ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕು ಬರ್ಬರ, ಕ್ರೂರ; ಲಂಕಾದಲ್ಲಿ ಹೆಚ್ಚಾಯ್ತು ವೇಶ್ಯಾವಾಟಿಕೆ

|
Google Oneindia Kannada News

ಕೊಲಂಬೋ, ಜುಲೈ 31: ಆರ್ಥಿಕವಾಗಿ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಜನಸಾಮಾನ್ಯರು ದಿನನಿತ್ಯದ ಬದುಕು ಸವೆಸುವುದೇ ಕಷ್ಟವೆಂಬ ಪರಿಸ್ಥಿತಿ ಇದೆ. ದೇಶದ ಆರ್ಥಿಕತೆಗೆ ಚೇತರಿಕೆಯ ದಾರಿ ಮಸುಕಾಗಿದೆ. ಜನರೂ ದಿಕ್ಕೆಟ್ಟು ಕೂತಿದ್ದಾರೆ.

ಲಂಕಾದ ಆರ್ಥಿಕತೆಯ ಗಾಲಿ ಉರುಳಿಸುವ ಚಟುವಟಿಕೆ, ಉದ್ಯೋಗ ಎಲ್ಲವೂ ಬಹುತೇಕ ನಿಷ್ಕ್ರಿಯಗೊಂಡಿವೆ. ಆರ್ಥಿಕತೆಗೆ ಉಸಿರು ತುಂಬುವ ಉದ್ಯೋಗಗಳು ಇಲ್ಲ, ಜನರ ಜೀವನ ನಡೆಸುವ ಉದ್ಯೋಗಗಳು ಇಲ್ಲ.

ಸರ್ವಪಕ್ಷಗಳ ರಾಷ್ಟ್ರೀಯ ಸರ್ಕಾರ ರಚನೆಗೆ ಮುಂದಾದ ಶ್ರೀಲಂಕಾಸರ್ವಪಕ್ಷಗಳ ರಾಷ್ಟ್ರೀಯ ಸರ್ಕಾರ ರಚನೆಗೆ ಮುಂದಾದ ಶ್ರೀಲಂಕಾ

ಉದ್ಯೋಗ ಕಳೆದುಕೊಂಡ ಹುಡುಗರು ದಂಗೆ ಏಳುವುದು, ಲೂಟಿ ನಡೆಸುವುದು ಸಾಮಾನ್ಯವಾಗಿದೆ. ಉದ್ಯೋಗ ಇಲ್ಲದ ಮಹಿಳೆಯರು ಅನಿವಾರ್ಯವಾಗಿ ಬದುಕಲು ಬೇರೆ ಮಾರ್ಗ ಕಂಡುಕೊಳ್ಳಲು ತೊಡಗಿದ್ದಾರೆ. ವರದಿಗಳ ಪ್ರಕಾರ ಶ್ರೀಲಂಕಾದ ಮಹಿಳೆಯರು, ಅದರಲ್ಲೂ ಯುವತಿಯರು ಮೈಮಾರಾಟದ ದಂಧೆಯತ್ತ ವಾಲತೊಡಗಿದ್ದಾರಂತೆ. ಹಾಗಂತ ಹೇಳಲಾಗುತ್ತಿದೆ.

Prostitution on Rise in Sri Lanka Amid Economic Crisis

ಗಾರ್ಮೆಂಟ್ಸ್ ಬಡವಿಯರು
ಜವಳಿ ಉದ್ಯಮ ಅದರಲ್ಲೂ ಗಾರ್ಮೆಂಟ್ಸ್ ಕ್ಷೇತ್ರ ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಆಧಾರಸ್ತಂಭವಾಗಿದೆ. ಇದು ಶ್ರೀಲಂಕಾ ಮಾತ್ರವಲ್ಲ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೂ ಅನ್ವಯವಾಗುತ್ತದೆ. ಮಹಿಳೆಯರಿಗೆ ಹೆಚ್ಚು ಉದ್ಯೋಗ ನೀಡುವುದೂ ಈ ಕ್ಷೇತ್ರವೇ. ಶ್ರೀಲಂಕಾದ ಆರ್ಥಿಕ ಮುಗ್ಗಟ್ಟು ಅಲ್ಲಿನ ಜವಳಿ ಉದ್ಯಮಕ್ಕೂ ತಟ್ಟಿದೆ. ಅನೇಕ ಮಂದಿಗೆ ಕೆಲಸ ಇಲ್ಲವಾಗಿದೆ.

ಕೆಲಸ ಕಳೆದುಕೊಂಡ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಗಾಗಿ ವೇಶ್ಯಾವಾಟಿಕೆ ವೃತ್ತಿ ಅಪ್ಪುತ್ತಿದ್ದಾರೆನ್ನಲಾಗಿದೆ. ಶ್ರೀಲಂಕಾದಲ್ಲಿ ತಾತ್ಕಾಲಿಕ ವೇಶ್ಯಾಗೃಹಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ.

