ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಜಲಾಂತರ್ಗಾಮಿ ಕೇಬಲ್ ಯೋಜನೆ?: ನಿಮಗೆ ತಿಳಿದಿರಬೇಕಾದ ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಆಗಸ್ಟ್ 10: ಚೆನ್ನೈ ಮತ್ತು ಪೋರ್ಟ್ ಬ್ಲೇರ್ ನಡುವೆ ಸಂಪರ್ಕ ಬೆಸೆಯುವ 2,300 ಕಿ.ಮೀ. ಉದ್ದದ ಕಡಲಡಿಯ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯು ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಕ್ಕೆ ಉತ್ತಮ ಗುಣಮಟ್ಟದ ಸಂಪರ್ಕ ಒದಗಿಸುವ ಗುರಿ ಹೊಂದಿದೆ.

ಚೆನ್ನೈನಿಂದ ಪೋರ್ಟ್‌ಬ್ಲೇರ್ ಮತ್ತು ಏಳು ಇತರೆ ದ್ವೀಪಗಳಾದ ಸ್ವರಾಜ್ ದೀಪ್, ಲಾಂಗ್ ಐಲ್ಯಾಂಡ್, ರಂಗತ್, ಹಟ್ಬೆ (ಲಿಟ್ಲ್ ಅಂಡಮಾನ್), ಕಮೊರ್ಟಾ, ಕಾರ್ ನಿಕೋಬಾರ್ ಮತ್ತು ಕ್ಯಾಂಪ್‌ಬೆಲ್ ಬೇ (ಗ್ರೇಟ್ ನಿಕೋಬಾರ್) ದ್ವೀಪಗಳಿಗೆ ಚೆನ್ನೈನಿಂದ ಸಂಪರ್ಕ ಕಲ್ಪಿಸಲಿದೆ.

ಪ್ರಲಾಪ: ಪ್ರತಾಪನ ಡ್ರೋನ್ ಮತ್ತು ಡಾ ಕಜೆ ಕೊರೋನಾ ಔಷಧಪ್ರಲಾಪ: ಪ್ರತಾಪನ ಡ್ರೋನ್ ಮತ್ತು ಡಾ ಕಜೆ ಕೊರೋನಾ ಔಷಧ

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಸೋಮವಾರದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿನ ತನ್ನ ಗ್ರಾಹಕರಿಗೆ 100 ಎಂಬಿಪಿಎಸ್‌ನಲ್ಲಿ ಹತ್ತು ಪಟ್ಟು ಬ್ರಾಡ್ ಬ್ಯಾಂಡ್ ವೇಗದಲ್ಲಿ ಮತ್ತು 20 ಪಟ್ಟು ಹೆಚ್ಚು ಡೇಟಾ ಡೌನ್‌ಲೋಡ್ ಸೌಲಭ್ಯವನ್ನು ಒದಗಿಸಲಿದೆ. ಮುಂದೆ ಓದಿ...

ಏನಿದು ಸಬ್‌ಮೆರಿನ್ ಕೇಬಲ್?

ಏನಿದು ಸಬ್‌ಮೆರಿನ್ ಕೇಬಲ್?

* ಜಲಾಂತರ್ಗಾಮಿ ಸಂವಹನ ಕೇಬಲ್, ಸಮುದ್ರದ ಉದ್ದಗಲಕ್ಕೂ ದೂರಸಂಪರ್ಕ ಸಂಕೇತಗಳನ್ನು ಭೂ ಆಧಾರಿತ ಸ್ಟೇಷನ್‌ಗಳ ನಡುವೆ ರವಾನಿಸಲು ಸಮುದ್ರತಳದಲ್ಲಿ ಕೇಬಲ್ ಹುದುಗಿಸುವ ಯೋಜನೆಯಾಗಿದೆ.

* ಆಪ್ಟಿಕಲ್ ಫೈಬರ್‌ನ ಸಾಮಗ್ರಿಗಳು ಪ್ಲಾಸ್ಟಿಕ್ ಪದರಗಳಿಂದ ಅವೃತವಾಗಿದ್ದು, ಯಾವ ಸ್ಥಳದಲ್ಲಿ ಕೇಬಲ್ ಇರಿಸಿದರೂ ಅಲ್ಲಿನ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಂರಕ್ಷಣಾ ಕೊಳವೆಯನ್ನು ಒಳಗೊಂಡಿರುತ್ತದೆ.

* ಉಪಗ್ರಹಗಳಿಗೆ ಹೋಲಿಸಿದರೆ ಜಲಾಂತರ್ಗಾಮಿ ಕೇಬಲ್‌ಗಳ ಮೂಲಕ ಅಂತರ್ಜಾಲ ಬಳಸುವುದು ಹೆಚ್ಚು ವಿಶ್ವಾಸಾರ್ಹ. ಜತೆಗೆ ಕಡಿಮೆ ವೆಚ್ಚ ಹಾಗೂ ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತದೆ.

1,224 ಕೋಟಿ ರೂ ವೆಚ್ಚ

1,224 ಕೋಟಿ ರೂ ವೆಚ್ಚ

* ಚೆನ್ನೈನಿಂದ ನಿಕೋಬಾರ್ ದ್ವೀಪ ಸಮೂಹಕ್ಕೆ ಸಂಪರ್ಕಿಸುವ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಸುಮಾರು 2,300 ಕಿ.ಮೀ. ದೂರ ಕ್ರಮಿಸುತ್ತದೆ. ಇದಕ್ಕೆ ಅಂದಾಜು 1,224 ಕೋಟಿ ರೂ ವೆಚ್ಚ ತಗಲಿದೆ. ಕೇಂದ್ರಾಡಳಿತ ಪ್ರದೇಶಗಳಾಗಿರುವ ಈ ದ್ವೀಪಗಳ ಜತೆಗಿನ ಸಂವಹನ ಮತ್ತಷ್ಟು ಸುಧಾರಿಸಲಿದೆ.

