• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ 'ಮಹಾ' ಸಿಎಂ ಹುದ್ದೆಗೇರಿದ ದೇವೇಂದ್ರ ಫಡ್ನವಿಸ್ ವ್ಯಕ್ತಿಚಿತ್ರ

|

ಮುಂಬೈ, ನವೆಂಬರ್ 23: ಮಹಾರಾಷ್ಟ್ರದಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಜತೆಗೂಡಿ ಸರ್ಕಾರ ರಚಿಸಿವೆ. ಈ ಹಿಂದಿನ ಬಿಜೆಪಿ-ಶಿವಸೇನಾ ಸರ್ಕಾರದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ದೇವೇಂಡ್ರ ಫಡ್ನವಿಸ್, ಪುನಃ ಮುಖ್ಯಮಂತ್ರಿ ಗಾದಿಗೆ ಏರಿದ್ದಾರೆ. ರಾತ್ರಿ ಬದಲಾಗುವುದರೊಳಗೆ ಬದಲಾದ ಮಹಾರಾಷ್ಟ್ರದ ರಾಜಕೀಯ ಚಿತ್ರಣದಲ್ಲಿ ದೇವೇಂದ್ರ ಫಡ್ನವಿಸ್ ಅವರ ಪಾತ್ರ ಸಾಮಾನ್ಯವೇನಲ್ಲ.

ಚುನಾವಣೆಯಲ್ಲಿ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದ ಫಡ್ನವಿಸ್, ಈಗ ಸೈದ್ಧಾಂತಿಕವಾಗಿ ವಿಭಿನ್ನ ನಿಲುವು ಹೊಂದಿರುವ ಪಕ್ಷದೊಂದಿಗೆ ಜತೆಗೂಡಿ ಸರ್ಕಾರ ಸ್ಥಾಪಿಸಿದ್ದಾರೆ. ಹೀಗಾಗಿ ಅವರ ಆಡಳಿತ ವೈಖರಿ ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ವಿರೋಧಪಕ್ಷದ ಸ್ಥಾನದಲ್ಲಿದ್ದ ಎನ್‌ಸಿಪಿ ಅವರ ಸರ್ಕಾರದ ಭಾಗವಾಗಿರಲಿದೆ. ಮಿತ್ರಪಕ್ಷವಾಗಿದ್ದ ಶಿವಸೇನಾ, ವಿರೋಧಪಕ್ಷದ ಸ್ಥಾನದಲ್ಲಿ ಕೂರಲಿದೆ. ಐದು ವರ್ಷ ಸರ್ಕಾರ ಉಳಿಸಲು ಈ ಹಿಂದಿಗಿಂತಲೂ ಫಡ್ನವಿಸ್ ಹೆಚ್ಚಿನ ಕಸರತ್ತು ನಡೆಸುವುದು ಅನಿವಾರ್ಯ.

ಮುಂಜಾನೆ 'ಮಹಾ' ಕ್ರಾಂತಿ: ಟ್ರೆಂಡಿಂಗ್ ಆಯ್ತು ಫಡ್ನವಿಸ್ ಟ್ವೀಟ್

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಉಂಟಾದಾಗ, ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದಾಗಲೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರದಲ್ಲಿ ಫಡ್ನವಿಸ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದರು. ಅವರ ಹೇಳಿಕೆ ಈಗ ಮುನ್ನೆಲೆಗೆ ಬಂದಿದ್ದು, ಫಡ್ನವಿಸ್ ಅವರು ಗಾದಿಗೆ ಏರುವ ಸಿದ್ಧತೆ ಕಳೆದ ಒಂದು ತಿಂಗಳಿನಿಂದಲೂ ತಣ್ಣನೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಫಡ್ನವಿಸ್ ಅವರ ವ್ಯಕ್ತಿ ಚಿತ್ರ ಇಲ್ಲಿದೆ.

