ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಸಹೋದರರ ಕೋಟೆಯಲ್ಲಿ ಕಮಲ ಅರಳುವುದೇ?

|
Google Oneindia Kannada News

Recommended Video

Lok Sabha Elections 2019: ಡಿ ಕೆ ಬ್ರದರ್ಸ್ ಕೋಟೆ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲ್ಲುತ್ತಾ?

ಬೆಂಗಳೂರು, ಏಪ್ರಿಲ್ 10 : ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಜೆಡಿಎಸ್ ಸಹ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವುದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 18ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ನಡೆಯಲಿದೆ. 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್, ಬಿಜೆಪಿಯ ಅಶ್ವಥ್ ನಾರಾಯಣ ನಡುವೆ ನೇರ ಪೈಪೋಟಿ ಇದೆ.

ಬೆಂಗಳೂರು ಗ್ರಾಮಾಂತರ ಚುನಾವಣಾ ಪುಟ

ಎರಡು ಬಾರಿ ಕ್ಷೇತ್ರದಲ್ಲಿ ಗೆದ್ದಿರುವ ಡಿ.ಕೆ.ಸುರೇಶ್ ಈ ಬಾರಿಯೂ ಗೆದ್ದಿ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ. ಅಬ್ಬರದ ಪ್ರಚಾರವಿಲ್ಲದಂತೆ ಗ್ರಾಮೀಣ ಮಟ್ಟದಲ್ಲಿ ಚಿಕ್ಕ ಸಭೆ, ಮನೆಗಳ ಭೇಟಿ ಮೂಲಕ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಲೋಕಸಭೆ ಚುನಾವಣೆ 2019: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪರಿಚಯಲೋಕಸಭೆ ಚುನಾವಣೆ 2019: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪರಿಚಯ

ಚುನಾವಣೆ ದಿನಾಂಕ ಘೋಷಣೆಯಾದ ಬಳಿಕವೂ ಅಳೆದೂ ತೂಗಿ ಬಿಜೆಪಿ ಅಶ್ವಥ್ ನಾರಾಯಣ ಅವರಿಗೆ ಟಿಕೆಟ್ ಕೊಟ್ಟಿದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಪ್ರಭಾವದ ನಡುವೆಯೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಅಶ್ವಥ್ ನಾರಾಯಣ ಪಣ ತೊಟ್ಟಿದ್ದಾರೆ...

ಹಿಂದಿನ ಚುನಾವಣೆ ಫಲಿತಾಂಶ

ಹಿಂದಿನ ಚುನಾವಣೆ ಫಲಿತಾಂಶ

2009ರಲ್ಲಿ ಕನಕಪುರ ಕ್ಷೇತ್ರದ ಬದಲು ರಚನೆಯಾದ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಇದುವರೆಗೂ 2 ಲೋಕಸಭಾ ಚುನಾವಣೆ, 1 ಉಪ ಚುನಾವಣೆ ನಡೆದಿದೆ. 2009ರಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಗೆದ್ದಿದ್ದರು. 2013ರ ಉಪ ಚುನಾವಣೆ, 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದಾರೆ.

ವಿಧಾನಸಭಾ ಕ್ಷೇತ್ರಗಳು

ವಿಧಾನಸಭಾ ಕ್ಷೇತ್ರಗಳು

ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಒಳಗೊಂಡಿದೆ. ಕನಕಪುರ, ರಾಜರಾಜೇಶ್ವರಿ ನಗರ, ಆನೇಕಲ್, ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.


ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದು, ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ ಜೆಡಿಎಸ್ ಶಾಸಕರು ಇದ್ದಾರೆ.

ಬಿಜೆಪಿ ಪ್ಲಸ್ ಪಾಯಿಂಟ್ ಏನು?

ಬಿಜೆಪಿ ಪ್ಲಸ್ ಪಾಯಿಂಟ್ ಏನು?

ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 14 ಲಕ್ಷ ಮತದಾರರು ಇದ್ದಾರೆ. ಬಿಜೆಪಿ ಈ ಮತಗಳನ್ನು ಹೆಚ್ಚಾಗಿ ನಂಬಿಕೊಂಡಿದೆ. ನರೇಂದ್ರ ಮೋದಿ ಅಲೆ ಬೆಂಗಳೂರು ನಗರದಿಂದ ಗ್ರಾಮಾಂತರ ಕ್ಷೇತ್ರಕ್ಕೂ ಬೀಸಲಿದೆ ಎಂಬುದು ಬಿಜೆಪಿಯ ಅಶ್ವಥ್ ನಾರಾಯಣ ಅವರ ಲೆಕ್ಕಾಚಾರವಾಗಿದೆ.

ಡಿ.ಕೆ.ಸುರೇಶ್ ಪ್ಲಸ್ ಪಾಯಿಂಟ್

ಡಿ.ಕೆ.ಸುರೇಶ್ ಪ್ಲಸ್ ಪಾಯಿಂಟ್

ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಮತಗಳು ಹೆಚ್ಚಿವೆ. ಇವುಗಳು ತಮ್ಮ ಕೈ ಹಿಡಿಯಲಿವೆ, ಜೊತೆಗೆ ಎರಡು ಬಾರಿ ಸಂಸದರಾಗಿ ಮಾಡಿದ ಕೆಲಸಗಳು ಡಿ.ಕೆ.ಸುರೇಶ್ ಬೆನ್ನಿಗೆ ನಿಂತಿವೆ. ಡಿ.ಕೆ.ಶಿವಕುಮಾರ್ ಅವರ ಪ್ರಭಾವವೂ ಸಹೋದರನನ್ನು ಗೆಲ್ಲಿಸಿಕೊಂಡು ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಒಂದಾಗಿ ಒಗ್ಗಟ್ಟು ಪ್ರದರ್ಶನ

ಒಂದಾಗಿ ಒಗ್ಗಟ್ಟು ಪ್ರದರ್ಶನ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಒಂದಾಗಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದು ಡಿ.ಕೆ.ಸುರೇಶ್ ಅವರಿಗೆ ಸಹಾಯಕವಾಗಲಿದೆ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಹೊಂದಿರುವ ಪ್ರಭಾವ ಕಾಂಗ್ರೆಸ್‌ಗೆ ಮತ ತಂದುಕೊಡಲಿದೆ ಎನ್ನುವ ನಿರೀಕ್ಷೆ ಇದೆ.

English summary
Bangalore Rural lok sabha seat political picture. Ashwath Narayan BJP candidate and D.K.Suresh Congress-JD(S) candidate. Election will be held on April 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X