ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ನಡೆದ 2019 ರ ಧನಾತ್ಮಕ ಸುದ್ದಿಗಳು

|
Google Oneindia Kannada News

ಪ್ರೀತಿಯ ಓದುಗರೇ.. ಸಮಯಕ್ಕೆ ಯಾರು ಅಂಕುಶ ಹಾಕಲು ಸಾಧ್ಯವಿಲ್ಲ. ಅದು ತನ್ನಷ್ಟಕ್ಕೆ ತಾನು ಉರುಳುತ್ತಲೇ ಇರುತ್ತದೆ. ಸಮಯ ಕಳೆದಂತೆ ವರ್ಷಗಳೂ ಕಳೆದು ಹೋಗುತ್ತವೆ. ಅದೇ ರೀತಿ 2019 ಕ್ಕೆ ವಿದಾಯ ಹೇಳುವ ಸಮಯ ಇದಾಗಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಸಿಹಿ-ಕಹಿ ಘಟನೆಗಳು ನಡೆದಿವೆ. ಅಂತಹ ಸುದ್ದಿಗಳನ್ನು ನೀವು ಅಲ್ಲಲ್ಲಿ ಓದಿರುತ್ತಿರಿ.

ನಾವು ಜೀವನದಲ್ಲಿ ಮತ್ತೆ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ, ಆದರೆ ಒಂದು ಬಾರಿ ನಾವು ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಕೆಲವೊಂದಿಷ್ಟು ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕುವ ಅವಕಾಶವಿದೆ. ಹಾಗಾಗಿ 2019 ರಲ್ಲಿ ನಡೆದಿರುವ ಒಂದಿಷ್ಟು ಒಳ್ಳೆಯ ವಿಷಯಗಳನ್ನು ಮತ್ತೊಮ್ಮೆ ನೋಡೋಣ..

Flashback 2019: ಕರ್ನಾಟಕದಲ್ಲಿ ನಡೆದ ಪ್ರಮುಖ ಘಟನೆಗಳುFlashback 2019: ಕರ್ನಾಟಕದಲ್ಲಿ ನಡೆದ ಪ್ರಮುಖ ಘಟನೆಗಳು

2020 ನ್ನು ಸ್ವಾಗತಿಸಲು ನೀವೆಲ್ಲಾ ಸಜ್ಜಾಗಿದ್ದೀರಾ. ಹಾಗಾದರೆ 2019 ರಲ್ಲಿ ಏನೆಲ್ಲಾ ಒಳ್ಳೆಯ ಸುದ್ದಿಗಳು ನಡೆದಿವೆ, ನೀವು ಯಾವೆಲ್ಲ ಸಿಹಿ ಸುದ್ದಿಗಳನ್ನು ಮಿಸ್ ಮಾಡಿಕೊಂಡಿದ್ದೀರಾ? ಅವುಗಳನ್ನು ಈಗ ಓದಿ.

ಫ್ಲಾಶ್ ಬ್ಯಾಕ್ 2019; ಜನ ಹೆಚ್ಚು ಓದಿದ ಟಾಪ್ 10 ಒನ್ ಇಂಡಿಯಾ ಕನ್ನಡ ಸುದ್ದಿಗಳುಫ್ಲಾಶ್ ಬ್ಯಾಕ್ 2019; ಜನ ಹೆಚ್ಚು ಓದಿದ ಟಾಪ್ 10 ಒನ್ ಇಂಡಿಯಾ ಕನ್ನಡ ಸುದ್ದಿಗಳು

ಈ ವರ್ಷದಲ್ಲಿ ಹಲವು ಸುದ್ದಿಗಳ ಮಧ್ಯೆಯೂ ಕೆಲವು ಧನಾತ್ಮಕ ಸುದ್ದಿಗಳು ಇವೆ. ಅಂತಹ ಸುದ್ದಿಗಳು ನಿಮಗಾಗಿ..

