ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Quora ಪ್ರಶ್ನೋತ್ತರ ವೆಬ್ ತಾಣ ಇದೀಗ ಕನ್ನಡದಲ್ಲೂ ಲಭ್ಯ

|
Google Oneindia Kannada News

Q&A (ಪ್ರಶ್ನೆ&ಉತ್ತರ) ಪ್ಲಾಟ್‌ಫಾರ್ಮ್ Quora ತನ್ನ ಸೇವೆಯನ್ನು ಕನ್ನಡದಲ್ಲಿ ಬಿಡುಗಡೆ ಮಾಡಿದೆ. Quora ಅನ್ನು 2009 ರಲ್ಲಿ Facebook ನ ಮಾಜಿ ಸಿಟಿಒ ಆಡಮ್ ಡಿ ಏಂಜೆಲೊ ಸ್ಥಾಪಿಸಿದರು. ಪ್ರಪಂಚದ ಜ್ಞಾನವನ್ನು ಹಂಚುವುದು ಮತ್ತು ಬೆಳೆಸುವುದು Quora ದ ಉದ್ದೇಶವಾಗಿದೆ. ಪ್ರಸ್ತುತ ವೇದಿಕೆಯು ಪ್ರತಿ ತಿಂಗಳು ಇಪ್ಪತ್ನಾಲ್ಕು ಭಾಷೆಗಳಾದ್ಯಂತ 300 ಲಕ್ಷಕ್ಕಿಂತ ಹೆಚ್ಚು ಅನನ್ಯ ಸಂದರ್ಶಕರನ್ನು ಹೊಂದಿದೆ. ಯಶಸ್ವಿ ಬೀಟಾ ಹಂತದ ನಂತರ, ವೆಬ್ ಅಥವಾ ಮೊಬೈಲ್ ಆಪ್ ಮೂಲಕ ಯಾರಾದರೂ ಸೇರ್ಪಡೆಗೊಳ್ಳಲು ಇದೀಗ Quora ಕನ್ನಡದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿದೆ.

ಮೌಂಟೇನ್ ವ್ಯೂ, ಡಿಸೆಂಬರ್ 9, 2019 - Q&A (ಪ್ರಶ್ನೆ&ಉತ್ತರ) ಪ್ಲಾಟ್‌ಫಾರ್ಮ್ Quora ಕನ್ನಡದಲ್ಲಿ ಬಿಡುಗಡೆಯನ್ನು ಘೋಷಿಸಿದೆ. Quora ಇದೀಗ ಜಗತ್ತನ್ನು ಉತ್ತಮವಾಗಿ ತಿಳಿದುಕೊಳ್ಳಲು ಯಾರಾದರೂ ಪ್ರಶ್ನೆಯನ್ನು ಕೇಳಲು, ಅವರ ತಿಳುವಳಿಕೆಯನ್ನು ಹಂಚಿಕೊಳ್ಳಲು ಮತ್ತು ಇತರರಿಂದ ತಿಳಿದುಕೊಳ್ಳಲು ಕನ್ನಡದಲ್ಲಿ ಲಭ್ಯವಿದೆ. Quora 23 ಇತರ ಭಾಷೆಗಳಲ್ಲಿಯೂ ಸಹ ಲಭ್ಯವಿದೆ.

ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?

ವಿಶ್ವದ ತಿಳುವಳಿಕೆಯನ್ನು ಹಂಚಿಕೊಳ್ಳುವುದು ಮತ್ತು ಬೆಳೆಸುವುದು Quoraದ ಉದ್ದೇಶವಾಗಿದೆ. ಪ್ರಪಂಚದಲ್ಲಿನ ಹೆಚ್ಚಿನ ತಿಳುವಳಿಕೆಯನ್ನು ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಪ್ರವೇಶಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ Quora ಜನರು ಲಕ್ಷಾಂತರ ವಿಷಯಗಳಾದ್ಯಂತ ತಮಗೆ ತಿಳಿದಿರುವುದನ್ನು ಹಂಚಿಕೊಳ್ಳಬಹುದಾದ ವೇದಿಕೆಯನ್ನು ನಿರ್ಮಿಸುತ್ತಿದೆ.

