ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ನೂತನ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ

|
Google Oneindia Kannada News

ಚಂಡೀಗಢ, ಮಾರ್ಚ್ 11: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ನಂತರ, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅವರ ಸಂಪುಟ ಸಚಿವರುಗಳು ಮಾರ್ಚ್ 16 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಶುಕ್ರವಾರ ಘೋಷಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಭರ್ಜರಿ ಗೆಲುವು ದಾಖಲಿಸಿದೆ. ಆಡಳಿತಾರೂಢ ಕಾಂಗ್ರೆಸ್ 18 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ. ಇದು 2017 ರಲ್ಲಿ 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಈ ಭಾರಿ ಕುಸಿತವನ್ನು ಕಂಡಿದೆ. ಆದರೆ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಕೇವಲ ಮೂರು ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಸಫಲವಾಗಿದೆ.

 ಪಂಜಾಬ್‌ ಪ್ರಬಲ ನಾಯಕರನ್ನು ಪರಾಭವಗೊಳಿಸಿದ ದೈತ್ಯ ಸಂಹಾರಿಗಳು ಇವರೇ ನೋಡಿ ಪಂಜಾಬ್‌ ಪ್ರಬಲ ನಾಯಕರನ್ನು ಪರಾಭವಗೊಳಿಸಿದ ದೈತ್ಯ ಸಂಹಾರಿಗಳು ಇವರೇ ನೋಡಿ

ಪಂಜಾ‌ಬ್‌ನ ನೂತನ ಮುಖ್ಯಮಂತ್ರಿ ಭಗವಂತ್‌ ಮಾನ್ ಧುರಿ ಕ್ಷೇತ್ರದಲ್ಲಿ 58,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ, ಭಗವಂತ್‌ ಮಾನ್ ರಾಷ್ಟ್ರ ರಾಜಧಾನಿಯಲ್ಲಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭೇಟಿಯಾದರು. ಅರವಿಂದ್ ಕೇಜ್ರಿವಾಲ್ ಕಾಲಿಗೆರಗಿ ಆಶೀರ್ವಾದವನ್ನು ಪಡೆದಿದ್ದಾರೆ.

Punjab New Cabinet Ministers: Heres List in Kannada

ಎಎಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾತನಾಡಿದ್ದ ಭಗವಂತ್‌ ಮಾನ್‌, ಹೊಸ ಕ್ಯಾಬಿನೆಟ್‌ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿದೆ. ರಾಜಭವನದಲ್ಲಿ ಅಲ್ಲ ಎಂದು ಘೋಷಿಸಿದ್ದರು. ಹಾಗಾದರೆ ಹೊಸ ಸಚಿವ ಸಂಪುಟದಲ್ಲಿ ಯಾರಿಗೆ, ಯಾವ ಸ್ಥಾನ ಲಭಿಸಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಪಂಜಾಬ್‌ ಬಳಿಕ ಗುಜರಾತ್‌ ಮೇಲೆ ಎಎಪಿ ಚಿತ್ತ: ಎಪ್ರಿಲ್‌ನಲ್ಲಿ ತಿರಂಗ ಯಾತ್ರೆ ಪಂಜಾಬ್‌ ಬಳಿಕ ಗುಜರಾತ್‌ ಮೇಲೆ ಎಎಪಿ ಚಿತ್ತ: ಎಪ್ರಿಲ್‌ನಲ್ಲಿ ತಿರಂಗ ಯಾತ್ರೆ

ಪಂಜಾಬ್‌ನ ನೂತನ ಸಚಿವ ಸಂಪುಟ

ಭಗವಂತ್‌ ಮಾನ್‌: ಪಂಜಾಬ್‌ ನೂತನ ಮುಖ್ಯಮಂತ್ರಿ, ಗೃಹ ಖಾತೆ
ಕುಲ್ತಾರ್‌ ಸಿಂಗ್‌ ಸಂದ್ವಾ: ಉಪಮುಖ್ಯಮಂತ್ರಿ
ಅಮಾನ್‌ ಅರೋರಾ: ಹಣಕಾಸು ಸಚಿವ
ಬುಧ್‌ ರಾಮ್‌: ಶಿಕ್ಷಣ ಸಚಿವ
ಜಗದೀಪ್‌ ಸಿಂಗ್‌ ಕಾಕ ಬ್ರಾರ್‌: ಕೃಷಿ ಸಚಿವ
ಗುರ್ಮಿತ್‌ ಸಿಂಗ್‌ ಮೀತ್‌ ಹಯೇರ್‌: ಲೋಕಪಯೋಗಿ ಸಚಿವ
ಡಾ. ಬಲ್ವೀರ್‌ ಸಿಂಗ್‌: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಜೈ ಕಿಶಾನ್‌ ರೌದಿ: ಆಹಾರ ಮತ್ತು ಪಡಿತರ ಖಾತೆ
ಫ್ರೋ. ಬಲ್ಜೀಂದರ್‌ ಕೌರ್‌: ಸ್ಥಳೀಯ ಸಂಸದೀಯ ವ್ಯವಹಾರ ಖಾತೆ
ಕುನ್ವಾರ್‌ ವಿಜಯ್‌ ಪ್ರತಾಪ್‌: ವಾಣಿಜ್ಯ ಸಚಿವ
ಕುಲ್ವಾಂತ್‌ ಸಿಂಗ್‌ ಪಂಡೋರಿ: ತಾಂತ್ರಿಕ ಶಿಕ್ಷಣ ಸಚಿವ
ಸವರ್‌ಜೀತ್‌ ಕೌರ್‌ ಮನೋಕೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ
ಗುರ್ಮಿತ್‌ ಸಿಂಗ್‌ ಕುಡಿಯಾಣ: ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ ಖಾತೆ
ಲಾಭ್‌ ಸಿಂಗ್‌ ಉಗೋಕೆ: ವಸತಿ ಮತ್ತು ನಗರಾಭಿವೃದ್ಧಿ ಪಂಚಾಯತ್‌ ಸಚಿವ
ಜೀವನ್‌ಜೋತ್‌ ಕೌರ್‌: ಕಂದಾಯ ಸಚಿವ
ನರೀಂದರ್‌ ಕೌರ್‌ ಭಾರಜ್‌: ಜಲ ಖಾತೆ

English summary
Punjab Assembly Elections 2022: Punjab New Cabinet: Here's List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X