ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ವಿಮಾನ ವಿಶೇಷ: ಫ್ರಾನ್ಸಿನಿಂದ ಬಂದ ಜೆಟ್ ರಫೇಲ್

|
Google Oneindia Kannada News

ಕೊರೊನಾ ವೈರಸ್ ಭೀತಿಯಿಂದಾಗಿ ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳ ವಿತರಣೆಯನ್ನು ಕೆಲ ದಿನಗಳ ಕಾಲ ಮುಂದೂಡಲಾಗಿತ್ತು. ಭಾರತೀಯ ವಾಯುಸೇನೆಗೆ ಫ್ರಾನ್ಸ್ ನಿಂದ ರಫೇಲ್ ವಿಮಾನಗಳು ಜುಲೈ 29ರಂದು ಎಂದು ಭಾರತೀಯ ವಾಯು ಸೇನೆ(ಐಎಎಫ್) ಅಧಿಕೃತ ಹೇಳಿಕೆ ನೀಡಿದೆ. ಅಂಬಾಲಾದ ವಾಯುನೆಲೆಯಲ್ಲಿ ಜುಲೈ 29ರಂದು ಪ್ರತಿಕೂಲ ಹವಾಮಾನ ಇರದಿದ್ದರೆ 5 ರಫೇಲ್ ಯುದ್ಧ ವಿಮಾನ ಹಾರಾಟ ಕಾಣಬಹುದು, ಮುಂದಿನ ಹಂತದ ಪೂರೈಕೆ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ಐಎಎಫ್ ಹೇಳಿದೆ.

Recommended Video

Helina Anti tank Missile, Indian Army | Oneindia Kannada

ಫ್ರಾನ್ಸಿನ ಡಸಾಲ್ಟ್​ಏವಿಯೇಷನ್ ​ಸಂಸ್ಥೆ ನಿರ್ಮಿತ 36 ರಫೇಲ್​ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಈ ಮೂಲಕ ರಷ್ಯಾ ನಿರ್ಮಿತ ಯುದ್ಧ ವಿಮಾನಗಳ ಬಳಕೆ ಕಡಿಮೆಯಾಗಲಿವೆ. ಸರ್ಕಾರ ಅತ್ಯಾಧುನಿಕ ವ್ಯವಸ್ಥೆಯುಳ್ಳ ಯುದ್ಧ ವಿಮಾನಗಳು ಮತ್ತಿತರ ಶಸ್ತ್ರಾಸ್ತ್ರಗಳ ಖರೀದಿ ಜಾರಿಯಲ್ಲಿದೆ ಎಂದು ಭಾರತೀಯ ವಾಯುಸೇನೆ ಹೇಳಿದೆ.

58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?

ಮೋದಿ ನೇತೃತ್ವದ 1.0 ಸರಕಾರವು126 ಯುದ್ಧ ವಿಮಾನ ಖರೀದಿಗೆ ಮುಂದಾಗಿತ್ತು. ಆದರೆ ದುಬಾರಿ ಆಗುತ್ತದೆ ಎಂಬ ಕಾರಣಕ್ಕೆ ಅದಕ್ಕೂ ಮುಂಚೆ ಯುಪಿಎ ಮಾಡಿಕೊಂಡಿದ್ದ 126 ರಫೇಲ್ ಖರೀದಿ ಒಪ್ಪಂದ ತೀರ್ಮಾನದಿಂದ ಹಿಂದೆ ಸರಿಯಿತು. ಹೀಗೆ ಖರೀದಿ ಮಾಡಬೇಕು ಅಂತಿದ್ದ ಜೆಟ್ ನ ಸಂಖ್ಯೆಯು ಕಡಿಮೆಯಾಗಿ 36ಕ್ಕಿಳಿದಿದೆ.

36 ರಫೇಲ್ ಯುದ್ಧ ವಿಮಾನ ವ್ಯವಹಾರ

36 ರಫೇಲ್ ಯುದ್ಧ ವಿಮಾನ ವ್ಯವಹಾರ

36 ರಫೇಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ. ಅಂದಿನ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.

150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್

150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು 50 ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿತ್ತು. ಈಗ 150 ಕಿ.ಮೀ ವ್ಯಾಪ್ತಿಯ ತನಕ ಟಾರ್ಗೆಟ್ ಇಡಬಹುದಾಗಿದೆ. ಈ ಮೂಲಕ ಪಾಕಿಸ್ತಾನ ಎಲ್ಲಾ ಭಾಗಗಳು, ಉತ್ತರ ಹಾಗೂ ಈಶಾನ್ಯ ಗಡಿಭಾಗದ ಎಲ್ಲಾ ಭಾಗಗಳನ್ನು ಕ್ರಮಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ್ದಂತಾಗುತ್ತದೆ.

