ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು; ದೀಪಾವಳಿ ಜೊತೆ ಜೊತೆಗೆ ಹೋರಿ ಹಬ್ಬಕ್ಕೆ ಅಣಿಯಾಗಿದೆ ಶಿವಮೊಗ್ಗ

By ರಘು ಶಿಕಾರಿ
|
Google Oneindia Kannada News

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿರಾಳಕೊಪ್ಪ, ಸೊರಬ ತಾಲೂಕಿನಲ್ಲಿ ದೀಪಾವಳಿ ಹಬ್ಬದ ಬೆನ್ನಲ್ಲೇ ಹೋರಿ ಬೆದರಿಸುವ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಮಳೆಗಾಲದ ಬೇಸಾಯ ಮುಗಿದ ನಂತರ ಯಾವುದೇ ಶ್ರಮವಿಲ್ಲದೆ ಮೇವು ತಿಂದು ಕೊಬ್ಬಿರುವ ಹೋರಿಯ ಕೊಬ್ಬನ್ನು ಇಳಿಸಿ ಮುಂದಿನ ಬೆಳೆಗೆ ಹೋರಿಯನ್ನು ಸಜ್ಜುಗೊಳಿಸಲು ಹಿರಿಯರು ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಅದನ್ನು ಬೆದರಿಸುವುದು, ನೂರಾರು ಯುವಕರು ವೇಗವಾಗಿ ಬರುವ, ಕೊಬ್ಬಿದ ಕೊಬ್ಬರಿ ಕಟ್ಟಿದ ಹೋರಿಗಳನ್ನು ಹಿಡಿದು ಕೊಬ್ಬರಿಯನ್ನು ಅರಿಯುವ ಈ ಹಬ್ಬ ಅನೇಕ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

 ತಮಿಳುನಾಡಿನಿಂದ ಹೋರಿಗಳ ಖರೀದಿ

ತಮಿಳುನಾಡಿನಿಂದ ಹೋರಿಗಳ ಖರೀದಿ

ದೀಪಾವಳಿ ಹಬ್ಬಕ್ಕೆ ಎರಡು ಮೂರು ತಿಂಗಳು ಮುಂಚಿತವಾಗಿಯೇ ಹೋರಿಗಳನ್ನು ಲಕ್ಷಾಂತರ ರೂಪಾಯಿಗೆ ಹೊರ ರಾಜ್ಯಗಳಿಂದ, ವಿಷೇಶವಾಗಿ ತಮಿಳುನಾಡಿನಿಂದ ಖರೀದಿಸಿ ಅವುಗಳಿಗೆ ತಾಲೀಮು ಕೊಡುತ್ತಾರೆ. ಈ ಬಾರಿ ಕೂಡ ಹೊಸ ಹೋರಿಗಳು ಶಿಕಾರಿಪುರಕ್ಕೆ ಬಂದಿದ್ದು, ಪ್ರತಿ ದಿನ ಹೋರಿಗಳನ್ನು ಬೆಳಗ್ಗೆ ಮೈದಾನಕ್ಕೆ ಕರೆದುಕೊಂಡು ಹೋಗಿ ಓಡಿಸುವ ಹಾಗೂ ಹೋರಿಗಳಿಗೆ ಮೇವು ಹಿಂಡಿ ತಿನ್ನಿಸುವ, ಈಜುವ ತಯಾರಿ ನಡೆಸಿದ್ದಾರೆ.

ಹಾವೇರಿ:ನಿಷೇಧದ ನಡುವೆಯೂ ಹೋರಿ ಬೆದರಿಸುವ ಸ್ಪರ್ಧೆ, ಓರ್ವ ಬಲಿಹಾವೇರಿ:ನಿಷೇಧದ ನಡುವೆಯೂ ಹೋರಿ ಬೆದರಿಸುವ ಸ್ಪರ್ಧೆ, ಓರ್ವ ಬಲಿ

 ಹೋರಿ ಹಿಡಿಯಲು ಯುವಕರ ತಾಲೀಮು

ಹೋರಿ ಹಿಡಿಯಲು ಯುವಕರ ತಾಲೀಮು

ಈ ಬಾರಿ ಹೋರಿಗಳನ್ನು ಹಿಡಿದು ಬಹುಮಾನ ಪಡೆಯಬೇಕು ಎಂಬ ಹುಮ್ಮಸ್ಸಿನಿಂದ ಹಲವು ಯುವಕರು ಪ್ರತಿನಿತ್ಯ ಬೆಳಗ್ಗೆ ಓಡುವ, ಈಜುವ, ವ್ಯಾಯಾಮ ಮಾಡುವ ಮೂಲಕ ತಾಲೀಮು ನಡೆಸುತ್ತಿದ್ದಾರೆ. ಕಳೆದ ಬಾರಿ ಹಿಡಿಯಲು ಕೈತಪ್ಪಿದ ಹೋರಿಗಳನ್ನು ಈ ಬಾರಿ ಹಿಡಿಯಲೇಬೇಕು ಎಂದು ಕಾಯುತ್ತಿದ್ದಾರೆ. ಜೀವದ ಭಯವನ್ನು ಬಿಟ್ಟು ಹೋರಿ ಹಿಡಿಯುವ ಯುವಕರ ಧೈರ್ಯ ಸಾಹಸವೇ ಸರಿ.