ಜಗತ್ತಿನಾದ್ಯಂತ ಜನರು Quoraವನ್ನು ಬಳಸುತ್ತಾರೆ

ಜಗತ್ತಿನಾದ್ಯಂತ ಜನರು Quoraವನ್ನು ಬಳಸುತ್ತಾರೆ

ಇದು ಪ್ರತಿ ತಿಂಗಳು 300 ಲಕ್ಷಕ್ಕಿಂತ ಹೆಚ್ಚು ಅನನ್ಯ ಸಂದರ್ಶಕರನ್ನು (unique visitors) ತಲುಪುವ ಮಟ್ಟಕ್ಕೆ ಬೆಳೆದಿದೆ. ಜಗತ್ತಿನಾದ್ಯಂತ ಜನರು Quoraವನ್ನು ಬಳಸುತ್ತಾರೆ. ವಾಸ್ತವವಾಗಿ, ಈ ಬಳಕೆದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಅಮೇರಿಕಾದ ಹೊರಗಿನವರು. Quoraವನ್ನು ಪ್ರಾರಂಭಿಸಿದಾಗಿನಿಂದ, ವೇದಿಕೆಯು ಪ್ರಮುಖ ವ್ಯಕ್ತಿಗಳು ಮತ್ತು ತಜ್ಞರನ್ನು ಆಕರ್ಷಿಸಿ, Quoraದಲ್ಲಿ ಜನರು ಕೇಳುವ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿದೆ ಹಾಗೂ ಮೊದಲು ಲಭ್ಯವಿಲ್ಲದ ತಿಳುವಳಿಕೆಯನ್ನು ಹಂಚಿಕೊಂಡಿದೆ. ಸೆಲೆಬ್ರಿಟಿಗಳಾದ ಬರಾಕ್ ಒಬಾಮಾ, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಮತ್ತು ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ರಾಹುಲ್ ಶ್ರೀವಾಸ್ತವ Quoraದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಸಿಇಒ ಮತ್ತು Quora ಸಂಸ್ಥಾಪಕರ ನುಡಿ

ಸಿಇಒ ಮತ್ತು Quora ಸಂಸ್ಥಾಪಕರ ನುಡಿ

"ನಮ್ಮ ಉದ್ದೇಶ ವಿಶ್ವದ ತಿಳುವಳಿಕೆಯನ್ನು ಹಂಚಿಕೊಳ್ಳುವುದು ಮತ್ತು ಬೆಳೆಸುವುದಾಗಿದೆ. ನಾವು ಉತ್ತಮ ಗುಣಮಟ್ಟದ ವಿಷಯದ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ ಮತ್ತು ಅಮೇರಿಕವನ್ನು ಹೊರತುಪಡಿಸಿ ಇತರ ದೇಶಗಳಿಂದ ನೋಂದಾಯಿಸುತ್ತಿರುವ ಮತ್ತು ಕೊಡುಗೆ ನೀಡುತ್ತಿರುವ ಎಲ್ಲಾ ಜನರನ್ನು ನೋಡುತ್ತಿರುವುದು ಆಶ್ಚರ್ಯಕರವಾಗಿದೆ. ಇಂಗ್ಲಿಷ್‌ನಲ್ಲಿ Quora ಬಳಸುತ್ತಿರುವ ಕನ್ನಡ-ಮಾತನಾಡುವ ಜನರಿದ್ದಾರೆ ಮತ್ತು ಈಗ ನಾವು ಕನ್ನಡದಲ್ಲಿ Quoraವನ್ನು ಪ್ರಾರಂಭಿಸುತ್ತಿದ್ದೇವೆ, ಇದು ಕನ್ನಡದಲ್ಲಿ ಇನ್ನೂ ಅಧಿಕ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಸಿಇಒ ಮತ್ತು Quora ಸಂಸ್ಥಾಪಕ, ಆಡಮ್ ಡಿ ಏಂಜೆಲೊ ಹೇಳಿದ್ದಾರೆ.

