• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟಿನ್ ವಿರುದ್ಧ ಯುಎಸ್, ಜಪಾನ್ ವೈಲೆಂಟ್; ರಷ್ಯಾ ಅಂದ್ರೆ ಮೋದಿ ಮಾತ್ರ ಸೈಲೆಂಟ್!

|
Google Oneindia Kannada News

ಟೋಕಿಯೋ, ಮೇ 25: ಉಕ್ರೇನ್ ಮೇಲೆ ಮುರಿದು ಬಿದ್ದಿರುವ ರಷ್ಯಾದ ಜೊತೆಗೆ ಒಟ್ಟಾಗಿ ನಿಂತಿರುವ ಚೀನಾಗೆ ತಿರುಗೇಟು ನೀಡುವುದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ರಣತಂತ್ರ ಹೆಣೆದಿದೆ. ಕ್ವಾಡ್ ಸದಸ್ಯ ರಾಷ್ಟ್ರಗಳ ನಡುವಿನ ಇಂಡೋ-ಫೆಸಿಫಿಕ್ ಆರ್ಥಿಕ ಚೌಕಟ್ಟು ಅಭಿವೃದ್ಧಿಯು ಮೊದಲ ಹೆಜ್ಜೆಯಾಗಿದೆ.

ಟೋಕಿಯೋದಲ್ಲಿ ನಡೆದ ನಾಲ್ಕನೇ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ ಯುನೈಟೆಡ್ ಸ್ಟೇಟ್ಸ್, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಚೀನಾದೊಂದಿಗೆ ರಷ್ಯಾಗೂ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿವೆ. ಇಂಡೋ-ಪೆಸಿಫಿಕ್‌ನಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಬಯಸುವ ಯಾವುದೇ ಬಲವಂತದ, ಪ್ರಚೋದನಕಾರಿ ಅಥವಾ ಏಕಪಕ್ಷೀಯ ಕ್ರಮಗಳನ್ನು ವಿರೋಧಿಸಿವೆ.

ಚೀನಾಗೆ ಸೆಡ್ಡು ಹೊಡೆಯಲು ರಚನೆ ಆಯಿತಾ ಅಮೆರಿಕಾದ ಐಪಿಇಎಫ್?ಚೀನಾಗೆ ಸೆಡ್ಡು ಹೊಡೆಯಲು ರಚನೆ ಆಯಿತಾ ಅಮೆರಿಕಾದ ಐಪಿಇಎಫ್?

ಉಕ್ರೇನ್ ವಿಚಾರದಲ್ಲಿ ಮಾಸ್ಕೋ ವಿರುದ್ಧ ಟೋಕಿಯೋ ಮತ್ತು ವಾಶಿಂಗ್ಟನ್ ನೇರವಾಗಿ ವಾಗ್ದಾಳಿ ನಡೆಸಿದವು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಜಪಾನ್ ಪ್ರಧಾನಮಂತ್ರಿ ಫುಮಿಯೋ ಕಿಶಿಡಾ ಸಾರ್ವಜನಿಕವಾಗಿ ಹೇಳಿಕೆ ನೀಡಿದರು. ಆದರೆ ರಷ್ಯಾದ ವಿಷಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳು ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

ರಷ್ಯಾ ಮತ್ತು ಚೀನಾಗೆ ಚುರುಕು ಮುಟ್ಟಿಸುವುದಕ್ಕೆ ಯುಎಸ್ ಹೆಣೆದಿರುವ ರಣತಂತ್ರ ಹೇಗಿದೆ?, ಕ್ವಾಡ್ ಸದಸ್ಯ ರಾಷ್ಟ್ರಗಳು ಚೀನಾಗೆ ತಿರುಗೇಟು ನೀಡುತ್ತಿರುವುದು ಹೇಗೆ?, ರಷ್ಯಾ ಯುದ್ಧದ ವಿರುದ್ಧ ಕ್ವಾಡ್ ಶೃಂಗಸಭೆಯಲ್ಲಿ ಜೋ ಬೈಡೆನ್ ಅಬ್ಬರದ ಮಾತುಗಳು ಹೇಗಿದ್ದವು? ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ರಷ್ಯಾದಿಂದ ಉಕ್ರೇನ್ ನೆಲದಲ್ಲಿ ಮಾರಣಹೋಮದ ಉಲ್ಲೇಖ