 ಹೋರಿಗಳಿಗೆ ಕೊಬ್ಬರಿ ಸರ

ಹೋರಿಗಳಿಗೆ ಕೊಬ್ಬರಿ ಸರ

ದೀಪಾವಳಿ ಹಬ್ಬವೆಂದರೆ ರೈತರ ಹಬ್ಬ. ಅನ್ನ ನೀಡುವ ಭೂತಾಯಿಗೆ ಪೂಜೆ ಸಲ್ಲಿಸಿ ನಂತರ ಬೇಸಾಯಕ್ಕೆ ಬಳಸುವ ಎತ್ತಿನಗಾಡಿ, ಹೋರಿಗಳು, ವ್ಯವಸಾಯದ ಸಾಮಗ್ರಿಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಹೋರಿ ಮಾಲೀಕರು ಹೋರಿಗಳಿಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಅಲಂಕರಿಸುತ್ತಾರೆ. ಅವುಗಳಿಗೆ ಕೊಬ್ಬರಿ ಸರ ಪಿಪಿ (ಬಲೂನ್)ಗಳನ್ನು ಹಾಕುತ್ತಾರೆ. ಸುಮಾರು 5 ಅಡಿಗಿಂತ ಹೆಚ್ಚು ಎತ್ತರದ ಬಲೂನ್ ಗಳನ್ನು ಹೋರಿಗಳ ಕೊಂಬಿಗೆ ಕಟ್ಟಲಾಗುತ್ತದೆ. ಕೊಬ್ಬರಿಗಳನ್ನು ಸೊಂಟಕ್ಕೆ ಬೆನ್ನಿಗೆ ಹೋರಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕಟ್ಟುತ್ತಾರೆ. ಅನೇಕ ಬಣ್ಣಗಳಿಂದ ಹೋರಿಗಳನ್ನು ಸಿಂಗಾರ ಮಾಡಲಾಗುತ್ತದೆ. ಹೋರಿ ಮಾಲೀಕರು ತಮಗಿಷ್ಟವಾದ ಹೆಸರನ್ನು ಹೋರಿಗಳಿಗೆ ಇಡುತ್ತಾರೆ.

ಚಿತ್ರಗಳು : ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಚಿತ್ರಗಳು : ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

 ಬಯಲು ಸೀಮೆಯ ಪ್ರಸಿದ್ಧ ಕ್ರೀಡೆ

ಬಯಲು ಸೀಮೆಯ ಪ್ರಸಿದ್ಧ ಕ್ರೀಡೆ

ಹೋರಿ ಹಬ್ಬ ಅಥವಾ ಹಟ್ಟಿ ಹಬ್ಬ ಎಂದು ಕರೆಯಲಾಗುವ ಈ ಹಬ್ಬ ಬಯಲು ಸೀಮೆ ಭಾಗದಲ್ಲಿ ಪ್ರಸಿದ್ಧಿ ಹೊಂದಿದೆ. ಶಿಕಾರಿಪುರ ತಾಲೂಕು ಬಯಲುಸೀಮೆ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಈ ತಾಲೂಕಿನ ಅನೇಕ ಗ್ರಾಮೀಣ ಭಾಗದಲ್ಲೂ ಆಚರಿಸಲಾಗುವುದು. ಗ್ರಾಮದಲ್ಲಿ ಹಬ್ಬಕ್ಕೆ ಒಂದು ಸಮಿತಿ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ. ಹೋರಿ ಹಬ್ಬವನ್ನು ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಹಾಗೂ ಜಿಲ್ಲೆಯ ಅನೇಕ ಗ್ರಾಮೀಣ ಭಾಗದಲ್ಲಿ ಹಟ್ಟಿ ಹಬ್ಬ ಎಂದು ಆಚರಿಸಲಾಗುತ್ತದೆ. ಅತಿ ಹೆಚ್ಚು ರೈತರು ಯುವಜನತೆಯ ಈ ಹಬ್ಬ ನೋಡಲು ಆಗಮಿಸುತ್ತಾರೆ.

 ಹೋರಿ ಹಬ್ಬಕ್ಕೆ ಕಾನೂನಿನ ತೊಡಕು

ಹೋರಿ ಹಬ್ಬಕ್ಕೆ ಕಾನೂನಿನ ತೊಡಕು

ಹೋರಿ ಬೆದರಿಸುವ ಹಬ್ಬಕ್ಕೆ ಕಾನೂನು ಅಡ್ಡಿಪಡಿಸಿದೆ. ಹೋರಿ ಹಬ್ಬಕ್ಕೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಹೋರಿ ಹಬ್ಬ ಹೋರಾಟ ಸಮಿತಿ ಸದಸ್ಯರು ಮನವಿಯನ್ನು ಕೂಡ ಸಲ್ಲಿಸಿದ್ದರು.

ದೀಪಾವಳಿಯ ಸಂದರ್ಭದಲ್ಲಿ ರೈತರು ಜಾನುವಾರುಗಳನ್ನು ಸಿಂಗಾರ ಮಾಡಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಎಲ್ಲಾ ಹೋರಿ ಹಬ್ಬದ ಸಮಿತಿಯವರಿಗೆ ಗ್ರಾಮೀಣ ಭಾಗದ ಎಲ್ಲಾ ಗ್ರಾಮ ಮುಖ್ಯಸ್ಥರಿಗೆ ಪೋಲಿಸ್ ವೃತ್ತ ನಿರೀಕ್ಷಕ ಬಸವರಾಜ್ ಸೂಚಿಸಿದ್ದಾರೆ.

English summary
Preparations has been going on In Shikharipura, Shiralakoppa and Soraba taluk of shivamogga district for Hori habba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X