18ನೇ ಮುಖ್ಯಮಂತ್ರಿ

18ನೇ ಮುಖ್ಯಮಂತ್ರಿ

2014-2019ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಫಡ್ನವಿಸ್, ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಗಪುರ ನೈಋತ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಅವರು, ವಸಂತರಾವ್ ನಾಯಕ್ ಅವರ ಬಳಿಕ ಮಹಾರಾಷ್ಟ್ರದಲ್ಲಿ ಪೂರ್ಣಾವಧಿ ಆಡಳಿತ ನಡೆಸಿದ ಎರಡನೆಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಗಪುರದಲ್ಲಿ ಜನನ

ನಾಗಪುರದಲ್ಲಿ ಜನನ

ನಾಗಪುರದಲ್ಲಿ ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ (1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವಿಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ದೇವೇಂದ್ರ ಅವರ ತಂದೆ ಗಂಗಾಧರ ಫಡ್ನವಿಸ್ ನಾಗಪುರ ವಿಧಾನಪರಿಷತ್ ಸದಸ್ಯರಾಗಿದ್ದವರು. ತಾಯಿ ಸರಿತಾ ಫಡ್ನವಿಸ್ ಅಮರಾವತಿಯ ಕಲೋಟಿ ಕುಟುಂಬದ ವಂಶದವರು. ವಿದರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ಮಾಜಿ ನಿರ್ದೇಶಕರಾಗಿದ್ದವರು.

ಮಹಾರಾಷ್ಟ್ರದಲ್ಲಿ ಮತ್ತೆ ಡಿಸಿಎಂ ಸ್ಥಾನ ಪಡೆದ ಅಜಿತ್ ಪವಾರ್ ವ್ಯಕ್ತಿಚಿತ್ರ

ಇಂದಿರಾ ಗಾಂಧಿ ವಿರುದ್ಧ ಅಸಮಾಧಾನ

ಇಂದಿರಾ ಗಾಂಧಿ ವಿರುದ್ಧ ಅಸಮಾಧಾನ

ಇಂದಿರಾ ಕಾನ್ವೆಂಟ್‌ನಲ್ಲಿ ದೇವೇಂದ್ರ ಫಡ್ನವಿಸ್ ಅವರ ಪ್ರಾಥಮಿಕ ಕಲಿಕೆ ಆರಂಭವಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನಸಂಘದಲ್ಲಿದ್ದ ಗಂಗಾಂಧರ್, ಇಂಧಿರಾ ಗಾಂಧಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲು ಸೇರಿದರು. ತಮ್ಮ ತಂದೆಯನ್ನು ಜೈಲಿಗೆ ಕಳುಹಿಸಲು ಕಾರಣವಾದ ಇಂದಿರಾ ಗಾಂಧಿ ಅವರ ಹೆಸರಿನಲ್ಲಿದ್ದ ಕಾನ್ವೆಂಟ್‌ನಲ್ಲಿ ಶಿಕ್ಷಣ ಮುಂದುವರಿಸಲು ದೇವೇಂದ್ರ ನಿರಾಕರಿಸಿದರು. ಅಲ್ಲಿಂದ ಸರಸ್ವತಿ ವಿದ್ಯಾಲಯ ಶಾಲೆಗೆ ವರ್ಗಾವಣೆ ಪಡೆದುಕೊಂಡರು.

ಫಡ್ನವಿಸ್ ಕುಟುಂಬ ಮತ್ತು ವಿದ್ಯಾಭ್ಯಾಸ

ಫಡ್ನವಿಸ್ ಕುಟುಂಬ ಮತ್ತು ವಿದ್ಯಾಭ್ಯಾಸ

ಕುಟುಂಬ: ಪತ್ನಿ ಅಮೃತಾ ರಾನಡೆ, 2006ರಲ್ಲಿ ಮದುವೆ, ಆಕ್ಸಿಸ್ ಬ್ಯಾಂಕ್ ನಲ್ಲಿ ಉದ್ಯೋಗಿ, ಪುತ್ರಿ ದಿವಿಜಾ ಫಡ್ನವೀಸ್.

