ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಂಬಾಟ್ ಸುದ್ದಿ: ಭಾರತದಲ್ಲಿ ರೈತರು ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ದುಡ್ಡು!

|
Google Oneindia Kannada News

PM Kisan Tractor Scheme : ನವದೆಹಲಿ, ಅಕ್ಟೋಬರ್ 27: ಭಾರತದ ರೈತರಿಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ "ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ"ಯನ್ನು ಪರಿಚಯಿಸಿದೆ.

ಈ ರೈತರಿಗೆ ನೀಡಲಾಗುವ pmkisan.gov.in ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ ಪ್ರಯೋಜನಗಳು ರೈತರು ಹಾಗೂ ಅವರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯ ಲಾಭವನ್ನು ಏಕೆ ಪಡೆದುಕೊಳ್ಳಬೇಕು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಸಬ್ಸಿಡಿ ಮೊತ್ತವನ್ನು ಎಷ್ಟು ಅವಧಿಯ ನಂತರ ಪಡೆದುಕೊಳ್ಳುತ್ತೀರಿ ಎಂಬುದನ್ನು ಮುಂದೆ ವಿವರಿಸಲಾಗಿದೆ.

ಎಲ್‌ಪಿಜಿ ಸಿಲಿಂಡರ್ 'ಸಬ್ಸಿಡಿ' ಮಂಗಮಾಯ! ಇಲ್ಲಿದೆ ಸರಕಾರದ ಉತ್ತರಎಲ್‌ಪಿಜಿ ಸಿಲಿಂಡರ್ 'ಸಬ್ಸಿಡಿ' ಮಂಗಮಾಯ! ಇಲ್ಲಿದೆ ಸರಕಾರದ ಉತ್ತರ

ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಆನ್‌ಲೈನ್ ನೋಂದಣಿಯನ್ನು ಅಧಿಕೃತ ವೆಬ್‌ಸೈಟ್ www.pmkisan.gov.in ಮತ್ತು pmkisan.nic.in ನಲ್ಲಿ ಪ್ರಾರಂಭಿಸಲಾಗಿದೆ. PM ಕಿಸಾನ್ ಟ್ರ್ಯಾಕ್ಟರ್ ಯೋಜನೆ CSC ಲಾಗಿನ್ ಲಿಂಕ್ ಅನ್ನು ಇಲ್ಲಿ ನವೀಕರಿಸಲಾಗಿದೆ. ಪಿಎಂ ಕಿಸಾನ್ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯ ಅರ್ಜಿ ನಮೂನೆ, ಉದ್ದೇಶ, ಅರ್ಹತೆ, ಆನ್‌ಲೈನ್ ಸಿಎಸ್‌ಸಿ ಕೇಂದ್ರಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಹೆಚ್ಚಿನವುಗಳ ಕುರಿತು ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿದೆ.

ಪ್ರತಿಯೊಂದು ರಾಜ್ಯಗಳಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ

ಪ್ರತಿಯೊಂದು ರಾಜ್ಯಗಳಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ

ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ರೈತರು ಸರ್ಕಾರದಿಂದ ಶೇ.50ರಷ್ಟು ಸಬ್ಸಿಡಿ ಪಡೆಯಬಹುದು. ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ 2021 ಅನ್ನು ಎಲ್ಲಾ ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದೆ. ಅಂದರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಬಿಹಾರ, ರಾಜಸ್ಥಾನ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಜಾರ್ಖಂಡ್, ಛತ್ತೀಸ್‌ಗಢ, ಹರಿಯಾಣ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಜಮ್ಮು ಕಾಶ್ಮೀರ, ಅಸ್ಸಾಂ, ಗೋವಾ, ಉತ್ತರಾಖಂಡ, ಹಿಮಾಚಲ ಪ್ರದೇಶ , ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ, ತ್ರಿಪುರ ಮತ್ತು ಮೇಘಾಲಯಗಳಿಗೂ ಅನ್ವಯ ಆಗಲಿದೆ.

