ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಲದಲ್ಲಿ ಎದೆಹಾಲುಣಿಸುವುದರ ಕುರಿತ ಸತ್ಯ ಮಿಥ್ಯಗಳು: ಡಾ. ರವ್ನೀತ್ ಜೋಶಿ

|
Google Oneindia Kannada News

ಶಿಶುವಿಗೆ ಎದೆಹಾಲೇ ಅಮೃತ, ಮಗು ಹುಟ್ಟಿ ಸುಮಾರು 6 ತಿಂಗಳ ಕಾಲ ಎದೆಹಾಲಿನ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಎದೆಹಾಲಿನಲ್ಲಿ ಸಿಗುವ ರೋಗನಿರೋಧಕ ಶಕ್ತಿ ಬೇರೆ ಯಾವುದೇ ಹಾಲಿನಲ್ಲೂ ಪಡೆಯಲು ಸಾಧ್ಯವಿಲ್ಲ.

ಹೀಗಾಗಿ ಮಗುವಿಗೆ ಎದೆ ಹಾಲು ನೀಡಲೇಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ, ಆದರೆ ಕೊರೊನಾ ಸಮಯವು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತುಂಬಾ ಕಠಿಣವಾಗಿದೆ.

ಹಾಗೆಯೇ ಕೊರೊನಾ ಸೋಂಕಿತ ತಾಯಂದಿರು ಮಗುವಿಗೆ ಎದೆಹಾಲು ನೀಡಬಹುದಾ?, ಒಂದೊಮ್ಮೆ ಕೊರೊನಾ ಸೋಂಕಿತ ತಾಯಿಯಿಂದ ಮಗುವಿಗೆ ಹಾಲಿನ ಮೂಲಕ ಸೋಂಕು ತಗುಲುವ ಸಾಧ್ಯತೆ ಇದೆಯೇ?, ಕೊರೊನಾ ಸೋಂಕಿತ ತಾಯಿ ಮಗುವನ್ನು ಎತ್ತಿಕೊಂಡರೆ ಅಥವಾ ಹಾಲುಣಿಸಿದರೆ ಸೋಂಕು ತಗುಲಬಹುದೇ? ಹೀಗೆ ಹತ್ತು ಹಲವು ವಿಚಾರಗಳು ಜನರ ಮನಸ್ಸಿನಲ್ಲಿದೆ.

ಇದಕ್ಕೆ ಮಣಿಪಾಲ್ ಆಸ್ಪತ್ರೆಯ ಎಂ.ಡಿ. ಮಕ್ಕಳ ತಜ್ಞೆ ಡಾ. ರವ್ನೀತ್ ಜೋಶಿ ಉತ್ತರ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಸಾಕಷ್ಟು ತಾಯಂದಿರು ಅಥವಾ ಮಹಿಳೆಯರಿಗೆ ಒಂದು ತಪ್ಪಾದ ಕಲ್ಪನೆ ಇದೆ. ಕೊರೊನಾ ಬಂದಿದ್ದಲ್ಲಿ ಶಿಶುಗಳಿಗೆ ಎದೆ ಹಾಲು ಉಣಿಸಬಾರದು ಎಂಬ ಅಭಿಪ್ರಾಯವಿದೆ. ಆದರೆ ಇದು ಸರಿಯಾದ ಮಾಹಿತಿ ಅಲ್ಲ.

ಬದಲಾಗಿ ಎದೆ ಹಾಲಿನಿಂದ ಯಾವುದೇ ಮಗುವಿಗೆ ಕೊರೊನಾ ಹರಡುವುದಿಲ್ಲ ಹೀಗಾಗಿ ಹಾಲುಣಿಸುವುದನ್ನು ಬಿಡಬಾರದು ಅದಲ್ಲದೆ ಮಗುವಿಗೆ ಎದೆಹಾಲು ಉಣಿಸುವುದರಿಂದ ಶಿಶುಗಳಲ್ಲಿ ಪ್ರತಿಕಾಯಗಳು ಕೂಡ ಹೆಚ್ಚಾಗುತ್ತವೆ.

ಎದೆಹಾಲಿನಲ್ಲಿ ಪ್ರತಿಕಾಯಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಶಿಶುಗಳು ಕೊರೊನಾ ತುತ್ತಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಡಾ. ರವ್ನೀತ್ ಹೇಳಿದ್ದಾರೆ.
ರವ್ನೀತ್ ಜೋಶಿ ಅವರು ಖ್ಯಾತ ಮಾಜಿ ಕ್ರಿಕೆಟರ್ ಸುನಿಲ್ ಜೋಶಿ ಅವರ ಪತ್ನಿಯಾಗಿದ್ದಾರೆ.