ರಷ್ಯಾದಿಂದ ಉಕ್ರೇನ್ ನೆಲದಲ್ಲಿ ಮಾರಣಹೋಮದ ಉಲ್ಲೇಖ

"ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಮುಂದುವರೆಸುವವರೆಗೂ ನಾವು ಪಾಲುದಾರರಾಗಿ ಮುಂದುವರಿಯುತ್ತೇವೆ, ಜಾಗತಿಕ ಪ್ರತಿಕ್ರಿಯೆಯನ್ನು ಮುನ್ನಡೆಸುತ್ತೇವೆ. ನಮ್ಮ ಹಿಂದಿನ ಇತಿಹಾಸದಲ್ಲಿ ನಾವು ಕರಾಳ ಸಮಯವನ್ನು ಬದಲಾಯಿಸುತ್ತಿದ್ದೇವೆ. ಉಕ್ರೇನ್ ವಿರುದ್ಧ ರಷ್ಯಾದ ಕ್ರೂರ ಮತ್ತು ಅಪ್ರಚೋದಿತ ಯುದ್ಧವು ಮಾನವೀಯ ದುರಂತವನ್ನು ಉಂಟು ಮಾಡಿದೆ. ಮುಗ್ಧ ನಾಗರಿಕರು ಬೀದಿಗಳಲ್ಲಿ ಬಿದ್ದು ಸಾಯುತ್ತಿದ್ದರೆ, ಲಕ್ಷಾಂತರ ಮಂದಿ ನಿರಾಶ್ರಿತರು ಸ್ಥಳಾಂತರಗೊಂಡಿದ್ದಾರೆ," ಎಂದು ಯುೆಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದರು.

4ನೇ ಕ್ವಾಡ್ ಶೃಂಗಸಭೆ; ನಾಯಕರ ಭಾಷಣದ ಪ್ರಮುಖ ಅಂಶಗಳು4ನೇ ಕ್ವಾಡ್ ಶೃಂಗಸಭೆ; ನಾಯಕರ ಭಾಷಣದ ಪ್ರಮುಖ ಅಂಶಗಳು

ಯುರೋಪಿಯನ್ ಸಮಸ್ಯೆ ಇಡೀ ಜಗತ್ತಿಗೆ ಸಮಸ್ಯೆ ಎಂದ ಬೈಡೆನ್

ಯುರೋಪಿಯನ್ ಸಮಸ್ಯೆ ಇಡೀ ಜಗತ್ತಿಗೆ ಸಮಸ್ಯೆ ಎಂದ ಬೈಡೆನ್

"ಇದು ಕೇವಲ ಯುರೋಪಿಯನ್ ಸಮಸ್ಯೆ ಅಲ್ಲದೇ ಇದೊಂದು ಜಾಗತಿಕ ಸಮಸ್ಯೆಯಾಗಿದೆ," ಎಂಬುದನ್ನು ಜೋ ಬೈಡೆನ್ ಒತ್ತಿ ಹೇಳಿದರು. ನೀವು ಟಿವಿಯನ್ನು ಆನ್ ಮಾಡಿದರೆ ಸಾಕು, ರಷ್ಯಾ ಈಗ ಏನು ಮಾಡುತ್ತಿದೆ ಎಂಬುದನ್ನು ನೀವು ನೋಡಬಹುದು. ಪುಟಿನ್ ಸಂಸ್ಕೃತಿಯನ್ನೇ ಸುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಅವರು ಇನ್ನು ಮುಂದೆ ಮಿಲಿಟರಿಗಳನ್ನು ಗುರಿಯಾಗಿಸಿಕೊಂಡಿಲ್ಲ, ಪ್ರತಿಯೊಂದು ಶಾಲೆ, ಪ್ರತಿ ಚರ್ಚ್, ಪ್ರತಿಯೊಂದನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಪ್ರತಿ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹಾಲಯ ಸೇರಿದಂತೆ ಪ್ರತಿಯೊಂದು ಉಕ್ರೇನಿಯನ್ ಸಂಸ್ಕೃತಿಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ. ಇಡೀ ಜಗತ್ತು ಇಂದು ಅದರ ಪರಿಣಾಮವನ್ನು ಎದುರಿಸಬೇಕಾಗಿದೆ ಎಂದು ಜೋ ಬೈಡೆನ್ ಹೇಳಿದ್ದಾರೆ.