ಕೊರೊನಾ ಸಮಯದಲ್ಲಿ ಅಭ್ಯಾಸ ಹೇಗಿರಬೇಕು; ಮನೋವಿಜ್ಞಾನಿ ಶ್ರೀಧರ್ ಮಾತು...ಕೊರೊನಾ ಸಮಯದಲ್ಲಿ ಅಭ್ಯಾಸ ಹೇಗಿರಬೇಕು; ಮನೋವಿಜ್ಞಾನಿ ಶ್ರೀಧರ್ ಮಾತು...

* ದೂರ ಸಂಪರ್ಕ ಸಚಿವಾಲಯದ ಅಡಿಯಲ್ಲಿ ಯುನಿವರ್ಸಲ್ ಸರ್ವೀಸ್ ಆಬ್ಲಿಗೇಷನ್ ಫಂಡ್ ಮೂಲಕ ಕೇಂದ್ರ ಸರ್ಕಾರವು ಈ ಯೋಜನೆಗೆ ಅನುದಾನ ನೀಡಿದೆ. ಈ ಯೋಜನೆಗೆ 2018ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋರ್ಟ್‌ ಬ್ಲೇರ್‌ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು.

* ಭಾರತದ ಇತರೆ ಭಾಗಗಳಲ್ಲಿ ಇರುವಂತೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸೇವೆಗಳ ವೇಗ ಹೆಚ್ಚಿಸಲು ಮತ್ತು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಒಎಫ್‌ಸಿ ಸಹಾಯ ಮಾಡಲಿದೆ.

ಬ್ಯಾಂಡ್ ವಿತ್ ವೇಗ

ಬ್ಯಾಂಡ್ ವಿತ್ ವೇಗ

* ಈ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಸಂಪರ್ಕವು ಚೆನ್ನೈನಿಂದ ಪೋರ್ಟ್‌ಬ್ಲೇರ್ ನಡುವೆ 2*200 ಗಿಗಾಬೈಟ್ ಪರ್ ಸೆಕೆಂಡ್ (ಜಿಬಿಪಿಎಸ್ ) ಮತ್ತು ಪೋರ್ಟ್‌ಬ್ಲೇರ್ ಹಾಗೂ ಇತರೆ ದ್ವೀಪಗಳ ನಡುವೆ 2*100 ಜಿಪಿಪಿಎಸ್ ಬ್ಯಾಂಡ್‌ವಿತ್ ಸಂಪರ್ಕ ಒದಗಿಸಲಿದೆ.

* ಇದರಾಚೆಗೆ ಉಪಗ್ರಹ ಮೂಲಕ ಒದಗಿಸಿರುವ ಸೀಮಿತ 4ಜಿ ಮೊಬೈಲ್ ಸೇವೆಗಳು ಕೂಡ ಇದರಿಂದ ಚುರುಕಾಗಲಿವೆ.

ಯೋಜನೆಯ ಪ್ರಯೋಜನಗಳೇನು?

ಯೋಜನೆಯ ಪ್ರಯೋಜನಗಳೇನು?

* ಈ ಪ್ರದೇಶಗಳೊಂದಿಗಿನ ಉತ್ತಮ ಸಂಪರ್ಕ ಅಭಿವೃದ್ಧಿಯು ಟೆಲಿ ಮೆಡಿಸಿನ್ ಮತ್ತು ಟೆಲಿ ಎಜುಕೇಷನ್‌ನಂತಹ ಇ-ಆಡಳಿತ ಸೇವೆಗಳನ್ನು ಒದಗಿಸಲು ಸಹಾಯ ಮಾಡಲಿದೆ.

* ಇ-ಕಾಮರ್ಸ್‌ನಲ್ಲಿ ಸಣ್ಣ ಪ್ರಮಾಣದ ಉದ್ಯಮಗಳು ತೊಡಗಿಸಿಕೊಳ್ಳಲು ಅವಕಾಶ ಸಿಗಲಿದೆ. ಶಿಕ್ಷಣ ಸಂಸ್ಥೆಗಳು ಸುಧಾರಿತ ಬ್ಯಾಂಡ್ ವಿತ್‌ನಿಂದ ಇ-ಕಲಿಕೆ ಮತ್ತು ಜ್ಞಾನ ಹಂಚಿಕೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

* ಹೊರಗುತ್ತಿಗೆ ಬಿಜಿನೆಸ್ ಪ್ರಕ್ರಿಯೆ ಸೇವೆಗಳು ಮತ್ತು ಇತರೆ ಮಧ್ಯಮ ಹಾಗೂ ದೊಡ್ಡ ಉದ್ಯಮಗಳು ಕೂಡ ಉತ್ತಮ ಸಂಪರ್ಕದ ಲಾಭ ಪಡೆದುಕೊಳ್ಳಲಿವೆ. ಹಾಗೆಯೇ ಈ ಸಂಪರ್ಕದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಅಂತರ್ಜಾಲ ಶುಲ್ಕಗಳು ಕಡಿಮೆಯಾಗಲಿದೆ.

English summary
PM Narendra Modi has launched Andaman-Nicobar Submarine Cable Project today: Here is all you need to know about this undersea cable project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X