• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಾಭಿಮಾನಕ್ಕೆ ಫ್ಯಾಷನ್ ಟಚ್: ಟೀ ಶರ್ಟ್ ಗಳಲ್ಲಿ ರಾರಾಜಿಸುತ್ತಿವೆ ಕನ್ನಡ ಪದಮಾಲೆಗಳು

|

ಮೈಸೂರು, ನವೆಂಬರ್. 1: ಕನ್ನಡ ಬೆಳೆಸುವ ಕಾಯಕದಲ್ಲಿ ಸದ್ದಿಲ್ಲದೆ ಕೆಲವು ಸಂಸ್ಥೆಗಳು ಸಜ್ಜಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಕನ್ನಡಾಭಿಮಾನಕ್ಕೆ ಫ್ಯಾಷನ್ ಟಚ್ ಸಹ ಸಿಕ್ಕಿದೆ. ಅದು ಟಿ-ಶರ್ಟ್​ಗಳ ಮೂಲಕ ಎನ್ನುವುದು ವಿಶೇಷ.

ಟೀ ಶರ್ಟ್ ಗಳ ಮೇಲೆ ಕುವೆಂಪು, ದ.ರಾ ಬೇಂದ್ರೆ, ಕಾರಂತರು, ಲಂಕೇಶ್ ಅವರ ಸಾಲುಗಳನ್ನು ಮುದ್ರಿಸಿ ಮಾರಾಟಕ್ಕಿಡಲಾಗುತ್ತದೆ.. 'ಬಾರಿಸು ಕನ್ನಡ ಡಿಂಡಿಮವ', 'ಕುಣಿಯೋಣ ಬಾರಾ', 'ಮನಮನೆಗಳಲ್ಲಿ ಹಚ್ಚೇವು ಕನ್ನಡದ ದೀಪ', 'ಪಾತರಗಿತ್ತಿ ಪಕ್ಕ, ನೋಡಿದ್ದೇನೆ ಅಕ್ಕ', 'ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರ್ಯಾರು' ಹೀಗೆ ಅನೇಕ ಸಾಲುಗಳು ಟಿ ಶರ್ಟ್ ಗಳ ಮೇಲೆ ಮುದ್ರಿತವಾಗಿವೆ.

ಕನ್ನಡಿಗರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಶುಭಾಶಯ

ಕನ್ನಡ ಭಾಷಾ ಸಂಸ್ಕೃತಿಯನ್ನು ಸ್ಫುರಿಸುವ ಈ ಪದಮಾಲೆಗಳು ಫ್ಯಾಷನ್ ಜಗತ್ತಿನಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಕರ್ನಾಟಕದ ನಕಾಶೆ, ಧ್ವಜ ಮತ್ತು ಭಾಷೆಗೆ ಸಂಬಂಧಿಸಿದ ಪದ ಅಥವಾ ಘೋಷ ವಾಕ್ಯಗಳು, ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಸಾಲು, ವರನಟ ಡಾ.ರಾಜ್‌ಕುಮಾರ್‌, ಶಂಕರ್‌ ನಾಗ್‌, ವಿಷ್ಣುವರ್ಧನ್‌ರಂತಹ ನಟರ ಚಿತ್ರಗಳ ಆಕರ್ಷಕ ಸಂಭಾಷಣೆಗಳು ಹಾಗೂ ಇಂದಿನ ಯುವಕರ ನಡುವೆ ಚಾಲ್ತಿಯಲ್ಲಿರುವ ಫಂಕಿ ಪದ ಪುಂಜಗಳನ್ನು ಅಚ್ಚೊತ್ತಿರುವ ಟೀಶರ್ಟ್ ಗಳು ಕನ್ನಡಿಗರ ನಡುವೆ ಇತ್ತೀಚೆಗೆ ಜನಪ್ರಿಯವಾಗುತ್ತಿವೆ.

