ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಘಾತಕಾರಿ ವರದಿ: ಮಾಲಿನ್ಯದಿಂದ 2019ರಲ್ಲಿ 9 ಮಿಲಿಯನ್ ಜನರು ಸಾವು

|
Google Oneindia Kannada News

ಪ್ಯಾರಿಸ್, ಮೇ 18: ಮಾಲಿನ್ಯ ಕಾರಣದಿಂದಾಗಿ 2019ರಲ್ಲಿ ಜಗತ್ತಿನಲ್ಲಿ ಸುಮಾರು 9 ಮಿಲಿಯನ್ ಜನರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ ಎಂದು ಬುಧವಾರ ಬಿಡುಗಡೆಯಾದ ಜಾಗತಿಕ ವರದಿ ತಿಳಿಸಿದೆ.ಇದು ಮಾನವನಿಗೆ ಎಚ್ಚರಿಕೆಯ ಗಂಟೆಯಾಗಿದೆ. ಮಾನವ ನಿರ್ಮಿತ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಭೂ ಮಾಲಿನ್ಯ ತಕ್ಷಣ ಮಾನವನ ಸಾವಿಗೆ ಕಾರಣವಾಗುವುದು ವಿರಳ. ಆದರೆ ಇದು ಹೃದಯ ಸಂಬಂಧಿ ರೋಗಗಳು, ಕ್ಯಾನ್ಸರ್, ಉಸಿರಾಟದ ತೊಂದರೆ, ಅತಿಸಾರ ಸೇರಿದಂತೆ ಅನೇಕ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಯುದ್ಧ, ಭಯೋತ್ಪಾದನೆ, ಮಲೇರಿಯಾ, ಎಚ್ಐವಿ, ಕ್ಷಯರೋಗ, ಮಾದಕ ದ್ರವ್ಯಗಳ ವ್ಯಸನ, ಮದ್ಯಪಾನವು ಮನುಷ್ಯನ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮಕ್ಕಿಂತ ಹೆಚ್ಚಿನ ಪರಿಣಾಮ ಮಾಲಿನ್ಯವು ಜಾಗತಿಕ ಆರೋಗ್ಯದ ಮೇಲೆ ಉಂಟು ಮಾಡುತ್ತಿದೆ ಎಂದು ಮಾಲಿನ್ಯ ಮತ್ತು ಆರೋಗ್ಯದ ಮೇಲಿನ ಲ್ಯಾನ್ಸೆಟ್ ಆಯೋಗದ ವರದಿ ಹೇಳಿದೆ. ಮಾಲಿನ್ಯವು ಮಾನವನ ಆರೋಗ್ಯ ಮತ್ತು ಭೂಮಿಯ ಆರೋಗ್ಯಕ್ಕೆ ಅಸ್ತಿತ್ವವದ ಬೆದರಿಕೆಯಾಗಿದೆ. ಇದು ಆಧುನಿಕ ಸಮಾಜದ ಸುಸ್ಥಿರತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ವರದಿಯಲ್ಲಿದೆ.

ವಾಯು ಮಾಲಿನ್ಯದ ಕಾರಣ

ವಾಯು ಮಾಲಿನ್ಯದ ಕಾರಣ

ವರದಿಯ ಪ್ರಕಾರ, ವಾಯು ಮಾಲಿನ್ಯದ ಕಾರಣ 2019ರಲ್ಲಿ ವಿಶ್ವದಲ್ಲಿ 6.7 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ. ಪಳೆಯುಳಿಕೆ ಇಂಧನ ಮತ್ತು ಜೈವಿಕ ಇಂಧನವು ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೆ ಹೆಚ್ಚು ಕಾರಣಗಾಗಿದೆ.