ಇದರರ್ಥ ತಾಯಂದಿರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಎದೆಹಾಲು ಉಣಿಸಬೇಕು ಎಂಬುದಲ್ಲ, ಒಂದೊಮ್ಮೆ ಕೊರೊನಾದಿಂದ ತಾಯಂದಿರು ಬಳಲುತ್ತಿದ್ದರೆ ಅಥವಾ ಕೊರೊನಾ ಬಂದಿರುವ ಶಂಕೆಗಳಿದ್ದಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಎದೆಹಾಲನ್ನು ಉಣಿಸುವುದು ಒಳಿತು.

ಎದೆಹಾಲು ಉಣಿಸುವ ತಾಯಿಯು ಸರಿಯಾಗಿ ಮಾಸ್ಕ್‌ನ್ನು ಧರಿಸಿರಬೇಕು, ಜತೆಗೆ ಮಗುವನ್ನು ಎತ್ತಿಕೊಳ್ಳುವ ಮುನ್ನ ಮುನ್ನ ಕೈಯನ್ನು ಶುದ್ಧವಾಗಿ ತೊಳೆದು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಹಾಗೆಯೇ ಹಾಲನ್ನು ಉಣಿಸುವ ಮೊದಲು ಎದೆಯನ್ನು ಕೂಡ ಶುದ್ಧವಾಗಿರಿಸಿಕೊಳ್ಳುವುದು ಒಳಿತು. ಇದಾದ ಬಳಿಕ ಮಗುವಿಗೆ ಸುರಕ್ಷಿತವಾಗಿ ಎದೆಹಾಲು ಉಣಿಸಬೇಕು. ತಾನು ಮುಟ್ಟಿರುವ ಎಲ್ಲಾ ಜಾಗಗಳನ್ನು ಕೂಡ ತಾಯಿ ಶುದ್ಧಗೊಳಿಸಬೇಕು.

ಶಿಶು ಅನಾರೋಗ್ಯಗೊಂಡಿದ್ದರೂ ಆಗ ನೀವು ಅದಕ್ಕೆ ಎದೆಹಾಲು ನೀಡಬೇಕು. ನೀವು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೂ ಅಥವಾ ಇಲ್ಲದೆ ಇದ್ದರೂ ಆಗ ನೀವು ಹೀಗೆ ಮಾಡಲೇಬೇಕು.

ಮಗುವಿಗೆ ಎದೆಹಾಲಿನ ಪೋಷಣೆ ಸಿಗುವುದು ಅನಿವಾರ್ಯವಾಗಿದೆ. ಎದೆಹಾಲು ಮಗುವಿನ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಇದು ಪ್ರತಿಕಾಯವನ್ನು ನೀಡುವುದು. ಇದರಿಂದ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಮಗುವನ್ನು ಮುಟ್ಟುವ ಮೊದಲು ನೀವು ಕೈಗಳನ್ನು ತೊಳೆಯಿರಿ.

ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ನ್ನು ನೀವು ಬಳಸಬಹುದು. ನೀವು ಮುಟ್ಟಿದಂತಹ ಮೇಲ್ಮೈಗಳನ್ನು ಸೋಂಕು ರಹಿತ ಸಿಂಪಡಣೆ ಮಾಡಿ ಶುಚಿಗೊಳಿಸಿ. ಎದೆಹಾಲಿನ ಪಂಪ್, ಶೇಖರಣೆ ಡಬ್ಬ ಮತ್ತು ಹಾಲುಣಿಸುವ ಸಲಕರಣೆ ಬಳಸಿ. ಇದು ಸಹಕಾರಿ ಆಗುವುದು. ಸ್ತನ್ಯಪಾನ ಕುರಿತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

 ಕೊರೊನಾ ಸೋಂಕು ಇರುವ ಸಂಶಯವಿದ್ದರೆ ಏನು ಮಾಡಬೇಕು?

ಕೊರೊನಾ ಸೋಂಕು ಇರುವ ಸಂಶಯವಿದ್ದರೆ ಏನು ಮಾಡಬೇಕು?

ನಿಮಗೆ ಕೊರೊನಾ ಸೋಂಕು ಇರಬಹುದು ಎಂಬ ಸಂಶಯವಿದ್ದರೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನೀವು ಎದೆಹಾಲು ನೀಡಬಹುದು. ಇದರಲ್ಲಿ ಮುಖ್ಯವಾಗಿ ಮಾಸ್ಕ್ ಧರಿಸುವುದು, ಕೈಗಳನ್ನು ಸೋಪ್ ಮತ್ತು ಣೀರಿನಿಂದ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು ಇತ್ಯಾದಿ.