 ಯುವಜನತೆ ಪ್ರಮುಖ ಗ್ರಾಹಕರು

ಯುವಜನತೆ ಪ್ರಮುಖ ಗ್ರಾಹಕರು

ಸಾಮಾನ್ಯವಾಗಿ ಐಟಿ-ಬಿಟಿ ಹಾಗೂ ಇತರ ಕಂಪೆನಿ ಉದ್ಯೋಗಿಗಳು, ಕನ್ನಡ ಸಂಘಟನೆಗಳು, ಅಪಾರ್ಟ್ ಮೆಂಟ್‌ಗಳ ಒಕ್ಕೂಟಗಳು, ವಿವಿಧ ಸಂಘಟನೆಗಳು, ಯುವಜನತೆ ಈ ಟೀಶರ್ಟ್ ಗಳ ಪ್ರಮುಖ ಗ್ರಾಹಕರು. ಹೆಚ್ಚಿನ ಸಂದರ್ಭದಲ್ಲಿ ಇವರೆಲ್ಲ ತಮಗೆ ನಿರ್ದಿಷ್ಟ ಪದ ಅಥವಾ ಸಾಲುಗಳನ್ನು ಹೊಂದಿರುವ ಟೀಶರ್ಟ್ ಗಳು ಬೇಕು ಎಂದು ತಯಾರಿಕರಿಗೆ ಮೊದಲೇ ಸೂಚಿಸುತ್ತಾರೆ. ಸದ್ಯಕ್ಕೆ ಕನ್ನಡ ಟೀಶರ್ಟ್ ಗಳ ಮಾರುಕಟ್ಟೆ ನಗರ ಕೇಂದ್ರಿತವಾಗಿದೆ.

 ಆನ್‌ಲೈನ್ ನಲ್ಲೇ ಮಾರಾಟ

ಆನ್‌ಲೈನ್ ನಲ್ಲೇ ಮಾರಾಟ

ಅಂದಹಾಗೆ ಶೇ.90ರಷ್ಟು ಕನ್ನಡ ಟೀಶರ್ಟ್ ಗಳು ಆನ್‌ಲೈನ್ ನಲ್ಲೇ ಮಾರಾಟವಾಗುತ್ತವೆ. ಈ ತೆರನಾದ ಟೀ ಶರ್ಟ್ ಗಳಿಗೆ ವಿದೇಶ, ಬೇರೆ ರಾಜ್ಯಗಳಲ್ಲಿರುವ ಕನ್ನಡ ಸಂಘಟನೆಗಳಿಂದಲೂ ಬೇಡಿಕೆ ಬರುತ್ತಿದೆ. ಮೊದಲೆಲ್ಲಾ ರಾಜ್ಯೋತ್ಸವದ ಸಂದರ್ಭದಲ್ಲಿ ಜನರು ಟೀಶರ್ಟ್ ಗಳನ್ನು ಖರೀದಿಸಿ ಅದರಲ್ಲಿ ತಮಗೆ ಬೇಕಾದ ಪದಗಳನ್ನು ಮುದ್ರಿಸುತ್ತಿದ್ದರು. ಈಗ ಈ ಪ್ರವೃತ್ತಿ ಬದಲಾಗಿದೆ.

ಈ ವರ್ಷದ ಕನ್ನಡ ರಾಜ್ಯೋತ್ಸವ ದಿನದಿಂದಲಾದರೂ ಹೀಗಾಗಲಿ...

 ಯಾರು ಯಾವುದನ್ನು ಇಷ್ಟಪಡುತ್ತಾರೆ?

ಯಾರು ಯಾವುದನ್ನು ಇಷ್ಟಪಡುತ್ತಾರೆ?

