ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದಲ್ಲಿ ಎಷ್ಟು ಹೆಚ್ಚಾಯ್ತು ಪ್ರಧಾನಿ ನರೇಂದ್ರ ಮೋದಿ ಸಂಪತ್ತು

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ 36 ಲಕ್ಷ ಹೆಚ್ಚಾಗಿದೆ.

ಪಿಎಂ ಮೋದಿ ಬಿಡುಗಡೆ ಮಾಡಿದ ಇತ್ತೀಚಿನ ಸ್ವತ್ತುಗಳ ಘೋಷಣೆಯ ಪ್ರಕಾರ 2020 ರ ಜೂನ್ 30 ರ ವೇಳೆಗೆ ಅವರ ಒಟ್ಟು ಆಸ್ತಿ 2.85 ಕೋಟಿ ರೂ., ಕಳೆದ ವರ್ಷ ಇದು 2.49 ಕೋಟಿ ರೂ. ಇತ್ತು.

ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ

ಆದರೆ, ಗೃಹ ಸಚಿವ ಅಮಿತ್ ಷಾ ಅವರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದೆ. ಹಾಗಾದರೆ ಅವರ ಆಸ್ತಿ ಎಲ್ಲಿ ಎಷ್ಟಿದೆ? ಎಂಬುದನ್ನು ನೋಡೋಣ.

ಪಿಎಂ ಮೋದಿ ಅವರಿಗೆ ಯಾವುದೇ ಸಾಲವಿಲ್ಲ

ಪಿಎಂ ಮೋದಿ ಅವರಿಗೆ ಯಾವುದೇ ಸಾಲವಿಲ್ಲ

ವರದಿಯ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಯಾವುದೇ ಸಾಲಗಳಿಲ್ಲ ಮತ್ತು ಕಾರು ಇಲ್ಲ. ಅವರ ಬಳಿ ನಾಲ್ಕು ಚಿನ್ನದ ಉಂಗುರವಿದೆ. ಅವರು 8,43,124 ರೂ.ಗಳ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೂಲಕ ತೆರಿಗೆ ಉಳಿಸುತ್ತಾರೆ. ಅವರ ಜೀವ ವಿಮೆಗಾಗಿ, ಅವರು 1,50,957 ರೂ. ಪ್ರಧಾನ ಮಂತ್ರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ 7,61,646 ರೂಗಳನ್ನು ಹೊಂದಿದ್ದರು ಮತ್ತು 1,90,347 ರೂಗ.ಳನ್ನು ಜೀವ ವಿಮಾ ಪ್ರೀಮಿಯಂ ಆಗಿ ಪಾವತಿಸಿದ್ದಾರೆ.

ಗಾಂಧಿನಗರದಲ್ಲಿ ಒಂದು ಕೋಟಿ ಜಮೀನು ಮತ್ತು ಮನೆ

ಗಾಂಧಿನಗರದಲ್ಲಿ ಒಂದು ಕೋಟಿ ಜಮೀನು ಮತ್ತು ಮನೆ

ಪ್ರಧಾನಿ ನರೇಂದ್ರ ಮೋದಿಯವರು ರಿಯಲ್ ಎಸ್ಟೇಟ್‌ಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಜೂನ್ 30 ರಂದು ಪ್ರಧಾನಿ ನರೇಂದ್ರ ಮೋದಿಯವರ ಉಳಿತಾಯ ಖಾತೆಯಲ್ಲಿ 3.38 ಲಕ್ಷ ರೂಪಾಯಿಗಳಿವೆ. ಅವರು ಜೂನ್ ಅಂತ್ಯದ ವೇಳೆಗೆ 31,450 ರೂ. ನಗದು ಹಣವನ್ನು ಹೊಂದಿದ್ದಾರೆ.
ಗಾಂಧಿನಗರದಲ್ಲಿ 1.1 ಕೋಟಿ ರೂಪಾಯಿಗಳ ಜಮೀನು ಮತ್ತು ಮನೆ ಇದೆ ಎಂದು ಪ್ರಧಾನಿ ಹೇಳಿದ್ದಾರೆ. ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಘೋಷಣೆಯು ಅವರು ಎನ್‌ಎಸ್‌ಸಿಯಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ ಮತ್ತು ಅವರ ವಿಮಾ ಕಂತುಗಳು ಕಡಿಮೆಯಾಗಿವೆ ಎಂದು ತೋರಿಸುತ್ತದೆ.
ಸ್ಥಿರ ಠೇವಣಿ ಹೆಚ್ಚಳ

ಸ್ಥಿರ ಠೇವಣಿ ಹೆಚ್ಚಳ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾಂಧಿನಗರ ಶಾಖೆಯಲ್ಲಿ ಅವರ ಸ್ಥಿರ ಠೇವಣಿ ಮೊತ್ತವು 2020 ರ ಜೂನ್ 30 ರ ವೇಳೆಗೆ 1,60,28,039 ರೂ.ಗಳಿಗೆ ಏರಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ 1,27,81,574 ರೂ. ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಅವರು ಇದನ್ನು ಘೋಷಿಸಿದ್ದಾರೆ.

ಗೃಹ ಸಚಿವ ಶಾ ಅವರ ಆಸ್ತಿ ಕಡಿಮೆಯಾಗಿದೆ

ಗೃಹ ಸಚಿವ ಶಾ ಅವರ ಆಸ್ತಿ ಕಡಿಮೆಯಾಗಿದೆ

ಮತ್ತೊಂದೆಡೆ ಗೃಹ ಸಚಿವ ಅಮಿತ್ ಶಾ ಅವರ ಆಸ್ತಿ ಕಳೆದ ವರ್ಷದವರೆಗೆ 32.3 ಕೋಟಿ ಆಗಿತ್ತು. ಇದು 2020ರ ಜೂನ್‌ನಲ್ಲಿ 28.63 ಕೋಟಿ ರೂ.ಗೆ ಇಳಿದಿದೆ. ಘೋಷಣೆಯ ಪ್ರಕಾರ ಅಮಿತ್ ಶಾ 10 ಸ್ಥಿರ ಆಸ್ತಿಗಳನ್ನು ಹೊಂದಿದ್ದು, ಒಟ್ಟು ಮೌಲ್ಯ 13.56 ಕೋಟಿ ರೂ. ಅವರು 15,814 ರೂ.ಗಳ ನಗದು ಬಾಕಿ ಮತ್ತು 1 ಕೋಟಿ ರೂ. ವಿಮೆ ಮತ್ತು ಪಿಂಚಣಿ ಪಾಲಿಸಿಗಳ ಒಟ್ಟು ಮೊತ್ತ 13.47 ಲಕ್ಷ ರೂ. 2.79 ಲಕ್ಷ ರೂ. ಸ್ಥಿರ ಠೇವಣಿ ಇದ್ದರೆ, 44.47 ಲಕ್ಷ ಮೌಲ್ಯದ ಆಭರಣಗಳಿವೆ. 2020ರಲ್ಲಿ ಷೇರು ಮಾರುಕಟ್ಟೆ ಕುಸಿತದಿಂದಾಗಿ ಅಮಿತ್ ಶಾ ಅವರ ಸಂಪತ್ತು ಕುಸಿದಿದೆ ಎಂದು ಹೇಳಲಾಗಿದೆ.

English summary
Prime Minister Narendra Modi recently voluntarily declared his assets and liabilities along with his cabinet colleagues. PM Modi's wealth is worth nearly Rs 2.85 crore as of June 30, 2020, up from Rs2.49 crore worth of assets declared by him in 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X