ಭಯೋತ್ಪಾದನೆ ಕ್ಷೀಣಿಸುತ್ತಿದೆ

ಭಯೋತ್ಪಾದನೆ ಕ್ಷೀಣಿಸುತ್ತಿದೆ

ಜಗತ್ತು ಕೆಲವೊಮ್ಮೆ ಭಯಾನಕ ಸ್ಥಳದಂತೆ ತೋರುತ್ತದೆ, ಆದರೆ ಒಳ್ಳೆಯ ಸುದ್ದಿ ಎಂದರೆ ಅತ್ಯಂತ ಭಯಭೀತವಾದ ಹಿಂಸಾಚಾರಗಳಲ್ಲಿ ಒಂದಾಗಿರುವ ಭಯೋತ್ಪಾದನೆ ವಾಸ್ತವವಾಗಿ ಈ ವರ್ಷದಲ್ಲಿ ತೀವ್ರ ಕುಸಿತಕ್ಕೆ ಒಳಗಾಗಿದೆ.

"ವಿಶ್ವವ್ಯಾಪಿ ಭಯೋತ್ಪಾದಕ ದಾಳಿಗಳು ೨೦೧೮ ಕ್ಕೆ ಹೋಲಿಸಿದರೆ ೨೦೧೯ ರಲ್ಲಿ ಶೇಕಡಾ 33 ರಷ್ಟು ಕುಸಿದಿದೆ, ಇದು 2011 ರ ನಂತರದ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ" ಎಂದು ಡಿಸೆಂಬರ್ ನಲ್ಲಿ ಬಿಡುಗಡೆಯಾದ ವರದಿಯಿಂದ ತಿಳಿದಿದೆ.

ಈರುಳ್ಳಿಯಿಂದ ಕೋಟ್ಯಾಧಿಪತಿಯಾದ ಕಥೆ..!

ಈರುಳ್ಳಿಯಿಂದ ಕೋಟ್ಯಾಧಿಪತಿಯಾದ ಕಥೆ..!

ಚಿತ್ರದುರ್ಗ ತಾಲ್ಲೂಕಿನ ಸಿದ್ದವ್ವನಹಳ್ಳಿಯ ರೈತರೊಬ್ಬರು 3700 ಪ್ಯಾಕೆಟ್ ಈರುಳ್ಳಿ ಬೆಳೆದು ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 90 ಲಕ್ಷ ರುಪಾಯಿ ಆದಾಯಗಳಿಸಿದ್ದಾರೆ.!

ಮಲ್ಲಿಕಾರ್ಜುನ ಎಂಬ ರೈತ ತಮ್ಮ ಸುಮಾರು 20 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬಂಗಾರದ ಬೆಲೆ ಬಂದಿರುವ ಕಾರಣ ಭಾರೀ ಆದಾಯ ಗಳಿಸಿಕೊಂಡಿದ್ದಾರೆ.

ಒಂದು ಕ್ವಿಂಟಾಲ್ ಗೆ 3200 ರೂ, 4000 ರೂ, ಮತ್ತು 7000 ರೂ, ಹೀಗೆ ಮೂರು ಹಮತದ ಬೆಲೆಗಳಲ್ಲಿ ಮಾರಾಟ ಮಾಡಿ ಒಟ್ಟು 90 ಲಕ್ಷ ರೂ,ಗಳನ್ನು ಬಾಚಿಕೊಂಡಿದ್ದಾರೆ. ಮುಂದೆ ಓದಿ..

ಬರದ ನಾಡಲ್ಲಿ ಉಕ್ಕಿದ ಗಂಗಾಜಲ

ಬರದ ನಾಡಲ್ಲಿ ಉಕ್ಕಿದ ಗಂಗಾಜಲ

ಸತತ ಬರಗಾಲದಿಂದ ಬೇಸತ್ತಿದ್ದ ಕೋಟೆನಾಡು ಚಿತ್ರದುರ್ಗದಲ್ಲಿ ಈಗ ನೀರ ಪಸೆ ಕಾಣುತ್ತಿದೆ. ಇಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದ್ದು, ನಿನ್ನೆ ಕರ್ನಾಟಕ ಕೊಳಚೆ ನಿರ್ಮೂಲ ಮಂಡಳಿ ವತಿಯಿಂದ ಕೊರಸಿದ ಕೊಳವೆ ಬಾವಿಯಲ್ಲೂ ನೀರು ಉಕ್ಕಿ ಹರಿಯುತ್ತಿದೆ.

