• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಥಾಮಸ್ ಕಪ್ ಗೆದ್ದ ಭಾರತ ಹೊಸ ಇತಿಹಾಸ; ಪ್ರಧಾನಿ ಶ್ಲಾಘನೆ

|
Google Oneindia Kannada News

ಬ್ಯಾಂಕಾಕ್, ಮೇ 15: ಭಾರತ ಬ್ಯಾಡ್ಮಿಂಟನ್ ತಂಡ ಥಾಮಸ್ ಕಪ್ ಟೂರ್ನಿ ಗೆದ್ದು ಹೊಸ ಇತಿಹಾಸ ಬರೆದಿದೆ. ಇದು ಬ್ಯಾಡ್ಮಿಂಟನ್ ಮಾತ್ರವಲ್ಲ ಭಾರತೀಯ ಕ್ರೀಡೆಗೆ ಒಂದು ಶ್ರೇಯ ನೀಡುವ ಗೆಲುವು. ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಥಾಮಸ್ ಕಪ್ ಗೆದ್ದಿರುವುದು.

ಥಾಯ್ಲೆಂಡ್ ದೇಶದ ರಾಜಧಾನಿಯಲ್ಲಿ ನಡೆದ ಥಾಮಸ್ ಕಪ್ 2022 ಟೂರ್ನಿಯ ಫೈನಲ್‌ನಲ್ಲಿ ಪ್ರಬಲಾತಿಪ್ರಬಲ ಬ್ಯಾಡ್ಮಿಂಟನ್ ತಂಡವೆನಿಸಿದ ಇಂಡೋನೇಷ್ಯಾವನ್ನು 3-0ಯಿಂದ ಭಾರತ ಸೋಲಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ತಂಡವೊಂದು 14 ಬಾರಿ ಚಾಂಪಿಯನ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದ್ದು ಕಡಿಮೆ ಸಾಧನೆಯಲ್ಲ. ಇದು ಟೆನಿಸ್‌ನಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಷ್ಟೇ ಪ್ರಮುಖ ಘಟ್ಟ.

ವೇದ, ರಾಮಾಯಣ ಆಯ್ತು, ಉತ್ತರಾಖಂಡ್‌ನಲ್ಲಿ ಹಿಂದಿ ಮಾಧ್ಯಮ ಎಂಬಿಬಿಎಸ್ ವೇದ, ರಾಮಾಯಣ ಆಯ್ತು, ಉತ್ತರಾಖಂಡ್‌ನಲ್ಲಿ ಹಿಂದಿ ಮಾಧ್ಯಮ ಎಂಬಿಬಿಎಸ್

ಪುರುಷರಿಗಾಗಿ ಆಡಿಸಲಾಗುವ ಥಾಮಸ್ ಕಪ್ ಮತ್ತು ಮಹಿಳೆಯರಿಗಾಗಿ ನಡೆಸುವ ಊಬರ್ ಕಪ್‌ಗಳ 70 ವರ್ಷ ಇತಿಹಾಸದಲ್ಲಿ ಭಾರತ ಹಿಂದೆಂದೂ ಫೈನಲ್ ತಲುಪಿರಲಿಲ್ಲ. ಥಾಮಸ್ ಕಪ್‌ನಲ್ಲಿ 1952, 1955 ಮತ್ತು 1979ರಲ್ಲಿ ಮೂರು ಬಾರಿ ಭಾರತ ತಂಡಗಳು ಈ ಹಿಂದೆ ಸೆಮಿಫೈನಲ್ ತಲುಪಿದ್ದವು. ಊಬರ್ ಕಪ್‌ನಲ್ಲಿ 2014 ಮತ್ತು 2016ರಲ್ಲಿ ಮಾತ್ರ ಭಾರತ ಮಹಿಳಾ ತಂಡಗಳು ಸೆಮಿಫೈನಲ್‌ವರೆಗೂ ಹೋಗಿದ್ದವು. ಅವಷ್ಟೇ ಭಾರತದ ಗರಿಷ್ಠ ಸಾಧನೆ ಎನಿಸಿತ್ತು.

