ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM-SYM Scheme: ಮದುವೆ ಆದವರಿಗೆ ಪಿಎಂ ಶ್ರಮ ಯೋಗಿ ಮಾನ್-ಧನ್; ಈ ಯೋಜನೆ ಬಗ್ಗೆ ತಿಳಿಯಿರಿ

|
Google Oneindia Kannada News

ಮದುವೆಯಾದ ಬಡವರು ಇನ್ನು ಪಿಂಚಣಿಗೆ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯು ವಿವಾಹಿತ ದಂಪತಿಗಳಿಗೆ ಮೋದಿ ಸರ್ಕಾರದ ಒಂದು ದೊಡ್ಡ ಕೊಡುಗೆ ನೀಡಿದೆ. ಮದುವೆಯಾದ ದಂಪತಿಗಳು ತಿಂಗಳಿಗೆ ಕೇವಲ 200 ರೂಪಾಯಿ ಹೂಡಿಕೆ ಮಾಡಿದರೆ ಸಾಕು ಈ ಹಣದಿಂದ ನೀವು ಪಿಂಚಣಿ ಸೌಲಭ್ಯ ಪಡೆದುಕೊಳ್ಳಬಹುದು.

ಈ ಯೋಜನೆಯಿಂದ ನಿಮ್ಮ ಒಂದಷ್ಟು ಹಣ ಸಂಗ್ರಹಿಸಬಹುದು ಈ ಯೋಜನೆಗೆ ಸರ್ಕಾರವು ಕೊಡುಗೆ ಕೂಡ ನೀಡಿದೆ. ಈ ಯೋಜನೆಯು ಪಿಂಚಣಿ ರೂಪದ ಯೋಜನೆಯಾಗಿದೆ ಮದುವೆಯಾದ ಬಳಿಕ ಈ ಯೋಜನೆಗೆ ಅರ್ಹರಾಗುತ್ತಾರೆ.

ಮಳೆ ಅವಾಂತರ- ಮದುವೆ ಹೆಣ್ಣಿಗೆ ದೋಣಿ ಆಸರೆ, ಶವಸಂಸ್ಕಾರಕ್ಕೆ ಟಾರ್ಪಾಲ್ ಆಸರೆ ಮಳೆ ಅವಾಂತರ- ಮದುವೆ ಹೆಣ್ಣಿಗೆ ದೋಣಿ ಆಸರೆ, ಶವಸಂಸ್ಕಾರಕ್ಕೆ ಟಾರ್ಪಾಲ್ ಆಸರೆ

ವಿವಾಹಿತ ದಂಪತಿ 72,000 ರೂ. ವಾರ್ಷಿಕ ಪಿಂಚಣಿ ಪಡೆದುಕೊಳ್ಳಬಹುದು ಈ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ಪ್ರಾರಂಭಿಸಲಾಗಿದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನಯಡಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2019ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗಳ ದಂಪತಿ ಫನಾನುಭವಿಗಳಾದರೆ, ಅವರು ತಿಂಗಳಿಗೆ ಕೇಲವ 200 ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ಮೂಲಕ ವಾರ್ಷಿಕವಾಗಿ 72,000 ರೂ. ಪಿಂಚಣಿ ಗಳಿಸಲು ಸಾಧ್ಯವಾಗುತ್ತದೆ.

ಪಿಎಂ ಶ್ರಮ ಯೋಗಿ ಮಾನ್-ಧನ್ ಯೋಜನೆ ಎಂದರೇನು?

ಪಿಎಂ ಶ್ರಮ ಯೋಗಿ ಮಾನ್-ಧನ್ ಯೋಜನೆ ಎಂದರೇನು?

ಅಸಂಘಟಿತ ಕಾರ್ಮಿಕರು ಹೆಚ್ಚಾಗಿ ಮನೆ ಕೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಮಧ್ಯಾಹ್ನದ ಊಟದ ಕೆಲಸಗಾರರು, ಇಟ್ಟಿಗೆ ಗೂಡು ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು, ತೊಳೆಯುವವರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಟ್ಟುವ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮ ಕಾರ್ಮಿಕರು, ಶ್ರವಣ-ದೃಶ್ಯ ಕೆಲಸಗಾರರು ಮತ್ತು ಮಾಸಿಕ ಆದಾಯ ರೂ 15,000 ಅಥವಾ ಅದಕ್ಕಿಂತ ಕಡಿಮೆ ಇರುವ ಮತ್ತು 18-40 ವರ್ಷ ವಯಸ್ಸಿನ ಪ್ರವೇಶ ವಯೋಮಾನದ ಇತರ ರೀತಿಯ ಉದ್ಯೋಗಗಳು ಯೋಜನೆಗೆ ಅರ್ಹರಾಗಿರುತ್ತಾರೆ.

