• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್ ಬಂದ ಮಕ್ಕಳ ಹೃದಯಕ್ಕೆ ತೀವ್ರ ಹಾನಿ: ಕಳವಳ ಮೂಡಿಸುವ ವರದಿ

|

ಟೆಕ್ಸಾಸ್, ಸೆಪ್ಟೆಂಬರ್ 7: ಕೊರೊನಾ ವೈರಸ್ ಸೋಂಕು ಉಸಿರಾಟದ ವ್ಯವಸ್ಥೆ ಮೇಲೆ ದಾಳಿ ನಡೆಸುತ್ತದೆ ಎಂದು ನಂಬಲಾಗಿದೆ. ಆದರೆ ಅದರಾಚೆಗೆ, ಮುಖ್ಯವಾಗಿ ಮಕ್ಕಳ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

   Coronaಗೆ ಜನರು ಹಿಂದೆ ಕೊಡುತ್ತಿದ್ದ ಮರ್ಯಾದೆ ಈಗ ಕೊಡುತ್ತಿಲ್ಲ | Oneindia Kannada

   ಕೋವಿಡ್-19ಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಬಹುವ್ಯವಸ್ಥೆಯ ಉರಿಯೂತ ಕಾಯಿಲೆ (ಎಂಐಎಸ್-ಸಿ) ಕಾಣಿಸಿಕೊಳ್ಳುತ್ತಿದ್ದು, ಇದು ಹೃದಯಕ್ಕೆ ದೊಡ್ಡ ಪ್ರಮಾಣದಲ್ಲಿ ಮಾರಕವಾಗಲಿದೆ ಎಂಬ ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ. ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಮಕ್ಕಳ ಹೃದಯವನ್ನು ಅವರ ಜೀವನಪರ್ಯಂತ ನಿರಂತರ ತಪಾಸಣೆ ಹಾಗೂ ಚಿಕಿತ್ಸೆಗಳಿಗೆ ಒಳಪಡಿಸಬೇಕಾಗಬಹುದು ಎಂದು ವೈದ್ಯಕೀಯ ವಿಮರ್ಶೆಯೊಂದು ತಿಳಿಸಿದೆ.

   ದಿ ಲ್ಯಾನ್ಸೆಟ್‌ನ 'ಇಕ್ಲಿನಿಕಲ್ ಮೆಡಿಸಿನ್' ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ.

   ಕೊರೊನಾ ಲಸಿಕೆ ಖರೀದಿ ಹಾಗೂ ಪೂರೈಕೆ ಜವಾಬ್ದಾರಿಗೆ ಯುನಿಸೆಫ್ ಸಿದ್ಧ

   ಮಕ್ಕಳಿಗೆ ತಗುಲಿ ಮೂರು- ನಾಲ್ಕು ವಾರಗಳಾದರೂ ಯಾವುದೇ ರೋಗ ಲಕ್ಷಣಗಳನ್ನು ತೋರಿಸದ ಸೋಂಕು ಆರೋಗ್ಯವಂತ ಮಕ್ಕಳಿಗೂ ಯಾವುದೇ ಮುನ್ನೆಚ್ಚರಿಕೆ ನೀಡದೆ ಎಂಐಎಸ್‌-ಸಿ ತೀವ್ರ ಪ್ರಮಾಣದಲ್ಲಿ ಹಾನಿ ಮಾಡುವ ಅಪಾಯಗಳು ಹೆಚ್ಚಿವೆ ಎಂದು ಸ್ಯಾನ್ ಆಂಟೊನಿಯೊದಲ್ಲಿರುವ ಟೆಕ್ಸಾಸ್ ಆರೋಗ್ಯ ವಿಜ್ಞಾನ ಕೇಂದ್ರ ವಿಶ್ವವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಅಲ್ವಾರೊ ಮೊರೀರಾ ಹೇಳಿದ್ದಾರೆ. ಮುಂದೆ ಓದಿ.

