ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ವಿಶೇಷ; ಕೋವಿಡ್ ಭೀತಿಯಲ್ಲಿ ನಡೆಯಿತು ಚುನಾವಣೆ!

|
Google Oneindia Kannada News

ಭಾರತ ಮತ್ತು ವಿಶ್ವದಾದ್ಯಂತ ಈ ವರ್ಷ ಕೋವಿಡ್ ಸುದ್ದಿಯೇ ಹೆಚ್ಚು. ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದಲ್ಲಿ ಕೋವಿಡ್ ಭೀತಿಯ ನಡುವೆಯೇ ವಿಧಾನಸಭೆ ಚುನಾವಣೆಯನ್ನು ನಡೆಸಲಾಯಿತು. 243 ಕ್ಷೇತ್ರಗಳಿಗೆ ಚುನಾವಣೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಪ್ರಚಾರ, ಜನಸಂದಣಿ ಸೇರದಂತೆ ಎಚ್ಚರವಹಿಸಿ ಚುನಾವಣೆಯನ್ನು ನಡೆಸಲಾಯಿತು.

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಒಟ್ಟು 3 ಹಂತದಲ್ಲಿ ಚುನಾವಣೆಯನ್ನು ನಡೆಸಲಾಯಿತು. ಅಕ್ಟೋಬರ್ 28ರಿಂದ ನವೆಂಬರ್ 7ರ ತನಕ ಚುನಾವಣೆ ನಡೆಯಿತು. ಪ್ರಚಾರ, ಮತದಾನದ ದಿನಕ್ಕಾಗಿಯೇ ವಿಶೇಷ ಮಾರ್ಗಸೂಚಿಗಳನ್ನು ರಚನೆ ಮಾಡಲಾಗಿತ್ತು. ರಾಜಕೀಯ ಪಕ್ಷಗಳು ಮತ್ತು ಜನರು ಅದನ್ನು ಪಾಲನೆ ಮಾಡುವಂತೆ ಎಚ್ಚರವಹಿಸಲಾಯಿತು.

ಯಾರೀತ ಬಿಹಾರ ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್ಯಾರೀತ ಬಿಹಾರ ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್

ಭಾರತದಲ್ಲಿ ಚುನಾವಣೆಯನ್ನು ನಡೆಸುವ ಹೊಣೆ ಹೊತ್ತಿರುವ ಚುನಾವಣಾ ಆಯೋಗ ಬೇರೆ ದೇಶಗಳಲ್ಲಿ ಕೋವಿಡ್ ಸಂದರ್ಭದಲ್ಲಿಯೇ ಚುನಾವಣೆ ನಡೆಸಿದ ಬಗ್ಗೆ ಅಧ್ಯಯನ ನಡೆಸಿತು. ದಕ್ಷಿಣ ಕೋರಿಯಾದಲ್ಲಿ ಕೋವಿಡ್ ನಡುವೆಯೇ ರಾಷ್ಟ್ರೀಯ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕೋವಿಡ್ ಸಮಯದಲ್ಲಿಯೇ ವಿಶ್ವದ 34 ದೇಶಗಳಲ್ಲಿ ವಿವಿಧ ಚುನಾವಣೆಗಳು ನಡೆದಿವೆ.

News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ! News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!

Positive News Bihar Assembly Elections During COVID Pandemic

ಚುನಾವಣೆ ನಡೆಸಬೇಕೆ? ಬೇಡವೆ? ಎಂದು ಆಯೋಗ ಸರಣಿ ಸಭೆಗಳನ್ನು ನಡೆಸಿತು. ರಾಜಕೀಯ ಪಕ್ಷಗಳು ಚುನಾವಣೆಯನ್ನು ಮುಂದೂಡುವುದು ಬೇಡ ಎಂದು ಅಭಿಪ್ರಾಯಪಟ್ಟವು. ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮವಾಗಿ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಯಿತು.

ಎನ್‌ಡಿಎ ಸಭೆಯಲ್ಲಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಅಧಿಕೃತ ಆಯ್ಕೆಎನ್‌ಡಿಎ ಸಭೆಯಲ್ಲಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಅಧಿಕೃತ ಆಯ್ಕೆ

ಆಗಸ್ಟ್‌ನಲ್ಲಿ ಚುನಾವಣಾ ಆಯೋಗ ಬಿಹಾರ ವಿಧಾನಸಭೆ ಚುನಾವಣೆಗೆ ಮಾರ್ಗಸೂಚಿಯನ್ನು ಪ್ರಕಟಿಸಿತು. ಮನೆ-ಮೆನೆಗೆ ತೆರಳಿ ಪ್ರಚಾರ ಮಾಡಲು ಸಹ ಹಲವಾರು ನಿಬಂಧನೆಗಳನ್ನು ಹಾಕಿತು. ಮನೆಗಳಿಗೆ ಅಭ್ಯರ್ಥಿ ಸೇರಿ 5 ಜನರು ಮಾತ್ರ ಪ್ರಚಾರಕ್ಕೆ ಹೋಗಬೇಕು ಎಂದು ನಿಯಮ ರೂಪಿಸಲಾಯಿತು.

