• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2018ರಲ್ಲಿ ವಿರೋಧ ಪಕ್ಷಗಳನ್ನು ಬೆಂಡೆತ್ತಿದ ಪ್ರಧಾನಿ ನರೇಂದ್ರ ಮೋದಿ ಭಾಷಣಗಳು

|

ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡ ಅಪ್ರತಿಮ ಭಾಷಣಕಾರರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಚೂಣಿಯಲ್ಲಿ ನಿಲ್ಲುತ್ತಾರೆ. ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ವಿಚಾರವಾಗಲಿ, ಸರಕಾರದ ಕಾರ್ಯಕ್ರಮಗಳನ್ನು ಸಾರ್ವಜನಿಕರ ಮುಂದಿಡುವಲ್ಲಿ ಮೋದಿ ನಿಸ್ಸೀಮರು.

2018ರಲ್ಲಿ ನಡೆದ ಹಲವು ಅಸೆಂಬ್ಲಿ ಚುನಾವಣೆಗಳಲ್ಲಿ, ಮೋದಿ ಪ್ರಚಾರ ಮಾಡಿದ ನಂತರ, ಮತದಾರ ಬಿಜೆಪಿಯತ್ತ ವಾಲಿದ ಅಂಕಿಅಂಶಗಳೂ ಇವೆ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ಕಡೆ ಈ ವರ್ಷ ನಡೆದ ಚುನಾವಣೆಯಲ್ಲಿ, ಬಿಜೆಪಿ ಅಧಿಕಾರಕ್ಕೇರಲು ಶಕ್ತವಾಗದಿದ್ದರೂ, ಮೋದಿ ಭಾಷಣದ ನಂತರ, ಮತದಾರನ ಮೂಡ್ ಬದಲಾದದ್ದು ನಮ್ಮ ಮುಂದಿದೆ.

ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು

'ಮನ್ ಕೀ ಬಾತ್' ಬಾನುಲಿ ಕಾರ್ಯಕ್ರಮದ ಮೂಲಕವೂ, ಜನಸಾಮಾನ್ಯರನ್ನು ಒಂದು ಹಂತಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ಮೋದಿ, ಅಧಿಕಾರಕ್ಕೆ ಬಂದಾಗಿನಿಂದ, ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡಿದ್ದರೂ, ನೇರವಾಗಿ ಪತ್ರಿಕಾಗೋಷ್ಠಿ ನಡೆಸಿದ ಉದಾಹರಣೆಗಳಿಲ್ಲ.

ದಿನವೊಂದಕ್ಕೆ ಮೈಲಿಯುದ್ದ ಕ್ರಮಿಸಿ ಹಲವು ರ‍್ಯಾಲಿಗಳನ್ನು ನಡೆಸಿದರೂ, ಪ್ರತೀ ಸಭೆಗಳಲ್ಲಿ ಅದೇ ಹುಮ್ಮಸ್ಸಿನಿಂದ ಭಾಷಣ ಮಾಡುವ ಮೋದಿ, ಸಾಮಾನ್ಯವಾಗಿ ಗಣ್ಯರ ಹೆಸರನ್ನು ಸಂಬೋಧಿಸುವಲ್ಲಿ ಎಡವಟ್ಟು ಮಾಡಿಕೊಳ್ಳುವುದು ಕಮ್ಮಿ.

2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡುವ ಈ ರೀತಿಯ ಎಡವಟ್ಟುಗಳನ್ನೇ ಹೈಲೆಟ್ ಮಾಡಿ, ಕಾಂಗ್ರೆಸ್ಸಿಗರನ್ನು ಬೆಂಡೆತ್ತುವ ಮೋದಿಯವರ ಹಲವು ಭಾಷಣಗಳು, 2018ರಲ್ಲಿ ಜನಪ್ರಿಯಗೊಂಡಿದ್ದವು. ಅಂತಹ ಕೆಲವೊಂದು ಭಾಷಣದ ಝಲಕ್ ಅನ್ನು ಕೆಳಗಿನ ಸ್ಲೈಡಿನಲ್ಲಿ ನೀಡಲಾಗಿದೆ..