   ದೇಹದಲ್ಲಿ ಉರಿಯೂತದ ಅನುಭವ

   ದೇಹದಲ್ಲಿ ಉರಿಯೂತದ ಅನುಭವ

   ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳ ಪ್ರಕಾರ, ಕೋವಿಡ್-19ಕ್ಕೆ ಒಳಗಾದ ಮಕ್ಕಳಲ್ಲಿ ಎಂಐಎಸ್‌-ಸಿ ಅಭಿವೃದ್ಧಿಯಾಗಲು ಕೊರೊನಾ ವೈರಸ್‌ನ ಸಾಮಾನ್ಯ ಲಕ್ಷಣವಾದ ಮೇಲ್ಭಾಗದ ಉಸಿರಾಟ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಉಂಟಾಗಲೇಬೇಕೆಂದಿಲ್ಲ. ಮಕ್ಕಳಲ್ಲಿ ಯಾವುದೇ ಲಕ್ಷಣಗಳು ಕಾಣಿಸದೆ ಇರಬಹುದು. ಅವರಲ್ಲಿ ಈ ಕಾಯಿಲೆ ಇದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವು ವಾರಗಳ ಬಳಿಕ ಅವರ ದೇಹದ ವಿವಿಧೆಡೆ ವಿಪರೀತವಾದ ಉರಿಯ ಅನುಭವ ಉಂಟಾಗಬಹುದು.

   ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ

   662 ಎಂಐಎಸ್-ಸಿ ಪ್ರಕರಣ

   662 ಎಂಐಎಸ್-ಸಿ ಪ್ರಕರಣ

   ಜನವರಿ 1ರಿಂದ ಜುಲೈ 25ರವರೆಗೆ ವರದಿಯಾದ 662 ಎಂಐಎಸ್-ಸಿ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಶೇ 71ರಷ್ಟು ಮಕ್ಕಳು ಐಸಿಯುಗೆ ದಾಖಲಾಗಿದ್ದರು. ಅವರಲ್ಲಿ ಶೇ 60ರಷ್ಟು ಮಕ್ಕಳಿಗೆ ವಿದ್ಯುದಾಘಾತ ನೀಡಲಾಗಿದೆ. ಸಾಮಾನ್ಯವಾಗಿ ಈ ಮಕ್ಕಳು ಆಸ್ಪತ್ರೆಯಲ್ಲಿ ಸರಾಸರಿ 7.9 ದಿನಗಳನ್ನು ಕಳೆದಿದ್ದಾರೆ.

   ವಿವಿಧ ಆರೋಗ್ಯ ಸಮಸ್ಯೆಗಳು

   ವಿವಿಧ ಆರೋಗ್ಯ ಸಮಸ್ಯೆಗಳು

   ಶೇ 100 ರಷ್ಟು ಮಕ್ಕಳಿಗೆ ಜ್ವರ, ಶೇ 73.7ರಷ್ಟು ಮಂದಿಗೆ ಹೊಟ್ಟೆ ನೋವು ಅಥವಾ ಅತಿಸಾರ, ಶೇ 68.3 ಮಕ್ಕಳಿಗೆ ವಾಂತಿಯ ಸಮಸ್ಯೆಗಳು ಕಂಡುಬಂದಿದ್ದವು. 90% ರಷ್ಟು ಮಕ್ಕಳಿಗೆ ಎಕೋಕಾರ್ಡಿಯೋಗ್ರಾಮ್ (ಇಕೆಜಿ) ಪರೀಕ್ಷೆ ಮಾಡಲಾಗಿತ್ತು. ಇವರಲ್ಲಿ 54% ಫಲಿತಾಂಶ ಅಸಹಜ ಎಂದು ಬಂದಿದೆ. 22.2% ಮಕ್ಕಳಿಗೆ ವೈದ್ಯಕೀಯ ವೆಂಟಿಲೇಷನ್ ಅಗತ್ಯಬಿದ್ದಿತ್ತು. 4.4% ಮಕ್ಕಳ ದೇಹಕ್ಕೆ ಆಮ್ಲಜನಕದ ಅವಶ್ಯಕತೆ ಉಂಟಾಗಿತ್ತು. ಇವರಲ್ಲಿ 11 ಮಕ್ಕಳು ಮೃತಪಟ್ಟಿದ್ದರು.

