ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಸಂಗ್ರಾಮದ ನೆನಪು; ಕ್ವಿಟ್ ಇಂಡಿಯಾ ಚಳವಳಿ

|
Google Oneindia Kannada News

ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಆಗಸ್ಟ್ 8ರ 1942ರಲ್ಲಿ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅತಿ ಮಹತ್ವದ್ದು ಎಂದು ಇತಿಹಾಸ ಹೇಳುತ್ತದೆ.

ಭಾರತದ ಪಾಲಿಗೆ ಆಗಸ್ಟ್ ಅಂದರೆ ಕ್ರಾಂತಿಯ ತಿಂಗಳು. ಆಗಸ್ಟ್ 8 ನಾವು ಎಂದಿಗೂ ಮರೆಯಲಾಗದ ಕ್ರಾಂತಿಯ ದಿನ. ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ನಾವು ಎಚ್ಚರಿಕೆಯನ್ನು ಕೊಟ್ಟ ದಿನವಾಗಿವೆ. ದೇಶಕ್ಕೆ ಸ್ವತಂತ್ರ್ಯ ಸಿಕ್ಕಿದ್ದು ಸಹ ಆಗಸ್ಟ್ ತಿಂಗಳಿನಲ್ಲಿಯೇ.

ಕ್ವಿಟ್ ಇಂಡಿಯದಿಂದ ನ್ಯೂ ಇಂಡಿಯಾ: ಟ್ವಿಟ್ಟರ್ ನಲ್ಲಿ ಸಂಕಲ್ಪಕ್ವಿಟ್ ಇಂಡಿಯದಿಂದ ನ್ಯೂ ಇಂಡಿಯಾ: ಟ್ವಿಟ್ಟರ್ ನಲ್ಲಿ ಸಂಕಲ್ಪ

1942ರ ಆಗಸ್ಟ್ 8ರಂದು ಸಂಜೆ ಬಾಂಬೆಯ ಗ್ವಾಲಿಯರ್ ಕೆರೆ ಮೈದಾನದ ಸುತ್ತ ಸಾವಿರಾರು ಜನರು ಸೇರಿದ್ದರು. ಮಹಾತ್ಮ ಗಾಂಧಿ 'ಮಾಡು ಇಲ್ಲವೇ ಮಡಿ' ಎಂಬ ಕರೆಯನ್ನು ಆಗ ನೀಡಿದರು. ದೇಶಾದ್ಯಂತ ಈ ಕರೆ ಮಿಂಚಿನ ಸಂಚಾರ ಉಂಟು ಮಾಡಿತು. ಮರುದಿನ ಬೆಳಗ್ಗೆ ಗಾಂಧೀಜಿ ಬಂಧನವಾಯಿತು. ಕ್ವಿಟ್ ಇಂಡಿಯಾ ಕರೆ ಇಷ್ಟು ಪ್ರಭಾವ ಬೀರಲಿದೆ ಎಂದು ಬ್ರಿಟಿಷರು ಸಹ ಅಂದಾಜಿಸಿರಲಿಲ್ಲ. ನೆಹರೂ, ಸರ್ದಾರ್ ಪಟೇಲ್, ಮೌಲನ ಆಜಾದ್ ಸೇರಿದಂತೆ ದೇಶಾದ್ಯಂತ ಹಿರಿಯ, ಕಿರಿಯ ಸ್ವತಂತ್ರ್ಯ ಚಳವಳಿ ನಾಯಕರನ್ನು ಬಂಧಿಸಲಾಯಿತು.

Quit India Movement Anniversary Interesting Facts

ನಾಯಕರ ಬಂಧನದಿಂದಾಗಿ ಹೋರಾಟಗಾರರು ಆಕ್ರೋಶಗೊಂಡರು. ಪೊಲೀಸ್ ಠಾಣೆ, ಅಂಚೆ ಕಚೇರಿ, ರೈಲ್ವೆ ನಿಲ್ದಾಣಗಳ ಮೇಲೆ ದಾಳಿಗಳನ್ನು ಮಾಡಿದರು. ದೇಶಾದ್ಯಂತ ಹೋರಾಟದ ಕಿಚ್ಚು ಆಗಸ್ಟ್ 9ರಂದು ಜೋರಾಯಿತು. ರಾಮಮನೋಹರ ಲೋಹಿಯಾ, ಅಚ್ಯುತ್ ಪಟವರ್ಧನ್, ಅರುಣಾ ಅಸಫ್ ಅಲಿ ಮುಂತಾದವರು ಭೂಗತರಾದರು.