ಈಗಲೂ ರಾಜ್ಯೋತ್ಸವದ ಸಂದರ್ಭದಲ್ಲಿ ಅಂದರೆ ನವೆಂಬರ್‌-ಡಿಸೆಂಬರ್‌ ಅವಧಿಯಲ್ಲಿ ಕನ್ನಡ ಟೀಶರ್ಟ್ ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಯುವಜನತೆ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು, ಹೊಸ ಸಿನಿಮಾಗಳ ಆಕರ್ಷಕ ಸಂಭಾಷಣೆ ಮತ್ತು ಪಡ್ಡೆ ಯುವಕರು ಬಳಸುವ ಆಧುನಿಕ ಪದಪುಂಜಗಳನ್ನು ಹೊಂದಿರುವ ಟೀಶರ್ಟ್ ಗಳನ್ನು ಧರಿಸುತ್ತಾರೆ.

ಮಧ್ಯವಯಸ್ಕರು ಗಂಭೀರವಾದ ಪದಗಳನ್ನು ಮುದ್ರಿಸಿರುವ ಟೀಶರ್ಟ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಉದಾಹರಣೆಗೆ ಕವಿತೆಗಳ ಸಾಲುಗಳನ್ನು ಹೊಂದಿರುವ ಟೀಶರ್ಟ್ ಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ.

 ವಿಜೃಂಭಿಸುವ ಕನ್ನಡದ ಸಾಲುಗಳು

ವಿಜೃಂಭಿಸುವ ಕನ್ನಡದ ಸಾಲುಗಳು

ಸಾಮಾನ್ಯವಾಗಿ ಟೀ ಶರ್ಟ್ ಗಳಲ್ಲಿ ಇಂಗ್ಲೀಷ್ ಸ್ಲೋಗನ್ ಗಳು ಹೆಚ್ಚಾಗಿ ಕಂಡುಬರುತ್ತವೆ. ಕನ್ನಡದ ಬರಹ ಕಲ್ಪಿಸಿಕೊಳ್ಳೋದೂ ಕಷ್ಟ. ಇದನ್ನು ಮನಗಂಡೇ ಮುಖೇಶ್ ಎಂಬುವವರು

ಕನ್ನಡದ ಸಾಲುಗಳು ವಿಜೃಂಭಿಸುವ ಟೀ ಶರ್ಟ್ ಗಳ ಮಾರಾಟ ಮಾಡುತ್ತಿದ್ದಾರೆ. ಅರ್ಥವಾಗದ ಇಂಗ್ಲಿಷ್ ಬರಹಗಳಿರುವ ಟಿ ಶರ್ಟ್ ಗಳನ್ನು ಧರಿಸುವುದಕ್ಕಿಂತ, ಕನ್ನಡವನ್ನು ಈ ಮೂಲಕವೂ ಪಸರಿಸೋಣ ಅನ್ನೋದು ಇವರ ಉದ್ದೇಶವಾಗಿದೆ.

ರಂಗಾಯಣದ ಅಂಗಳದಲ್ಲಿ ಈ ಟೀ ಶರ್ಟ್ ಗಳಿಗೆ ಭಾರೀ ಬೇಡಿಕೆ ಇದೆ. ವಿದೇಶಿಗರು ಕೂಡ, ಟೀ ಶರ್ಟ್ ಮೇಲಿನ ಸಾಲುಗಳ ಅರ್ಥವನ್ನು ಕೇಳಿ ಖರೀದಿಸಿದ್ದಾರೆ. ಹಿಂದಿಯ ಘಜಲ್, ಇಂಗ್ಲಿಷ್‌ನ ಪಾಪ್ ಗೀತೆಗಳನ್ನು ಕೇಳುವ ಯುವಮನಸ್ಸುಗಳಿಗೆ, ಕನ್ನಡದ ಸಾಲುಗಳು ಎಷ್ಟು ಮುದ ನೀಡುತ್ತವೆ ಅನ್ನೋದಕ್ಕೆ ಇದೇ ಸಾಕ್ಷಿ.

ಕನ್ನಡ ರಾಜ್ಯೋತ್ಸವ: ನಮ್ಮ 'ಆಟೋ ರಾಜ'ರ ಪಾತ್ರ ಎಷ್ಟಿದೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Poet Kuvempu, Dara Bendre, Karanth, and Lankesh's lines are printed and sold on tee shirts. In the latest fashion world, Kannada is making more sounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more