   ಇದು ಮಾರಣಾಂತಿಕ

   ಇದು ಮಾರಣಾಂತಿಕ

   ಇದು ಹೊಸ ಬಾಲ್ಯದ ಕಾಯಿಲೆ. ಕೊರೊನಾ ರೂಪಾಂತರ ಸಾರ್ಸ್ ಕೋವ್-2 ಜತೆಗೆ ಇದು ನಂಟು ಹೊಂದಿದೆ ಎಂದು ನಂಬಲಾಗಿದೆ. ಇದು ಮಾರಣಾಂತಿಕವಾಗಬಹುದು. ಏಕೆಂದರೆ ಇದು ವಿವಿಧ ಅಂಗ ವ್ಯವಸ್ಥೆಗೆ ಹಾನಿಯುಂಟುಮಾಡುತ್ತದೆ. ಹೃದಯ ಅಥವಾ ಶ್ವಾಸಕೋಶ, ಜಠರಗರುಳಿನ ವ್ಯವಸ್ಥೆ ಅಥವಾ ನರವಿಜ್ಞಾನ ವ್ಯವಸ್ಥೆ ಇರಬಹುದು, ಇದು ಬಹಳ ವಿಭಿನ್ನ ಮುಖಗಳನ್ನು ಹೊಂದಿದೆ. ಆರಂಭದಲ್ಲಿ ವೈದ್ಯರಿಗೆ ಇದನ್ನು ಅರ್ಥಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

   ಬೆಂಗಳೂರಿನಲ್ಲಿ ದಾಖಲಾಯಿತು ಆಘಾತಕಾರಿ ಕೊವಿಡ್19 ಪ್ರಕರಣ

   90ರಷ್ಟು ಮಕ್ಕಳಲ್ಲಿ ಹೃದಯ ಕಾಯಿಲೆ

   90ರಷ್ಟು ಮಕ್ಕಳಲ್ಲಿ ಹೃದಯ ಕಾಯಿಲೆ

   ಎಂಐಎಸ್‌-ಸಿಯಲ್ಲಿ ಉಂಟಾಗುವ ಉರಿಯೂತದ ಪ್ರಮಾಣವು ಶಿಶುಗಳಲ್ಲಿ ಕಂಡುಬರುವ ಎರಡು ಒಂದೇ ರೀತಿಯ ಸಮಸ್ಯೆಗಳಾದ ಕವಾಸಕಿ ಕಾಯಿಲೆ ಮತ್ತು ಟಾಕ್ಸಿಕ್ ಶಾಕ್ ಸಿಂಡ್ರೋಮ್‌ಗಿಂತಲೂ ತೀವ್ರವಾಗಿವೆ. ಹೀಗೆ ಎಂಐಎಸ್-ಸಿಗೆ ತುತ್ತಾದ 662 ಮಕ್ಕಳ ಪೈಕಿ ಹೆಚ್ಚಿನವರಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗಿವೆ. ಸುಮಾರು ಶೇ 90ರಷ್ಟು (581) ಮಕ್ಕಳನ್ನು ಎಕೋಕಾರ್ಡಿಯೊಗ್ರಾಮ್‌ಗೆ ಒಳಪಡಿಸಲಾಗಿತ್ತು. ಏಕೆಂದರೆ ಅವರಲ್ಲಿ ಅಷ್ಟು ಗಂಭೀರವಾದ ಹೃದಯ ಕಾಯಿಲೆ ಉಂಟಾಗಿತ್ತು ಎಂದು ವಿವರಿಸಿದ್ದಾರೆ.

   ನಿರಂತರ ತಪಾಸಣೆ ಅನಿವಾರ್ಯ

   ನಿರಂತರ ತಪಾಸಣೆ ಅನಿವಾರ್ಯ

   ಪರಿಧಮನಿ ರಕ್ತನಾಳಗಳ ಹಿಗ್ಗುವಿಕೆ (ಕವಾಸಕಿ ಕಾಯಿಲೆಯಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ) ಮಕ್ಕಳಲ್ಲಿ ಕಂಡುಬಂದಿದೆ. ಶೇ 10ರಷ್ಟು ಮಕ್ಕಳಲ್ಲಿ ಪರಿಧಮನಿ ರಕ್ತನಾಳಗಳ ಒಡೆಯುವಿಕೆ ಉಂಟಾಗಿದೆ. ಈ ರೀತಿಯ ಒಡೆಯುವಿಕೆ ಕಂಡುಬಂದ ಮಕ್ಕಳು ಭವಿಷ್ಯದಲ್ಲಿ ಹೆಚ್ಚಿನ ಅಪಾಯಕ್ಕೆ ತುತ್ತಾಗುತ್ತಾರೆ. ಹೀಗಾಗಿ ಅವರನ್ನು ಪ್ರಮುಖವಾಗಿ ನಿರಂತರ ತಪಾಸಣೆಗೆ ಒಳಪಡಿಸುತ್ತಿರಬೇಕು. ಮಲ್ಟಿಪಲ್ ಅಲ್ಟ್ರಾಸೌಂಡ್ ಮೂಲಕ ಅವರ ಸಮಸ್ಯೆ ಕಡಿಮೆಯಾಗಿದೆಯೇ ಎಂದು ತಿಳಿಯಬೇಕು. ಇಲ್ಲದಿದ್ದರೆ ಇದು ಅವರ ಜೀವನಪರ್ಯಂತ ಕಾಡುವ ಸಾಧ್ಯತೆ ಇದೆ.

