ್(ಟಿಎಂಸಿ) 13, ಬಿಜು ಜನತಾ ದಳ(ಬಿಜೆಡಿ) 9 ಹೊಂದಿವೆ.

ಮಿಕ್ಕಂತೆ ಪಕ್ಷಗಳ ಪಟ್ಟಿ ಇಲ್ಲಿದೆ

ಮಿಕ್ಕಂತೆ ಪಕ್ಷಗಳ ಪಟ್ಟಿ ಇಲ್ಲಿದೆ

ಸಮಾಜವಾದಿ ಪಕ್ಷ: 8 ತೆಲಂಗಾಣ ರಾಷ್ಟ್ರ ಸಮಿತಿ: 7 ವೈಎಸ್ಸಾರ್ ಕಾಂಗ್ರೆಸ್ ಪಕ್ಷ: 6 ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ ವಾದಿ) : 5 ಬಹುಜನ ಸಮಾಜ ಪಕ್ಷ: 4 ಆಮ್ ಆದ್ಮಿ ಪಕ್ಷ: 3 ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷ: 2 ಇದಲ್ಲದೆ, ಟಿಡಿಪಿ, ಜೆಡಿಎಸ್, ಸಿಪಿಐ, ಕೆಸಿ-ಎಂ, ಎನ್ ಪಿಎಫ್, ಎಸ್ ಡಿಎಫ್ ಹಾಗೂ ಎಲ್ ಜೆಡಿ ತಲಾ 1 ಸ್ಥಾನ ಹೊಂದಿವೆ.

ಮೈತ್ರಿಕೂಟದ ಹೊರಗಿನ ಪಕ್ಷಗಳ ಬೆಂಬಲ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಾದರೆ, ಉಪ ಸಭಾಪತಿ ಸ್ಥಾನ ಉಳಿಸಿಕೊಳ್ಳಬೇಕಾದರೆ, ಮೈತ್ರಿಕೂಟದ ಹೊರಗಿನ 12 ಪಕ್ಷಗಳ 60 ಸಂಸದ ಬೆಂಬಲ ಅತ್ಯಗತ್ಯ. ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಆಡಳಿತ ಪಕ್ಷದ ಪರವೇ ಮತ ಹಾಕುತ್ತಾ ಬಂದಿವೆ. ಹೀಗಾದರೆ, ಕಾಂಗ್ರೆಸ್ ಪಕ್ಷಕ್ಕೆ ಪರಿಸ್ಥಿತಿ ಕಷ್ಟವಾಗಲಿದೆ.

ಬಿಜೆಡಿಗಾಗಿ ಎನ್ಡಿಎ, ಯುಪಿಎ ಪೈಪೋಟಿ

ಬಿಜೆಡಿಗಾಗಿ ಎನ್ಡಿಎ, ಯುಪಿಎ ಪೈಪೋಟಿ

ಎನ್ಡಿಎ ಸ್ಥಿತಿ ಗತಿ: ರಾಜ್ಯಸಭೆಯಲ್ಲಿ ಎನ್ಡಿಎ 117 ಸ್ಥಾನವನ್ನು ಹೊಂದಿದೆ. ಇವರ ಜೊತೆಗೆ ಸ್ವಪನ್ ದಾಸ್ ಗುಪ್ತ, ರಂಜನ್ ಗೊಗಾಯಿ, ನರೇಂದ್ರ ಜಾಧವ್, ಎಂಸಿ ಮೇರಿ ಕೋಮ್ ರಂಥ ನಾಮಂಕಿತ ಸದಸ್ಯರು ಬೆಂಬಲಕ್ಕೆ ನಿಲ್ಲಲಿದ್ದಾರೆ. ಬಿಜೆಪಿ ಬಳಿಯೇ 87 ಸಂಸದರಿದ್ದಾರೆ, ಎಐಎಡಿಎಂಕೆ 9 ಹಾಗೂ ಜೆಡಿಯು 5.

ಬಿಜೆಡಿಗಾಗಿ ಎನ್ಡಿಎ, ಯುಪಿಎ ಪೈಪೋಟಿ: ಬಿಜೆಡಿ ನವೀನ್ ಪಟ್ನಾಯಕ್ ಅವರ ಬೆಂಬಲ ಕೋರಲು ಕಾಂಗ್ರೆಸ್ ತಡ ಮಾಡಿಬಿಟ್ಟಿದೆ. ಪ್ರಧಾನಿ ಮೋದಿ ಅವರು ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿಸಿ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ. 9 ಸದಸ್ಯರನ್ನು ಹೊಂದಿರುವ ಬಿಜೆಡಿ ಸೆಳೆದರೆ ಉಳಿದ ಪಕ್ಷಗಳನ್ನು ಸೆಳೆಯುವುದು ಸುಲಭ ಎಂಬ ಎಣಿಕೆಯಲ್ಲಿ ಕಾಂಗ್ರೆಸ್ ಇನ್ನೂ ಲೆಕ್ಕಾಚಾರದಲ್ಲಿದೆ.

Recommended Video

IPL ನಲ್ಲಿ ಈ ಟೀಮ್ ಗೆಲ್ಲೋದು ಪಕ್ಕಾ ಅಂತೆ..! | Brett Lee | Oneindia Kannada
ಹರಿವಂಶ್ ಗೆ 6 ಮತಗಳು ಸಾಕು?

ಹರಿವಂಶ್ ಗೆ 6 ಮತಗಳು ಸಾಕು?

ಎನ್ಡಿಎ ಅಭ್ಯರ್ಥಿ ಹರಿವಂಶ್ ಅವರು ಕನಿಷ್ಠ 6 ಮತಗಳನ್ನು ಪಡೆದರೆ ಸಾಕು, ವೈಎಸ್ಸಾರ್ ಕಾಂಗ್ರೆಸ್ ಬೆಂಬಲ ನಿಂತರೆ ಸಾಕೆನಿಸುತ್ತದೆ. ಪುನಾರಾಯ್ಕೆಯಾದರೆ 6 ವರ್ಷಗಳ ಪೂರ್ಣಾವಧಿಗೆ ಉಪ ಸಭಾಪತಿಯಾಗಿ ಕಾರ್ಯ ನಿರ್ವಹಿಸಬಹುದು. 2018ರಲ್ಲಿ ಕಾಂಗ್ರೆಸ್ಸಿನ ಬಿಕೆ ಹರಿಪ್ರಸಾದ್ 105 ಮತ ಗಳಿಸಿದರೆ, ಎನ್ಡಿಎ ಅಭ್ಯರ್ಥಿ ಹರಿವಂಶ್ 125 ಮತ ಪಡೆದು ಜಯಗಳಿಸಿದ್ದರು. ನಾಲ್ವರು ಕಾಂಗ್ರೆಸ್ ಸಂಸದರು ಎರಡು ಬಾರಿ ಮತ ಚಲಾಯಿಸಿದ್ದರಿಂದ ಕುಲಗೆಟ್ಟ ಮತಗಳು ಎಂದು ಪರಿಗಣಿಸಲಾಗಿತ್ತು.

English summary
Rajya Sabha deputy chairperson: Ever since 1977 Congress had the post of the Rajya Sabha deputy chairperson for 41 of 43 years. But with few days ahead Congress find hard to reclaim the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X