ಅಕ್ಟೋಬರ್ ನಲ್ಲಿ ಬೀಟಾ ಆವೃತ್ತಿ

ಅಕ್ಟೋಬರ್ ನಲ್ಲಿ ಬೀಟಾ ಆವೃತ್ತಿ

ಅಕ್ಟೋಬರಿನಲ್ಲಿ, ಚಿಕ್ಕ ಜನರ ಗುಂಪಿನೊಂದಿಗೆ Quora ಕನ್ನಡದಲ್ಲಿ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕೇವಲ ಕೆಲವು ತಿಂಗಳಲ್ಲಿ, ವೈದ್ಯರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಗ್ರಾಫಿಕ್ ವಿನ್ಯಾಸಕರು, ಕಂಪನಿ ಸ್ಥಾಪಕರು, ಪತ್ರಕರ್ತರು ಮತ್ತು ಮನರಂಜಕರು ಮುಂತಾದ ವಿವಿಧ ಕ್ಷೇತ್ರಗಳ ವ್ಯಕ್ತಿಗಳು ಒದಗಿಸಿದ ಗುಣಮಟ್ಟದ ವಿಷಯದೊಂದಿಗೆ ವೇದಿಕೆ ಬೆಳೆದಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಫಾಸ್ಟ್ಯಾಗ್ ಎಂದರೇನು? ಇದನ್ನು ಅಳವಡಿಸಿಕೊಳ್ಳುವುದು ಹೇಗೆ?, 'ಕನ್ನಡಿಗ' ಅಂದರೆ ಯಾರು? ಕೇವಲ ಕನ್ನಡ ಮಾತೃಭಾಷೆ ಇರುವವರೋ ಅಥವಾ ಬೇರೆ ಮಾತೃಭಾಷೆಯಿದ್ದೂ ಕರ್ನಾಟಕದಲ್ಲಿ ವಾಸಿಸುತ್ತಿರುವರೆಲ್ಲರೂ ಕನ್ನಡಿಗರೋ?, ನ್ಯೂಟನ್‌ನ ಚಲನೆಯ ಎರಡನೇ ನಿಯಮವನ್ನು ವಿವರಿಸುವಿರಾ? ಮತ್ತು ಇತರೆ ವೈವಿಧ್ಯಮಯ ವಿಷಯಗಳ ಕುರಿತು ನಾವು ಈಗಾಗಲೇ ಚಿಂತನಾಶೀಲ ಉತ್ತರಗಳನ್ನು ನೋಡಿದ್ದೇವೆ.

Quora ಹೇಗೆ ಕಾರ್ಯನಿರ್ವಹಿಸುತ್ತದೆ

Quora ಹೇಗೆ ಕಾರ್ಯನಿರ್ವಹಿಸುತ್ತದೆ

Quoraದಲ್ಲಿ, ಜನರು ಯಾವುದೇ ವಿಷಯದ ಕುರಿತು ಪ್ರಶ್ನೆಗಳನ್ನು ಕೇಳಬಹುದು. Quora ಆ ಪ್ರಶ್ನೆಗಳನ್ನು ಅವರ ಸಂಬಂಧಿತ ಪರಿಣತಿ ಮತ್ತು ಅನುಭವಗಳ ಆಧಾರದ ಮೇಲೆ ಉತ್ತಮ ಗುಣಮಟ್ಟದ ಮತ್ತು ಉಪಯುಕ್ತ ಉತ್ತರಗಳನ್ನು ನೀಡುವ ಜನರಿಗೆ ವಿತರಿಸುತ್ತದೆ. Quoraದಲ್ಲಿ ಒಬ್ಬ ವ್ಯಕ್ತಿಯು ಉತ್ತರಗಳನ್ನು ಬರೆಯುವ ಮೂಲಕ, ವಿಷಯಗಳನ್ನು ಅನುಸರಿಸುವ ಮೂಲಕ ಮತ್ತು ಜನರನ್ನು ಅನುಸರಿಸುವ ಮೂಲಕ Quoraವನ್ನು ಹೆಚ್ಚು ಬಳಸಿದಂತೆ ಅವರ ಅನುಭವವನ್ನು ವೈಯಕ್ತೀಕರಿಸಲು ಸಾಧ್ಯವಾಗುತ್ತದೆ.

