ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಅಚ್ಚರಿ, ಮತದಾರನ ಚಿತ್ತ 'ಎಡದಿಂದ ಬಲ'ಕ್ಕೆ!

|
Google Oneindia Kannada News

ಕೋಲ್ಕತ್ತಾ, ಮೇ 28: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಭವಿಷ್ಯವನ್ನೇ ಕತ್ತಲಾಗಿಸಿದ್ದು, ಪಶ್ಚಿಮ ಬಂಗಾಳದ ಫಲಿತಾಂಶ. ರಾಜ್ಯದಲ್ಲಿ ಬಿಜೆಪಿ ತನಗೊಬ್ಬ ಪ್ರತಿಸ್ಪರ್ಧಿ ಎಂದೇ ಎಣಿಸಿರದ ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಭಾರೀ ಆಘಾತವುಂಟಾಗಿದೆ.

ಅದರಲ್ಲೂ ಮತ ಹಂಚಿಕೆಯ ಪ್ರಮಾಣವನ್ನು ನೋಡಿದರೆ ಇಷ್ಟು ವರ್ಷ ಎಡಪಕ್ಷಕ್ಕೆ ಮತ್ತು ತೃಣಮೂಲ ಕಾಂಗ್ರೆಸ್ ನತ್ತ ಮಾತ್ರ ಒಲವು ತೋರಿದ್ದ ದಲಿತರು, ಒಬಿಸಿ, ಆದಿವಾಸಿಗಳು ಈ ಬಾರಿ ಬಿಜೆಪಿಯತ್ತ ವಾಲಿವೆ. ಅದೂ ಅನೂಹ್ಯ ಸಂಖ್ಯೆಯಲ್ಲಿ!

ದಿ ಹಿಂದು ಸಿಎಸ್ ಡಿಸಿ-ಲೋಕನೀತಿ ಫಲಿತಾಂಶೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಪಶ್ಚಿಮ ಬಂಗಾಳದ ಮತದಾರ ಎಡದಿಂದ ಬಲಕ್ಕೆ ವಾಲಿರುವ ಸ್ಪಷ್ಟ ಚಿತ್ರಣ ಈ ಸಮೀಕ್ಷೆಯ ಮೂಲಕ ಸಿಕ್ಕಿದೆ.

ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು

2014 ರ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿ 18(42) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ ಬಿಜೆಪಿಯ ಮತಹಂಚಿಕೆಯ ಪ್ರಮಾಣ 2014 ಕ್ಕೆ ಹೋಲಿಸಿದರೆ ಶೇ.40 ರಷ್ಟು ಹೆಚ್ಚಾಗಿದೆ! ಇದು ಎಡಪಕ್ಷ ಮತ್ತು ಟಿಎಂಸಿ ಪಾಲಿಗೆ ದುಃಸ್ವಪ್ನವೇ ಸರಿ.

ಎಡದಿಂದ ಬಲಕ್ಕೆ...

ಎಡದಿಂದ ಬಲಕ್ಕೆ...

ಲೋಕನೀತಿ ಸಮೀಕ್ಷೆಯ ಪ್ರಕಾರ 2019 ರಲ್ಲಿ ಪಶ್ಚಿಮ ಬಂಗಾಳದ ಟಿಪಿಕಲ್ ಎಡಪಂಥೀಯ ಮತದಾರರಾಗಿದ್ದ ಶೇ.39 ರಷ್ಟು ಜನ ಬಿಜೆಪಿಗೆ ಮತ ಹಾಕಿದ್ದಾರೆ, ಶೇ.31 ರಷ್ಟು ಮತದಾರರು ಟಿಎಂಸಿಗೆ, ಶೇ.30 ರಷ್ಟು ಮತದಾರರು ಮಾತ್ರವೇ ಮತ್ತೆ ಎಡಪಕ್ಷಕ್ಕೆ ಮತಹಾಕಿದ್ದಾರೆ!

ಹಾಗೇ ಕಾಂಗ್ರೆಸ್ ನ ಮತದಾರರಾಗಿದ್ದ ಶೇ 32ರಷ್ಟು ಜನ ಬಿಜೆಪಿಗೆ ಮತಹಾಕಿದ್ದರೆ, ಟಿಎಂಸಿ ಗೆ ಶೇ. 20, ಎಡಪಕ್ಷಗಳಿಗೆ ಶೇ.4, ಕಾಂಗ್ರೆಸ್ ಗೆ ಶೇ.32 ರಷ್ಟು ಜನ ಮತ ಚಲಾಯಿಸಿದ್ದಾರೆ.

ಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರ

ಬಿಜೆಪಿ ಮತದಾರರು

ಬಿಜೆಪಿ ಮತದಾರರು

ಬಿಜೆಪಿಯತ್ತ ವಾಲಿದ ಟಿಎಂಸಿ, ಎಡಪಕ್ಷದ ಮತದಾರರು

ಟಿಎಂಸಿ ಮತದಾರರು

ಟಿಎಂಸಿ ಮತದಾರರು

ಟಿಎಂಸಿಗೆ ಆಘಾತ ನೀಡಿದ ಮತದಾರರು

ಎಡಪಕ್ಷದ ಮತದಾರರು

ಎಡಪಕ್ಷದ ಮತದಾರರು

ಎಡಪಕ್ಷಕ್ಕೆ ಕೈಕೊಟ್ಟ ಮತಬ್ಯಾಂಕ್ ಗಳು

ಕಾಂಗ್ರೆಸ್ ಮತದಾರರು

ಕಾಂಗ್ರೆಸ್ ಮತದಾರರು

ಕಾಂಗ್ರೆಸ್ ಕಡೆ ತಿರುಗಿಯೂ ನೋಡದ ಮತದಾರರು

English summary
The Hindu CSDS-Lokniti Post-Poll Survey 2019: After Lok Sabha election 2019 results left and TMC parties in West Bengal struggling for their survival! Traditional voters of left and TMC are supported BJP in this elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X