• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿಚಿತ್ರ: ಯಶವಂತ ಸಿನ್ಹಾ ಈಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿ

|
Google Oneindia Kannada News

ಭಾರತೀಯ ಜನತಾ ಪಕ್ಷದ ಆಡಳಿತ ಚುಕ್ಕಾಣಿಯನ್ನು ನರೇಂದ್ರ ಮೋದಿ- ಅಮಿತ್ ಶಾ ವಹಿಸಿಕೊಂಡ ಬೆನ್ನಲ್ಲೇ ಯಶವಂತ ಸಿನ್ಹಾ ಸೇರಿದಂತೆ ಹಲವಾರು ಹಿರಿತಲೆಗಳನ್ನು ಪಕ್ಷ ತೊರೆಯುವಂತೆ ಮಾಡಿದ್ದರು. ಇದಕ್ಕೆ ವಯೋಮಿತಿ, ನಿವೃತ್ತಿ, ಪಕ್ಷದ ಹಿತದೃಷ್ಟಿ ಹೀಗೆ ನಾನಾ ಕಾರಣ ನೀಡಲಾಗಿತ್ತು. ಹೀಗೆ ಸೈಡ್ ಲೈನ್ ಆಗಿದ್ದವರ ಪೈಕಿ ಪ್ರಮುಖ ನಾಯಕರಾಗಿದ್ದ ಯಶವಂತ ಸಿನ್ಹಾ ಅಂದಿನಿಂದ ಮೋದಿ ವಿರೋಧಿ ಅಲೆಯಲ್ಲಿ ತೇಲುತ್ತಾ ಬಿಜೆಪಿ ಸರ್ಕಾರವನ್ನು ದೂಷಿಸುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ಪ್ರಧಾನ ಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಯಶವಂತ ಸಿನ್ಹಾ ಇಂದು ವಿಪಕ್ಷಗಳ ಅಧಿಕೃತ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಯಾಗಿದ್ದಾರೆ.

ಕೇಂದ್ರದಲ್ಲಿ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾರನ್ನು ಬಿಜೆಪಿಯಿಂದ ಹೊರಹಾಕಿದ ಬಳಿಕ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಬಿಜೆಪಿಯಲ್ಲಿದ್ದಾಗ ಪಿಎಂ ಸ್ಥಾನಕ್ಕೆ ಯಶವಂತ್ ಸಿನ್ಹಾರನ್ನು ಪರಿಗಣಿಸದಿದ್ದರೂ, ಬಿಜೆಪಿಯಿಂದ ಹೊರ ಬಂದ ಬಳಿಕ ಸಾರ್ವಜನಿಕ ಸಭೆಗಳಲ್ಲಿ ಆಗಾಗ ದೇಶದ ಪರಿಸ್ಥಿತಿಯನ್ನು ಸುಧಾರಿಸಬಲ್ಲ ಸಮರ್ಥ ವ್ಯಕ್ತಿ ಯಾರಿದ್ದಾರೆ ಎಂಬ ಪ್ರಶ್ನೆಗೆ ನಾನು ಸಿದ್ಧ ಎಂದು ಹೇಳಿದ್ದರು.

ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಘೋಷಣೆ

2018ರಲ್ಲಿ ಮಾತನಾಡಿದ್ದ ಯಶವಂತ್ ಸಿನ್ಹಾ, ''ನಾನು ಸಕ್ರೀಯ ರಾಜಕಾರಣದಿಂದ ಸನ್ಯಾಸ ತೆಗೆದುಕೊಳ್ಳುತ್ತಿದ್ದೇನೆ. ಇಂದು ನಾನು ಬಿಜೆಪಿಯೊಂದಿಗೆ ಎಲ್ಲ ಸಂಬಂಧಗಳಿಂದ ಕಳಚಿಕೊಳ್ಳುತ್ತಿದ್ದೇನೆ,'' ಎಂದಿದ್ದರು.

ಇದಕ್ಕೂ ಮುನ್ನ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಉಗ್ರ ಹೋರಾಟಕ್ಕಾಗಿ ರಾಷ್ಟ್ರಮಂಚ್ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ನಂತರ ಟಿಎಂಸಿ ಸೇರಿ ''ಪಿಎಂ ಆಗಲು ಮಮತಾ ಬ್ಯಾನರ್ಜಿ ಸೂಕ್ತ ವ್ಯಕ್ತಿ'' ಎಂದು ಘೋಷಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇವಾವಧಿ ಮುಗಿಯುತ್ತಿದ್ದು, ಜುಲೈ 18ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಜುಲೈ 21ರಂದು ಮತ ಎಣಿಕೆಯಾಗಿ ನೂತನ ರಾಷ್ಟ್ರಪತಿ ಘೋಷಣೆ ಆಗಲಿದೆ.

 ರಾಜಕೀಯ ಬದುಕು:

ರಾಜಕೀಯ ಬದುಕು:

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಸಿನ್ಹಾ, ಮೋದಿ ಸರ್ಕಾರದ ನಿಲುವುಗಳನ್ನು ಹಲವು ಬಾರಿ ಖಂಡಿಸಿದ್ದಾರೆ. ಮೋದಿ ಸರ್ಕಾರದ ಆರ್ಥಿಕ ನೀತಿ, ಇತ್ತೀಚಿನ ನ್ಯಾಯಾಂಗ ವ್ಯವಸ್ಥೆಯ ಬಿಕ್ಕಟ್ಟನ್ನು ಕಟುವಾಗಿ ಸಿನ್ಹಾ ಟೀಕಿಸಿದ್ದಾರೆ.