ಇಂದು ಭಾನುವಾರ ಮುಕ್ತಾಯಗೊಂಡ ಹಣಾಹಣಿಯಲ್ಲಿ ಭಾರತದ 20 ವರ್ಷದ ಲಕ್ಷ್ಯ ಸೇನ್ ಇಂಡೋನೇಷ್ಯಾದ ಒಲಿಂಪಿಕ್ಸ್ ಪದಕ ವಿಜೇತ ಆಂಥೋನಿ ಗಿನ್‌ಟಿಂಗ್‌ರನ್ನು 8-21, 21-17, 21-16ರಿಂದ ಸೋಲಿಸಿದರು. ಎರಡನೇ ಪಂದ್ಯದಲ್ಲಿ ಭಾರತದ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2-1 ಗೇಮ್‌ಗಳಿಂದ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೋ ಜೋಡಿಯನ್ನು ಮಣಿಸಿದರು. ಮೂರನೇ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ನೇರ ಗೇಮ್‌ಗಳಿಂದ ಜೋನಾತನ್ ಕ್ರಿಸ್ಟೀಯನ್ನು ಪರಾಭವಗೊಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಪ್ರಧಾನಿ ಮೋದಿ ಅಭಿನಂದನೆ:
ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಹೇಳಿದ್ದಾರೆ. "ಭಾರತೀಯ ಬ್ಯಾಡ್ಮಿಂಟನ್ ಹೊಸ ಇತಿಹಾಸ ರಚಿಸಿದೆ. ಥಾಮಸ್ ಕಪ್‌ನಲ್ಲಿ ಭಾರತದ ಗೆಲುವಿನಿಂದ ಇಡೀ ದೇಶವೇ ಸಂಭ್ರಮಪಡುವಂತಾಗಿದೆ. ನಮ್ಮ ಹೆಮ್ಮೆಯ ತಂಡಕ್ಕೆ ಅಭಿನಂದನೆಗಳು. ಅವರ ಮುಂದಿನ ಹೆಜ್ಜೆಗಳಿಗೆ ಶುಭ ಹಾರೈಸುತ್ತೇನೆ. ಮುಂಬರುವ ಕ್ರೀಡಾಪಟುಗಳಿಗೆ ಈ ಸಾಧನೆ ಒಂದು ಪ್ರೇರಣೆಯಾಗುತ್ತದೆ," ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಒಂದು ಕೋಟಿ ಬಹುಮಾನ ಘೋಷಣೆ:
14 ಬಾರಿ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಥಾಮಸ್ ಕಪ್ ಗೆದ್ದ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಒಂದು ಕೋಟಿ ರೂ ನಗದು ಬಹುಮಾನ ಪ್ರಕಟಿಸಿದ್ದಾರೆ. ಹಾಗೆಯೇ, ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೋನೇಷ್ಯಾ ತಂಡಗಳನ್ನು ಸತತವಾಗಿ ಸೋಲಿಸಿರುವುದು ಅಸಾಮಾನ್ಯ ಸಾಧನೆ ಎಂದೂ ಅನುರಾಗ್ ಠಾಕೂರ್ ತಮ್ಮ ಟ್ವೀಟ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ಧಾರೆ. ಥಾಮಸ್ ಕಪ್ ಗೆದ್ದ ಭಾರತದ ತಂಡದಲ್ಲಿ ಕಿದಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣಯ್, ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ ಮೊದಲಾದವರು ಇದ್ದರು.

(ಒನ್ಇಂಡಿಯಾ ಸುದ್ದಿ)

English summary
PM Modi has congratulated Indian badminton team for winning Thomas Cup for first in history. Sports minister Anurag Thakur has announced Rs 1 crore cash prize for the team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X