ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಸನ್ಯಾಸಿಯಾಗದೆ, ಪ್ರಧಾನಿಯಾಗಿದ್ದು ಹೇಗೆ?

|
Google Oneindia Kannada News

Recommended Video

ಮೊದಲ ಬಾರಿಗೆ ಟ್ರೋಲ್ ಪೇಜ್ ಗಳ ಬಗ್ಗೆ ಮಾತನಾಡಿದ ಮೋದಿ..? | Oneindia Kannada

ನವದೆಹಲಿ, ಏಪ್ರಿಲ್ 24: "ನಾನು ಈ ದೇಶದ ಪ್ರಧಾನಿಯಾಗುತ್ತೇನೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ. ಸನ್ಯಾಸಿಯಾಗಬೇಕು ಎಂದುಕೊಂಡಿದ್ದ ನನ್ನನ್ನು ಬದುಕೇ ಪ್ರಧಾನಿಯನ್ನಾಗಿ ಮಾಡಿತು. ಜೀವನ ತಾನಾಗೇ ರೂಪುಗೊಂಡಿತು, ಅದು ನಾನು ರೂಪಿಸಿದ್ದಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ, ಮೋದಿ ಅವರು ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಶನ ಸಂಪೂರ್ಣ ರಾಜಕೀಯವನ್ನು ಹೊರತಾಗಿಸಿದ್ದಾಗಿದ್ದರಿಂದ ಮೋದಿ ಅವರ ಬದುಕಿನ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿರದಿದ್ದ ಹಲವು ಕುತೂಹಲಕರ ವಿಷಯಗಳು ಹೊರಬಂದವು.

ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?ಮಮತಾ ಬ್ಯಾನರ್ಜಿ ಮೋದಿಗೆ ವರ್ಷಕ್ಕೆರಡು ಕುರ್ತಾ ಕಳಿಸೋದು ಗೊತ್ತಾ?

ಈ ಸಂದರ್ಶನವನ್ನು ಎಎನ್ ಐ ನ್ಯೂಸ್ ಏಜೆನ್ಸಿ ಪ್ರಸಾರ ಮಾಡಿದ್ದು, ನರೇಂದ್ರ ಮೋದಿ ಅವರು ಅಕ್ಷ ಕುಮಾರ್ ಅವರ ಜೊತೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.

ಬ್ಯಾಂಕ್ ಖಾತೆಯೇ ಇರಲಿಲ್ಲ!

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗುವವರೆಗೂ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಯೇ ಇರಲಿಲ್ಲ! ಮುಖ್ಯಮಂತ್ರಿಯಾದ ನಂತರ ಖಾತೆ ತೆರೆಯ ಬೇಕಾದ ಅಗತ್ಯ ಬಂದಾಗ ಅವರು ಬ್ಯಾಂಕ್ ಖಾತೆ ತೆರೆದರು. ಅವರು ಪ್ರಧಾನಿಯಾದ ಬಳಿಕ ಅವರ ವೇತನದಿಂದ ಬಂದ 21 ಲಕ್ಷ ರೂ.ಗಳನ್ನು ಡ್ರೈವರ್ ಗಳ ಮಕ್ಕಳಿಗೆ ಮೋದಿ ನೀಡಿದ್ದರು.

ಮೋದಿಗೆ ಕೋಪ ಬರುತ್ತಾ?

ಮೋದಿಗೆ ಕೋಪ ಬರುತ್ತಾ?

"ನನಗೆ ಹಲವು ಬಾರಿ ಆಶ್ಚರ್ಯವಾಗಿದೆ, ಆದರೆ ಕೋಪ ಬಂದಿಲ್ಲ. ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಷ್ಟು ವರ್ಷ ಸೇವೆ ಸಲ್ಲಿಸಿದರೂ, ಪ್ರಧಾನಿಯಾಗಿ ಜವಾಬ್ದಾರಿ ಹೊತ್ತಮೇಲೂ ನನಗೆ ಎಂದಿಗೂ ಕೋಪ ಬರಲಿಲ್ಲ. ನಾನು ಶಿಸ್ತು ಮತ್ತು ಗಂಭೀರವಾಗಿರುವುದನ್ನು ಇಷ್ಟಪಡುತ್ತೇನೆ. ಆದರೆ ಅದು ಕೋಪವಲ್ಲ" ನರೇಂದ್ರ ಮೋದಿ