ವಿಶ್ವಾಸಾರ್ಹತೆ ಮುಖ್ಯವಾಗಲಿದೆ

ವಿಶ್ವಾಸಾರ್ಹತೆ ಮುಖ್ಯವಾಗಲಿದೆ

ವೇದಿಕೆಯಲ್ಲಿನ ಬರಹಗಾರರ ಗುಣಮಟ್ಟ, ಸಮುದಾಯದಲ್ಲಿ ಬರಹಗಾರರು ಇತರರಿಂದ ಪಡೆಯುವ ಪ್ರತಿಕ್ರಿಯೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವ ಉತ್ಪನ್ನದ ವೈಶಿಷ್ಟ್ಯಗಳ ಆಧಾರದ ಮೇಲೆ Quora ಪ್ರಶ್ನೆಗಳಿಗೆ ಒಳ್ಳೆಯ ಉತ್ತರಗಳನ್ನು ಒದಗಿಸಲು ಸಾಧ್ಯವಾಗುತ್ತದೆ. Quoraದಲ್ಲಿನ ಗುರುತುಗಳು ನೈಜ ಜಗತ್ತಿನಲ್ಲಿ ಜನರು ಯಾರು ಎಂಬುದರ ವಿಸ್ತರಣೆಯಾಗಿದೆ - Quoraದಲ್ಲಿ ನಿಮ್ಮ ನಿಜವಾದ ಹೆಸರನ್ನು ಬಳಸುವ ನೀತಿಯು ಸಮಗ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತರಗಳಲ್ಲಿ ಜನರು ಹೊಂದಿರುವ ನಂಬಿಕೆಯನ್ನು ಹೆಚ್ಚಿಸುತ್ತದೆ.

ಎಲ್ಲರೂ ನೋಂದಾಯಿಸಿಕೊಳ್ಳಬಹುದು

ಎಲ್ಲರೂ ನೋಂದಾಯಿಸಿಕೊಳ್ಳಬಹುದು

Quora "ಒಳ್ಳೆಯವರಾಗಿರಿ, ಗೌರವದಿಂದಿರಿ" ನಿಯಮವನ್ನು ಸಹ ಹೊಂದಿದ್ದು, Quora ಬಳಸುವಾಗ ಕನಿಷ್ಟ ಮಟ್ಟದ ನಾಗರಿಕತೆಯ ಅಗತ್ಯವಿರುತ್ತದೆ. ಸ್ಪ್ಯಾಮ್, ಕೃತಿ ಚೌರ್ಯ ಮತ್ತು ಟ್ರೋಲಿಂಗ್‌ನಂತಹ ನಿಮ್ಮ ಅನುಭವವನ್ನು ಇನ್ನಷ್ಟು ಹದಗೆಡಿಸುವ ವಿಷಯಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ನಾವು ತಂತ್ರಜ್ಞಾನವನ್ನು - ಯಂತ್ರ ಕಲಿಕೆ, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಮಾದರಿ-ಹೊಂದಾಣಿಕೆಯನ್ನು ಬಳಸುತ್ತೇವೆ. https://kn.quora.com ನಲ್ಲಿ ಅಥವಾ Quora ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಜನರು ನೋಂದಾಯಿಸಿಕೊಳ್ಳಬಹುದು.

Quora ಕುರಿತು

Quora ಕುರಿತು

ಕಂಪನಿಯನ್ನು 2009 ರಲ್ಲಿ ಸ್ಥಾಪಿಸಲಾಯಿತು. ಇದರ ಮೂಲ ಅಮೆರಿಕಾದ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿದೆ. ಇಂಗ್ಲಿಷ್‌ನಲ್ಲಿ ಆರಂಭಿಕ ಉತ್ಪನ್ನವನ್ನು ಮೊದಲ ಬಾರಿಗೆ 2010 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಅಂದಿನಿಂದ ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಆಡಮ್ ಡಿ ಏಂಜೆಲೊ Quora ದ ಸಿಇಒ ಮತ್ತು ಸ್ಥಾಪಕರಾಗಿದ್ದಾರೆ. Quoraದ ಮೊದಲು ಅವರು 2006-2008 ರವರೆಗೆ Facebookನ ಸಿಟಿಒ ಆಗಿದ್ದರು.

English summary
Question and Answer format popular website Quora has realeased its Kannada version.Quora is now available in more than 24 languages with 300 lakhs unique visitors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X