   ಸ್ಥೂಲಕಾಯಿಗಳಲ್ಲಿ ಸಮಸ್ಯೆ

   ಸ್ಥೂಲಕಾಯಿಗಳಲ್ಲಿ ಸಮಸ್ಯೆ

   ಎಂಐಎಸ್-ಸಿ ಹೊಂದಿರುವ ಅರ್ಧದಷ್ಟು ರೋಗಿಗಳು ಬೇರೆ ವೈದ್ಯಕೀಯ ಸಮಸ್ಯೆಗಳಿಗೆ ಒಳಪಟ್ಟಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಸ್ಥೂಲಕಾಯ ಅಥವಾ ಅತಿ ತೂಕದಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಈ ರೋಗ ಕಂಡುಬಂದಿರುವ ವಯಸ್ಕರು ಹಾಗೂ ಮಕ್ಕಳು ಇಬ್ಬರೂ ಸ್ಥೂಲಕಾಯರಾಗಿದ್ದಲ್ಲಿ ಅವರ ಪರಿಣಾಮ ಇನ್ನೂ ಕೆಟ್ಟದಾಗಿರುತ್ತದೆ. ಆರಂಭದ ಕೋವಿಡ್-19 ಸೋಂಕಿಗೆ ಹೋಲಿಸಿದರೆ ಎಂಐಎಸ್-ಸಿಯಲ್ಲಿನ ಉರಿಯೂತದ ಲಕ್ಷಣಗಳು ಅಸಹಜವಾಗಿದೆ.

   ಇಂಡೋನೇಷ್ಯಾದಲ್ಲಿ ಮಕ್ಕಳ ಸಾವಿನ ಆಘಾತ

   ಇಂಡೋನೇಷ್ಯಾದಲ್ಲಿ ಮಕ್ಕಳ ಸಾವಿನ ಆಘಾತ

   ಇಂಡೋನೇಷ್ಯಾದಲ್ಲಿ ಇದುವರೆಗೂ ಮಾರಕ ಕೊರೊನಾ ವೈರಸ್‌ಗೆ ಕನಿಷ್ಠ 148 ಮಕ್ಕಳು ಮೃತಪಟ್ಟಿದ್ದಾರೆ. ಅನೇಕ ದೇಶಗಳಲ್ಲಿ ಅತ್ಯಧಿಕ ಮರಣ ಪ್ರಮಾಣ ಉಂಟಾಗಿದ್ದರೂ, ಇಷ್ಟು ಸಂಖ್ಯೆಯಲ್ಲಿ ಮಕ್ಕಳ ಸಾವು ವರದಿಯಾಗಿರುವುದು ಈ ದೇಶದಲ್ಲಿ ಮಾತ್ರ. ಅಮೆರಿಕದಲ್ಲಿ 1,85,000 ಮಂದಿ ಕೋವಿಡ್‌ಗೆ ಬಲಿಯಾಗಿದ್ದರೂ ಇದರಲ್ಲಿ ಮಕ್ಕಳ ಸಂಖ್ಯೆ 114. ಇಂಡೋನೇಷ್ಯಾದಲ್ಲಿ ಒಟ್ಟು ಸಾವಿನ ಸಂಖ್ಯೆ 7,800. ವಾಸ್ತವವಾಗಿ ಕೋವಿಡ್-19 ಮಕ್ಕಳ ಜೀವಕ್ಕೆ ಮಾರಕವಾದ ಕಾಯಿಲೆಯಲ್ಲ. ಆದರೆ ಇಂಡೋನೇಷ್ಯಾದಲ್ಲಿ ಇಷ್ಟು ಮಕ್ಕಳ ಸಾವಾಗಿರುವುದು ಕಳವಳಕಾರಿ ಎಂದು ತಜ್ಞರು ಹೇಳಿದ್ದಾರೆ.

   English summary
   Post-Covid syndrome severely damages children's hearts; The University of Texas Health Health Center study Finds.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X