120 ಅಡಿಗೆ ಕಾಣಿಸಿಕೊಂಡ ನೀರು ಕಾಣಿಸಿಕೊಂಡು ರಭಸವಾಗಿ ಉಕ್ಕಲು ಆರಂಭಿಸಿದೆ. ಈ ಹಿಂದೆ 800-1000 ಅಡಿಯವರೆಗೂ ಕೊರೆಸಿದರೂ ಕೊಳವೆಬಾವಿಯಲ್ಲಿ ನೀರು ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ನೀರು ಉಕ್ಕಿ ಬರುವುದರಿಂದ ಜನರಲ್ಲಿ ಸಂತಸ ತಂದಿದ್ದು ಆಶಾಭಾವನೆ ಮೂಡಿಸಿದೆ. ಮುಂದೆ ಓದಿ..

ಚಂದ್ರಯಾನ-2 ಯಶಸ್ವಿ: ಇಸ್ರೋ

ಚಂದ್ರಯಾನ-2 ಯಶಸ್ವಿ: ಇಸ್ರೋ

ಚಂದ್ರನ ಮೇಲೆ ಆರ್ಬಿಟರ್ ಇಳಿಸುವ ಪ್ರಯತ್ನದಲ್ಲಿ ಕೊನೆಯ ಕ್ಷಣದಲ್ಲಿ ವಿಫಲವಾದ ಬಳಿಕ ಇಸ್ರೋ ಯೋಜನೆಯ ಪ್ರಗತಿಯ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ. ವಿಕ್ರಂ ಲ್ಯಾಂಡರ್ ಎಲ್ಲಿದೆ ಎಂಬುದನ್ನು ಆರ್ಬಿಟರ್ ಕಂಡುಹಿಡಿದಿದೆ. ಆದರೆ ಲ್ಯಾಂಡರ್ ಜತೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅದು ಸೆ. 10ರಂದು ತಿಳಿಸಿತ್ತು. ನಂತರ ಇದುವರೆಗೂ ಇಸ್ರೋ ವಿಕ್ರಂ ಲ್ಯಾಂಡರ್ ಬಗ್ಗೆಯಾಗಲೀ ಆರ್ಬಿಟರ್ ಕುರಿತಾಗಲೀ ಮಾಹಿತಿ ನೀಡಿರಲಿಲ್ಲ.

ಮುಂದೆ ಓದಿ..ಮುಂದೆ ಓದಿ..

ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ

ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ

ಮಹಾರಾಷ್ಟ್ರದ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರವು ರೈತರ ಎರಡು ಲಕ್ಷ ರೂಪಾಯಿ ಬೆಳೆ ಸಾಲಮನ್ನಾ ಮಾಡುವುದಾಗಿ ಘೊಷಿಸಿದೆ.

ಮಹಾರಾಷ್ಟ್ರ ವಿಧಾನಸಭೆ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಘೋಷಣೆ ಮಾಡಿದ್ದಾರೆ.

ಮುಂದೆ ಓದಿ..ಮುಂದೆ ಓದಿ..

ಬಿಹಾರ ಯುವತಿ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್

ಬಿಹಾರ ಯುವತಿ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್

ಬಿಹಾರ ಯುವತಿ ಶಿವಾಂಗಿ ಅವರು ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ. ಶಿವಾಂಗಿ ಅವರು ೨೪ ವರ್ಷದ ಯುವತಿಯಾಗಿದ್ದು, ಅವರ ತಂದೆ ಹರಿಭೂಷಣ್ ಸಿಂಗ್ ಶಾಲಾ ಶಿಕ್ಷಕರಾಗಿದ್ದಾರೆ. ತಾಯಿ ಪ್ರಿಯಾಂಕ ಕುಮಾರಿ ಗೃಹಿಣಿಯಾಗಿದ್ದಾರೆ.

ಶಿವಾಂಗಿ ಅವರು ಕೇರಳದ ಕೊಚ್ಚಿಯ ಭಾರತೀಯ ನೌಕಾ ಅಕಾಡೆಮಿಯಲ್ಲಿ ಎನ್ಒಸಿ ಮುಗಿಸಿದ್ದಾರೆ. ಅನಂತರ ಅವಳನ್ನು ಭಾರತೀಯ ನೌಕಾ ಪಡೆಯ ಪೈಲಟ್ ಆಗಿ ಎಸ್ಎಸ್ ಸಿಗೆ ಸೇರಿಸಿಕೊಂಡಿದ್ದಾರೆ. ಸದ್ಯ ಶಿವಾಂಗಿ ಅವರು ಡೊರ್ನಿಯರ್ ಏರ್ ಕ್ರಾಪ್ಟ್ ನ್ನು ಹಾರಾಟ ನಡೆಸುತ್ತಿದ್ದಾರೆ.