ಪಿಎಂ ಶ್ರಮ ಯೋಗಿ ಮಾನ್-ಧನ್ ಯೋಜನೆ ಇವರಿಗೆ ಅನ್ವಯ

ಪಿಎಂ ಶ್ರಮ ಯೋಗಿ ಮಾನ್-ಧನ್ ಯೋಜನೆ ಇವರಿಗೆ ಅನ್ವಯ

PM-SYM ಅಡಿಯಲ್ಲಿ ಪ್ರತಿ ಚಂದಾದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ ಪ್ರತಿ ತಿಂಗಳಿಗೆ ಕನಿಷ್ಠ 3000 ರೂ.ಗಳ ಪಿಂಚಣಿಯನ್ನು ಪಡೆಯುತ್ತಾರೆ.

ಪಿಂಚಣಿ ಪಡೆಯುವ ಸಮಯದಲ್ಲಿ ಚಂದಾದಾರರು ಮರಣಹೊಂದಿದರೆ, ಫಲಾನುಭವಿಯ ಪತ್ನಿಯು ಫಲಾನುಭವಿಯು ಪಡೆದ ಪಿಂಚಣಿಯ 50%ನ್ನು ಕುಟುಂಬ ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬ ಪಿಂಚಣಿಯು ಸಂಗಾತಿಗೆ(ಪತ್ನಿಗೆ) ಮಾತ್ರ ಅನ್ವಯಿಸುತ್ತದೆ.

ಈ ಮೇಲಿನ ವರ್ಗದವರು ಈ ಹೊಸ ಪಿಂಚಣಿ ಯೋಜನೆ ಪಡೆಯಲು (NPS)ನೌಕರರ ರಾಜ್ಯ ವಿಮಾ ನಿಗಮ (ESIC) ಯೋಜನೆ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಒಳಗೊಳ್ಳಗೊಳ್ಳಬಾರದು. ಅಲ್ಲದೆ, ಅವರು ಯಾವುದೇ ಆದಾಯ ತೆರಿಗೆ ಪಾವತಿದಾರರಾಗಿರಬಾರದು.

ಯೋಗಿ ಮಾನ್-ಧನ್ ಯೋಜನೆಗೆ ನೋಂದಾವಣೆ ಹೇಗೆ?

ಯೋಗಿ ಮಾನ್-ಧನ್ ಯೋಜನೆಗೆ ನೋಂದಾವಣೆ ಹೇಗೆ?

ಗ್ರಾಹಕರು ಮೊಬೈಲ್ ಫೋನ್, ಉಳಿತಾಯ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಹ ಗ್ರಾಹಕರು ಹತ್ತಿರದ ಸೈಬರ್ ಸೆಂಟರ್ ಭೇಟಿ ನೀಡಬಹುದು ಮತ್ತು ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ಆಧಾರ್ ಸಂಖ್ಯೆ ಮತ್ತು ಉಳಿತಾಯ ಬ್ಯಾಂಕ್ ಖಾತೆ / ಜನ್-ಧನ್ ಖಾತೆ ಸಂಖ್ಯೆಯನ್ನು ಬಳಸಿಕೊಂಡು PM-SYMಗೆ ನೋಂದಾಯಿಸಿಕೊಳ್ಳಬಹುದು.

ದಂಪತಿ ವಾರ್ಷಿಕ 72,000 ರೂ. ಪಿಂಚಣಿ ಹೇಗೆ ಗಳಿಸಬಹುದು?

ದಂಪತಿ ವಾರ್ಷಿಕ 72,000 ರೂ. ಪಿಂಚಣಿ ಹೇಗೆ ಗಳಿಸಬಹುದು?

ದಂಪತಿಗಳು ವಾರ್ಷಿಕ 72,000 ರೂಪಾಯಿಗಳ ಪಿಂಚಣಿಯನ್ನು ಹೇಗೆ ಗಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಸರಳವಾದ ಲೆಕ್ಕಾಚಾರವಿದೆ. ಉದಾಹರಣೆಗೆ ಒಬ್ಬ ವ್ಯಕ್ತಿಯು 30 ವರ್ಷ ವಯಸ್ಸಿನವರಾಗಿದ್ದರೆ, ಯೋಜನೆಗಳಿಗೆ ಮಾಸಿಕ ಕೊಡುಗೆಯು ತಿಂಗಳಿಗೆ ಸುಮಾರು 100 ರೂ ಆಗಿರುತ್ತದೆ - ದಂಪತಿಗಳು ತಿಂಗಳಿಗೆ 200 ರೂಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ, ವೈಯಕ್ತಿಕ ಕೊಡುಗೆಯು ಒಂದು ವರ್ಷದಲ್ಲಿ ರೂ 1200 ರೂ. ಆಗಿದ್ದರೆ, 60 ವರ್ಷಗಳನ್ನು ತಲುಪಿದ ನಂತರ, ವ್ಯಕ್ತಿಯು ವಾರ್ಷಿಕ ಪಿಂಚಣಿಯಾಗಿ 36,000 ರೂ. ಪಡೆದುಕೊಳ್ಳುತ್ತಾನೆ ಅಂದರೆ ದಂಪತಿಗಳಿಗೆ ಒಟ್ಟು ಪಿಂಚಣಿ 72,000 ರೂ. ಆಗಿರುತ್ತದೆ.

English summary
The Pradhan Mantri Shram Yogi Maan-Dhan (PM-SYM) scheme enables people from unorganised working sector to earn pension. Read on to know about the enrollment process and its benefits check here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X