ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP-C Voter Opinion Poll: ಪುದುಚೆರಿಯಲ್ಲಿ ಬದಲಾದ ಜನಾಭಿಪ್ರಾಯ

|
Google Oneindia Kannada News

ನವದೆಹಲಿ, ಜನವರಿ 18: ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕಿಂತ (ಎಸ್‌ಡಿಎ) ಶೇ 1.8ರಷ್ಟು ಅತ್ಯಲ್ಪ ಪ್ರಮಾಣದ ಮುನ್ನಡೆ ಸಾಧಿಸಲಿದೆ ಎಂದು ಎಬಿಪಿ ನ್ಯೂಸ್-ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ಈ ಎರಡೂ ಮೈತ್ರಿಕೂಟಗಳು ಮತ ಹಂಚಿಕೆಯಲ್ಲಿ ಹೆಚ್ಚಳ ಕಂಡುಕೊಳ್ಳಲಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯ ಎಸ್‌ಡಿಎ ಮತ ಗಳಿಕೆ ಶೇ 3.1ರಷ್ಟು ಮಾತ್ರ ಏರಿಕೆಯಾಗಲಿದೆ. 2016ರ ಚುನಾವಣೆಯಲ್ಲಿ ಎಸ್‌ಡಿಎ ಶೇ 39.5ರಷ್ಟು ಮತ ಗಳಿಸಿದ್ದರೆ, ಈ ಬಾರಿ ಶೇ 42.6ರಷ್ಟು ಮತ ಪಡೆಯುವ ನಿರೀಕ್ಷೆಯಿದೆ.

ABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವುABP-C Voter Opinion Poll: ಎನ್‌ಡಿಎಗೆ ಮತ್ತೆ ಭರ್ಜರಿ ಗೆಲುವು

ಆದರೆ ಎಐಎನ್‌ಆರ್‌ಸಿ, ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳ ಎನ್‌ಡಿಎ ಈ ಬಾರಿ ಚುನಾವಣೆಯಲ್ಲಿ ಪುದುಚೆರಿಯನ್ನು ತಮ್ಮ ವಶ ಮಾಡಿಕೊಳ್ಳಲಿದೆ. ಕಳೆದ ಬಾರಿ ಕೇವಲ ಶೇ 30.5ರಷ್ಟು ಮತಗಳನ್ನು ಪಡೆದಿದ್ದ ಎನ್‌ಡಿಎ, ಈ ಬಾರಿ ಅದನ್ನು ಶೇ 44.4ಕ್ಕೆ ಹೆಚ್ಚಿಸಿಕೊಳ್ಳಲಿದೆ. ಇತರ ಪಕ್ಷಗಳು ಕಳೆದ ಬಾರಿ ಶೇ 30ರಷ್ಟು ಮತ ಪಡೆದಿದ್ದರೆ, ಈ ಸಲದ ಚುನಾವಣೆಯಲ್ಲಿ ಅದರ ಪ್ರಮಾಣ ಕೇವಲ ಶೇ 10ಕ್ಕೆ ಇಳಿಯಲಿದೆ.

Puducherry Assembly Election 2021 ABP News C Voter Opinion Poll Says NDA Defeats SDA

30 ಸೀಟುಗಳಿರುವ ಪುದುಚೆರಿ ವಿಧಾನಸಭೆಯಲ್ಲಿ 2016ರ ಚುನಾವಣೆಯಲ್ಲಿ 17 ಸೀಟುಗಳನ್ನು ಗೆದ್ದಿದ್ದ ಎಸ್‌ಡಿಎ ಮೂರು ಸೀಟುಗಳನ್ನು ಕಳೆದುಕೊಂಡು 14ಕ್ಕೆ ಕುಸಿಯಲಿದೆ. ಎನ್‌ಡಿಎ ತನ್ನ ಸಂಖ್ಯೆಯನ್ನು 12 ರಿಂದ 16ಕ್ಕೆ ಹೆಚ್ಚಿಸಿಕೊಳ್ಳಲಿದೆ. ಎಸ್‌ಡಿಎದ ಡಿಎಂಕೆ ತಾನು ಪ್ರತ್ಯೇಕವಾಗಿ ಎಲ್ಲ 30 ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿರುವುದು ಎನ್‌ಡಿಎಗೆ ಮತ್ತಷ್ಟು ಸಂತಸ ನೀಡಿದೆ.

ABP-C Voter Opinion Poll: ತಮಿಳುನಾಡಿನಲ್ಲಿ ಯುಪಿಎಗೆ ಮತ್ತೆ ಅಧಿಕಾರABP-C Voter Opinion Poll: ತಮಿಳುನಾಡಿನಲ್ಲಿ ಯುಪಿಎಗೆ ಮತ್ತೆ ಅಧಿಕಾರ

* ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಎಷ್ಟು ತೃಪ್ತಿಕರವಾಗಿದೆ?

ತುಂಬಾ ತೃಪ್ತಿಕರ: 37%

ತೃಪ್ತಿಕರ: 27%

ಅತೃಪ್ತಿಕರ: 32%

ಹೇಳಲು ಅಸಾಧ್ಯ: 04%

* ಕೇಂದ್ರ ಸರ್ಕಾರದ ಆಡಳಿತ ಸಮಾಧಾನ ತಂದಿದೆಯೇ?

ತುಂಬಾ ತೃಪ್ತಿಕರ: 33%

ತೃಪ್ತಿಕರ: 16%

ಅತೃಪ್ತಿಕರ: 44%

ಹೇಳಲು ಅಸಾಧ್ಯ: 07%

English summary
Puducherry Assembly Election 2021: ABP News and C Voter Opinion Poll said NDA will gain power by defeating SDA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X