 Exclusive; ಸರ್ಕಾರಿ ದಾಖಲೆಗಳಿಲ್ಲದ ಮಹಾತ್ಮ ಗಾಂಧಿ ಬೇಳೂರಿನ ಭೇಟಿ Exclusive; ಸರ್ಕಾರಿ ದಾಖಲೆಗಳಿಲ್ಲದ ಮಹಾತ್ಮ ಗಾಂಧಿ ಬೇಳೂರಿನ ಭೇಟಿ

ಕ್ವಿಟ್ ಇಂಡಿಯಾ ಚಳವಳಿ ಬ್ರಿಟಿಷರ ವಿರುದ್ಧ ಭಾರತದ ಜನರನ್ನು ಒಗ್ಗೂಡಿಸಿತು. 1944ರಲ್ಲಿ ಮಹಾತ್ಮ ಗಾಂಧಿ ತಮ್ಮ ಹೋರಾಟವನ್ನು ಮುಂದುವರೆಸಿದರು ಮತ್ತು 21 ದಿನಗಳ ಉಪವಾಸವನ್ನು ಆರಂಭಿಸಿದರು. ಭಾರತ್ ಚೋಡೋ ಆಂದೋಲನ ಅಥವ 1942ರ ಆಗಸ್ಟ್ ಕ್ರಾಂತಿ ಭಾರತದಲ್ಲಿನ ಬ್ರಿಟಿಷರ ಆಡಳಿತ ಕೊನೆಗೊಳಿಸಲು ಕೊಟ್ಟ ಕರೆಯಾಗಿತ್ತು. ಜುಲೈ ತಿಂಗಳಿನಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕು ಎಂಬ ನಿರ್ಣಯವನ್ನು ಮಂಡನೆ ಮಾಡಿತು. ಆಗಸ್ಟ್ 8ರಂದು ಈ ಕುರಿತು ಕರೆಯನ್ನು ಗಾಂಧೀಜಿ ನೀಡಿದರು.

ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಹರಾಜುಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ಹರಾಜು

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಆಗಸ್ಟ್ 9ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಪ್ರತಿಧ್ವನಿಸಿತು. ಬ್ರಿಟಿಷರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವೆ ಘರ್ಷಣೆ ನಡೆಯಿತು. ಗಲಾಟೆ ವಿಕೋಪಕ್ಕೆ ಹೋಗಿ ಹಲವರನ್ನು ಜೀವಂತವಾಗಿ ಸುಟ್ಟು ಹಾಕಲಾಯಿತು. 1942ರ ಸೆಪ್ಟೆಂಬರ್ 27ರಂದು ಈಸೂರಿನ ವೀರಭದ್ರಶ್ವೇರ ದೇವಾಲಯ ಮೇಲೆ ಪ್ರತ್ಯೇಕ ಧ್ವಜ ಹಾರಿಸಲಾಯಿತು. ಈಸೂರು ಸ್ವತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಲಾಯಿತು.

'ಮಾಡು ಇಲ್ಲವೇ ಮಡಿ' ಎಂಬ ಗಾಂಧಿಜೀಯವರ ಕರೆಗೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಹಲವು ಮಂದಿ ಬೆಂಬಲ ನೀಡಿದರು. ಬ್ರಿಟಿಷರ ಜೊತೆಗಿನ ಹೋರಾಟದಲ್ಲಿ ಹಲವು ಮಂದಿ ಹುತಾತ್ಮರಾದರು. ಭಾರತ ಬ್ರಿಟೀಷರ ದಾಸ್ಯದಿಂದ ಹೊರಬರುವಲ್ಲಿ ಬಾಪು ಕೊಟ್ಟ ಕರೆ ಮಹತ್ವದ ಪಾತ್ರ ವಹಿಸಿತು. 1942ರಿಂದ 1947ರ ಕೇವಲ 5 ವರ್ಷದ ಅವಧಿಯಲ್ಲಿ ಭಾರತವು ಸ್ವಾತಂತ್ರ ಪಡೆಯಿತು.

ದೇಶದ ಅದ್ಬುತವಾದ ಇತಿಹಾಸದ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲ ಪೀಳಿಗೆಯ ಜವಾಬ್ದಾರಿಯಾಗಿದೆ. ಆ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿರುವವರನ್ನು ನೆನಪುಮಾಡಿಕೊಳ್ಳಬೇಕಿದೆ. 1857 ಹಾಗೂ 1947ರ ನಡುವಿನ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಂದಿ ದೇಶಕ್ಕಾಗಿ ಪ್ರಾಣ ಬಿಟ್ಟರು. ಈ ವೇಳೆ ಹಲವು ರೀತಿಯ ಏರಿಳಿತಗಳನ್ನು ದೇಶ ಕಂಡಿತು.

English summary
On August 8, 1942 historic Quit India Movement was launched by Mahatma Gandhi. Deman the end to the British rule in India. Quit India movement is said to be one of the most significant movements in the history of Indian freedom struggle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X