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ

ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ

ವಿಶ್ವದ ಆರನೇ ಪ್ರಭಲ ಆರ್ಥಿಕ ಶಕ್ತಿಯಾಗಿರುವ ನಮ್ಮ ದೇಶದ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲು ನನಗೆ ಹೆಮ್ಮೆಯೆನಿಸುತ್ತದೆ. ಕಳೆದ ಪಾರ್ಲಿಮೆಂಟ್ ಅಧಿವೇಶನ, ಇತರೇ ಹಿಂದುಳಿದ ವರ್ಗದ ಬಿಲ್ ಪಾಸ್ ಮಾಡುವುದಕ್ಕೆ ಸಾಕ್ಷಿಯಾಯಿತು. 1.25 ಬಿಲಿಯನ್ ಜನರ ಕನಸು ಸಾಕಾರಗೊಳ್ಳದೇ ಇರದು. 2022ಕ್ಕೆ ಭಾರತ 75 ವರ್ಷವನ್ನು ಪೂರೈಸುತ್ತಿದೆ. ಅಂತರಿಕ್ಷಕ್ಕೆ ನಮ್ಮ ದೇಶದ ಧ್ವಜವನ್ನು ಹಿಡಿದುಕೊಂಡು ಮಹಿಳೆ ಹೋಗುವ ಸಾಧನೆಯನ್ನು ಎದುರು ನೋಡುತ್ತಿದ್ದೇನೆ - ಆಗಸ್ಟ್ 15, ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ.

ಪ್ರಸಿದ್ಧ ಘೋಷಣೆ 'ಗರೀಬಿ ಹಠಾವೋ'

ಪ್ರಸಿದ್ಧ ಘೋಷಣೆ 'ಗರೀಬಿ ಹಠಾವೋ'

ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರಸಿದ್ಧ ಘೋಷಣೆ 'ಗರೀಬಿ ಹಠಾವೋ' ಎಂಬುದು ಸುಳ್ಳು ಭರವಸೆ ಮತ್ತು ಬ್ಯಾಂಕ್ ಗಳ ರಾಷ್ಟ್ರೀಕರಣ ಎಂಬುದು ಬಡವರ ಹೆಸರಲ್ಲಿ ಮಾಡಿದ 'ವಂಚನೆ'. ನೆಹರೂ-ಗಾಂಧಿ ಕುಟುಂಬದ ನಾಲ್ಕು ತಲೆಮಾರು ಈ ದೇಶವನ್ನು ಆಳಿದೆ. ಆದರೆ ಜನರನ್ನು ಮೋಸ ಮಾಡುವ ಯಾವೊಂದು ಅವಕಾಶವನ್ನೂ ಬಿಟ್ಟಿಲ್ಲ. ರಾಹುಲ್ ಗಾಂಧಿ ಅವರ ಅಜ್ಜಿ ಶ್ರೀಮತಿ ಇಂದಿರಾಗಾಂಧಿ ಅವರು ನಲವತ್ತು ವರ್ಷಗಳ ಹಿಂದೆ ಬಡತನ ನಿರ್ಮೂಲನೆ ಘೋಷಣೆ ಮಾಡಿರಲಿಲ್ಲವಾ? - ಮಧ್ಯಪ್ರದೇಶದ ಮಂಡ್ಸೌರ್ ನಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ.

ರಾಹುಲ್ ಗಾಂಧಿಗೆ ತಿರುಗೇಟು; ಇಂದಿರಾ ವಿರುದ್ಧ ಮೋದಿ ಟೀಕಾಸ್ತ್ರ

ಕಾಂಗ್ರೆಸ್ ಪಕ್ಷವು ಹೆಚ್ಚು ಕುತಂತ್ರಿ ಆಗಿದೆ

ಕಾಂಗ್ರೆಸ್ ಪಕ್ಷವು ಹೆಚ್ಚು ಕುತಂತ್ರಿ ಆಗಿದೆ

ತುರ್ತು ಪರಿಸ್ಥಿತಿಯ ದಿನಗಳ ನಂತರ ಕಾಂಗ್ರೆಸ್ ಪಕ್ಷವು ಹೆಚ್ಚು ಕುತಂತ್ರಿ ಆಗಿದೆ. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳನ್ನು ಅವಮಾನ ಮಾಡಿದೆ. ಅದು ಸೇನೆ ಇರಲಿ ಅಥವಾ ಸಿಎಜಿ ಇರಲಿ. ಅಷ್ಟೇ ಏಕೆ ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ಪ್ರಶ್ನಿಸಿದೆ. ಅದು ತನಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಪ್ರಶ್ನಿಸಿದೆ - ವೆಲ್ಲೂರ್, ಕಾಂಚೀಪುರಂ, ವಿಲ್ಲುಪುರಂ, ದಕ್ಷಿಣ ಚೆನ್ನೈ ಜಿಲ್ಲೆಗಳು ಹಾಗೂ ಪುದುಚೆರಿಯ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್.