ಪೊಲೀಸರಿಂದ ಉಚಿತವಾಗಿ ಪಿಕ್ ಅಪ್-ಡ್ರಾಪ್ ಸೇವೆ

ಪೊಲೀಸರಿಂದ ಉಚಿತವಾಗಿ ಪಿಕ್ ಅಪ್-ಡ್ರಾಪ್ ಸೇವೆ

ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸಲು ಲೂಧಿಯಾನ ಪೊಲೀಸರು ಮುಂದಾಗಿದ್ದಾರೆ. ಮಹಿಳೆಯರಿಗೆ ಉಚಿತ ಪಿಕ್-ಅಪ್ ಹಾಗೂ ಡ್ರಾಪ್ ಸೇವೆಯನ್ನು ನೀಡಲು ಲೂಧಿಯಾನ ಪೊಲೀಸರು ಸಜ್ಜಾಗಿದ್ದಾರೆ.

ಲೂಧಿಯಾನ ಪೊಲೀಸರು 28 ಎಸ್‌ಎಚ್‌ಓ ವಾಹನಗಳು, 110 ಪಿಸಿ ಮೋಟಾರು ಸೈಕಲ್ ಗಳು ಮತ್ತು 10 ವ್ಯಾನ್‌ಗಳನ್ನು ಹೊಂದಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯೊಳಗೆ ಯಾವುದೇ ಮಹಿಳೆ ಮನೆಗೆ ತೆರಳಲು ವಾಹನ ಸಿಗದಿದ್ದ ಪಕ್ಷದಲ್ಲಿ 112,1091, 7837018555 ನಂಬರ್‌ಗೆ ಕರೆ ಮಾಡಿ ವಾಹನ ಸೇವೆ ಕಲ್ಪಿಸಲಾಗುತ್ತದೆ. ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೀಗಾಗಿ ಮಹಿಳೆಯರ ಸುರಕ್ಷತೆ ಬಗ್ಗೆ ಗಮನ ಕೊಡಲು ಲೂಧಿಯಾನ ಪೊಲೀಸರು ಮುಂದಾಗಿದ್ದಾರೆ. ಮುಂದೆ ಓದಿ..

ಮಹಿಳೆಯರ ರಕ್ಷಣೆಗೆ 24x7 ಪೊಲೀಸ್ ಬೀಟ್

ಮಹಿಳೆಯರ ರಕ್ಷಣೆಗೆ 24x7 ಪೊಲೀಸ್ ಬೀಟ್

ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ನಡೆದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24x7 ಕಾರ್ಯನಿರ್ವಹಿಸಲಿದೆ ಎಂದು ದಾವಣಗೆರೆಯ ಎಸ್ ಪಿ ಹನುಮಂತರಾಯ ತಿಳಿಸಿದ್ದಾರೆ. ನಗರ ಹಾಗೂ ತಾಲ್ಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು. ಮುಂದೆ ಓದಿ..

ರೋಗಿಯನ್ನು ಹೊತ್ತೊಯ್ದ ವೈದ್ಯನ ಮಾನವೀಯತೆ

ರೋಗಿಯನ್ನು ಹೊತ್ತೊಯ್ದ ವೈದ್ಯನ ಮಾನವೀಯತೆ

ಮುಂದೆ ಓದಿ..ಮುಂದೆ ಓದಿ..

ಪರೀಕ್ಷೆ ಬರೆದ ಅಜ್ಜಿ

ಪರೀಕ್ಷೆ ಬರೆದ ಅಜ್ಜಿ

ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆ ಈಡೇರಲಿಲ್ಲ. ಕುಟುಂಬದ ಜವಾಬ್ದಾರಿ ಹೊತ್ತು, ಶಿಕ್ಷಣವನ್ನೇ ಮೊಟಕುಗೊಳಿಸಿದ ಹಿರಿಯ ಜೀವವೊಂದು ಇದೀಗ ಹೊಸ ದಾಖಲೆ ಬರೆದಿದೆ.

ಮುಂದೆ ಓದಿ.. ಮುಂದೆ ಓದಿ..

English summary
It is time to say goodbye to 2019, and there have been many sweet-bitter events during this one-year period. We can't go back but we have a chance to look back one time. let's relive some of the good things that have happened in 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X