ಸನ್ಯಾಸಿಯಾಗಲು ಹೋಗಿ ಪ್ರಧಾನಿಯಾದ ಬಗೆ

ಸನ್ಯಾಸಿಯಾಗಲು ಹೋಗಿ ಪ್ರಧಾನಿಯಾದ ಬಗೆ

"ಚಿಕ್ಕ ವಯಸ್ಸಿನಿಂದಲೂ ನನಗೆ ಸೇನೆಯನ್ನು ಕಂಡರೆ ಗೌರವ. ನಂತರ ರಾಮಕೃಷ್ಣ ಮಿಶನ್ ಮತ್ತು ಅಲ್ಲಿನ ಅಧ್ಯಾತ್ಮ ಗುರುಗಳಿಂದ ಸ್ಫೂರ್ತಿ ಪಡೆದು ಅಧ್ಯಾತ್ಮದ ಕಡದೆ ಆಕರ್ಷಿತವಾದೆ. ಸನ್ಯಾಸಿಯಾಗಬೇಕು ಎಂದುಕೊಂದಿದ್ದ ನಾನು, ಎಂದೋ ಒಂದು ದಿನ ಈ ದೇಶದ ಪ್ರಧಾನಿಯಾಗುತ್ತೇನೆ ಎಂದು ನಿರೀಕ್ಷಿಸಿಯೇ ಇರಲಿಲ್ಲ. ಆದರೆ ಬದುಕು ತಾನೇ ಹಾಗೆ ಆಕಾರಗೊಂಡು, ನನ್ನನ್ನು ಪ್ರಧಾನಿಯನ್ನಾಗಿ ಮಾಡಿತು"- ನರೇಂದ್ರ ಮೋದಿ

ಮೋದಿಗೆ ಅಲ್ಲಾವುದ್ದಿನ್ ನ ದೀಪ ಸಿಕ್ಕರೇ...

ಮೋದಿಗೆ ಅಲ್ಲಾವುದ್ದಿನ್ ನ ದೀಪ ಸಿಕ್ಕರೇ...

ಅಲ್ಲಾವುದ್ದಿನ್ ನ ಮಾಯಾ ದೀಪ ಸಿಕ್ಕರೆ ನೀವು ಯಾವ ವರ ಬೇಡುತ್ತೀರಿ ಎಂದು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, "ಹಾಗೊಮ್ಮೆ ನನಗೆ ಅಲ್ಲಾವುದ್ದಿನ್ ನ ದೀಪ ಸಿಕ್ಕರೆ, ಇಂದಿನ ತಲಮಾರಿನ ಶಿಕ್ಷಕರು ಮಕ್ಕಳಿಗೆ ಯಾವುದೇ ಕಾರಣಕ್ಕೂ ಅಲ್ಲಾವುದ್ದಿನ್ ನ ಮಾಯಾದೀಪದ ಕತೆ ಹೇಳದಂತೆ ಮಾಡು ಎಂದು ಕೇಳುತ್ತೇನೆ. ಎಲ್ಲರು ಸ್ವಂತ ಪರಿಶ್ರಮದ ಮೂಲಕ ಮೇಲೆ ಬರಬೇಕು, ಇಂಥವುಗಳ ಭ್ರಮೆಯಲ್ಲಿ ಬದುಕಬಾರದು" ಎಂದರು.

ಇತ್ತೀಚೆಗೆ ಹಾಸ್ಯ ಮಾಡಲ್ಲ ಯಾಕೆ?

ಇತ್ತೀಚೆಗೆ ಹಾಸ್ಯ ಮಾಡಲ್ಲ ಯಾಕೆ?

ನಾನು ಇತ್ತೀಚೆಗೆ ಹಾಸ್ಯ ಮಾಡುವುದನ್ನು ಕಡಿಮೆ ಮಾಡಿದ್ದೇನೆ. ಯಾಕಂದ್ರೆ ನನ್ನ ಹಾಸ್ಯವನ್ನೂ ಟಿಆರ್ ಪಿಗಾಗಿ ತಿರುಚಿಬಿಟ್ಟರೆ ಎಂಬ ಭಯ ನನಗೆ!- ನರೇಂದ್ರ ಮೋದಿ

ಕೇವಲ 4 ಗಂಟೆ ನಿದ್ದೆ ಸಾಕಾ?

ಕೇವಲ 4 ಗಂಟೆ ನಿದ್ದೆ ಸಾಕಾ?

ನೀವು ಕೇವಲ ನಾಲ್ಕೇ ನಾಲ್ಕು ತಾಸು ನಿದ್ದೆ ಮಾಡುತ್ತೀರಾ ಎಂದು ಕೇಳಿದ್ದೆ. ಅದು ನಿಜವೇ? ನಿಮಗೆ ಇಷ್ಟೊಂದು ಓಡಾಟದ ನಡುವೆಯೂ ನಾಲ್ಕೇ ತಾಸು ನಿದ್ದೆ ಸಾಕಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ನಾಲ್ಕು ತಾಸಾದ ನಂತರ ನನಗೆ ಮತ್ತೆ ನಿದ್ದೆ ಬರುವುದಿಲ್ಲ. ನನ್ನ ದೇಹಕ್ಕೆ ಅಷ್ಟೇ ನಿದ್ದೆ ಸಾಕು. ಮತ್ತೆ ಮಲಗಬೇಕೆಂದರೂ ನನಗೆ ನಿದ್ದೆ ಬರುವುದಿಲ್ಲ ಎಂದರು.

English summary
Bollywood actor Akshay Kumar interviewed PM Narendra Modi. Modi shares many things without speaking about his political life in the interview. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X