ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Publictv Exit Poll : ಆರ್. ಆರ್. ನಗರದಲ್ಲಿ ಮುನಿರತ್ನ ಗೆಲುವು

|
Google Oneindia Kannada News

ಬೆಂಗಳೂರು, ನವೆಂಬರ್ 07: ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲವು ಸಾಧಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

Recommended Video

Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada

ನವೆಂಬರ್ 3ರಂದು ಆರ್. ಆರ್. ನಗರ ಕ್ಷೇತ್ರದ ಉಪ ಚುಣಾವಣೆ ನಡೆದಿತ್ತು. ಕೇವಲ ಶೇ 45.24ರಷ್ಟು ಮತದಾನವಾಗಿತ್ತು. ಇದರಿಂದಾಗಿ ಯಾರಿಗೆ ಗೆಲವು ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿಯ ಮುನಿರತ್ನ ಗೆಲುವು ಸಾಧಿಸಲಿದ್ದಾರೆ ಎಂದು ಶನಿವಾರದ ಸಮೀಕ್ಷಾ ವರದಿಗಳು ಹೇಳಿವೆ.

Exit Poll : ಆರ್. ಆರ್. ನಗರದಲ್ಲಿ ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ Exit Poll : ಆರ್. ಆರ್. ನಗರದಲ್ಲಿ ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ

ಸಿ-ವೋಟರ್, ಕನ್ನಡದ ಪಬ್ಲಿಕ್ ಟಿವಿ ಮತ್ತು ರಾಜ್ಯದ ಗುಪ್ತಚರ ಇಲಾಖೆ ನಡೆಸಿದ ಸಮೀಕ್ಷೆಗಳಲ್ಲಿ ಬಿಜೆಪಿ ಪರವಾದ ವರದಿಗಳು ಬಂದಿವೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದರೂ ಅಂತಿಮವಾಗಿ ಬಿಜೆಪಿಗೆ ಜಯ ಎನ್ನುತ್ತಿವೆ ಸಮೀಕ್ಷೆಯ ವರದಿಗಳು.

Sira Exit Poll Results; ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿಗೆ ಗೆಲುವು Sira Exit Poll Results; ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿಗೆ ಗೆಲುವು

ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್‌ಗಳಲ್ಲಿ ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯ ವರದಿಗಳು ಶನಿವಾರ ಪ್ರಕಟವಾಗಿವೆ. ಆರ್. ಆರ್. ನಗರದಲ್ಲಿ 4,62,201 ಮತದಾರರು ಇದ್ದರು. ಈ ಪೈಕಿ 2,09,333 ಜನರು ಮತದಾನವನ್ನು ಮಾಡಿದ್ದರು.

RR Nagar exit poll result 2020; ಮುನಿರತ್ನಗೆ ಗೆಲುವುRR Nagar exit poll result 2020; ಮುನಿರತ್ನಗೆ ಗೆಲುವು

ಪಬ್ಲಿಕ್ ಟಿವಿ ಸಮೀಕ್ಷೆ ವರದಿ

ಪಬ್ಲಿಕ್ ಟಿವಿ ಸಮೀಕ್ಷೆ ವರದಿ

ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಶೇ 48ರಷ್ಟು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶೇ 40ರಷ್ಟು, ಜೆಡಿಎಸ್‌ನ ಕೃಷ್ಣಮೂರ್ತಿ ಶೇ 11ರಷ್ಟು ಮತಗಳನ್ನು ಪಡೆಯಲಿದ್ದಾರೆ. ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಇತರ ಅಭ್ಯರ್ಥಿಗಳು ಶೇ 1ರಷ್ಟು ಮತಗಳನ್ನು ಪಡೆಯಲಿದ್ದಾರೆ.

ಗುಪ್ತಚರ ಇಲಾಖೆ ವರದಿ

ಗುಪ್ತಚರ ಇಲಾಖೆ ವರದಿ

ಆರ್. ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಶೇ 47ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ಹೇಳಿದೆ. ಕಾಂಗ್ರೆಸ್‌ ಶೇ 37, ಜೆಡಿಎಸ್‌ ಶೇ 15ರಷ್ಟು ಮತಗಳನ್ನು ಪಡೆಯಲಿದ್ದಾರೆ. ಇತರ ಅಭ್ಯರ್ಥಿಗಳು ಶೇ 1ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಹೇಳಿದೆ.

ಸಿ-ವೋಟರ್ ಸಮೀಕ್ಷೆ ಫಲಿತಾಂಶ

ಸಿ-ವೋಟರ್ ಸಮೀಕ್ಷೆ ಫಲಿತಾಂಶ

ಆರ್. ಆರ್. ನಗರ ಕ್ಷೇತ್ರದ ಸಿ-ವೋಟರ್ ಫಲಿತಾಂಶವನ್ನು ಟಿವಿ 9 ಪ್ರಕಟಿಸಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಶೇ 37.8ರಷ್ಟು, ಕಾಂಗ್ರೆಸ್‌ನ ಹೆಚ್. ಕುಸುಮಾ ಶೇ 31.1ರಷ್ಟು, ಜೆಡಿಎಸ್‌ನ ವಿ. ಕೃಷ್ಣಮೂರ್ತಿ ಶೇ 14ರಷ್ಟು ಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇತರ ಅಭ್ಯರ್ಥಿಗಳು ಶೇ 17.2ರಷ್ಟು ಮತಗಳನ್ನು ಪಡೆಯಲಿದ್ದಾರೆ.

ಮುನಿರತ್ನರಿಂದ ಗೆಲುವು

ಮುನಿರತ್ನರಿಂದ ಗೆಲುವು

ಕ್ಷೇತ್ರ ಪುನರ್ ವಿಂಗಡನೆ ಬಳಿಕ ಆರ್. ಆರ್. ನಗರ ಕ್ಷೇತ್ರದಲ್ಲಿ ನಡೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ಗೆದ್ದಿಲ್ಲ. ಇದಕ್ಕೆ ಕಾರಣ ಮುನಿರತ್ನ, ಕಾಂಗ್ರೆಸ್‌ನಿಂದ ಮುನಿರತ್ನ ಅವರು 2013, 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರು ಬಿಜೆಪಿ ಇಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಗೆದ್ದರೆ ಅದಕ್ಕೆ ಕಾರಣವೂ ಮುನಿರತ್ನ ಆಗಲಿದ್ದಾರೆ.

English summary
RR Nagar by election exit Poll Results 2020 in Kannada: Public TV news channel exit poll result of the RR Nagar. Election result will be announced on November 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X