ಆನ್‌ಲೈನ್‌ನಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಹೆಸರು ನೋಂದಣಿ

ಆನ್‌ಲೈನ್‌ನಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಹೆಸರು ನೋಂದಣಿ

* ಯೋಜನೆ ಹೆಸರು: ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆ

* ಯೋಜನೆ ಪರಿಚಯಿಸಿದವರು: ಪ್ರಧಾನಿ ನರೇಂದ್ರ ಮೋದಿ

* ಪ್ರಯೋಜನ: ಟ್ರ್ಯಾಕ್ಟರ್ ಖರೀದಿ ಮೇಲೆ ಶೇ.20 ರಿಂದ ಶೇ.50ರಷ್ಟು ಸಹಾಯಧನ

* ಅರ್ಜಿ ಸಲ್ಲಿಸಬಹುದಾದ ರಾಜ್ಯಗಳು: ಎಲ್ಲಾ ರಾಜ್ಯಗಳಿಗೆ ಅನ್ವಯ

* ವಿಭಾಗ: ಸರ್ಕಾರಿ ಯೋಜನೆ

* ಅಧಿಕೃತ ವೆಬ್ ಸೈಟ್: www.pmkisan.gov.in / pmkisan.nic.in

ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಬೇಕಾದ ದಾಖಲೆಗಳು?

ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಬೇಕಾದ ದಾಖಲೆಗಳು?

ಕೃಷಿಗಾಗಿ ಹೊಸ ಟ್ರ್ಯಾಕ್ಟರ್ ಖರೀದಿಸಲು ಬಯಸುವ ರೈತರು ಸಿಎಸ್‌ಸಿ ಲಾಗಿನ್‌ನಲ್ಲಿ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ವೇಳೆ ಕೆಲವು ಅಗತ್ಯ ದಾಖಲೆಗಳನ್ನು ರೈತರು ಹೊಂದಿರಬೇಕಾಗುತ್ತದೆ. ಆ ದಾಖಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

* ಆಧಾರ್ ಕಾರ್ಡ್ ಮೂಲ ಪ್ರತಿಯನ್ನು ಹೊಂದಿರಬೇಕು

* ಭೂ ಕಾಗದದ ದಾಖಲೆಗಳನ್ನು ಸಲ್ಲಿಸಬೇಕು

* ಬ್ಯಾಂಕ್ ಪಾಸ್ಬುಕ್

* 2-3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಇರಬೇಕಾದ ಮಾನದಂಡಗಳೇನು?

ಅರ್ಜಿ ಸಲ್ಲಿಸಲು ಇರಬೇಕಾದ ಮಾನದಂಡಗಳೇನು?

ಪಿಎಂ ಮೋದಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ನೋಂದಾಯಿಸಲು ಸಿಎಸ್‌ಸಿ ಕೇಂದ್ರವು ಸಹಾಯ ಮಾಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ರೈತರು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕಾಗುತ್ತದೆ.

* ರೈತ ಕನಿಷ್ಠ ಮತ್ತು ಸಣ್ಣ ರೈತನ ಗುಂಪಿಗೆ ಸೇರಿರಬೇಕು

* ಭಾರತದ ಖಾಯಂ ಪ್ರಜೆ

* ಕೃಷಿ ಅಥವಾ ಕೃಷಿ ಹಿನ್ನೆಲೆಯಿಂದ ಬಂದವರು ಆಗಿರಬೇಕು

* 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು

ಶೇ.50ರಷ್ಟು ಸಬ್ಸಿಡಿ ಪಡೆಯುವ ಯೋಜನೆ ಪ್ರಯೋಜನ

ಶೇ.50ರಷ್ಟು ಸಬ್ಸಿಡಿ ಪಡೆಯುವ ಯೋಜನೆ ಪ್ರಯೋಜನ

ಪ್ರಧಾನ ಮಂತ್ರಿ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ 2021 ಅನ್ನು ಪಡೆದುಕೊಳ್ಳುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಕೇಂದ್ರ ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳುವುದರಿಂದ ರೈತರಿಗೆ ಆಗುವ ಪ್ರಯೋಜನಗಳ ಬಗ್ಗೆ ಈ ಕೆಳಗೆ ಪಟ್ಟಿ ಮಾಡಲಾಗಿದೆ.

* ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ ಶೇ.20 ರಿಂದ 50ರಷ್ಟು ಸಬ್ಸಿಡಿ ಸಿಗಲಿದೆ

* ನೀವು ಯಾವುದೇ ಬೆಲೆಯ ಮತ್ತು ಯಾವುದೇ ಕಂಪನಿಯ ಟ್ರಾಕ್ಟರ್ ಅನ್ನು ಖರೀದಿಸಬಹುದು. ಅದಕ್ಕೆ ಸರ್ಕಾರ ಯಾವುದೇ ತಡೆ ವಿಧಿಸುವುದಿಲ್ಲ.

