ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಗಳ ಸರಾಸರಿ: ಎನ್ ಡಿಎ 274, ಯುಪಿಎ 140, ಇತರರು 129

|
Google Oneindia Kannada News

ನವದೆಹಲಿ, ಏಪ್ರಿಲ್ 9: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 228 ಸ್ಥಾನಗಳನ್ನು ಗೆಲ್ಲಲಿದೆ. ಅದರ ಸಹವರ್ತಿ ಪಕ್ಷಗಳನ್ನೆಲ್ಲ ಒಟ್ಟು ಸೇರಿಸಿಕೊಂಡು ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ ಡಿಎ) ಬಹುಮತಕ್ಕೆ ಅಗತ್ಯ ಇರುವ ಸಂಖ್ಯೆಗಿಂತ ಸ್ವಲ್ಪ ಹೆಚ್ಚು ಸ್ಥಾನ ಗಳಿಸಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

-ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಪ್ರಕಟವಾದ ಚುನಾವಣಾ ಪೂರ್ವ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರ ಇದನ್ನು ಹೇಳುತ್ತಿದೆ. ಇನ್ನು ಇವೇ ಸಮೀಕ್ಷೆಗಳ ಪ್ರಕಾರ, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಚುನಾವಣೆಗಿಂತ ಎರಡು ಪಟ್ಟು, ಆಂದರೆ 88 ಸ್ಥಾನಗಳಲ್ಲಿ ಜಯಿಸಬಹುದು. ಆದರೆ ಬಿಜೆಪಿಯನ್ನು ಸೋಲಿಸುವಷ್ಟು ಸ್ಥಾನ ಗಳಿಸುವುದಿಲ್ಲ ಎನ್ನಲಾಗಿದೆ.

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳೆಲ್ಲ ಸೇರಿ 140 ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. ಇತರ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಸೇರಿ 129 ಸ್ಥಾನದಲ್ಲಿ ಜಯಿಸಬಹುದು ಎಂಬುದು ಸಮೀಕ್ಷೆಗಳೆಲ್ಲದರ ಸರಾಸರಿ ಲೆಕ್ಕಾಚಾರ ಆಗಿದೆ. ಒಟ್ಟು 543 ಸದಸ್ಯ ಬಲದ ಸಂಸತ್ ನಲ್ಲಿ ಅಧಿಕಾರ ಹಿಡಿಯಲು ಯಾವುದಾದರೂ ಪಕ್ಷ ಅಥವಾ ಪಕ್ಷಗಳ ಒಕ್ಕೂಟ 272 ಸ್ಥಾನಗಳಲ್ಲಿ ಜಯ ಗಳಿಸಬೇಕಾಗುತ್ತದೆ.

ಸಮೀಕ್ಷೆಗಳೆಲ್ಲದರ ಸರಾಸರಿ ಪ್ರಕಾರ ಯಾರಿಗೆಷ್ಟು ಸ್ಥಾನ?

ಸಮೀಕ್ಷೆಗಳೆಲ್ಲದರ ಸರಾಸರಿ ಪ್ರಕಾರ ಯಾರಿಗೆಷ್ಟು ಸ್ಥಾನ?

ಎನ್ ಡಿಎ 274

ಬಿಜೆಪಿ 228

ಯುಪಿಎ 140

ಕಾಂಗ್ರೆಸ್ 88

ಇತರರು 129

ಬಿಹಾರ

ಬಿಹಾರ

ಬಿಜೆಪಿ+ 31

ಕಾಂಗ್ರೆಸ್+ 9

ಇತರರು 0

ಉತ್ತರಪ್ರದೇಶ

ಉತ್ತರಪ್ರದೇಶ

ಬಿಜೆಪಿ+ 40

ಕಾಂಗ್ರೆಸ್+ 4

ಎಸ್ಪಿ+ ಬಿಎಸ್ಪಿ 36

ಇತರರು 0

ಆಂಧ್ರಪ್ರದೇಶ

ಆಂಧ್ರಪ್ರದೇಶ

ಬಿಜೆಪಿ 0

ಕಾಂಗ್ರೆಸ್ 0

ವೈಎಸ್ ಆರ್ ಕಾಂಗ್ರೆಸ್ 21

ಟಿಡಿಪಿ 4

ಇತರರು 0

ತೆಲಂಗಾಣ

ತೆಲಂಗಾಣ

ಬಿಜೆಪಿ 0

ಕಾಂಗ್ರೆಸ್ 2

ಟಿಆರ್ ಎಸ್ 14

ಇತರರು 1

English summary
PM Narendra Modi's BJP will win 228 seats in LS polls and, along with its allies in the NDA, may just make it past the majority mark, says a poll of opinion polls published in March and April. The Congress, along with its allies, may win around 140 seats. Other parties and independents, predicted to win 129 seats, may become an important factor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X