ಉಕ್ರೇನ್ ಮೇಲಿನ ದಾಳಿ ಉಲ್ಲೇಖಿಸಿ ಮಾತನಾಡಿದ ಜಪಾನ್ ಪ್ರಧಾನಿ

ಉಕ್ರೇನ್ ಮೇಲಿನ ದಾಳಿ ಉಲ್ಲೇಖಿಸಿ ಮಾತನಾಡಿದ ಜಪಾನ್ ಪ್ರಧಾನಿ

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧವು ಒಂದು ಪೂರ್ವನಿದರ್ಶನವಾಗಿರಲು ಸಾಧ್ಯವಿಲ್ಲ ಎಂದು ಫುಮಿಯೋ ಕಿಶಿಡಾ ಎಚ್ಚರಿಸಿದ್ದಾರೆ. "ನಾವು ಗೌರವಿಸುವ ಮೂಲಭೂತ ಕಾನೂನು-ಆಧಾರಿತ ಅಂತರರಾಷ್ಟ್ರೀಯ ಆದೇಶವನ್ನು ನಡುಗಿಸಿದ ಗಂಭೀರ ಘಟನೆಯನ್ನು ಸೆಪ್ಟೆಂಬರ್‌ನಲ್ಲಿ ನಾವು ನೋಡಿದದ್ದೇವೆ. "ಉಕ್ರೇನ್‌ಗೆ ರಷ್ಯಾದ ಆಕ್ರಮಣವು ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಪ್ರತಿಪಾದಿಸಲಾದ ತತ್ವಗಳನ್ನು ಸಂಪೂರ್ಣವಾಗಿ ಮುರಿದು ಹಾಕುತ್ತದೆ. ಇಂಡೋ-ಪೆಸಿಫಿಕ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸುವುದನ್ನು ನಾವು ಎಂದಿಗೂ ಅನುಮತಿಸಬಾರದು. ನಾವು ಒಟ್ಟಾಗಿ ಸೇರಿ ಮತ್ತು ಅಂತರರಾಷ್ಟ್ರೀಯ ಸಮಾಜಕ್ಕೆ ನಾಲ್ಕು ದೇಶಗಳ ಒಗ್ಗಟ್ಟು ಮತ್ತು ಮುಕ್ತ ದೃಷ್ಟಿಕೋನದ ಹಂಚಿಕೆಯ ದೃಷ್ಟಿಯ ಕಡೆಗೆ ನಮ್ಮ ದೃಢವಾದ ಬದ್ಧತೆಯನ್ನು ತೋರಿಸುವುದು ಅತ್ಯಂತ ಮಹತ್ವದ್ದಾಗಿದೆ, ಎಂದು ಜಪಾನ್ ಪ್ರಧಾನಮಂತ್ರಿ ಫುಮಿಯೋ ಕಿಶಿಡಾ ಹೇಳಿದ್ದಾರೆ.