* ಈ ಸಹಾಯಧನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ನಿಮಗೆ ನೀಡುತ್ತವೆ.

* ಈ ಯೋಜನೆಯು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ ಮತ್ತು ಆಧುನಿಕ ಬೇಸಾಯವು ಸುಲಭ ಮತ್ತು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ವಿವಿಧ ಯೋಜನೆಗಳ ಸಹಾಯದಿಂದ ರೈತರು ಸಹಾಯ ಪಡೆಯುತ್ತಾರೆ ಮತ್ತು ಅವರು ತಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಬಹುದು.

* ಈ ಯೋಜನೆಯಡಿ ರೈತರಿಗೆ ಪೂರ್ಣ ಪ್ರಮಾಣದ ಹೊರೆ ಇರುವುದಿಲ್ಲ. ಅರ್ಧ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ ಮತ್ತು ಅರ್ಧದಷ್ಟು ಹಣವನ್ನು ರೈತರು ಪಾವತಿಸಬಹುದು. ರೈತರು ಕೂಡ ಉಳಿದ ಮೊತ್ತವನ್ನು ಸಾಲವಾಗಿ ಪರಿವರ್ತಿಸಬಹುದು.

ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

* ಅಧಿಕೃತ ವೆಬ್ ಪೋರ್ಟಲ್ ತೆರೆಯಿರಿ. ಈ ಯೋಜನೆಗಾಗಿ ಯಾವುದೇ ಮೀಸಲಾದ ವೆಬ್‌ಸೈಟ್ ಇಲ್ಲ ಎಂಬುದನ್ನು ನೆನಪಿಡಿ. ಅರ್ಜಿದಾರರು ತಮ್ಮ ರಾಜ್ಯ ಸರ್ಕಾರದ ವೆಬ್‌ಸೈಟ್ ತೆರೆಯಬೇಕು

* ಯೋಜನೆಯ ಅಡಿಯಲ್ಲಿ ಮುಖಪುಟದಲ್ಲಿ ನೀವು ಲಿಂಕ್ ಅನ್ನು ನೋಡುತ್ತೀರಿ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸಿದೆ, ಆದರೆ ಇದನ್ನು ರಾಜ್ಯ ಸರ್ಕಾರ ನಿಯಂತ್ರಿಸುತ್ತದೆ

* ಈಗ ಒಮ್ಮೆ ನೀವು ಯೋಜನೆಯ ಲಿಂಕ್ ಅನ್ನು ತೆರೆಯಿರಿ. ಎಲ್ಲಾ ಸೂಚನೆಗಳನ್ನು ಓದಿ. ಆನ್‌ಲೈನ್‌ನಲ್ಲಿ ಅನ್ವಯಿಸು ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿರಿ

* ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ಫಾರ್ಮ್ ಬರುತ್ತದೆ. ಈ ಅರ್ಜಿಯಲ್ಲಿ ನೀವು ಭರ್ತಿ ಮಾಡಬೇಕಾದ ಎಲ್ಲಾ ವಿವರಗಳನ್ನು ನೀಡಲಾಗಿರುತ್ತದೆ

* ಮೂಲ ಮಾಹಿತಿಯಿಂದ ಉದ್ಯೋಗ, ಆದಾಯ, ಬ್ಯಾಂಕ್ ವಿವರಗಳು ಸೇರಿದಂತೆ ಎಲ್ಲವನ್ನೂ ಭರ್ತಿ ಮಾಡಬೇಕು

* ದಾಖಲೆಗಳು, ಸಹಿಗಳು ಮತ್ತು ಛಾಯಾಚಿತ್ರಗಳನ್ನು ಲಗತ್ತಿಸಬೇಕು

* ಘೋಷಣೆಯ ಬಾಕ್ಸ್ ಅನ್ನು ಟಿಕ್ ಮಾಡಿದ ನಂತರ ಅದನ್ನು ಸಬ್ಮಿಟ್ ಮಾಡಿರಿ

Recommended Video

ಟೀಂ ಇಂಡಿಯಾ ಆಟಗಾರರಿಗೆ ಖಡಕ್ ಅಭ್ಯಾಸ ಮಾಡಿಸಿದ MS ಧೋನಿ | Oneindia Kannada

English summary
Check PM Kisan Tractor Subsidy Scheme 2021 Application Form, Objective, Eligibility, how to apply online CSC Centre, and much more in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X