Positive News Bihar Assembly Elections During COVID Pandemic

ಮತದಾನದ ದಿನವೂ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಗೆ ಮಾರ್ಗಸೂಚಿ ರಚನೆ ಮಾಡಲಾಯಿತು. 1500 ಜನರಿಗೆ ಒಂದು ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ. ಆದರೆ, ಕೋವಿಡ್ ಸಂದರ್ಭದಲ್ಲಿ ಅದನ್ನು 1000ಕ್ಕೆ ಇಳಿಕೆ ಮಾಡಲಾಯಿತು. ಈ ಮೂಲಕ ಮತಗಟ್ಟೆಯಲ್ಲಿ ಹೆಚ್ಚು ಜನಸಂದಣಿ ಸೇರದಂತೆ ತಡೆಯಲಾಯಿತು.

ಸುಮಾರು 40 ಸಾವಿರ ಹೆಚ್ಚು ಮತಗಟ್ಟೆ ಸ್ಥಾಪಿಸಲಾಯಿತು. ಇವುಗಳಿಗೆ ಇವಿಎಂ, ಮೂಲ ಸೌಲಭ್ಯಗಳನ್ನು ಒದಗಿಸಬೇಕಾದ ಸವಾಲು ಎದುರಾಗಿತ್ತು. ಮತಎಣಿಕೆ ದಿನವೂ 14 ಟೇಬಲ್‌ಗಳನ್ನು 7ಕ್ಕೆ ಇಳಿಕೆ ಮಾಡಲಾಯಿತು. ಅಲ್ಲಿಯೂ ಜನಸಂದಣಿ ಸೇರುವುದಕ್ಕೆ ಕಡಿವಾಣ ಹಾಕಲಾಯಿತು.

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿ ಮತ್ತು ಬೆಂಬಲಿಗರ 10 ಕಾರುಗಳಿಗೆ ಅವಕಾಶ ನೀಡಲಾಗುತ್ತಿತ್ತು. ಅದನ್ನು 5ಕ್ಕೆ ಇಳಿಕೆ ಮಾಡಲಾಯಿತು. ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಜನರಿಗೂ ನಿರ್ಬಂಧ ಹೇರಲಾಯಿತು. ನಾಮಪತ್ರ ಸಲ್ಲಿಸಲು, ಠೇವಣಿ ಇಡಲು ಆನ್‌ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈ ಮೂಲಕ ಸರ್ಕಾರಿ ಕಚೇರಿಗಳಲ್ಲಿ ಜನಜಂಗುಳಿ ನಿಯಂತ್ರಣ ಮಾಡಲಾಯಿತು.

ಕೋವಿಡ್ ಸೋಂಕು ತಗುಲಿ ಹೋಂ ಐಸೋಲೇಷನ್, ಕ್ವಾರಂಟೈನ್‌ನಲ್ಲಿದ್ದ ಸೋಂಕಿತರು ಸಹ ಮತದಾನ ಮಾಡಲು ಅವಕಾಶ ನೀಡಲಾಯಿತು. ಮತದಾನದ ದಿನ ಕೊನೆಯ ಒಂದು ಗಂಟೆ ಸೋಂಕಿತರು ಮತದಾನವನ್ನು ಮಾಡಿದರು. ಈ ಮೂಲಕ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಲಾಯಿತು.

ಕೋವಿಡ್ ಭೀತಿಯ ನಡುವೆಯೂ ಜನರು ಬಂದು ಮತದಾನ ಮಾಡಿದರು. ಶೇ 57.05ರಷ್ಟು ಮತದಾನ ನಡೆಯಿತು. 2015ರ ಚುನಾವಣೆಯಲ್ಲಿ ರಾಜ್ಯದಲ್ಲಿ 56.66ರಷ್ಟು ಮತದಾನವಾಗಿತ್ತು. ವಿಧಾನಸಭೆ ಚುನಾವಣೆ ಮಾತ್ರವಲ್ಲ ಕೆಲವು ರಾಜ್ಯಸಭೆ ಸೀಟು, ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯೂ ನಡೆಯಿತು.

English summary
During the time of COVID-19 pandemic conducting free and fair elections is a big challenge. Bihar assembly election held for 243 constituency in three phases from 28 October to 7 November in the time of pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X