ಪುಟಿನ್ ವಿಚಾರದಲ್ಲಿ ಮೌನಕ್ಕೆ ಜಾರಿದ ಭಾರತ

ಪುಟಿನ್ ವಿಚಾರದಲ್ಲಿ ಮೌನಕ್ಕೆ ಜಾರಿದ ಭಾರತ

ರಷ್ಯಾದ ಬಗ್ಗೆ ಮೌನವಾಗಿರುವ ಮೋದಿ, ಕ್ವಾಡ್ ಗುಂಪು ತನ್ನ ವ್ಯಾಪ್ತಿ ಮತ್ತು ಪ್ರಭಾವವನ್ನು ವಿಸ್ತರಿಸುವ ಮೂಲಕ ಜಾಗತಿಕ ವೇದಿಕೆಯಲ್ಲಿ ತನಗಾಗಿ ಒಂದು ಪ್ರಮುಖ ಸ್ಥಾನವನ್ನು ಮಾಡಿದೆ ಎಂದು ಹೇಳಿದರು. "ಕ್ವಾಡ್ ಮಟ್ಟದಲ್ಲಿ, ಪರಸ್ಪರ ಸಹಕಾರವು ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸುತ್ತಿದೆ, ಇದು ನಮ್ಮೆಲ್ಲರಿಗೂ ಹಂಚಿಕೆಯ ಉದ್ದೇಶವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

"ಕ್ವಾಡ್ ಶೃಂಗಸಭೆಯು ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ರಚನಾತ್ಮಕ ಕಾರ್ಯಸೂಚಿಯೊಂದಿಗೆ ಮುಂದುವರಿಯುತ್ತಿದೆ. ಇದು ಉತ್ತಮ ಉದ್ದೇಶಕ್ಕಾಗಿ ಕ್ವಾಡ್‌ನ ಚಿತ್ರಣ ಬಲಪಡಿಸುವುದನ್ನು ಮುಂದುವರಿಸುತ್ತದೆ," ಎಂದು ಮೋದಿ ಚೀನಾದ ಹೆಸರು ಉಲ್ಲೇಖಿಸದೇ ಹೇಳಿದರು. ಲಸಿಕೆ ವಿತರಣೆ, ಹವಾಮಾನ ಕ್ರಮ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ವಿಪತ್ತು ಪ್ರತಿಕ್ರಿಯೆ ಮತ್ತು ಆರ್ಥಿಕ ಸಹಕಾರದಲ್ಲಿ ಕ್ವಾಡ್ ಸಹಕಾರವನ್ನು ಮೋದಿ ಉಲ್ಲೇಖಿಸಿದರು.

ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶವೇನು?

ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶವೇನು?

"ನಾವು ಉಕ್ರೇನ್‌ನಲ್ಲಿನ ಸಂಘರ್ಷ ಮತ್ತು ನಡೆಯುತ್ತಿರುವ ದುರಂತ ಮಾನವೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದೇವೆ. ಇಂಡೋ-ಪೆಸಿಫಿಕ್‌ಗೆ ಅದರ ಪರಿಣಾಮಗಳು ಹೇಗಿರಲಿವೆ ಎಂಬುದನ್ನು ನಿರ್ಣಯಿಸಿದ್ದೇವೆ. ಕ್ವಾಡ್ ನಾಯಕರು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಿದ್ದೇವೆ ಎಂಬು ಪುನರುಚ್ಚರಿಸಿದರು.

ವಿಶ್ವಸಂಸ್ಥೆಯ ಸಾರ್ವಭೌಮತ್ವ ಮತ್ತು ಎಲ್ಲಾ ರಾಜ್ಯಗಳ ಪ್ರಾದೇಶಿಕ ಸಮಗ್ರತೆ ಗೌರವ ಮತ್ತು ಅಂತರಾಷ್ಟ್ರೀಯ ಕಾನೂನು ಎಂದು ನಾವು ಒತ್ತಿ ಹೇಳಿದ್ದೇವೆ. ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಎಲ್ಲಾ ದೇಶಗಳು ಶಾಂತಿಯುತವಾಗಿ ವಿವಾದಗಳಿಗೆ ಪರಿಹಾರವನ್ನು ಹುಡುಕಬೇಕು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಯಥಾಸ್ಥಿತಿ ಬದಲಾಯಿಸಲು ಮತ್ತು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಪ್ರಯತ್ನಿಸುವ ಯಾವುದೇ ದಬ್ಬಾಳಿಕೆಯ, ಪ್ರಚೋದನಕಾರಿ ಅಥವಾ ಏಕಪಕ್ಷೀಯ ಕ್ರಮಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಉದಾಹರಣೆಗೆ ವಿವಾದಿತ ವೈಶಿಷ್ಟ್ಯಗಳ ಮಿಲಿಟರೀಕರಣ, ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ಕಡಲ ಸೇನೆಯ ಅಪಾಯಕಾರಿ ಬಳಕೆ ಮತ್ತು ಇತರ ದೇಶಗಳಿಗೆ ಅಡ್ಡಿಪಡಿಸುವ ಪ್ರಯತ್ನಗಳು ಕಡಲಾಚೆಯ ಸಂಪನ್ಮೂಲ ಶೋಷಣೆ ಚಟುವಟಿಕೆಗಳು," ಇಂಡೋ-ಪೆಸಿಫಿಕ್‌ನಲ್ಲಿ ಬೀಜಿಂಗ್‌ನ ಆಕ್ರಮಣಕಾರಿ ನಡವಳಿಕೆಯ ಸ್ಪಷ್ಟ ಉಲ್ಲೇಖಗಳಾಗಿವೆ.

ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಚೀನಾ ಆಟ ನಡೆಯುವುದಿಲ್ಲ

ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಚೀನಾ ಆಟ ನಡೆಯುವುದಿಲ್ಲ

"ಮುಕ್ತ ಇಂಡೋ-ಪೆಸಿಫಿಕ್‌ನ ದೃಷ್ಟಿಕೋನವನ್ನು ಹಂಚಿಕೊಳ್ಳುವ ಪ್ರದೇಶದ ಪಾಲುದಾರರೊಂದಿಗೆ ಸಹಕಾರಕ್ಕೆ ಕ್ವಾಡ್ ಬದ್ಧವಾಗಿದೆ. ನಾವು ಅಂತರಾಷ್ಟ್ರೀಯ ಕಾನೂನಿಗೆ ಬದ್ಧರಾಗಿರುತ್ತೇವೆ, ನಿರ್ದಿಷ್ಟವಾಗಿ ವಿಶ್ವಸಂಸ್ಥೆಯ ಸಮಾವೇಶದ ಸಮುದ್ರ ಮೇಲಿನ ಕಾನೂನಿನಲ್ಲಿ ಸ್ವಾತಂತ್ರ್ಯವನ್ನು ನಿರ್ವಹಿಸಬೇಕಿದೆ. ಚೀನಾದ ಪೂರ್ವ ಮತ್ತು ದಕ್ಷಿಣ ಸಮುದ್ರ ಪ್ರದೇಶದಲ್ಲಿ ಈ ನಿಯಮಗಳ ಆಧಾರಿತ ಆದೇಶಗಳನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ.

ಈ ಹಿನ್ನೆಲೆಯಲ್ಲಿ ಯಥಾಸ್ಥಿತಿ ಬದಲಾಯಿಸಲು ಮತ್ತು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಪ್ರಯತ್ನಿಸುವ ಯಾವುದೇ ದಬ್ಬಾಳಿಕೆಯ, ಪ್ರಚೋದನಕಾರಿ ಅಥವಾ ಏಕಪಕ್ಷೀಯ ಕ್ರಮಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಉದಾಹರಣೆಗೆ ವಿವಾದಿತ ವೈಶಿಷ್ಟ್ಯಗಳ ಮಿಲಿಟರೀಕರಣ, ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ಕಡಲ ಸೇನೆಯ ಅಪಾಯಕಾರಿ ಬಳಕೆ ಮತ್ತು ಇತರ ದೇಶಗಳಿಗೆ ಅಡ್ಡಿಪಡಿಸುವ ಪ್ರಯತ್ನಗಳು ಕಡಲಾಚೆಯ ಸಂಪನ್ಮೂಲ ಶೋಷಣೆ ಚಟುವಟಿಕೆಗಳು," ಇಂಡೋ-ಪೆಸಿಫಿಕ್‌ನಲ್ಲಿ ಬೀಜಿಂಗ್‌ನ ಆಕ್ರಮಣಕಾರಿ ನಡವಳಿಕೆಯ ಸ್ಪಷ್ಟ ಉಲ್ಲೇಖಗಳಾಗಿವೆ.

English summary
The Quad is moving forward with a constructive agenda for the Indo-Pacific region; Break up on Russia, unity on China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X