ರಾಡಾರ್ ಕಣ್ತಪ್ಪಿಸುವ ಸಾಮರ್ಥ್ಯ ಹೊಂದಿದೆ.

ರಾಡಾರ್ ಕಣ್ತಪ್ಪಿಸುವ ಸಾಮರ್ಥ್ಯ ಹೊಂದಿದೆ.

ವಾಯು ದಾಳಿ, ಆಕಾಶದಿಂದ ಭೂಮಿ ಮೇಲೆ ದಾಳಿ ಮತ್ತು ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಜೆಟ್ ಇದು. ಮತ್ತು ಇದರಲ್ಲಿನ ಎಲೆಕ್ಟ್ರಾನಿಕ್ ವ್ಯವಸ್ಥೆಯು ರಾಡಾರ್ ಅನ್ನು ಕಣ್ತಪ್ಪಿಸುವ ಸಾಮರ್ಥ್ಯ ಕೂಡ ಹೊಂದಿದೆ.

ಭಾರತೀಯ ವಾಯುಸೇನೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಫ್ರಾನ್ಸಿನಿಂದ ಮೆಟೆಯೊರ್(Meteor) ಕ್ಷಿಪಣಿ, ಸ್ಕಾಲ್ಪ್ ಸೇರಿದಂತೆ ಬಿಡಿಭಾಗಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಭಾರತ ಪಡೆಯಲಿದೆ. ಈ ಅತ್ಯಾಧುನಿಕ ಕ್ಷಿಪಣಿಗಳು 150ಕಿ.ಮೀಗೂ ದೂರದ ವ್ಯಾಪ್ತಿ Beyond Visual Range (BVR) ಯಿಂದಿದೆ.

ಯುದ್ಧ ವಿಮಾನ ವೇಗ

ಯುದ್ಧ ವಿಮಾನ ವೇಗ

ವೇಗ:(ತಾಪಮಾನ. 20 °ಸಿ (68 ಡಿಗ್ರಿ ಫ್ಯಾರನ್ ಹೀಟ್) ಸಮುದ್ರ ಮಟ್ಟದ ಗಾಳಿಯಲ್ಲಿ, ಶಬ್ದದ ವೇಗ ಸುಮಾರು 343 ಮೀ/ಸೆ. (767 m/ph ಎಮ್ಪಿಎಚ್ 1,230 ಕಿಮೀ/ಗಂ) ಆಗಿದೆ)

ಹಗಲು ಮತ್ತು ರಾತ್ರಿ ಆರಂಭದ ಜಿಗಿತ (ಟೇಕ್ ಆಫ್ಸ್) ಮತ್ತು ಇಳಿಯುವಿಕೆಗಳ ಪ್ರದರ್ಶನಗಳಲ್ಲಿ ಮತ್ತು 13,000 ಮೀಟರ್ (42,000 ಅಡಿ). ಎತ್ತರದಲ್ಲಿ 2,450 ಕಿಮೀ / ಗಂ 1,322.9 ಕಿಲೋನ್ಯೂಟನ್)(;1,522 ಎಮ್ಪಿಎಚ್ (mph); ಇದು ಮ್ಯಾಕ್ 2 ವೇಗವನ್ನು ತಲುಪಿತು

ಭಾರತದ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಲೇ ಆಕಾಶದಲ್ಲಿ 150 ಕಿ.ಮೀ. ಮತ್ತು ಆಕಾಶದಿಂದ ಭೂಮಿಗೆ 300 ಕಿ.ಮೀ.ಗಳಷ್ಟು ದೂರದವರೆಗೆ ಕ್ಷಿಪಣಿ ದಾಳಿ ನಡೆಸುವ ರಫೇಲ್‌ಗಳ ಸಾಮರ್ಥ್ಯಕ್ಕೆ ಭಾರತ ಉಪಖಂಡದಲ್ಲಿ ಸದ್ಯಕ್ಕೆ ಸರಿಸಾಟಿಯಾವುದೂ ಇಲ್ಲ.

English summary
Rafale Jet Specifications, Top Speed, Price, Features, Cockpit - Everything You Know About Rafale Jets which are flying from France to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X