ಶ್ರೀಲಂಕಾ; ಪ್ರತಿಭಟನಾಕಾರರ ಶಿಬಿರವನ್ನೇ ಕೆಡವಿದ ಭದ್ರತಾ ಸಿಬ್ಬಂದಿಶ್ರೀಲಂಕಾ; ಪ್ರತಿಭಟನಾಕಾರರ ಶಿಬಿರವನ್ನೇ ಕೆಡವಿದ ಭದ್ರತಾ ಸಿಬ್ಬಂದಿ

ಕಳೆದ ಕೆಲ ತಿಂಗಳಲ್ಲಿ ಶ್ರೀಲಂಕಾದಲ್ಲಿ ವೇಶ್ಯಾವಾಟಿಕೆ ಶೇ. 30ರಷ್ಟು ಹೆಚ್ಚಿದೆಯಂತೆ. ಸ್ಪಾ, ಶುಶ್ರೂಷಾಗೃಹ ಇತ್ಯಾದಿ ಹೆಸರಿನಲ್ಲಿ ಮಾಂಸದಂಧೆ ನಡೆಯುವುದು ಹೆಚ್ಚಾಗಿದೆ.

"ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲಸ ಕಳೆದುಕೊಂಡ ಮಹಿಳೆಯರು, ಅದರಲ್ಲೂ ಜವಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರು ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಬಂದ ಬಳಿಕ ಜವಳಿ ಉದ್ಯಮಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಹೆಚ್ಚು ಕೆಲಸ ನಷ್ಟವಾಗಿರುವುದು ಇಲ್ಲಿಯೇ. ಬದುಕಿನ ಅನಿವಾರ್ಯತೆಯು ಈ ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡಿದೆ" ಎಂದು ಎಸ್‌ಯುಎಂಎಲ್ ಎಂಬ ಎನ್‌ಜಿಒ ನಡೆಸುವ ವ್ಯಕ್ತಿ ಹೇಳುತ್ತಾರೆ.

Prostitution on Rise in Sri Lanka Amid Economic Crisis

ಮಾಂಸ ದಂಧೆಯಲ್ಲಿ ಹೆಚ್ಚು ಆದಾಯ
ಶ್ರೀಲಂಕಾದಲ್ಲಿ ಮಹಿಳೆಯರು ವೇಶ್ಯಾವಾಟಿಕೆ ವೃತ್ತಿಗೆ ಇಳಿಯಲು ಬಡತನ ಮಾತ್ರವಲ್ಲ, ಹೆಚ್ಚು ಆದಾಯದ ಆಕರ್ಷಣೆಯೂ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ತನ್ನ ಹಿಂದಿನ ವೃತ್ತಿಗಳಲ್ಲಿ ತಿಂಗಳಿಗೆ 20-30 ಸಾವಿರ ರೂ ದುಡಿಯುತ್ತಿದ್ದವರು ಈಗ ವೇಶ್ಯಾ ವೃತ್ತಿಯಲ್ಲಿ ಒಂದೇ ದಿನದಲ್ಲಿ 20 ಸಾವಿರ ರೂನಷ್ಟು ಹಣ ಗಳಿಸುತ್ತಿದ್ದಾರೆ. ಇದು ಈ ವೃತ್ತಿಗೆ ಹೆಚ್ಚು ಮಹಿಳೆಯರನ್ನು ಸೆಳೆಯಲು ಕಾರಣವಾಗಿದೆ.

ಆದರೆ, ಇಲ್ಲೂ ಕೆಲ ಅವಾಂತರಗಳಿವೆ. ಸಂಗಾತಿಯನ್ನು ಹುಡುಕಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ಲೈಂಗಿಕ ಕಾರ್ಯಕರ್ತೆಯರಿಗೆ ಆರ್ಥಿಕ ಬಿಕ್ಕಟ್ಟು ಶಾಕ್ ಕೊಟ್ಟಿದೆ. ವೇಶ್ಯೆಯರೊಂದಿಗಿದ್ದ ಸಂಗಾತಿಗಳು ಆರ್ಥಿಕ ಮುಗ್ಗಟ್ಟಿನಿಂದಾಗಿ ಬಿಟ್ಟು ಹೋಗಿದ್ದಾರೆ. ಈ ಮಹಿಳೆಯರು ಗರ್ಭಿಣಿಯರಾಗಿ ನಡು ನೀರಲ್ಲಿ ನಿಲ್ಲುವಂತಾಗಿದೆ. ಕೆಲ ಎನ್‌ಜಿಒಗಳು ಇಂಥ ಕೆಲ ವೇಶ್ಯೆಯರಿಗೆ ಆಶ್ರಯ ನೀಡಿದೆಯಂತೆ.

(ಒನ್ಇಂಡಿಯಾ ಸುದ್ದಿ)

English summary
Due to economic crisis more and more women and girls are entering prostitution in Sri Lanka says an ANI report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X