ಸ್ತನಗಳನ್ನು ತೊಳೆಯಿರಿ ಮತ್ತು ಸ್ತನಪಾನ ಮಾಡಿಸಿದ ಬಳಿಕ ಅದನ್ನು ಸರಿಯಾಗಿ ಮುಚ್ಚಿಡಿ. ನೀವು ಸ್ತನಗಳ ಮೇಲೆ ಕೆಮ್ಮದೆ ಇದ್ದರೆ ಆಗ ಎದೆಹಾಲು ಉಣಿಸುವ ಮೊದಲು ಅವುಗಳನ್ನು ತೊಳೆಯಬೇಕೆಂದಿಲ್ಲ. ನೀವು ಯಾವುದೇ ಮೇಲ್ಮೈಯನ್ನು ಮುಟ್ಟಿದರೆ ಆ ಕೂಡಲೇ ಅಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಿ.

 ಎದೆಹಾಲುಣಿಸುವುದು ಸುರಕ್ಷಿತವೇ?

ಎದೆಹಾಲುಣಿಸುವುದು ಸುರಕ್ಷಿತವೇ?

ಎದೆ ಹಾಲಿನಲ್ಲಿ ಇರುವಂತಹ ಪ್ರತಿಕಾಯ ಮತ್ತು ಜೈವಿಕ ಅಂಶಗಳು ಕೋವಿಡ್-19 ವಿರುದ್ಧವೂ ಹೋರಾಡುವಂತಹ ಶಕ್ತಿ ಹೊಂದಿದೆ.

ಎದೆಹಾಲು ಮಗುವಿಗೆ ಪ್ರತಿಕಾಯವನ್ನು ಒದಗಿಸುವುದು ಮತ್ತು ಇದರಿಂದ ಮಗುವಿನ ದೇಹವು ವಿವಿಧ ರೀತಿಯ ಸೋಂಕಿನಿಂದ ರಕ್ಷಣೆ ಪಡೆಯುವುದು ಮತ್ತು ಆರೋಗ್ಯವು ವೃದ್ಧಿ ಆಗುವುದು.

ಮಗುವಿಗೆ ಆರು ತಿಂಗಳಾಗಿದ್ದರೆ ಅಥವಾ ಅದಕ್ಕಿಂತಲೂ ಸಣ್ಣದಾಗಿದ್ದರೆ ಆಗ ಎದೆಹಾಲು ನೀಡುವುದು ಅನಿವಾರ್ಯವಾಗಿದೆ. ಮಗುವಿಗೆ ಆರು ತಿಂಗಳಿಗಿಂತ ಹೆಚ್ಚಾಗಿದ್ದರೆ ಆಗ ನೀವು ಮಗುವಿಗೆ ಬೇರೆ ಆಹಾರ ನೀಡಬಹುದು ಮತ್ತು ಸುರಕ್ಷಿತ ಕ್ರಮಗಳನ್ನು ಅನುಸರಿಸಬಹುದು.

 ಮಗುವನ್ನು ರಕ್ಷಿಸುವಂತಹ ಕ್ರಮಗಳು

ಮಗುವನ್ನು ರಕ್ಷಿಸುವಂತಹ ಕ್ರಮಗಳು

*ನೀವು ಮುಟ್ಟಿದ ಮೇಲ್ಮೈಗಳನ್ನು ಸೋಂಕು ನಿವಾರಕ ಹಾಕಿ ಸ್ವಚ್ಛಗೊಳಿಸಿ.

*ಟಿಶ್ಯೂಗೆ ಕೆಮ್ಮಿ ಅಥವಾ ಶೀನಿ ಮತ್ತು ಇದನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಿ.

*ಮಗುವನ್ನು ನಿಮ್ಮ ಹಾಸಿಗೆಯಿಂದ ಆರು ಅಡಿ ದೂರದಲ್ಲಿ ಮಲಗಿಸಿ ಅಥವಾ ಬೇರೆ ಕೋಣೆಯಲ್ಲಿ ಮಲಗಿಸಿ.

*ಆದಷ್ಟು ಮಾಸ್ಕ್ ಧರಿಸಿಕೊಂಡಿರಿ.

*ಸ್ತನಪಾನ ಮಾಡದೆ ಇರುವಾಗ ನೀವು ಮಗುವಿನ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಿ.

 ವಿಶ್ವ ಸ್ತನ್ಯಪಾನ ಸಪ್ತಾಹ

ವಿಶ್ವ ಸ್ತನ್ಯಪಾನ ಸಪ್ತಾಹ

ಪ್ರತಿ ವರ್ಷವೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 1 ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ನಡೆಯಲಿದೆ. ಇಂದು ಸಪ್ತಾಹಕ್ಕೆ ಕೊನೆಯ ದಿನವಾಗಿದೆ. ಎದೆಹಾಲುಣಿಸುವ ಮಹತ್ವದ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸುವುದೇ ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Dr Ravneet Joshi
M.D (paediatric), IBCLC
Lactation consultant
Manipal hospital
Bangalore

English summary
Here is the interview with Dr Ravneet Joshi on breastfeeding during covid-19 pandemic. Check out the questions and answers on covid-19 and breastfeeding. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X