* ತಂದೆ ಗಂಗಾಧರ್ ರಾವ್ ಫಡ್ನವೀಸ್, ತಾಯಿ ಸವಿತಾ ಫಡ್ನವೀಸ್

* ವಿದ್ಯಾಭ್ಯಾಸ : ಬಿ.ಎ (ಕಾನೂನು), ಎಲ್.ಎಲ್.ಬಿ.

* ಬರ್ಲಿನ್ ನ ಜರ್ಮನ್ ಫೌಂಡೇಷನ್ ಫಾರ್ ಇಂಟರ್ ನ್ಯಾಷನಲ್ ಡೆವಲಪ್ ಮೆಂಟ್ ನಿಂದ ಬಿಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ನಲ್ಲಿ ಡಿಪ್ಲೋಮಾ * ನಾಗಪುರ ವಿಶ್ವವಿದ್ಯಾಲಯದಿಂದ ಎಲ್ಎಲ್ ಬಿ

* ಬೋಸ್ ಪ್ರೈಜ್ ಇನ್ ಹಿಂದೂ ಲಾ ಗೌರವ.

ನಿದ್ದೆಯಿಂದ ಏಳುವ ಹೊತ್ತಿಗೆ ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಅಜಿತ್ ಪವಾರ್ ಡಿಸಿಎಂ!

ಫಡ್ನವಿಸ್ ರಾಜಕೀಯ ಬದುಕು

ಫಡ್ನವಿಸ್ ರಾಜಕೀಯ ಬದುಕು

* 1986-89 ಎಬಿವಿಪಿಯಲ್ಲಿ ಕಾರ್ಯ ಇದಕ್ಕೂ ಮುನ್ನ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.

* ವಾರ್ಡ್ ಅಧ್ಯಕ್ಷರಾಗಿ ಬಿಜೆಪಿಗೆ ಸೇರ್ಪಡೆ

* 1992 - ಎರಡು ಅವಧಿಗೆ ನಾಗಪುರದ ಯುವ ಕಾರ್ಪೊರೇಟರ್ ಆಗಿ ಆಯ್ಕೆ

* 1997 - 27ನೇ ವಯಸ್ಸಿಗೆ ನಾಗಪುರದ ಮೇಯರ್ ಆಗಿದ್ದರು.

* 1990 : ನಾಗಪುರದ ಪಶ್ಚಿಮ ಭಾಗದ ಬಿಜೆಪಿ ಸದಸ್ಯ

* 1992 : ನಾಗಪುರ ನಗರದ ಯುವಮೋರ್ಚಾ ಅಧ್ಯಕ್ಷ

* 1994 : ಯುವಮೋರ್ಚಾದ ರಾಜ್ಯ ಉಪಾಧ್ಯಕ್ಷ

* 2001 : ರಾಷ್ಟ್ರೀಯ ಯುವಮೋರ್ಚಾದ ಉಪಾಧ್ಯಕ್ಷ

* 2010 : ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

* 2013 : ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ

*2014: ಮಹಾರಾಷ್ಟ್ರದ ಎರಡನೇ ಕಿರಿಯ ಮುಖ್ಯಮಂತ್ರಿಯಾಗಿ 2019ರವರೆಗೆ ಆಡಳಿತ

ಫಡ್ನವಿಸ್ ಸಂಪರ್ಕ ವಿಳಾಸ

ಫಡ್ನವಿಸ್ ಸಂಪರ್ಕ ವಿಳಾಸ

#276, ರಾವ್ ಸಾಹೇಬ್ ಫಡ್ನವೀಸ್ ಪಾರ್ಕ್, ಧರ್ಮಂಪೇಠ್, ನಾಗಪುರ, 440 010

ವೆಬ್ ತಾಣ: http://www.devendrafadnavis.in

ಫೇಸ್ ಬುಕ್ : https://www.facebook.com/devendra.fadnavis

ಟ್ವಿಟ್ಟರ್ : https://twitter.com/Dev_Fadnavis

devendra fadnavis profile 1.jpg

English summary
Devendra Fadnavis took oath as Chief Minister of Maharashtra on Saturday for the 2nd time. Here is his brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more