ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಸಚಿನ್ ಸಾಲಿನಲ್ಲಿ ಬೆಂಗಳೂರು ಪೊಲೀಸರ ಫೇಸ್ ಬುಕ್ ಪುಟ

|
Google Oneindia Kannada News

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ಸಂಸದರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಂತರದ ಸ್ಥಾನ ಸಚಿನ್ ತೆಂಡೂಲ್ಕರ್ ಪಾಲಾಗಿದೆ. ಅತಿ ಹೆಚ್ಚು ಚರ್ಚೆಗೆ ಕಾರಣರಾದ ಲೋಕಸಭೆ ಸದಸ್ಯ ಮೋದಿ ಅವರಾದರೆ, ಸಚಿನ್ ತೆಂಡೂಲ್ಕರ್ ಹೆಚ್ಚು ಚರ್ಚೆಗೊಳಗಾದ ರಾಜ್ಯಸಭಾ ಸದಸ್ಯರು.

ಮೀಮ್ಸ್ ಗಳನ್ನು ಬಳಸುವುದರಲ್ಲಿ ಬೆಂಗಳೂರಿನ ಪೊಲೀಸರು ಪ್ರಖ್ಯಾತರಂತೆ. ಅಷ್ಟೇ ಅಲ್ಲ, ಜತೆಗೆ ಸಾರ್ವಜನಿಕರಿಗೆ ಸ್ಪಂದಿಸುವುದರಲ್ಲೂ ಬೆಂಗಳೂರು ಸಂಚಾರ ಪೊಲೀಸರಿಗೆ ಬಹಳ ಒಳ್ಳೆ ಹೆಸರಿದೆ. ಆ ನಂತರದ ಸ್ಥಾನ ಕೋಲ್ಕತ್ತಾ ಮತ್ತು ಹೈದರಾಬಾದ್ ಪೊಲೀಸರಿಗೆ.

ಫೇಸ್ ಬುಕ್ ನ ಸೂಪರ್ ಸ್ಟಾರ್ 'ಬಾಜೂ ಮನಿ ಕಾಕು' ಸೋನು!ಫೇಸ್ ಬುಕ್ ನ ಸೂಪರ್ ಸ್ಟಾರ್ 'ಬಾಜೂ ಮನಿ ಕಾಕು' ಸೋನು!

ಒಟ್ಟು ಷೇರ್ ಗಳು, ಚರ್ಚೆ, ಪ್ರತಿಕ್ರಿಯೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಪಟ್ಟಿ ಸಿದ್ಧವಾಗಿದೆ. ಇನ್ನು ಪಟ್ಟಿಯಲ್ಲಿರುವ ಇತರರೆಂದರೆ ಆರ್ ಕೆ ಸಿನ್ಹಾ, ಅಮಿತ್ ಶಾ, ಅಸಾದುದ್ದೀನ್ ಒವೈಸಿ ಮತ್ತು ಭಗ್ವಂತ್ ಮನ್. ಇನ್ನು ಪಿಎಂಒ ಇಂಡಿಯಾ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೂಡ ಫೇಸ್ ಬುಕ್ ನಲ್ಲಿ ಬಹಳ ಜನಪ್ರಿಯ.

PM Modi, Sachin most talked about parliamentarians on Facebook

ಸಚಿವಾಲಯಗಳ ಪೈಕಿ ವಿದೇಶಾಂಗ ಖಾತೆಗೆ ನಂಬರ್ ಸ್ಥಾನ. ಪಿಎಂಒ ಇಂಡಿಯಾಗೆ 1.37 ಕೋಟಿ ಫಾಲೋವರ್ ಗಳಿದ್ದರೆ, 1.38 ಕೋಟಿ ಫೇಸ್ ಬುಕ್ ಪೇಜ್ ಲೈಕ್ ಗಳಿವೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಗೆ 40.8 ಲಕ್ಷ ಫಾಲೋವರ್ ಗಳು ಹಾಗೂ 40.9 ಲಕ್ಷ ಫೇಸ್ ಬುಕ್ ಪೇಜ್ ಲೈಕ್ ಗಳಿವೆ.

ರಾಜ್ಯ ಸರಕಾರಗಳ ಪೈಕಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹಳ ಜನಪ್ರಿಯರು. ಆ ನಂತರದ ಸ್ಥಾನದಲ್ಲಿರುವವರು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ. ಆಸಕ್ತಿಕರ ಅಂಶವೆಂದರೆ ರಾಜಕೀಯ ಪಕ್ಷಗಳ ಪೈಕಿ ಮೊದಲ ಸ್ಥಾನದಲ್ಲಿ ಬಿಜೆಪಿ ಇದ್ದರೆ, ಆಮ್ ಆದ್ಮಿ ಪಕ್ಷಕ್ಕೆ ಎರಡನೇ ಸ್ಥಾನ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.

English summary
Prime Minister Narendra Modi and cricketing legend Sachin Tendulkar have emerged as the most popular parliamentarians in 2017 on social networking platform, Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X