"ನಾವು ಶುದ್ಧ ಮತ್ತು ಹಸಿರು ಪರಿಸರವನ್ನು ಉಳಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಅಂಶಗಳು ಜೀವಿಗಳೊಂದಿಗೆ ಗಾಢವಾಗಿ ಬೆಸೆದಿರುವುದರಿಂದ, ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರಾಸಾಯನಿಕ ಮಾಲಿನ್ಯ ಕೂಡ ಜೀವವೈವಿಧ್ಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ," ಎಂದು ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಅಂಡ್ ಪಲೂಷನ್ ವರದಿಯ ಸಂಶೋಧಕರಲ್ಲಿ ಪ್ರಮುಖರಾಗಿರುವ ರಿಚರ್ಡ್ ಫೆಲ್ಲರ್ ಹೇಳಿದರು.
ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ

ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ

2015ರಿಂದ ಇಲ್ಲಿಯವರೆಗಿನ ಸಮೀಕ್ಷೆ ಪ್ರಕಾರ ಮಾಲಿನ್ಯ ಕಾರಣದಿಂದ ಜಗತ್ತಿನಲ್ಲಿ ಆರು ಮಂದಿಯಲ್ಲಿ ಒಬ್ಬರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಲಾನ್ಸೆಟ್ ಪ್ಲಾನೆಟರಿ ಹೆಲ್ತ್ ವರದಿಯ ಪ್ರಕಾರ, ವಿಶ್ವದಲ್ಲಿ ವಾಯು ಮಾಲಿನ್ಯದ ಕಾರಣ 2000 ರಲ್ಲಿ 2.9 ಮಿಲಿಯನ್ ಜನರು ಮೃತಪಟ್ಟಿದ್ದಾರೆ. 2015 ರಲ್ಲಿ 4.2 ಮಿಲಿಯನ್ ಮಂದಿ ನಿಧನರಾಗಿದ್ದಾರೆ. 2019ರಲ್ಲಿ 4.5 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ.

ರಾಸಾಯನಿಕ ಮಾಲಿನ್ಯ

ರಾಸಾಯನಿಕ ಮಾಲಿನ್ಯ

ರಾಸಾಯನಿಕ ಮಾಲಿನ್ಯ ಒಂದರಿಂದಲೇ ಜಗತ್ತಿನಲ್ಲಿ 9 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. 2021ರಲ್ಲಿ ಅಲ್ಜೀರಿಯಾ ದೇಶವು ಪೆಟ್ರೋಲ್ ನಲ್ಲಿ ಸೀಸ ಅಂಶ ಇರುವುದನ್ನು ನಿಷೇಧಿಸಿದೆ. ಸೀಸ-ಆಸಿಡ್ ಬ್ಯಾಟರಿಗಳು ಮತ್ತು ಇ-ತ್ಯಾಜ್ಯದ ಅನಿಯಂತ್ರಿತ ಮರುಬಳಕೆಯು ಜನರು ವಿಷಕಾರಿ ವಸ್ತುಗಳ ಸಂಪರ್ಕಕ್ಕೆ ಬರಲು ಕಾರಣವಾಗಿದೆ.

ಕೀಟನಾಶಕಗಳು ಕೂಡ ಅಪಾಯಕಾರಿ

ಕೀಟನಾಶಕಗಳು ಕೂಡ ಅಪಾಯಕಾರಿ

ಇನ್ನೊಂದೆಡೆ ಆಹಾರ ಪದಾರ್ಥಗಳು, ತರಕಾರಿಗಳು, ಮೀನುಗಳು, ಚಾಕೊಲೇಟ್ ಗಳ ರಫ್ತು ಸಂದರ್ಭದಲ್ಲಿ ಅದು ಕೆಡದಂತೆ ನೋಡಿಕೊಳ್ಳಲು, ಪ್ಯಾಕ್ ಮಾಡಲು ಬಳಸುವ ಸೀಸ, ಅರ್ಸೆನಿಕ್, ಕ್ಯಾಡ್ಮಿಯಮ್, ಪಾದರಸ, ಕೀಟನಾಶಕಗಳು ಕೂಡ ಮಣ್ಣು ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ವರದಿಯ ಅಂಶಗಳು ತಿಳಿಸಿದೆ.

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

English summary
According to the report of Lancet commission on pollution and health, Pollution killed 9 million people globally in 2019, ಆರೋಗ್ಯ ಮತ್ತು ಮಾಲಿನ್ಯದ ಕುರಿತ ಲಾನ್ಟೆಸ್ ವರದಿಯ ಪ್ರಕಾರ ಮಾಲಿನ್ಯದ ಕಾರಣ 2019ರಲ್ಲಿ ಜಗತ್ತಿನಲ್ಲಿ 9 ಮಂದಿ ಸಾವು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X