ಭ್ರಷ್ಟ ಹಾಗೂ ನಿರಂಕುಶ ದಾರಿಯಿಂದ ಬಿಡಲಿಲ್ಲ

ಭ್ರಷ್ಟ ಹಾಗೂ ನಿರಂಕುಶ ದಾರಿಯಿಂದ ಬಿಡಲಿಲ್ಲ

ಕಾಂಗ್ರೆಸ್ ಪಕ್ಷವು ನ್ಯಾಯಾಂಗವನ್ನು ಕೂಡ ತನ್ನ ಭ್ರಷ್ಟ ಹಾಗೂ ನಿರಂಕುಶ ದಾರಿಯಿಂದ ಬಿಡಲಿಲ್ಲ. ಅಧಿಕಾರಕ್ಕೆ ಬಂದರೆ ಹತ್ತು ದಿನದೊಳಗೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆರು ತಿಂಗಳಾದರೂ ಏನೂ ಮಾಡಿಲ್ಲ ಎಂದು ಕರ್ನಾಟಕ ಸರಕಾರವನ್ನು ಬೆಂಡೆತ್ತಿದ ಮೋದಿ, ಯಾವಾಗೆಲ್ಲ ಆ ಪಕ್ಷದ ಮೇಲೆ ದಾವೆ ಹೂಡಲಾಗಿದೆಯೋ ಆಗೆಲ್ಲ ನ್ಯಾಯಾಂಗವೂ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ತೊಂದರೆ ಮಾಡಿದೆ - ಪ್ರಯಾಗ್ ರಾಜ್ ನಲ್ಲಿ ಸಾರ್ವಜನಿಕ ಸಭೆ.

ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!

ದುರಹಂಕಾರ ಮತ್ತು ದಬ್ಬಾಳಿಕೆಯ ಸಂಸ್ಕೃತಿಯನ್ನು ಸಹಿಸುವುದಿಲ್ಲ

ದುರಹಂಕಾರ ಮತ್ತು ದಬ್ಬಾಳಿಕೆಯ ಸಂಸ್ಕೃತಿಯನ್ನು ಸಹಿಸುವುದಿಲ್ಲ

'ಇಂದಿನ ಯುವಕರು ಭ್ರಷ್ಟಾಚಾರ, ದುರಹಂಕಾರ ಮತ್ತು ದಬ್ಬಾಳಿಕೆಯ ಸಂಸ್ಕೃತಿಯನ್ನು ಸಹಿಸುವುದಿಲ್ಲ. ಅದು ಸೈಕಲ್ (ಸಮಾಜವಾದಿ ಪಕ್ಷ) ಇರಲಿ, ಅಥವಾ ಆನೆ (ಬಹುಜನ ಸಮಾಜವಾದಿ ಪಕ್ಷ)ಯಿರಲಿ, ಅವರ ನಾಟಕೀಯತೆಯನ್ನು ದೇಶ ತಿಳಿದಿದೆ'. ಅವಿಶ್ವಾಸ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಬದಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕತ್ತನ್ನು ತಗ್ಗಿಸಿದ್ದಾರೆ - ಶಹಜಹಾನ್ ಪುರದಲ್ಲಿ ಸಾರ್ವಜನಿಕ ಸಭೆ.

ನಿಮ್ಮ ಕಣ್ಣಿನ ಆಟವನ್ನು ದೇಶವೇ ಇಂದು ಟಿವಿಯಲ್ಲಿ ನೋಡಿದೆ.

ನಿಮ್ಮ ಕಣ್ಣಿನ ಆಟವನ್ನು ದೇಶವೇ ಇಂದು ಟಿವಿಯಲ್ಲಿ ನೋಡಿದೆ.

'ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಮಗೆ ಸಾಧ್ಯವಿಲ್ಲ. ನೀವು ನಾಮ್ ದಾರ್...ನಾವು ಕಾಮ್ ದಾರ್'. ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಅವರ ಮೇಲೆಯೇ ಅವರಿಗೆ ವಿಶ್ವಾಸವಿಲ್ಲ. 'ನಿಮ್ಮ ಕಣ್ಣಿನ ಆಟವನ್ನು ದೇಶವೇ ಇಂದು ಟಿವಿಯಲ್ಲಿ ನೋಡಿದೆ. ಪ್ರಧಾನಿ ಕುರ್ಚಿ ಏರಲು ರಾಹುಲ್ ಗಾಂಧಿ ಆತುರರಾಗಿದ್ದಾರೆ. ಕೆಲವರು ತಮ್ಮನ್ನು ಶಿವ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ನಾನು ಕೂಡಾ ಶಿವನ ಭಕ್ತ. ಶಿವನು 2024ರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಇದೇ ರೀತಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಅವಕಾಶ ನೀಡಲಿ ಎಂದು ಕೇಳಿಕೊಳ್ಳುತ್ತೇನೆ' - ಮೋದಿಯ ಜನಪ್ರಿಯ ಅವಿಶ್ವಾಸ ನಿರ್ಣಯ ಮೇಲಿನ ಭಾಷಣ.

2018ರಲ್ಲಿ ಧೂಳೆಬ್ಬಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಷಣಗಳ ಹೈಲೆಟ್ಸ್

ತನಗೇ ಎಲ್ಲ ಗೊತ್ತು ಎಂದುಕೊಂಡಿರುವ ಮಾಜಿ ವಿತ್ತ ಸಚಿವರು

ತನಗೇ ಎಲ್ಲ ಗೊತ್ತು ಎಂದುಕೊಂಡಿರುವ ಮಾಜಿ ವಿತ್ತ ಸಚಿವರು

ಈ ದೇಶದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿದ್ದು ಅರ್ಥಶಾಸ್ತ್ರಜ್ಞ ಮಾಜಿ ಪ್ರಧಾನಿ ಮತ್ತು 'ತನಗೇ ಎಲ್ಲ ಗೊತ್ತು' ಎಂದು ಕೊಂಡಿರುವ ಮಾಜಿ ವಿತ್ತ ಸಚಿವರು. ಭಾರತೀಯ ಅರ್ಥ ವ್ಯವಸ್ಥೆಗೆ ಅವರು ಕೊಟ್ಟ ಪೆಟ್ಟನ್ನು ಸರಿಪಡಿಸಲು ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಪರಿಚಯಿಸಿದ್ದೇವೆ. ಭಾರತದಲ್ಲಿ ಉದ್ಯಮದ ಬಾಗಿಲುಗಳು ತೆರೆದುಕೊಳ್ಳುವಂತೆ ಮಾಡಿದ್ದೇವೆ' - ಸ್ವರಾಜ್ಯ ನಿಯತಕಾಲಿಕಕ್ಕೆ ನೀಡಿದ ಸಂದರ್ಶನ.

ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ

ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ

ಒಂದು ಕುಟುಂಬದ ಅಧಿಕಾರ ದಾಹಕ್ಕೆ, ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರತಿ ಮನುಷ್ಯನೂ ಭಯದಲ್ಲೇ ಬದುಕುತ್ತಿದ್ದ. ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ನಾವು ತುರ್ತು ಪರಿಸ್ಥಿತಿ ದಿನವನ್ನು ಕರಾಳ ದಿನ ಎಂದು ಆಚರಿಸುವುದು ಕೇವಲ ಕಾಂಗ್ರೆಸ್ ಅನ್ನು ಟೀಕಿಸುವುದಕ್ಕಲ್ಲ. ಆದರೆ ನಮ್ಮ ಇಂದಿನ ಯುವಕರಿಗೆ ಭೂತಕಾಲದಲ್ಲಿ ಏನಾಯಿತು ಎಂಬುದು ತಿಳಿಯಬೇಕು ಎಂಬುದು ನಮ್ಮ ಉದ್ದೇಶ - ಮುಂಬೈನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minsiter Narendra Modi famous speeches in the year 2018. In his most of the speeches PM Modi lambasted opposition parties and his speech during the no confidence motion was the most popular one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more