ಬಿಹಾರ ಕೇಡರ್ ಐಎಎಸ್ ಅಧಿಕಾರಿಯಾಗಿದ್ದ ಯಶವಂತ್ ಸಿನ್ಹಾ ಅವರು ಮೂಲ ಜನತಾ ಪಾರ್ಟಿಯಿಂದ ರಾಜಕೀಯ ಬೆಳವಣಿಗೆ ಕಂಡವರು. 1984 ರಿಂದ 1991 ತನಕ ಹಾಗೂ ನಂತರ 2018ರಲ್ಲಿ ಪಕ್ಷ ತೊರೆಯುವ ತನಕ ಬಿಜೆಪಿ ಹಿರಿಯ ಮುಖಂಡರಾಗಿ ಗುರುತಿಸಿಕೊಂಡವರು.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಆರ್ಥಿಕ ನೀತಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಂಜೆ ವೇಳೆ ಕೇಂದ್ರ ಬಜೆಟ್ ಮಂಡನೆ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದರು.

ಫ್ರೆಂಚ್ ಸರ್ಕಾರ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದಿದ್ದಾರೆ.

 ಪ್ರಮುಖ ಘಟನಾವಳಿಗಳು:

ಪ್ರಮುಖ ಘಟನಾವಳಿಗಳು:

1984: ಜನತಾ ದಳದ ಸಕ್ರಿಯ ಕಾರ್ಯಕರ್ತರಾಗಿ ಸೇರ್ಪಡೆ
1986: ಜನತಾ ದಳದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾದರು
1990-91: ಚಂದ್ರಶೇಖರ್ ಸರ್ಕಾರದಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದರು
1996: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾದರು.
1998: ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಿತ್ತ ಸಚಿವರಾದರು.
2002: ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಣೆ
2004: ಹಜಾರಿಭಾಗ್ ಲೋಕಸಭಾ ಕ್ಷೇತ್ರದಿಂದ ಸೋಲು.
2005: ರಾಜ್ಯಸಭಾ ಸದಸ್ಯರಾಗಿ ಆಯ್ಕೆ
2009: ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
2018: ಅಧಿಕೃತವಾಗಿ ಬಿಜೆಪಿಯಿಂದ ಹೊರಕ್ಕೆ
2021: ಮಾರ್ಚ್ 13ರಂದು ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
2022: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ, ವಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.

 ಕುಟುಂಬ ವಿವರ:

ಕುಟುಂಬ ವಿವರ:

84 ವರ್ಷ ವಯಸ್ಸಿನ ಯಶವಂತ ಸಿನ್ಹಾ ಹುಟ್ಟಿದ್ದು ಬ್ರಿಟಿಷರ ಕಾಲದ ನಲಂದಾ ಪ್ರದೇಶದ ಅಶ್ವಥಾನ್ ಎಂಬಲ್ಲಿ ಸದ್ಯ ಬಿಹಾರದಲ್ಲಿದೆ.
ಸದ್ಯ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಕಾಯಸ್ಥ ಹಿಂದು ಮುಖಂಡರಾಗಿ ಅವಿಭಜಿತ ಬಿಹಾರ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ.
ಪತ್ನಿ: ನೀಲಿಮಾ ಸಿನ್ಹಾ
ಪುತ್ರರು: ಜಯಂತ್ ಸಿನ್ಹಾ(ರಾಜಕಾರಣಿ), ಸುಮಂತ್ ಸಿನ್ಹಾ(ಉದ್ಯಮಿ),
ಪುತ್ರಿ: ಶರ್ಮಿಳಾ (ಲೇಖಕಿ)

1958ರಲ್ಲಿ ಪಾಟ್ನಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

1960ರಲ್ಲಿ ಐಎಎಸ್ ಅಧಿಕಾರಿಯಾಗಿ ಸುಮಾರು 24 ವರ್ಷಗಳ ಕರ್ತವ್ಯ ನಿರ್ವಹಿಸಿದ್ದರು.

1984ರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣ ಪ್ರವೇಶ.

 ವಿವಾದಗಳು:

ವಿವಾದಗಳು:

2013ರಲ್ಲಿ ಅಂದಿನ ವಿತ್ತ ಸಚಿವ ಯಶವಂತ ಸಿನ್ಹಾರಿಂದ ಮೂವರು ಸಂಸದರಿಗೆ ಹಣ ಸಂದಾಯವಾಗಿತ್ತು. ಎನ್ಡಿಎ ಸೇರ್ಪಡೆಗೆ ಆಮಿಷ ಇದಾಗಿತ್ತು ಎಂದು ಪಪ್ಪು ಯಾದವ್ ಆರೋಪಿಸಿದ್ದರು.

ಯುಟಿಐ ಹಗರಣದಲ್ಲಿ ಯಶವಂತ ಸಿನ್ಹಾ ಹೆಸರು ಕೇಳಿ ಬಂದಿತ್ತು
2017ರ ಏಪ್ರಿಲ್ 4ರಂದು ಧಾರ್ಮಿಕ ಮೆರವಣಿಗೆ ವೇಳೆ ಪೊಲೀಸರಿಗೆ ಕಲ್ಲು ಎಸೆದ ಆರೋಪದ ಮೇಲೆ ಬಂಧಿಸಲಾಗಿತ್ತು.
2017ರಲ್ಲಿ ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.ಪುತ್ರ ಜಯಂತ್ ಸಿನ್ಹಾರಿಗೆ ಹಜಾರಿಬಾಗ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವ ಮೂಲಕ ಸ್ವಜನಪಕ್ಷಪಾತಿ ಎಂದು ಟೀಕೆಗೊಳಗಾಗಿದ್ದರು.

English summary
President Election 2022: Who is Yashwant Sinha? Yashwant Sinha Age, Caste, Family, Biography and Net Worth details in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X